ಈ ಹುಡುಗಿಗೆ ಮೂರು ಸೆಕೆಂಡಲ್ಲಿ ಮೂರು ದೇಶ ಟಚ್ ಮಾಡಲು ಆಗಿದ್ಹೇಗೆ?

ದೇಶ ಸುತ್ತೋದು ಕಷ್ಟವಲ್ಲದೆ ಹೋದ್ರೂ ಸುಲಭವಲ್ಲ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಲು ಸಾಕಷ್ಟು ಸಮಯ ಹಿಡಿಯುತ್ತೆ. ಆದ್ರೆ ಈ ಹುಡುಗಿ ಮೂರು ಸೆಕೆಂಡಿನಲ್ಲಿ ಮೂರು ದೇಶಕ್ಕೆ ಎಂಟ್ರಿಕೊಟ್ಟಿದ್ದಾಳೆ. 
 

Girl Travelled 3 Countries in 3 seconds

ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗ್ಬೇಕು ಅಂದ್ರೆ ನಾವು ಸಾಕಷ್ಟು ತಯಾರಿ ಮಾಡಿಕೊಳ್ತೇವೆ. ವೀಸಾ (Visa), ಪಾಸ್ಪೋರ್ಟ್ (Passport ) ಹೀಗೆ ಎಲ್ಲವನ್ನು ಹಿಡಿದು ಪ್ರಯಾಣ ಬೆಳೆಸ್ತೇವೆ. ಕೆಲ ದೇಶಕ್ಕೆ ವೀಸಾ ಅಗತ್ಯವಿಲ್ಲ. ಮತ್ತೆ ಕೆಲ ದೇಶಕ್ಕೆ ವೀಸಾ ಇಲ್ಲದೆ ಹೋಗಲು ಸಾಧ್ಯವಿಲ್ಲ.  ಭಾರತದಂತೆ ಎಲ್ಲ ಕಡೆ ಸ್ವಚ್ಚಂದವಾಗಿ ವಿದೇಶದಲ್ಲಿ ಸುತ್ತೋಕೆ ಆಗೋದಿಲ್ಲ. ಹಾಗೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಲು ಸ್ವಲ್ಪ ಸಮಯ ಹಿಡಿಯುತ್ತೆ. ಆದ್ರೆ ಈ ಹುಡುಗಿ ಮೂರೇ ಮೂರು ಸೆಕೆಂಡಿನಲ್ಲಿ ಮೂರು ದೇಶವನ್ನು ಪ್ರವೇಶ ಮಾಡಿದ್ದಾಳೆ. ಅದ್ರ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಆಕೆ ಹೇಗೆ ಮೂರು ಸೆಕೆಂಡಿನಲ್ಲಿ ಮೂರು ದೇಶಕ್ಕೆ ಹೋದ್ಲು, ಅಲ್ಲಿನ ನಿಯಮ ಏನು ಎಂಬ ಮಾಹಿತಿ ಇಲ್ಲಿದೆ. 

ಸಮ್ರಂಗಿ ಸಾಧು ಝಿಲಿಕ್ ಎನ್ನುವ ಹುಡುಗಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಆಕೆ ಜರ್ಮನಿ, ನೆದರ್ಲ್ಯಾಂಡ್ ಮತ್ತು ಬೆಲ್ಜಿಯಂಗೆ ಎಂಟ್ರಿಯಾಗಿದ್ದಾಳೆ. ಮೂರು ಸೆಕೆಂಡಿನಲ್ಲಿ ಆಕೆ ಈ ಮೂರು ದೇಶಕ್ಕೆ ಹೋಗಿದ್ದಾಳೆ. ಸಮ್ರಂಗಿ, ಈ ಮೂರು ದೇಶದ ಗಡಿ ಭಾಗದಲ್ಲಿ ನಿಂತಿರೋದನ್ನು ನೀವು ಕಾಣ್ಬಹುದು. ಒಂದು ಗೆರೆ ದೇಶವನ್ನು ಬೇರ್ಪಡಿಸಿದೆ. ಮೂರು ಗೆರೆಯನ್ನು ಫಟಾಫಟ್ ದಾಟುವ ಆಕೆ ಒಂದಾದ್ಮೇಲೆ ಒಂದು ದೇಶಕ್ಕೆ ಎಂಟ್ರಿ ಪಡೆಯುತ್ತಾಳೆ. ಈ ಗಡಿ ಪ್ರದೇಶದಲ್ಲಿ ಅರ್ಧದಷ್ಟು ಭಾಗ ಜರ್ಮಿನಿ. ಉಳಿದ ಅರ್ಧ ಭಾಗವನ್ನು ನೆದರ್ಲ್ಯಾಂಡ್ ಮತ್ತು ಬೆಲ್ಜಿಯಂ ಹಂಚಿಕೊಂಡಿದೆ. ಮೂರೂ ದೇಶಗಳಿಗೆ ಮೂರು ದಿಕ್ಕಿನಲ್ಲಿ ನೀವು ಹೋಗ್ಬೇಕು. ಈ ಗಡಿ ಪ್ರದೇಶದಲ್ಲಿ ಯಾವುದೇ ಸೈನಿಕರಿಲ್ಲ. ಈ ಗಡಿ ಪ್ರದೇಶಕ್ಕೆ ಹೋದ್ರೆ, ನೀವು ಯಾವುದೇ ಟೆನ್ಷನ್ ಇಲ್ಲದೆ, ಯಾವ ಸೈನಿಕರ ಕಾಟವಿಲ್ಲದೆ, ಯಾವುದೇ ದಾಖಲೆ ಇಲ್ಲದೆ ಆರಾಮವಾಗಿ ಅರೆ ಕ್ಷಣದಲ್ಲಿ ಜರ್ಮನಿಯಿಂದ ಬೆಲ್ಜಿಯಂಗೆ ನಿಮ್ಮ ಪ್ರಯಾಣವನ್ನು ಬದಲಿಸಬಹುದು. 

Latest Videos

ರಾತ್ರಿ ಮಾತ್ರ ಜಾರಿಯಲ್ಲಿರುತ್ತೆ ರೈಲಿನ ಈ ರೂಲ್ಸ್

ಸಮ್ರಂಗಿ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇಲ್ಲಿಯವರೆಗೆ ಈ ವೀಡಿಯೊವನ್ನು 6 ಲಕ್ಷಕ್ಕೂ ಹೆಚ್ಚು ಬಾರಿ ನೋಡಲಾಗಿದೆ.  8 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದೆ. ಅನೇಕರು ಸಮ್ರಂಗಿಗೆ ಪ್ರಶ್ನೆ ಕೇಳಿದ್ದಾರೆ. ಅದು ಯಾವ ಸ್ಥಳ, ಅಲ್ಲಿಗೆ ಹೋಗೋದು ಹೇಗೆ, ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಹೇಗಿದೆ ಎಂಬೆಲ್ಲ ಮಾಹಿತಿ ಪಡೆಯಲು ಜನರು ಮುಂದಾಗಿದ್ದಾರೆ.

ಇಲ್ಲಿ ಎಲ್ಲರ ಮನೆ ಮುಂದೆ ನಿಂತಿರುತ್ತೆ ಪ್ರೈವೇಟ್ ಜೆಟ್ !

ವೀಸಾ ಅಗತ್ಯವಿಲ್ಲವೆ? : ಜರ್ಮನಿಯಿಂದ, ಬೆಲ್ಜಿಯಂ, ಬೆಲ್ಜಿಯಂನಿಂದ ನೆದರ್ಲ್ಯಾಂಡ್ ಗೆ ಹೋಗಲು ವೀಸಾ ಅಗತ್ಯವಿಲ್ಲವೆ ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತದೆ. ಅಲ್ಲಿಗೆ ಹೋಗಲು ವೀಸಾ ಅಗತ್ಯವಿಲ್ಲ. ಯುರೋಪಿಯನ್ ದೇಶಗಳ ಷೆಂಗೆನ್ ವೀಸಾ ಇದ್ರೆ ನೀವು ಈ ಮೂರೂ ದೇಶವನ್ನು ಸುತ್ತಬಹುದು. ಬರೀ ಮೂರು ದೇಶವಲ್ಲ, ಈ ವೀಸಾದೊಂದಿಗೆ ನೀವು ಯಾವುದೇ ನಿರ್ಬಂಧವಿಲ್ಲದೆ ಯುರೋಪಿನ 29 ದೇಶಗಳಿಗೆ ಪ್ರಯಾಣ ಬೆಳೆಸಬಹುದು.  ಈ ಎಲ್ಲಾ 29 ದೇಶಗಳು ಷೆಂಗೆನ್ ಪ್ರದೇಶದ ಭಾಗವಾಗಿದೆ. ಇದರ ಅಡಿಯಲ್ಲಿ ಆಸ್ಟ್ರಿಯಾ, ಬೆಲ್ಜಿಯಂ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎಸ್ಟೋನಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಐಸ್ಲ್ಯಾಂಡ್, ಇಟಲಿ, ಲಾಟ್ವಿಯಾ, ಲಿಚ್ಟೆನ್‌ಸ್ಟೈನ್, ಲಿಥುವೇನಿಯಾ, ಲಕ್ಸೆಂಬರ್ಗ್, ಮಾಲ್ಟಾ, ನೆದರ್‌ಲ್ಯಾಂಡ್ಸ್, ನಾರ್ವೆ, ಪೋಲೆಂಡ್, ಪೋರ್ಚುಗಲ್, ಸ್ಲೋವಾಕಿಯಾ, ಸ್ಲೊವೇನಿಯಾ, ಸ್ಪೇನ್, ಸ್ವೀಡನ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಂತಹ ದೇಶಗಳಿಗೆ ಹೋಗಬಹುದು. ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ ಹೊರತುಪಡಿಸಿ, ಇತರ ಕೆಲವು ದೇಶಗಳು ಯುರೋಪಿನ ಭಾಗವಾಗಿಲ್ಲ. ಆದ್ರೆ ಅವೂ ಷೆಂಗೆನ್ ವೀಸಾಗೆ ಅವಕಾಶ ನೀಡುತ್ತವೆ. 
 

tags
vuukle one pixel image
click me!