
ಪ್ರಯಾಗರಾಜ್ (Prayagraj) ನಲ್ಲಿ 144 ವರ್ಷಗಳ ನಂತ್ರ ಮಹಾ ಕುಂಭ ಮೇಳ (Maha Kumbh Mela) ನಡೆಯುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಜನರು ಕುಂಭ ಮೇಳವನ್ನು ಕಣ್ತುಂಬಿಕೊಳ್ಳಲು ಮುಂದಾಗುತ್ತಿದ್ದಾರೆ. ಕೋಟಿ ಲೆಕ್ಕದಲ್ಲಿ ಪ್ರಯಾಗ ರಾಜ್ ಗೆ ಜನರು ಬರ್ತಿದ್ದಾರೆ. ನಾವು, ನೀವೆಲ್ಲ ಮಹಾ ಕುಂಭ ಮೇಳಕ್ಕೆ ಹೋಗ್ಬೇಕು ಅಂದ್ಕೊಂಡಿದಿವಿ. ಆದ್ರೆ ಹೋಗೋದು ಹೇಗೆ ಎಂಬ ಪ್ರಶ್ನೆ ಅನೇಕರನ್ನು ಕಾಡೋದಿದೆ. ವಿಮಾನ ಪ್ರಯಾಣ ಸಾಧ್ಯವಿಲ್ಲ. ಕಾರ್ ನಲ್ಲಿ ಬೆಂಗಳೂರಿನಿಂದ ಪ್ರಯಾಗ್ ರಾಜ್ ಗೆ ಹೋಗೋದು ಸುಲಭವೇನಲ್ಲ. ಇನ್ನು ನಮಗಿರುವ ಆಯ್ಕೆ ಟ್ರೈನ್. ಮಹಾ ಕುಂಭ ಮೇಳಕ್ಕೆ ಹೋಗ್ಬೇಕು ಎನ್ನುವ ಇಚ್ಛೆ ಇರುವವರೆಲ್ಲ ಟ್ರೈನ್ ಟಿಕೆಟ್ (Train Ticket) ಬುಕ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಎಷ್ಟೇ ಮಾಡಿದ್ರೂ ಟ್ರೈನ್ ಟಿಕೆಟ್ ಬುಕ್ ಆಗ್ತಿಲ್ಲ. ಟಿಕೆಟ್ ಕನ್ಫರ್ಮ್ ಆಗ್ತಿಲ್ಲ. ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ರೆ ಟೆನ್ಷನ್ ಬೇಡ. ಕೆಲ ಟ್ರಿಕ್ಸ್ ಉಪಯೋಗಿಸಿದ್ರೆ ನೀವು ಕನ್ಫರ್ಮ್ ಟಿಕೆಟ್ ಪಡೆಯಬಹುದು.
ರೈಲು ಪ್ರಯಾಣ ಪ್ರಾರಂಭವಾಗುವ ಒಂದು ದಿನ ಮೊದಲು, ಐಆರ್‌ಸಿಟಿಸಿ ತತ್ಕಾಲ್ ಟಿಕೆಟ್‌ಗಳ ಬುಕಿಂಗ್ ವಿಂಡೋವನ್ನು ತೆರೆಯುತ್ತದೆ. ಈ ಕೋಟಾದಡಿಯಲ್ಲಿ, ಪ್ರತಿ ರೈಲಿನಲ್ಲಿ ಸೀಟುಗಳ ಸಂಖ್ಯೆ ಸೀಮಿತವಾಗಿರುತ್ತದೆ. ಬುಕಿಂಗ್ ಸಮಯವನ್ನು ಕೂಡ ನಿಗದಿಪಡಿಸಲಾಗಿದೆ. ಭಾರತೀಯ ರೈಲ್ವೆಯು ರೈಲುಗಳಲ್ಲಿ ಎಸಿ ಕ್ಲಾಸ್ ಮತ್ತು ಸ್ಲೀಪರ್ ಕ್ಲಾಸ್‌ಗೆ ತತ್ಕಾಲ್ ಟಿಕೆಟ್ ಬುಕಿಂಗ್ ಆಯ್ಕೆಯನ್ನು ಒದಗಿಸುತ್ತದೆ. ಎಸಿ ವರ್ಗದ ಬುಕಿಂಗ್ ವಿಂಡೋ ಬೆಳಿಗ್ಗೆ 10 ಗಂಟೆಗೆ ತೆರೆಯುತ್ತದೆ. ಎಸಿ ಅಲ್ಲದ ವರ್ಗಕ್ಕೆ ಅಂದರೆ ಸ್ಲೀಪರ್ ವಿಭಾಗಕ್ಕೆ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವ ವಿಂಡೋ ಬೆಳಿಗ್ಗೆ 11 ಗಂಟೆಗೆ ತೆರೆಯುತ್ತದೆ.
ರೈಲಿನಲ್ಲಿ ಸಹಜ ಸಾವು ಸಂಭವಿಸಿದ್ರೆ ಪರಿಹಾರ ಸಿಗುತ್ತಾ? ಭಾರತೀಯ ರೈಲ್ವೆಯ ನಿಯಮಗಳೇನು?
ಕನ್ಫರ್ಮ್ ಟಿಕೆಟ್ ಪಡೆಯೋದು ಹೇಗೆ? :
ಮಾಸ್ಟರ್ ಲೀಸ್ಟ್ ಸಿದ್ಧವಿರಲಿ : ತತ್ಕಾಲ್ ಟಿಕೆಟ್ ಬುಕ್ ಮಾಡುವ ವೇಳೆ ಹೆಸರು, ವಯಸ್ಸು, ಲಿಂಗ ಸೇರಿದಂತೆ ನಮ್ಮ ಮಾಹಿತಿ ತುಂಬೋದ್ರಲ್ಲಿಯೇ ಕೆಲ ಸಮಯ ಕಳೆಯುತ್ತೆ. ಈ ಟೈಂನಲ್ಲಿ ಟಿಕೆಟ್ ಬುಕ್ ಆಗೋಗಿರುತ್ತೆ. ನೀವು ಇದ್ರಿಂದ ಬಚಾವ್ ಆಗಿ ಬೇಗ ಟಿಕೆಟ್ ಬುಕ್ ಮಾಡ್ಬೇಕು ಅಂದ್ರೆ IRCTCಯಲ್ಲಿ ಮೊದಲೇ ಮಾಸ್ಟರ್ ಲೀಸ್ಟ್ ಸಿದ್ಧ ಮಾಡ್ಕೊಳ್ಳಿ. IRCTC ವೆಬ್ ಸೈಟ್ ನಲ್ಲಿ ನೀವು ಮೈ ಪ್ರೊಫೈಲ್ ಸೆಕ್ಷನ್ ಗೆ ಹೋಗಿ ಅಲ್ಲಿ ನಿಮ್ಮ ಲೀಸ್ಟ್ ಸಿದ್ಧಪಡಿಸಬೇಕು. ನೀವು ಈ ಲೀಸ್ಟ್ ನಲ್ಲಿ 20 ಪ್ರಯಾಣಿಕರ ಮಾಹಿತಿಯನ್ನು ಸೇರಿಸಬಹುದು. ಇದ್ರಿಂದ ನಿಮಗೆ ಟೈಂ ಉಳಿಯುತ್ತೆ. ಟಿಕೆಟ್ ಓಪನ್ ಆಗ್ತಿದ್ದಂತೆ ಮಾಹಿತಿ ಭರ್ತಿ ಮಾಡೋ ಸಮಯದಲ್ಲಿ ನೀವು ಟಿಕೆಟ್ ಬುಕ್ ಮಾಡ್ಬಹುದು.
ಒಟಿಪಿ ಇಲ್ಲದ ಪೇಮೆಂಟ್ : ನೀವು IRCTC ವೆಬ್ ಸೈಟ್ ನಲ್ಲಿ ಆನ್ಲೈನ್ ಮೂಲಕ ಇಲ್ಲವೆ ಕಾರ್ಡ್ ಮೂಲಕ ಟಿಕೆಟ್ ಬುಕ್ ಮಾಡ್ಬಹುದು. ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಕಾರ್ಡ್ ಪೇಮೆಂಟ್ ವೇಳೆ ಒಟಿಪಿ ವೆರಿಫಿಕೇಷನ್ ಅನಿವಾರ್ಯವಾಗುತ್ತದೆ. ಈ ಟೈಂ ಉಳಿಸಲು ನೀವು ಒಟಿಪಿ ರಹಿತ ಪೇಮೆಂಟ್ ಮಾರ್ಗವನ್ನು ಪಾಲಿಸಿ. ರೈಲ್ವೆ ಇ ವಾಲೆಟ್, ಪೇಟಿಎಂ ಮತ್ತು ಯುಪಿಐ ಮೂಲಕ ನೀವು ಪೇಮೆಂಟ್ ಮಾಡಿ.
ಒಂದೇ ಕ್ಲಿಕ್‌ನಲ್ಲಿ ಸಿಗುತ್ತೆ ಎಲ್ಲಾ ಮಾಹಿತಿ; ಭಾರತೀಯ ರೈಲ್ವೆಯಿಂದ ಹೊಸ ಸೇವೆ ಆರಂಭ
ಇಂಟರ್ನೆಟ್ ಕೂಡ ಮುಖ್ಯ : ಇಂಟರ್ ನೆಟ್ ಸ್ಪೀಡ್ ಇಲ್ಲ ಅಂದ್ರೆ ವೆಬ್ ಸೈಟ್ ಓಪನ್ ಆಗೋದು ಕಷ್ಟ. ಅದ್ರಲ್ಲೂ ತತ್ಕಾಲ್ ಟಿಕೆಟ್ ಬುಕ್ ಮಾಡುವ ವೇಳೆ ಇಂಟರ್ ನೆಟ್ ಸ್ಲೋ ಆದ್ರೆ ಮತ್ತಷ್ಟು ಕಷ್ಟ. ತತ್ಕಾಲ್ ನಲ್ಲಿ ನೀವು ಟಿಕೆಟ್ ಬುಕ್ ಮಾಡ್ಬೇಕು ಅಂದ್ರೆ ಹೈ ಸ್ಪೀಡ್ ಇಂಟರ್ ನೆಟ್ ಇರುವಂತೆ ನೋಡ್ಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.