ಪ್ರಪಂಚದಲ್ಲಿ ಸಾಕಷ್ಟು ಭಿನ್ನ ಹೊಟೇಲ್ ಗಳಿವೆ. ಅವು ತಮ್ಮದೇ ನಿಯಮಗಳನ್ನು ಪಾಲಿಸುತ್ತಿವೆ. ಕೆಲ ಹೊಟೇಲ್ ರೂಲ್ಸ್, ಸ್ಥಳೀಯರು ಮತ್ತು ಪ್ರವಾಸಿಗರನ್ನು ನಿಬ್ಬೆರಗಾಗಿಸುತ್ತದೆ. ಈ ಹೊಟೇಲ್ ಯಾವುದಕ್ಕೆಲ್ಲ ಚಾರ್ಜ್ ಮಾಡುತ್ವೆ ಎಂಬ ಅಚ್ಚರಿ ನಿಮ್ಮನ್ನು ಕಾಡುತ್ತೆ.
ಪ್ರಪಂಚದಲ್ಲಿ ಪುಕ್ಕಟ್ಟೆ ಸಿಗುವ ವಸ್ತುಗಳ ಸಂಖ್ಯೆ ಬಹಳ ಕಡಿಮೆ. ನೈಸರ್ಗಿಕ ವಸ್ತುಗಳಿಗೆ ಕೂಡ ನಾವು ಹಣ ನೀಡುವ ಸ್ಥಿತಿ ನಿರ್ಮಾಣವಾಗಿದೆ. ಜೀವ ಜಲ ಎಂದೇ ಹೆಸರು ಪಡೆದಿರುವ ನೀರಿಗೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿಯೇ ಶುದ್ಧ ನೀರನ್ನು ಬಾಟಲಿಯಲ್ಲಿ ತುಂಬಿ ಮಾರಾಟ ಮಾಡಲಾಗ್ತಿದೆ. ಇನ್ನು ವಾತಾವರಣ ಹದಗೆಟ್ಟಿದೆ. ಕೆಮಿಕಲ್ ಇಲ್ಲದ ಗಾಳಿ ನಮಗೆ ಸಿಗ್ತಿಲ್ಲ. ಕೆಲ ಪ್ರದೇಶಗಳಲ್ಲಿ ಗಾಳಿಗೂ ಕೂಡ ಹಣ ನೀಡುವ ಪರಿಸ್ಥಿತಿ ಬಂದಿದೆ. ಸೂರ್ಯನ ಕಿರಣ ಮಾತ್ರ ಸದ್ಯ ಉಚಿತವಾಗಿ ಸಿಗ್ತಿದೆ ಅಂತಾ ನಾವು ಭಾವಿಸಿದ್ದೇವೆ. ಯಾರು ಬೇಕಾದ್ರೂ ಸೂರ್ಯನ ಕಿರಣಕ್ಕೆ ಮೈಯೊಡ್ಡಬಹುದು. ಸೂರ್ಯನ ಕಿರಣದ ಕೆಳಗೆ ದಿನಪೂರ್ತಿ ನಿಂತರೂ ಯಾರೂ ಪ್ರಶ್ನೆ ಮಾಡುವುದಿಲ್ಲ ಎಂಬ ನಂಬಿಕೆ ನಮಗಿದೆ. ಆದ್ರೆ ಪ್ರಪಂಚದಲ್ಲಿ ಸೂರ್ಯನ ಕಿರಣಕ್ಕೂ ಚಾರ್ಜ್ ಮಾಡುವ ಹೊಟೇಲ್ ಒಂದಿದೆ. ಅದ್ಯಾವ ಹೊಟೇಲ್, ಎಷ್ಟು ಚಾರ್ಜ್ ಮಾಡುತ್ತೆ ಎನ್ನುವ ವಿವರ ಇಲ್ಲಿದೆ.
ಸೂರ್ಯ (Sun) ನ ಕಿರಣಕ್ಕೂ ಹಣ ಪಡೆಯುವ ಹೊಟೇಲ್ (Hotel) : ಪ್ರಪಂಚದಲ್ಲಿ ಅನೇಕ ವಿಚಿತ್ರ ಹೊಟೇಲ್, ರೆಸ್ಟೋರೆಂಟ್ (Restaurant) ಇದೆ. ಒಂದೊಂದು ಹೊಟೇಲ್ ಕೂಡ ಒಂದೊಂದು ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ. ತನ್ನ ಸ್ಪೆಷಾಲಿಟಿ ಮೂಲಕವೇ ಗ್ರಾಹಕ (consumer) ರನ್ನು ಸೆಳೆಯುವ ಅನೇಕ ಹೊಟೇಲ್ ರೂಲ್ಸ್, ಶುಲ್ಕ ಹುಬ್ಬೇರಿಸುವಂತೆ ಮಾಡುತ್ತದೆ. ಈಗ ನಾವು ಹೇಳ್ತಿರುವ ಹೊಟೇಲ್ ಕೂಡ ಸೂರ್ಯನ ಕಿರಣಕ್ಕೆ ಶುಲ್ಕ ಪಾವತಿಸುವ ಮೂಲಕವೇ ಸುದ್ದಿಯಲ್ಲಿದೆ. ಜನರು ಈ ಹೊಟೇಲ್ ಬಿಲ್ ಪಾವತಿ ವೇಳೆ ಸೂರ್ಯನ ಕಿರಣಕ್ಕೆ ಹಾಕುವ ಚಾರ್ಜ್ ನೋಡಿ ದಂಗಾಗ್ತಾರೆ.
ಬೆಂಗಳೂರು ಮತ್ತು ಗುಲ್ಮೊಹರ್ ಮರಗಳು . .ಇದ್ಯಾವ ರೋಡ್ ಅಂತ ಗೆಸ್ ಮಾಡುತ್ತೀರಾ?
ಚಳಿಗಾಲದಲ್ಲಿ ಬೆಳಗಿನ ಬಿಸಿಲು ಪಡೆಯಲು ಬಹುತೇಕರು ಇಚ್ಛಿಸುತ್ತಾರೆ. ಚಳಿಗಾಲದಲ್ಲಿ ಬಿಸಿಲು ಮೈ ಬೆಚ್ಚಗಿಡುತ್ತದೆ. ಬಿಸಿಲಿರುವ ಜಾಗ ಹುಡುಕಿ, ಅಲ್ಲಿ ಜನ ನಿಂತುಕೊಳ್ಳೋರೇ ಹೆಚ್ಚು. ಆದ್ರ ದಕ್ಷಿಣ ಸ್ಪೇನ್ ನಲ್ಲಿರುವ ಈ ಹೊಟೇಲಿನಲ್ಲಿ ತಿಂಡಿ (Breakfast) ಜೊತೆ ಮೈ ಬೆಚ್ಚಗೆ ಆಗಬೇಕು ಅಂದ್ರೆ ನೀವು ಹಣ ನೀಡಬೇಕು. ಈ ವಿಚಿತ್ರ ಹೊಟೇಲ್ ಇರೋದು ಸೆವಿಲ್ಲೆ ಎಂಬ ನಗರದಲ್ಲಿ. ಸ್ಪೇನ್ ಶೀತ ವಾತಾವರಣದಿಂದ (Cool Climage) ಕೂಡಿದೆ. ಅಲ್ಲಿನ ಜನರು ಹೆಚ್ಚು ಚಳಿ ಅನುಭವಿಸುತ್ತಾರೆ. ಈ ಹೊಟೇಲ್ ಗೆ ಬರುವ ಗ್ರಾಹಕರಿಗೆ ಸಿಬ್ಬಂದಿ ಪ್ರಶ್ನೆ ಕೇಳ್ತಾರೆ. ನೀವು ಬಿಸಿಲಿನಲ್ಲಿ ಕುಳಿತು ತಿಂಡಿ ತಿನ್ನಲು ಬಯಸ್ತೀರಾ ಎಂದು ಕೇಳ್ತಾರೆ. ಗ್ರಾಹಕರು ಇದಕ್ಕೆ ಯಸ್ ಎಂದ್ರೆ ಬಿಸಿಲಿನಲ್ಲಿ ಕುಳಿತು ಆರಾಮವಾಗಿ ತಿಂಡಿ ತಿನ್ನಬಹುದು.
ನೀವೂ ಬಿಸಿಲಿನಲ್ಲಿ ಕುಳಿತು ಆಹಾರ ಸೇವನೆ ಮಾಡಬೇಕು ಎಂದಾದ್ರೆ 8.50 ಪೌಂಡ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 897 ರೂಪಾಯಿಗಳನ್ನು ಪಾವತಿಸಬೇಕು. ಹೊಟೇಲ್ ಸೂರ್ಯನ ಕಿರಣಕ್ಕೂ ಶುಲ್ಕ ಪಾವತಿ ಮಾಡುತ್ತಿರುವ ಕಾರಣ ಗ್ರಾಹಕರು ಕೆಟ್ಟ ವಿಮರ್ಶೆ ನೀಡುತ್ತಿದ್ದಾರೆ. ಸ್ಥಳೀಯರು ಕೂಡ ಹೊಟೇಲ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೆಂಗ್ವಿನ್ ಜೊತೆ ವಾಸ, ವಾರಕ್ಕೊಮ್ಮೆ ಸ್ನಾನ.. ಇಲ್ಲಿದೆ ಉದ್ಯೋಗವಕಾಶ,ಕೆಲಸ ಖಾಲಿ ಇದೆ!
ಹೊಟೇಲ್ ಗೆ ಬರುವ ಜನರು, ಸೂರ್ಯನ ಕಿರಣದ (Sun Rays) ಕೆಳಗೆ ಕುಳಿತುಕೊಳ್ಳಲು ಎಷ್ಟು ಶುಲ್ಕ ಪಾವತಿ ಮಾಡಬೇಕು ಎಂದು ಮೊದಲು ಹೇಳ್ತಾರೆ. ಬೆಲೆ ಕೇಳಿದ ನಂತ್ರ ತಮ್ಮ ಆಲೋಚನೆಯನ್ನು ಕೈಬಿಡುತ್ತಾರೆ. ಇದೇ ಕಾರಣಕ್ಕೆ ಹೊಟೇಲ್ ನ ಬಿಸಿಲಿನಲ್ಲಿರುವ ಖುರ್ಚಿಗಳು ಬಹುತೇಕ ಖಾಲಿ ಇರುತ್ತವೆ. ಹೊಟೇಲ್ ತನ್ನ ಗ್ರಾಹಕರಿಗೆ ಉಚಿತವಾಗಿ ಸೂರ್ಯನ ಕಿರಣ ನೀಡಿದ್ರೆ ಏನಾಗುತ್ತೆ ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ. ಆದ್ರೆ ಹೊಟೇಲ್, ತಮ್ಮ ನಿಯಮವನ್ನು ಸ್ಪಷ್ಟವಾಗಿ ಬರೆದಿದ್ದೇವೆ. ಗ್ರಾಹಕರಿಗೆ ಮೊದಲೇ ಈ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ ಎಂಬ ಉತ್ತರ ನೀಡಿದೆ.