ವಿಶ್ವ ಸಾಕಷ್ಟು ಕೌತುಕಗಳಿಂದ ಕೂಡಿದೆ. ನದಿ, ಪರ್ವತಗಳು ಜನರನ್ನು ಸೆಳೆಯುತ್ತವೆ. ಕೆಲ ದಿನಗಳು ಉದ್ದವಿದ್ರೆ ಕೆಲವು ಅಗಲವಾಗಿದೆ. ಹಾಗೆಯೇ ವಿಶ್ವದಲ್ಲಿ ಅತಿ ಚಿಕ್ಕ ನದಿಯೊಂದಿದೆ. ಅದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಹಿಂದೂ ಧರ್ಮದಲ್ಲಿ ನದಿಗಳಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಭಾರತದಲ್ಲಿ ಅನೇಕ ನದಿಗಳಿವೆ. ಎಲ್ಲ ನದಿಗಳೂ ತನ್ನದೇ ಆದ ಹಿನ್ನಲೆ ಮತ್ತು ಪ್ರಾಮುಖ್ಯತೆ ಹೊಂದಿದೆ. ಅದರಲ್ಲೂ ಗಂಗಾ, ಯಮುನಾ, ಬ್ರಹ್ಮಪುತ್ರ ಮತ್ತು ಗೋದಾವರಿ ಮುಂತಾದ ನದಿಗಳು ಇಂದಿಗೂ ಪೂಜನೀಯವಾಗಿದೆ. ಈ ನದಿಗಳು ಸಂಪನ್ಮೂಲದ ಮೂಲವಾಗಿದೆ. ಈ ನದಿಗಳ ನೀರನ್ನೇ ಅವಲಂಬಿಸಿಕೊಂಡು ಅನೇಕ ಕೃಷಿ ಚಟುವಟಿಕೆಗಳು, ಪ್ರವಾಸೋದ್ಯಮ ಹಾಗೂ ಜನಜೀವನ ನಡೆಯುತ್ತಿದೆ.
ನದಿ (River) ಗಳು ಅವುಗಳು ಅಗಲ, ಉದ್ದ, ವಿಸ್ತಾರದಲ್ಲೂ ಹೆಸರುವಾಸಿಯಾಗಿರುತ್ತವೆ. ಎಲ್ಲೋ ಹುಟ್ಟಿದ ನದಿ ಇನ್ನೆಲ್ಲೋ ಹೋಗಿ ಸೇರಿ ಜಗದಗಲಕ್ಕೂ ವ್ಯಾಪಿಸುತ್ತದೆ. ಹಾಗಾಗಿ ಹೆಚ್ಚಿನ ನದಿಗಳು ತಮ್ಮ ವಿಸ್ತಾರದಿಂದಲೇ ಖ್ಯಾತಿ ಹೊಂದಿವೆ. ಭಾರತ (India) ದ ದೊಡ್ಡ ನದಿ ಬ್ರಹ್ಮಪುತ್ರ. ಈ ನದಿಯ ಉದ್ದ 2700 ಕಿಲೋಮೀಟರ್ ಆಗಿದೆ. ಇನ್ನು ಜಗತ್ತಿನ ಅತಿ ಉದ್ದವಾದ ನದಿ ನೈಲ್ ನದಿಯಾಗಿದೆ. ಅದು 6650 ಕಿ.ಮೀ ಉದ್ದವಿದೆ. ಈ ನದಿಗಳು ದೊಡ್ಡ ನದಿಗಳೆಂದು ಹೆಸರುವಾಸಿಯಾಗಿದೆ. ಆದರೆ ಇಂದು ನಾವು ಹೇಳಲಿರುವ ಈ ನದಿ ಜಗತ್ತಿನ ಚಿಕ್ಕ ನದಿ ಎಂದೇ ಪ್ರಖ್ಯಾತವಾಗಿದೆ. ಈ ನದಿ ಎಲ್ಲಿ ಹುಟ್ಟುತ್ತೆ, ಇದರ ಉದ್ದ ಎಷ್ಟು ಎಂಬಂತಹ ಎಲ್ಲ ಮಾಹಿತಿಗಳು ಇಲ್ಲಿವೆ.
ಮಗುವಿಗೆ ಅಕ್ಷರಾಭ್ಯಾಸ ಮಾಡಿಸಲು ಶೃಂಗೇರಿಗೆ ಹೋಗಬೇಕಾ? ಹೀಗ್ ಮಾಡಿ
ಇದು ಜಗತ್ತಿನ ಅತಿ ಚಿಕ್ಕ ನದಿ : ಪ್ರಪಂಚದ ಅತಿ ಚಿಕ್ಕದ ನದಿ ರೊ (Roe) ರಿವರ್ ಆಗಿದೆ. ಈ ರೋ ನದಿಯು ಅಮೆರಿಕದ ಮೌಂಟಾನಾ ರಾಜ್ಯದಲ್ಲಿ ಹರಿಯುತ್ತದೆ. ಈ ನದಿಯ ಉದ್ದ ಕೇವಲ 61 ಮೀಟರ್ ಅಥವಾ 201 ಫೂಟ್ ಆಗಿದೆ. ಈ ನದಿಯು ತನ್ನ ಚಿಕ್ಕ ಗಾತ್ರದಿಂದಲೇ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೆ ಸೇರಿದೆ. ಈ ನದಿಯ ಪಕ್ಕದಲ್ಲೇ ಮಿಸೂರಿ ನದಿ ಕೂಡ ಹರಿಯುತ್ತದೆ. ಇದು ಅಮೆರಿಕದ ದೊಡ್ಡ ನದಿಯಾಗಿದೆ.
ರೋ ನದಿ ಜಗತ್ತಿನ ಚಿಕ್ಕ ನದಿಯಾಗಿದ್ದು ಹೇಗೆ? : 1980ರ ದಶಕದಲ್ಲಿ ಗ್ರೇಟ್ ಫಾಲ್ಸ್ ನಲ್ಲಿರುವ ಲಿಂಕನ್ ಸ್ಕೂಲ್ ಎಲಿಮೆಂಟರಿಯ ಶಿಕ್ಷಕಿ ಸುಸಾನ್ ನಾರ್ಡ್ಲಿಂಗರ್ ಮತ್ತು ಅವರ ಐದನೇ ತರಗತಿಯ ವಿದ್ಯಾರ್ಥಿಗಳು ಒಂದು ಅಭಿಯಾನವನ್ನು ಆರಂಭಿಸಿದರು. ಅವರ ಅಭಿಯಾನದ ಮೂಲ ಉದ್ದೇಶ ರೋ ನದಿಯನ್ನು ಅತ್ಯಂತ ಚಿಕ್ಕ ನದಿಯೆಂದು ಗಿನ್ನಿಸ್ ಬುಕ್ ಗೆ ಸೇರಿಸುವುದಾಗಿತ್ತು. ಹಲವು ಪ್ರಯತ್ನಗಳ ನಂತರ ಕೊನೆಗೆ ರೋ ನದಿ ಪ್ರಪಂಚದ ಅತೀ ಚಿಕ್ಕ ನದಿಯೆಂದು ದಾಖಲೆ ಸೃಷ್ಠಿಸಿತು.
ಬೆಂಗಳೂರಿನಿಂದ ಕೇದಾರನಾಥಕ್ಕೆ ಪ್ರಯಾಣ ವೆಚ್ಚ ಎಷ್ಟು? ಹೋಗೋದು ಹೇಗೆ?
ರೋ ನದಿಗೂ ಮೊದಲು ಇದು ಚಿಕ್ಕ ನದಿಯಾಗಿತ್ತು : ರೋ ನದಿಗೂ ಮೊದಲು ಆರೆಗಾನ್ ನಲ್ಲಿರುವ ಡಿ ರಿವರ್ ಅತಿ ಚಿಕ್ಕ ನದಿಯೆಂದು ಗಿನ್ನಿಸ್ ರೆಕಾರ್ಡ್ ದಾಖಲಿಸಿತ್ತು. ಈ ನದಿಯ ಉದ್ದ 440 ಫೂಟ್ ಇತ್ತು. ಡಿ ರಿವರ್ ಗೆ ಹೋಲಿಸಿದಲ್ಲಿ ರೋ ನದಿಯ ಗಾತ್ರ ಬಹಳ ಚಿಕ್ಕದಾಗಿದೆ. ಹಾಗಾಗಿಯೇ 1980ರಲ್ಲಿ ಅಭಿಯಾನದ ಮೂಲಕ ರೋ ನದಿಯನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರಿಸಲಾಯ್ತು. ರೋ ನದಿಯ ಆರಂಭದಿಂದ ಕೊನೆಯವರೆಗೆ ಕಡಿಮೆ ಸಮಯದಲ್ಲಿ ತಲುಪಬಹುದು.
ರೋ ನದಿಯ ನೀರು ಲಿಟ್ಲ್ ಬೆಲ್ಟ್ ಪರ್ವತ ಶ್ರೇಣಿಯಿಂದ ಬರುತ್ತದೆ. ಹೆಚ್ಚು ಪ್ರಮಾಣದ ಹರಿಯುವ ನೀರಿನ ಸಮೂಹವೇ ನದಿಯಾಗಿದೆ. ಇವುಗಳಲ್ಲಿ ಕೆಲವು ಬುಗ್ಗೆಗಳು ಅಥವಾ ಅಂಡರ್ ಗ್ರೌಂಡ್ ಸ್ಪ್ರಿಂಗ್ (ಊಟೆ) ಅಥವಾ ಚಿಕ್ಕ ಕೊಳಗಳಿಂದ ಉಂಟಾಗುತ್ತವೆ. ರೋ ನದಿಯು ಕೂಡ ಅಂಡರ್ ಗ್ರೌಂಡ್ ಸ್ಪ್ರಿಂಗ್ ನಿಂದಲೇ ಆಗಿದೆ. ಚಿಕ್ಕದಾದ ಈ ನದಿಯನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ನೋಡಬಹುದು. ಈ ಕಾರಣದಿಂದಲೇ ಇದು ವಿಶ್ವದ ಚಿಕ್ಕ ನದಿಯಾಗಿ ಹೆಸರು ಮಾಡಿದೆ.