Foreign Trip ಮಾಡಬೇಕಾ? ರೈಲಲ್ಲೇ ಭೇಟಿ ನೀಡಬಹುದು ಈ ದೇಶಗಳಿಗೆ!

Published : May 19, 2023, 02:40 PM IST
Foreign Trip ಮಾಡಬೇಕಾ? ರೈಲಲ್ಲೇ ಭೇಟಿ ನೀಡಬಹುದು ಈ ದೇಶಗಳಿಗೆ!

ಸಾರಾಂಶ

ವಿದೇಶಕ್ಕೆ ಹೋಗ್ಬೇಕೆಂದ್ರೆ ವಿಮಾನ ಏರಬೇಕು. ಅಷ್ಟು ಹಣವಿಲ್ಲ, ಪ್ಲಾನ್ ಕ್ಯಾನ್ಸಲ್ ಮಾಡ್ದೆ ವಿಧಿಯಿಲ್ಲ ಎನ್ನುವವರು ನೀವಾಗಿದ್ದರೆ ಟೆನ್ಷನ್ ಬಿಡಿ. ವಿಮಾನ ಮಾತ್ರವಲ್ಲ ನೀವು ಕೆಲ ರೈಲಿನ ಮೂಲಕವೂ ವಿದೇಶಕ್ಕೆ ಹೋಗ್ಬಹುದು.

ಬೇಸಿಗೆ ರಜಾ ಮುಗಿತಾ ಬಂತು. ಮತ್ತೆ ಶಾಲೆ ಶುರುವಾಗ್ತಿದೆ. ಅದಕ್ಕೂ ಮುನ್ನವೇ ಜನರು ಎಷ್ಟಾಗುತ್ತೋ ಅಷ್ಟು ಸುತ್ತಾಡಲು ಬಯಸ್ತಿದ್ದಾರೆ. ಶಿಮ್ಲಾ, ಮನಾಲಿ, ಕಸೋಲ್‌ ಸೇರಿದಂತೆ ಭಾರತದ ಸುಂದರ ಹಾಗೂ ತಂಪಾದ ಪ್ರದೇಶಕ್ಕೆ ಭೇಟಿ ನೀಡ್ತಿದ್ದಾರೆ. ಭಾರತದಲ್ಲಿ ವೀಕ್ಷಿಸಬಹುದಾದ ಅನೇಕ ಸ್ಥಳಗಳಿವೆ. ಆದ್ರೆ ವಿದೇಶ ನೋಡ್ಬೇಕೆಂಬ ಬಯಕೆ ಎಲ್ಲರಿಗೂ ಸಾಮಾನ್ಯ. ಬೇಸಿಗೆಯಲ್ಲಿ ವಿದೇಶಕ್ಕೆ ಹೋಗುವ ಪ್ಲಾನ್ ಮಾಡಿದ್ರೆ  ವಿದೇಶಕ್ಕೆ ಹೋಗೋದು ಸುಲಭವಲ್ಲ. ಬ್ಯಾಂಕ್ ಖಾತೆಯಲ್ಲಿ ಹಣ ಇರ್ಬೇಕು. ವೀಸಾ, ವಿಮಾನದ ಟಿಕೆಟ್ ದರ ಸೇರಿದಂತೆ ಅದಕ್ಕೆ ಇದಕ್ಕೆ ಅಂತಾ ಹೆಚ್ಚು ಹಣ ಖರ್ಚಾಗುತ್ತದೆ.  

ವಿಮಾನದ ಮೂಲಕ ಪ್ರಯಾಣ (Travel) ಬೆಳೆಸಲು ಹಣ ಸಾಕಾಗ್ತಿಲ್ಲ ಎನ್ನುವವರು ನೀವಾಗಿದ್ದರೆ, ರೈಲಿ (Train) ನ ಮೂಲಕ ಪ್ರಯಾಣ ಬೆಳೆಸುವ ಆಸಕ್ತಿ ಇದ್ರೆ, ವಿಮಾನದ ಬದಲು ರೈಲಿನಲ್ಲಿ ನೀವು ಪ್ರವಾಸ ಕೈಗೊಳ್ಳಬಹುದು. ವಿದೇಶ (Abroad) ಕ್ಕೆ ಹೋಗ್ಬೇಕೆಂದ್ರೆ ವಿಮಾನವೇ ಬೇಕು ಎಂದು ನೀವು ನಂಬಿದ್ದರೆ ಅದು ತಪ್ಪು. ನಾವು  ಕೆಲ ದೇಶಕ್ಕೆ ರೈಲಿನ ಮೂಲಕವೂ ಹೋಗ್ಬಹುದು. ನಾವಿಂದು ರೈಲಿನಲ್ಲಿ ಹೋಗ್ಬಹುದಾದ ವಿದೇಶಿ ಸ್ಥಳಗಳು ಯಾವುವು ಎಂಬುದನ್ನು ಹೇಳ್ತೇವೆ.

ನೋಡ ಬನ್ನಿ, ಹಚ್ಚ ಹಸಿರ ಪರಿಸರ, ಮನಸಿಗೆ ಮುದ ನೀಡುವ ಗಿರಿಧಾಮ

ಹಲ್ದಿಬಾರಿ ರೈಲು ನಿಲ್ದಾಣ : ಹಲ್ದಿಬಾರಿ ರೈಲು ನಿಲ್ದಾಣವು ಹೊಸ ಜಲ್ಪೈಗುರಿ ಜಂಕ್ಷನ್ ನಂತರ ಇದೆ. ಹಲ್ದಿಬಾರಿ ರೈಲ್ವೆ ನಿಲ್ದಾಣ (Station) ಪಶ್ಚಿಮ ಬಂಗಾಳದಲ್ಲಿದೆ. ಭಾರತ ಹಾಗೂ ಬಾಂಗ್ಲಾ ದೇಶದ ಮಧ್ಯೆ ಇದು ರೈಲ್ವೆ ಸಂಪರ್ಕವನ್ನು ಕಲ್ಪಿಸುತ್ತದೆ. ಈ ರೈಲು ನಿಲ್ದಾಣವು ಬಾಂಗ್ಲಾದೇಶದಿಂದ ಕೇವಲ 4.5 ಕಿಲೋಮೀಟರ್ ದೂರದಲ್ಲಿದೆ. ಹಲ್ದಿಬರಿಯಿಂದ ನೇರವಾಗಿ ಢಾಕಾಕ್ಕೆ ಹೋಗಲು ನೀವು ಈ ರೈಲನ್ನು ಬಳಸಬಹುದು. 

ಸಿಂಗಾಬಾದ್ ರೈಲು ನಿಲ್ದಾಣ : ಸಿಂಗಾಬಾದ್ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿದೆ. ಇದು ಕೂಡ ಬಾಂಗ್ಲಾದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ರೋಹನ್‌ಪುರ ನಿಲ್ದಾಣದ ಮೂಲಕ ಬಾಂಗ್ಲಾದೇಶಕ್ಕೆ ಹೋಗುವ ಪ್ಯಾಸೆಂಜರ್ ರೈಲು ಇದಾಗಿದೆ. 

ಜಯನಗರ ರೈಲ್ವೆ ನಿಲ್ದಾಣ : ಜಯನಗರ ರೈಲು ನಿಲ್ದಾಣವು ಬಿಹಾರದ ಮಧುಬನಿ ಜಿಲ್ಲೆಯಲ್ಲಿದೆ. ಇದು ಭಾರತ ಮತ್ತು ನೇಪಾಳ ಗಡಿಯ ನಡುವೆ ಇದೆ. ಭಾರತ ಮತ್ತು ನೇಪಾಳ ಇಂಟರ್ ರೈಲು ಕೂಡ ಇಲ್ಲಿ ಚಲಿಸುತ್ತದೆ. ವಿಮಾನ ಪ್ರಯಾಣ ದುಬಾರಿ ಎನ್ನುವವರು ನೀವಾಗಿದ್ದರೆ ಈ ರೈಲಿನ ಮೂಲಕ ನೀವು ನೇಪಾಳಕ್ಕೆ ಹೋಗಬಹುದು. 

ಒಂದು ರೂ. ಖರ್ಚು ಮಾಡ್ದೆ ವಿಮಾನದಲ್ಲಿ ಪ್ರಯಾಣಿಸ್ಬೋದು, ಇಲ್ಲಿದೆ ಸಿಂಪಲ್ ಟ್ರಿಕ್ಸ್‌

ರಾಧಿಕಪೂರ್ ರೈಲ್ವೆ ನಿಲ್ದಾಣ : ರಾಧಿಕಪೂರ್ ರೈಲು ನಿಲ್ದಾಣವನ್ನು ಝೀರೋ ಪಾಯಿಂಟ್ ರೈಲು ನಿಲ್ದಾಣ ಎಂದೂ ಕರೆಯಲಾಗುತ್ತದೆ. ಅಸ್ಸಾಂ ಮತ್ತು ಬಿಹಾರದ ಮೂಲಕ ಈ ರೈಲು ಬಾಂಗ್ಲಾದೇಶ ಹೋಗುತ್ತದೆ. ಸರಕುಗಳ ಸಾಗಣೆಗೆ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

ಪೆಟ್ರಾಪೋಲ್ ರೈಲ್ವೆ ನಿಲ್ದಾಣ : ಪೆಟ್ರಾಪೋಲ್ ರೈಲು ನಿಲ್ದಾಣದಿಂದ ನೀವು ನೇರವಾಗಿ ಬಾಂಗ್ಲಾದೇಶವನ್ನು ತಲುಪಬಹುದು. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಆಮದು ರಫ್ತಿಗೆ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಜೋಗಬಾನಿ ರೈಲು ನಿಲ್ದಾಣ : ಜೋಗ್ಬಾನಿ ರೈಲು ನಿಲ್ದಾಣವು ಬಿಹಾರದ ಅರಾರಿಯಾ ಜಿಲ್ಲೆಯಲ್ಲಿದೆ. ಇಲ್ಲಿಂದ ನೇಪಾಳ ತುಂಬಾ ಹತ್ತಿರದಲ್ಲಿದೆ. ಮನಸ್ಸು ಮಾಡಿದ್ರೆ ಜೋಗ್ಬಾನಿಯಿಂದ ನೀವು ಕಾಲ್ನಡಿಗೆಯಲ್ಲಿ  ನೇಪಾಳವನ್ನು ತಲುಪಬಹುದಾಗಿದೆ. 

ಸಂಜೋತಾ ಎಕ್ಸ್ ಪ್ರೆಸ್ ರೈಲು : ಪಾಕಿಸ್ತಾನಕ್ಕೆ ಹೋಗಲು ನೀವು ಈ ರೈಲಿನ ಸಹಾಯ ಪಡೆಯಬಹುದು. ನವದೆಹಲಿಯಿಂದ ಪಂಜಾಬ್‌ನ ಅಟ್ಟಾರಿಗೆ ಮತ್ತು ಪಾಕಿಸ್ತಾನದ ಲಾಹೋರ್‌ಗೆ ಸಂಜೋತಾ ಎಕ್ಸ್ ಪ್ರೆಸ್ ರೈಲು ಚಲಿಸುತ್ತವೆ. ಈ ರೈಲು ವಾರಕ್ಕೆ ಎರಡು ಬಾರಿ ಚಲಿಸುತ್ತದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿವೃತ್ತಿ ನಂತ್ರವೂ ಪರದಾಡಬೇಕಾಗಿಲ್ಲ, ನೆಮ್ಮದಿ ಜೀವನಕ್ಕೆ ಈ ದೇಶಗಳು ಬೆಸ್ಟ್
ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​