ಪ್ರವಾಸದ ವೇಳೆ ಸಾಹಸವನ್ನು ಅನೇಕರು ಬಯಸ್ತಾರೆ. ತಮ್ಮಿಷ್ಟದಂತೆ ಪ್ರವಾಸದ ಸ್ಥಳದಲ್ಲಿರಲು ಮತ್ತೆ ಕೆಲವರು ಇಚ್ಛಿಸುತ್ತಾರೆ. ಸುಂದರವಾದ, ಶಾಂತ ಪರಿಸರದಲ್ಲಿ ಸಮಯ ಕಳೆಯಲು ಬಯಸುವವರಿದ್ದಾರೆ. ಆದ್ರೆ ಈ ದಂಪತಿ ಪ್ರವಾಸಕ್ಕೆ ಹೋಗುವ ಮುನ್ನ ನಗ್ನವಾಗಿರಲು ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡ್ತಾರೆ.
ಜನರು, ಯಾವಾಗ, ಹೇಗೆ ಬದಲಾಗ್ತಾರೆ ಅನ್ನೋದನ್ನು ಹೇಳೋದು ಕಷ್ಟ. ಮನಸ್ಸು ಬದಲಾದಂತೆ ಜನರು ಕೂಡ ಬದಲಾಗ್ತಾರೆ. ಅವರ ಮನಸ್ಸು ಮಾತ್ರವಲ್ಲ, ಜೀವನಶೈಲಿ ಕೂಡ ಬದಲಾಗ್ತಿರುತ್ತದೆ. ಯಾವುದೋ ಒಂದು ಘಟನೆ ಅಥವಾ ವಿಷ್ಯ ಅವರ ಮೇಲೆ ಗಾಢ ಪ್ರಭಾವ ಬೀರುತ್ತದೆ. ಮನುಷ್ಯನಂತೆ ಸಾಮಾಜಿಕ ಜಾಲತಾಣ ಕೂಡ. ಯಾವಾಗ, ಯಾವ ವಿಷ್ಯ ಇಲ್ಲಿ ವೈರಲ್ ಆಗುತ್ತೆ ಅನ್ನೋದನ್ನು ಹೇಳೋದು ಕಷ್ಟ. ಈಗ ದಂಪತಿಯ ಸುದ್ದಿ ಒಂದು ಸಿಕ್ಕಾಪಟ್ಟೆ ಸುದ್ದಿ ಮಾಡಿದೆ.
ದಂಪತಿ ಮೈಮೇಲೆ ಬಟ್ಟೆ ಹಾಕದೆ ನಗ್ನ (Naked) ವಾಗಿ ಪ್ರವಾಸ (Trip) ಕೈಕೊಳ್ಳುತ್ತಿರುವುದನ್ನು ನೀವು ನೋಡ್ಬಹುದು. ನಿಮಗೆ ಇದು ವಿಚಿತ್ರ ಎನ್ನಿಸಬಹುದು. ಆದ್ರೂ ಇದ್ರಲ್ಲಿ ಸತ್ಯವಿದೆ. ಅವರ ನಿರ್ಧಾರಕ್ಕೆ ಕಾರಣವೇನು? ಅವರ್ಯಾಕೆ ಹೀಗೆಲ್ಲ ಆಡ್ತಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ರೈಲಿನಲ್ಲಿ ಪ್ರಯಾಣಿಸುವಾಗ ಯಾರೂ ನೋಡ್ತಿಲ್ಲಾಂತ ಹೀಗೆಲ್ಲಾ ಮಾಡಿದ್ರೆ ಜೈಲೂಟ ಗ್ಯಾರಂಟಿ!
ನಗ್ನವಾಗಿ ಸುತ್ತುತ್ತಿರೋರು ಯಾರು? : ಫಿಯೋನಾ ಮತ್ತು ಅವರ ಪತಿ ಮೈಕೆಲ್ ಡಿಸ್ಕಾಮ್ ಬಟ್ಟೆ ಇಲ್ಲದೆ ಜಗತ್ತು ಸುತ್ತುತ್ತಿದ್ದಾರೆ. ಈ ದಂಪತಿ ಬ್ರಿಟನ್ (Britain) ಮೂಲದವರು. ಪ್ರವಾಸಕ್ಕೆ ಹೋಗುವಾಗ ಕೂಡ ಅವರು ಹೆಚ್ಚು ಜಾಗೃತಿ ವಹಿಸುತ್ತಾರೆ. ಬಟ್ಟೆಯಿಲ್ಲದೆ ವಾಸಿಸಲು ಸೂಕ್ತವಾದ ಜಾಗವನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ಹೋಗ್ತಾರೆ. ಯಾರೂ ಇಲ್ಲದ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗೋದು ನಮಗೆ ತುಂಬಾ ಇಷ್ಟವೆಂದು ಮೈಕಲ್ ದಂಪತಿ ಹೇಳ್ತಾರೆ.
ದಂಪತಿಗೆ ಪ್ರವಾಸ ಒಂದು ರೀತಿಯ ಫ್ಯಾಷನ್ (Fashion). ಇದಕ್ಕೆ ಅವರು ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡೋದಿಲ್ಲ. ಈವರೆಗೆ ಪ್ರವಾಸಕ್ಕೆಂದೇ ಈ ದಂಪದತಿ 19000 ಡಾಲರ್ ಅಂದ್ರೆ ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಫಿಯೋನಾ ಮತ್ತು ಮೈಕಲ್ ಗೆ ಸುಮಾರು 50 ವರ್ಷ ವಯಸ್ಸಾಗಿದೆ. ಹೊಟೇಲ್ ಹಾಗೂ ಮನೆಯಲ್ಲಿ ಇವರು ವಿವಸ್ತ್ರವಾಗಿಯೇ ಇರ್ತಾರೆ. ರಾತ್ರಿ ಅವರು ಬಟ್ಟೆ ಧರಿಸೋದಿಲ್ಲ. ಪ್ರವಾಸಕ್ಕೆ ಹೋಗ್ಬೇಕೆಂದ್ರೆ ನಾವೆಲ್ಲ ನಾಲ್ಕೈದು ಬ್ಯಾಗ್ ತುಂಬಿಕೊಳ್ತೇವೆ. ಬಟ್ಟೆ ತೆಗೆದುಕೊಂಡಷ್ಟು ನಮಗೆ ಸಾಕಾಗೋದಿಲ್ಲ. ಸ್ವಂತ ವಾಹನದಲ್ಲಿ ಹೋಗೋರಾದ್ರೆ ಕುಳಿತುಕೊಳ್ಳಲು ಜಾಗವಿಲ್ಲದಷ್ಟು ಬ್ಯಾಗನ್ನು ನಾವು ತುಂಬಿರ್ತೇವೆ. ಆದ್ರೆ ಈ ದಂಪತಿಗೆ ಹೆಚ್ಚಿನ ಬಟ್ಟೆ ಅವಶ್ಯಕತೆಯಿಲ್ಲ. ಆರಂಭದಲ್ಲಿ ಇವರ ಬಗ್ಗೆ ಜನರು ನಾನಾ ಮಾತುಗಳನ್ನು ಆಡ್ತಿದ್ದರಂತೆ. ಆದ್ರೆ ಅದಕ್ಕೆ ದಂಪತಿ ತಲೆಕೆಡಿಸಿಕೊಳ್ತಿರಲಿಲ್ಲ. ಈಗ್ಲೂ ಅವರು ಬಿಂದಾಸ್ ಆಗಿ ಪ್ರವಾಸ ಮಾಡ್ತಾರೆ. ಎಲ್ಲ ಸಮಯದಲ್ಲೂ ಅವರು ನಗ್ನವಾಗಿ ಸುತ್ತೋದಿಲ್ಲ.
ಈ ದೇವಾಲಯದಿಂದ ಸ್ವರ್ಗಕ್ಕಿದೆ ಮೆಟ್ಟಿಲು! ಆದ್ರೆ ಸಣ್ಣ ಪ್ರಾಬ್ಲಂ ಇದೆ..
ಯಾಕೆ ಈ ನಿರ್ಧಾರ? : 20 ವರ್ಷಗಳ ಹಿಂದೆ ಹನಿಮೂನ್ ಗೆ ಹೋದಾಗ ಬದಲಾಯ್ತು ಇವರ ನಿರ್ಧಾರ. ಫಿಯೋನಾ ಮತ್ತು ಮೈಕೆಲ್ ಹನಿಮೂನ್ ಗೆ ಗ್ರೀಸ್ ಗೆ ಹೋಗಿದ್ದರಂತೆ. ಅಲ್ಲಿ ಒಂದು ದಂಪತಿ ನಗ್ನ ಸ್ಥಿತಿಯಲ್ಲಿರೋದನ್ನು ಫಿಯೋನಾ ಮತ್ತು ಮೈಕೆಲ್ ನೋಡಿದ್ದಾರೆ. ಆ ದಂಪತಿ ನೋಡಿ ಇವರಿಗೆ ಮೊದಲು ಆಘಾತವಾಗಿದೆ. ನಂತ್ರ ಫಿಯೋನಾ ಮತ್ತು ಮೈಕೆಲ್ ಕೂಡ ನಗ್ನವಾಗಿ ಓಡಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲಿ ಮೊದಲ ಬಾರಿ ಫಿಯೋನಾ ಮತ್ತು ಮೈಕೆಲ್ ನಗ್ನರಾಗಿ, ಬೀಚ್ ನಲ್ಲಿ ಓಡಾಡಿದ್ದಾರೆ. ಸಮುದ್ರ ತೀರದಲ್ಲಿ ಬಟ್ಟೆಯಿಲ್ಲದೆ ನಡೆದ ಅವರಿಗೆ ವಿಚಿತ್ರ ಅನುಭವವಾಗಿದೆ. ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಂತೆ ಭಾಸವಾಗಿದೆ. ಆ ನಂತ್ರ ಫಿಯೋನಾ ಮತ್ತು ಮೈಕೆಲ್ ನಗ್ನವಾಗಿ ಸುತ್ತಾಡುವ ನಿರ್ಧಾರಕ್ಕೆ ಬಂದರು. ಅಲ್ಲಿಂದ ಇಲ್ಲಿಯವರೆಗೂ ಈ ದಂಪತಿ ಬಟ್ಟೆಯಿಲ್ಲದೆ ಸುತ್ತಾಡೋದನ್ನು ರೂಢಿಸಿಕೊಂಡಿದ್ದಾರೆ. ದಂಪತಿ ಇನ್ಸ್ಟಾಗ್ರಾಮ್ ಖಾತೆಯನ್ನು ಕೂಡ ಒಂದಿದ್ದಾರೆ. ಅದ್ರಲ್ಲಿ ಫೋಟೋಗಳನ್ನು ಅವರು ಹಂಚಿಕೊಳ್ತಿರುತ್ತಾರೆ. ಅವರು ನಗ್ನ ಪ್ರಯಾಣಕ್ಕೆ ಸಂಬಂಧಿಸಿದ ವೆಬ್‌ಸೈಟ್ ಅನ್ನು ಸಹ ಹೊಂದಿದ್ದಾರೆ.