ಟೈಟಾನಿಕ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಐಷಾರಾಮಿ ಹಡಗು ಮುಳುಗಿ 100 ವರ್ಷಗಳು ಕಳೆದರೂ ಇದರ ಕುರಿತಾಗಿರುವ ಹಲವು ರಹಸ್ಯಗಳು ಇನ್ನೂ ಹೊರ ಬರುತ್ತಲೇ ಇವೆ. ಸದ್ಯ 111 ವರ್ಷ ಹಳೆಯ ಆಹಾರ ಮೆನು ವೈರಲ್ ಆಗಿದ್ದು, ಟೈಟಾನಿಕ್ ಹಡಗು ಮುಳುಗಿದ ದಿನ ಪ್ರಯಾಣಿಕರು ಏನು ತಿಂದಿದ್ದರು ಎಂಬ ವಿಚಾರ ತಿಳಿದುಬಂದಿದೆ.
ಟೈಟಾನಿಕ್..ಹೆಸರು ಕೇಳಿದ ತಕ್ಷಣವೇ ಭೀಕರ ದುರಂತ ಕಣ್ಮುಂದೆ ಬರುತ್ತೆ. ಈ ಐಷಾರಾಮಿ ಹಡಗಿನ ಸುತ್ತವಿರುವ ರಹಸ್ಯಗಳು ಒಂದೆರಡಲ್ಲ. ಇನ್ನು ಅದೆಷ್ಟೋ ನಿಗೂಢ ವಿಷಯಗಳು ಬಯಲಾಗುತ್ತಲೇ ಇವೆ. ಹಡಗು ಮುಳುಗಿ 100 ವರ್ಷಗಳು ಕಳೆದರೂ ಇದರ ಕುರಿತಾಗಿರುವ ಹಲವು ರಹಸ್ಯಗಳು ಜನರನ್ನು ಭಯಬೀಳಿಸುತ್ತಿದೆ. ಐಷಾರಾಮಿ ಹಡಗಿನ ಕುರಿತಾಗಿ ಅನೇಕರಲ್ಲಿ ಬಹಳಷ್ಟು ಪ್ರಶ್ನೆಗಳು ಇಂದಿಗೂ ಇವೆ. ಅತ್ಯಂತ ಐಷಾರಾಮಿ ಹಡಗು ಎಂದೇ ಹೆಸರು ಪಡೆದಿದ್ದ ಟೈಟಾನಿಕ್ ತನ್ನ ಪ್ರಯಾಣಿಕರಿಗೆ ಏನು ಊಟ ನೀಡಿತ್ತು ಎಂದು ನೀವು ಎಂದಾದರೂ ಊಹಿಸಿದ್ದೀರಾ?
ಮುಳುಗಿದ 100 ವರ್ಷಗಳ ನಂತರ, ಟೈಟಾನಿಕ್ ಇನ್ನೂ ಅತ್ಯಂತ ಪ್ರಸಿದ್ಧ ಪ್ರಯಾಣಿಕ ಲೈನರ್ ಆಗಿದೆ. ಐಷಾರಾಮಿ ಕ್ರೂಸ್ ಲೈನರ್ ಏಪ್ರಿಲ್ 15, 1912 ರಂದು ಸೌತಾಂಪ್ಟನ್, ಇಂಗ್ಲೆಂಡ್ನಿಂದ ಯುನೈಟೆಡ್ ಸ್ಟೇಟ್ಸ್ನ ನ್ಯೂಯಾರ್ಕ್ಗೆ ತನ್ನ ಸಮುದ್ರಯಾನದಲ್ಲಿ ಮುಳುಗಿತು. ದುರದೃಷ್ಟಕರ ಹಡಗಿನಲ್ಲಿ (Ship) ನಡೆದ ದುರಂತ ಕಥೆಯ ಮೇಲೆ ಮಾಡಿದ ಅನೇಕ ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳು ಪ್ರಸಿದ್ಧಿಯಾಗಿವೆ. ಆದರೆ ಐಷಾರಾಮಿ ಹಡಗಿನಲ್ಲಿ ಪ್ರಯಾಣಿಕರಿಗೆ (Passengers) ಏನು ಆಹಾರ (Food) ಕೊಡಲಾಗ್ತಿತ್ತು ಅನ್ನೋದು ಗೊತ್ತಿದ್ಯಾ?
ಕ್ರೂಸ್ ಶಿಪ್ನಲ್ಲಿ 12ವರ್ಷಕ್ಕೆ ಅಪಾರ್ಟ್ಮೆಂಟ್ ಲೀಸ್ಗೆ ಪಡೆದ ಮೆಟಾ ಉದ್ಯೋಗಿ
ಟೈಟಾನಿಕ್ ಮುಳುಗಿ 100 ವರ್ಷಗಳು ಕಳೆದರೂ ಹಲವು ರಹಸ್ಯ
ಆರ್ಎಂಎಸ್ ಟೈಟಾನಿಕ್ ಹಡಗಿನ ಬಗ್ಗೆ ನೀವು ಕೇಳಿರಬಹುದು. ಇದು ಮುಳುಗಿ 100 ವರ್ಷಗಳು ಕಳೆದರೂ ಇನ್ನೂ ಹಲವು ಕುತೂಹಲ, ರಹಸ್ಯಗಳನ್ನು ಒಳಗೊಂಡಿದೆ. ಇದರ ಸುತ್ತ ಅನೇಕರಲ್ಲಿ ಬಹಳಷ್ಟು ಪ್ರಶ್ನೆಗಳು ಇಂದಿಗೂ ಇವೆ. ಅತ್ಯಂತ ಐಷಾರಾಮಿ ಹಡಗು (Luxurious ship) ಎಂದೇ ಹೆಸರು ಪಡೆದಿದ್ದ ಟೈಟಾನಿಕ್ ತನ್ನ ಪ್ರಯಾಣಿಕರಿಗೆ ಏನು ಊಟ ನೀಡಿತ್ತು ಎಂದು ನೀವು ಎಂದಾದರೂ ಊಹಿಸಿದ್ದೀರಾ?
ಟೈಟಾನಿಕ್ ಮುಳುಗಿ 111ನೇ ವರ್ಷದ ಸಂದರ್ಭದಲ್ಲಿ, ಟೇಸ್ಟ್ ಅಟ್ಲಾಸ್ ಎಂಬ ಜನಪ್ರಿಯ ಇನ್ಸ್ಟಾಗ್ರಾಮ್ ಪುಟವು ಹಡಗಿನಲ್ಲಿ ನೀಡಲಾಗುತ್ತಿದ್ದ ಆಹಾರಗಳ ಮಾಹಿತಿಯನ್ನು ನೀಡಿದೆ. ಮೆನುಗಳ ಫೋಟೋಗಳನ್ನು ಹಂಚಿಕೊಂಡಿದೆ. ಏಪ್ರಿಲ್ 15ರ ರಾತ್ರಿ ಹಡಗು ಮುಳುಗಿದಾಗ ಆಹಾರವಾಗಿ, ಚಿಕನ್ ಕರಿ, ಬೇಯಿಸಿದ ಮೀನು, ಮಟನ್ ಮುಂತಾದ ರುಚಿಕರವಾದ ಭಕ್ಷ್ಯಗಳನ್ನು ಪ್ರಯಾಣಿಕರಿಗೆ ನೀಡಿತ್ತು. ಡೂಮ್ಡ್ ಎರಡನೇ ದರ್ಜೆಯ ಪ್ರಯಾಣಿಕರಿಗೆ ಪ್ಲಮ್ ಪುಡಿಂಗ್ ತಯಾರಿಸಿತ್ತು. ಮೂರು ವರ್ಗಗಳ ಮೆನುಗಳ ನಡುವೆ ಅಗಾಧ ವ್ಯತ್ಯಾಸವನ್ನು ಕಾಣಬಹುದು ಎಂದು ಟೇಸ್ಟ್ ಅಟ್ಲಾಸ್ ಪೋಸ್ಟ್ ಬಹಿರಂಗಪಡಿಸಿದೆ.
ಸಮುದ್ರಯಾನ ಇಷ್ಟನಾ? ಹಾಗಿದ್ದರೆ ಶಿಪ್ ಕೆಟರಿಂಗ್ ಕೋರ್ಸ್ ಮಾಡಿ!
ಪ್ರಥಮ ದರ್ಜೆಯ ಪ್ರಯಾಣಿಕರಿಗೆ ಮೆನುವು ಹೇಗಿತ್ತೆಂದರೆ ಅದು ಹಬ್ಬದೂಟಕ್ಕಿಂತ ಕಡಿಮೆಯಿರಲಿಲ್ಲ. ಕಾರ್ನ್ಡ್ ಬೀಫ್, ತರಕಾರಿಗಳು (Vegetables), ಗ್ರಿಲ್ಡ್ ಮಟನ್ ಚಾಪ್ಸ್, ಕಸ್ಟರ್ಡ್ ಪುಡ್ಡಿಂಗ್, ಪಾಟೆಡ್ ಸೀಗಡಿಗಳು, ನಾರ್ವೇಯನ್ ಆಂಚೊವಿ ಮತ್ತು ವಿವಿಧ ಬಗೆಯ ಚೀಸ್ಗಳನ್ನು ಸೇರಿದಂತೆ ಇನ್ನೂ ಹಲವು ಖಾದ್ಯಗಳನ್ನು ಒಳಗೊಂಡಿತ್ತು. ಆದರೆ, ಹಡಗಿನಲ್ಲಿದ್ದ ಮೂರನೇ ವರ್ಗಕ್ಕೆ ಉಪಹಾರ ಮತ್ತು ರಾತ್ರಿಯ ಊಟಕ್ಕೆ ಸೀಮಿತವಾದ ಭಕ್ಷ್ಯಗಳನ್ನು ನೀಡಲಾಗಿತ್ತು. ಓಟ್ಮೀಲ್ ಗಂಜಿ ಮತ್ತು ಹಾಲು, ಆಲೂಗಡ್ಡೆ, ಹ್ಯಾಮ್ ಮತ್ತು ಮೊಟ್ಟೆಗಳು, ತಾಜಾ ಬ್ರೆಡ್ ಮತ್ತು ಬೆಣ್ಣೆ, ಮಾರ್ಮಲೇಡ್ ಮತ್ತು ಸ್ವೀಡಿಷ್ ಬ್ರೆಡ್ ಗಳನ್ನು ಒಳಗೊಂಡಿತ್ತು. ಆದರೆ, ಪ್ರಯಾಣಿಕರು ಯಾವುದೇ ವರ್ಗಕ್ಕೆ ಸೇರಿದವರಾಗಿರಲಿ, ಟೈಟಾನಿಕ್ ಎಲ್ಲರಿಗೂ ಐಷಾರಾಮಿ ಭೋಜನವನ್ನೇ ಬಡಿಸಿತ್ತು ಎಂದು ಟೇಸ್ಟ್ ಅಟ್ಲಾಸ್ ತಿಳಿಸಿದೆ.
ಸದ್ಯ, ಈ ಪೋಸ್ಟ್ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಹಲವಾರು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವರು ಹಡಗಿನ ಊಟದ ಕೋಣೆಗಳ ವೈಭವದ ಬಗ್ಗೆ ವಿಸ್ಮಯವನ್ನು ವ್ಯಕ್ತಪಡಿಸಿದರು. ಇತರರು ವಿವಿಧ ವರ್ಗಗಳಿಗೆ ಬಡಿಸುವ ಆಹಾರದಲ್ಲಿನ ಸಂಪೂರ್ಣ ವ್ಯತ್ಯಾಸಗಳ ಬಗ್ಗೆ ಚರ್ಚಿಸಿದರು.