
ಭಾರತೀಯ ರೈಲ್ವೆಯೂ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹಲವು ಸವಲತ್ತುಗಳನ್ನು ಒದಗಿಸುತ್ತದೆ. ನೀರಿನ ಬಾಟಲ್, ಸ್ಲೀಪರ್ ಏಸಿ ಕೋಚಾಗಿದ್ದರೆ ಬೆಡ್ಶಿಟ್ ನೀರಿನ ಬಾಟಲ್, ಆಹಾರ ಹೀಗೆ ಪ್ರಯಾಣದ ಸಮಯದಲ್ಲಿ ಬೇಕಾದ ಅಗತ್ಯ ಸೌಲಭ್ಯಗಳನ್ನು ನೀಡುತ್ತದೆ. ಆದರೆ ಕೆಲ ಜನರು ಎಷ್ಟೊಂದು ಕೆಟ್ಟ ಮನಸ್ಥಿತಿಯನ್ನು ಹೊಂದಿರುತ್ತಾರೆ ಎಂದರೆ ಇದು ಸಾರ್ವಜನಿಕ ಆಸ್ತಿ ಎಂಬುದು ಗೊತ್ತಿದ್ದು ಕೂಡ ಅವುಗಳನ್ನು ಕಳ್ಳತನ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಕೆಲ ಖದೀಮರು ಪ್ರಯಾಣಿಕರಿಗಾಗಿ ರೈಲ್ವೆಯಲ್ಲಿ ಹಾಸಲು ಹೊದೆಯಲು ನೀಡುವ ಬೆಡ್ಶಿಟ್‌ಗಳನ್ನೇ ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆದರೆ ಅದೃಷ್ಟವಶಾತ್ ಅವರು ಸಿಕ್ಕಿ ಬಿದ್ದಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಸಾರ್ವಜನಿಕ ಆಸ್ತಿ ಎಂದರೆ ಜನರಿಗೆ ಆಸಡ್ಡೆ ಜಾಸ್ತಿ , ಅದನ್ನು ಹೇಳುವವರು ಇಲಲ್ ಕೇಳುವವರು ಇರುವುದಿಲ್ಲ, ಹೀಗಾಗಿ ಸಾರ್ವಜನಿಕ ಆಸ್ತಿಯ ಜೊತೆ ಜನ ಬೇಕಾಬಿಟ್ಟಿ ವರ್ತಿಸುತ್ತಾರೆ. ಇದೇ ಕಾರಣಕ್ಕೆ ಸಾರ್ವಜನಿಕ ಆಸ್ತಿಗಳಾದ ಸರ್ಕಾರಿ ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ರಸ್ತೆಗಳು ಎಷ್ಟೇ ವೆಚ್ಚ ಮಾಡಿದರು ಕಳಪೆ ಸ್ಥಿತಿಯಲ್ಲಿರುತ್ತವೆ. ಅದೇ ರೀತಿ ಅವುಗಳನ್ನು ಜನ ನಮ್ಮದೆಂದು ಭಾವಿಸದ ಕಾರಣ ಕಳ್ಳತನವಾಗುವುದು ಕೂಡ ಹೆಚ್ಚು ಕೆಲ ಸಮಯಕ್ಕೂ ಹಿಂದೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಿಲ್ದಾಣವನ್ನೇ ಖದೀಮರು ಕದ್ದು ಎಸ್ಕೇಪ್ ಆದ ಘಟನೆ ನಡೆದಿರುವುದು ನಿಮಗೆ ನೆನಪಿರಬಹುದು. ಅದೇ ರೀತಿ ಇಲ್ಲಿ ಈಗ ಕೆಲ ಖದೀಮರು ರೈಲಿನಲ್ಲಿ ಹಾಸಲು ನೀಡಿದ ಬೆಡ್ಶಿಟ್ ಕದ್ದಿದ್ದು ರೈಲ್ವೆ ಪೊಲೀಸರಿಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇದರ ವೀಡಿಯೋ ರೆಡಿಟ್‌ನಲ್ಲಿ ಪೋಸ್ಟ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ಈ ಕಳ್ಳತನ ಪ್ರಕರಣ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ ಎನ್ನಲಾಗಿದ್ದು, ರೈಲ್ವೆ ಸಿಬ್ಬಂದಿ ಹೀಗೆ ಬೆಡ್ಶಿಟ್ ಕದ್ದ ಪ್ರಯಾಣಿಕರ ಬ್ಯಾಗ್‌ಗಳನ್ನು ಪರಿಶೀಲಿಸುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ. whoismayankk ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. ವೀಡಿಯೋದಲ್ಲಿ ರೈಲಿನಿಂದ ಇಳಿದ ಪ್ರಯಾಣಿಕರ ಬ್ಯಾಗನ್ನು ರೈಲ್ವೆ ಸಿಬ್ಬಂದಿ ಪರಿಶೀಲಿಸುತ್ತಿದ್ದು, ಈ ವೇಳೆ ಅವರ ಬ್ಯಾಗ್‌ನಲ್ಲಿ ರೈಲ್ವೆಗೆ ಸೇರಿದ ಬೆಡ್ಶಿಟ್‌ಗಳು ಸಿಕ್ಕಿವೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಪ್ರಯಾಣಿಕರ ವರ್ತನೆಯನ್ನು ಖಂಡಿಸಿದ್ದಾರೆ. ಅಲ್ಲದೇ ಅವರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು. ಜನರಿಗೆ ಇಷ್ಟೊಂದು ಸಣ್ಣ ವಸ್ತುಗಳನ್ನು ಕೂಡ ಖರೀದಿಸಲು ಯೋಗ್ಯತೆ ಇಲ್ಲವೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಪ್ರಯಾಣಿಕರ ಆರಾಮಕ್ಕಾಗಿ ಇಂತಹ ಸವಲತ್ತುಗಳನ್ನು ಒದಗಿಸಲಾಗಿದೆ. ಆದರೆ ಕೆಲವರು ಅದನ್ನು ಕೂಡ ಬಿಡುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ರೈಲ್ವೆಯೂ ಸೆಕ್ಯೂರಿಟಿ ಡಿಪಾಸಿಟ್ ಅಂತ ಶುಲ್ಕ ವಿಧಿಸಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕಳ್ಳರ ಈ ಕೃತ್ಯಗಳು ರೈಲ್ವೆಯ ಬಜೆಟ್ ಹಣ ಎಲ್ಲಿ ಪೋಲಾಗುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದೆ. ಈ ಕೃತ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.