ಕಡಲತಡಿ ಕರಾವಳಿಯ ಸೊಬಗು ಎಂಥವರನ್ನೂ ಬೆರಗುಗೊಳಿಸುತ್ತದೆ. ಅದರಲ್ಲೂ ಮಂಗಳೂರು-ಉಡುಪಿಯ ನಿಸರ್ಗ ವೈಭವವನ್ನು ಬಣ್ಣಿಸಲು ಪದಗಳೇ ಸಾಲದು. ಕೇವಲ ರಸ್ತೆ ಮಾರ್ಗವಲ್ಲ, ರೈಲು ಮಾರ್ಗವನ್ನು ಪ್ರಕೃತಿ ಪ್ರಿಯರನ್ನು ಮಂತ್ರಮುಗ್ಧಗೊಳಿಸುತ್ತದೆ. ನಾರ್ವೆಯ ರಾಜತಾಂತ್ರಿಕರು ಸಹ ಇಲ್ಲಿಯ ಸೊಬಗನ್ನು ಮೆಚ್ಚಿಕೊಂಡಿದ್ದಾರೆ.
ರೈಲು ಪ್ರಯಾಣ ಎಂಥವರಿಗಾದರೂ ಖುಷಿ (Happy)ಯನ್ನು ನೀಡುತ್ತದೆ. ಸಾಗುವ ರೈಲು, ಹಾದು ಹೋಗುವ ಪ್ರಕೃತಿಯ (Nature) ಸೊಬಗು ಮನಸ್ಸನ್ನು ಮುದಗೊಳಿಸುತ್ತದೆ. ಅದರಲ್ಲೂ ಕಾಡು, ಬೆಟ್ಟ, ಪರ್ವತ, ಕಣಿವೆಗಳ ನಡುವೆ ಸಾಗುವ ಪಯಣವಂತೂ ತುಂಬಾ ಚೆಂದ. ಭಾರತದಲ್ಲಿ ಇಂಥಾ ಸುಂದರವಾದ ಹಲವಾರು ಪ್ರದೇಶಗಳಿವೆ. ಅದರಲ್ಲಿ ಕರಾವಳಿಯೂ ಒಂದು. ಕರಾವಳಿಯಲ್ಲಿ ರಸ್ತೆ ಪ್ರಯಾಣವಾಗಿರಲೇ, ರೈಲು ಪ್ರಯಾಣ (Train travek)ವಾಗಿರಲಿ ಎಲ್ಲವೂ ಸುಂದರವಾಗಿರುತ್ತದೆ. ಹಲವಾರು ಬಾರಿ ಸೆಲೆಬ್ರಿಟಿಗಳು, ಉದ್ಯಮಿಗಳು ಇಂಥಾ ರಸ್ತೆಯ ಫೋಟೋಗಳನ್ನು ಶೇರ್ ಮಾಡಿ ಸಂತಸ ವ್ಯಕ್ತಪಡಿಸುತ್ತಾರೆ.
ಬೆರಗುಗೊಳಿಸುವ ಪ್ರಾಕೃತಿಕ ಸೌಂದರ್ಯ
'ಇನ್‌ಕ್ರೆಡಿಬಲ್ ಇಂಡಿಯಾ'ನ ಮೋಡಿ ಮಾಡುವ ಸೌಂದರ್ಯದಿಂದ ಮತ್ತೊಮ್ಮೆ ಬೆರಗುಗೊಂಡಿರುವ ನಾರ್ವೆಯ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಅವರು ಇತ್ತೀಚೆಗೆ ಉಡುಪಿ ರೈಲ್ವೆ ಮಾರ್ಗದ ರಮಣೀಯ ಮಾರ್ಗದ ಡ್ರೋನ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಈ ಅದ್ಭುತ ವಿಡಿಯೋವನ್ನು ಹಂಚಿಕೊಂಡಿದ್ದು, 86,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು (Views) ಮತ್ತು 4,000 ಕ್ಕೂ ಹೆಚ್ಚು ಇಷ್ಟಗಳನ್ನು ಗಳಿಸಿದೆ. ಮೂಲತಃ ಇನ್‌ಸ್ಟಾಗ್ರಾಮ್ ಬಳಕೆದಾರ ಮತ್ತು ಛಾಯಾಗ್ರಾಹಕ ರಾಜ್ ಮೋಹನ್ ಸೆರೆಹಿಡಿದಿರುವ ಈ ವಿಡಿಯೋ ಉಡುಪಿ ರೈಲ್ವೇ ಮಾರ್ಗದ ಮೋಡಿಮಾಡುವ ಮಾರ್ಗವನ್ನು ಸೆರೆಹಿಡಿದಿದೆ. ಇದು ಹಚ್ಚ ಹಸಿರಿನ ಕಾಡುಗಳು (Forests) ಮತ್ತು ಪರ್ವತಗಳ ಮೂಲಕ ರೈಲು ಹಾದು ಹೋಗುವುದನ್ನು ತೋರಿಸಿದೆ. ವೀಡಿಯೋವನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Jungle Safari: ಜಂಗಲ್ ಸಫಾರಿಗೆ ಹೋಗ್ತಿದ್ದೀರಾ? ಹಾಗಿದ್ರೆ ಈ ತಪ್ಪಾಗದಂತೆ ಎಚ್ಚರವಹಿಸಿ
ಪದಗಳನ್ನು ಮೀರಿದ ಅದ್ಭುತ ಸೌಂದರ್ಯ ಎಂದ ನೆಟ್ಟಿಗರು
ಈ ಪೋಸ್ಟ್‌ಗೆ, 'ಇನ್‌ಕ್ರೆಡಿಬಲ್ ಇಂಡಿಯಾ, ಎಲ್ಲಿಯಾದರೂ ಇಂಥಾ ಹಸಿರು ರೈಲು ಮಾರ್ಗವಿದೆಯೇ, ಬೆಂಗಳೂರು-ಉಡುಪಿ ರೈಲು ಮಾರ್ಗ, ಸಕಲೇಶಪುರದಿಂದ ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ, ಎಷ್ಟು ಸುಂದರವಾಗಿದೆ' ಎಂದು ಶೀರ್ಷಿಕೆ ನೀಡಿದ್ದಾರೆ. ಸುಂದರವಾದ ರೈಲು ಮಾರ್ಗದ ವೈಮಾನಿಕ ನೋಟವು ಇಂಟರ್ನೆಟ್ ಬಳಕೆದಾರರನ್ನು ಬೆರಗುಗೊಳಿಸಿತು. 'ಪ್ರಕೃತಿ ಮತ್ತು ಸೌಹಾರ್ದತೆ ತುಂಬಾ ಕಡಿಮೆಯಾಗಿದೆ. ತುಂಬಾ ಸುಂದರವಾದ ಚಿತ್ರ' ಎಂದು ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬರು, 'ಇದು ಪದಗಳನ್ನು ಮೀರಿದ ಅದ್ಭುತ' ಎಂದು ತಿಳಿಸಿದ್ದಾರೆ.
ಇನ್ನೊಬ್ಬ ಪ್ರಕೃತಿ ಪ್ರೇಮಿ, 'ಪಶ್ಚಿಮ ಘಟ್ಟಗಳು ಭಾರತದಲ್ಲಿ ತುಂಬಾ ಸುಂದರವಾಗಿದೆ. ಮಹಾರಾಷ್ಟ್ರ, ಗೋವಾ, ಕರ್ನಾಟಕದಿಂದ ಕೇರಳದ ವರೆಗೆ ಅದ್ಭುತ ಭೂ ಪ್ರದೇಶವನ್ನು ನೋಡಬಹುದು. ಇಡೀ ಶ್ರೇಣಿಯ ಜನರು ಸುಂದರವಾಗಿದ್ದಾರೆ. ಅವರು ಚಲನಚಿತ್ರ ಜಗತ್ತಿನಲ್ಲಿಯೂ ಪ್ರಾಬಲ್ಯ ಸಾಧಿಸುವುದನ್ನು ನೀವು ನೋಡುತ್ತೀದ್ದೀರಿ. ಹಿಂದಿ. , ಕನ್ನಡ, ಮಲಯಾಳ ಚಲನಚಿತ್ರಗಳು ಚೆನ್ನಾಗಿ ಮೂಡಿಬರುತ್ತಿವೆ' ಎಂದು ತಿಳಿಸಿದ್ದಾರೆ.
Incredible India 🇮🇳!
Is there a greener rail route anywhere?
Bengaluru - Udupi Railway line, from Sakleshpur to Kukke Subramanya, Karnataka.
📸 IG: Rajography
pic.twitter.com/MUxSuEAyLN
'ಇನ್‌ಕ್ರೆಡಿಬಲ್ ಇಂಡಿಯಾ" ದ ಸೌಂದರ್ಯದಿಂದ ಎಲ್ಲರೂ ಬೆರಗುಗೊಳಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ರಾಜತಾಂತ್ರಿಕರು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿರುವ ಬಂಗುಸ್ ಕಣಿವೆಯನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದರು. ಗುಡ್ಡಗಾಡು ಹುಲ್ಲುಗಾವಲಿನ ಹಿಂದೆ ಹರಿಯುವ ಸ್ಪಷ್ಟ-ನೀರಿನ ತೊರೆಯು ಸಮೃದ್ಧವಾದ ಹಸಿರು ಹುಲ್ಲಿನ ಮಧ್ಯೆ ಕುದುರೆಗಳು ಆನಂದದಿಂದ ಮೇಯುತ್ತಿರುವುದನ್ನು ಕಿರು ವೀಡಿಯೊ ತೋರಿಸಿತ್ತು.
ಭಾರತದ ಈ ಸ್ಥಳಗಳ Christmas celebration ಪ್ರಪಂಚದಾದ್ಯಂತ ಫೇಮಸ್
ಅದೇನೆ ಇರ್ಲಿ, ದಕ್ಷಿಣಭಾರತದ ಪ್ರಾಕೃತಿಕ ಸೌಂದರ್ಯ, ಅದರಲ್ಲೂ ಕರ್ನಾಟಕದ ಸೊಬಗು ಎಲ್ಲೆಡೆ ವೈರಲ್ ಆಗುತ್ತಿರುವುದು, ಎಲ್ಲರ ಮನಸ್ಸಿಗೆ ಖುಷಿ ನೀಡುತ್ತಿರುವುದು ಹೆಮ್ಮೆಯ ವಿಚಾರವೇ ಸರಿ.