
ಕಾಠ್ಮಂಡು: ನೇಪಾಳದ ಪರ್ವತಾರೋಹಿ ಕಮಿ ರಿಟಾ ಎಂಬ ಶೆರ್ಪಾ 27ನೇ ಬಾರಿಗೆ ಮೌಂಟ್ ಎವರೆಸ್ಟ್ ಶಿಖರ ಏರುವ ಮೂಲಕ ಅತಿ ಹೆಚ್ಚು ಬಾರಿ ಎವರೆಸ್ಟ್ ಏರಿದ ದಾಖಲೆಯನ್ನು (Record) ತಮ್ಮ ಹೆಸರಿಗೆ ಮತ್ತೊಮ್ಮೆ ಬರೆದುಕೊಂಡಿದ್ದಾರೆ. ಭಾನುವಾರ ಪಸಾಂಗ್ ದಾವಾ ಎಂಬ ಶೆರ್ಪಾ 26ನೇ ಬಾರಿ ಎವರೆಸ್ಟ್ ಏರುವ ಮೂಲಕ ಕಮಿ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಆದರೆ ಇದಾದ ಮೂರೇ ದಿನಕ್ಕೆ ಕಮಿ ಅವರು 27ನೇ ಸಲ ಜಗತ್ತಿನ ಅತಿ ಎತ್ತರದ ಶಿಖರ (Everest) ಏರಿ ದಾಖಲೆ ಮರುವಶ ಮಾಡಿಕೊಂಡಿದ್ದಾರೆ.
ದಶಕಗಳಿಂದ ಪರ್ವತಾರೋಹಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿರುವ ರಿಟಾ ಅವರು, 1994ರಲ್ಲಿ ಮೊದಲ ಬಾರಿಗೆ ಪರ್ವತ ತುತ್ತತುದಿಗೆ (8,848 ಮೀ.) ಏರಿದ್ದರು. ಇದಾದ ಬಳಿಕ ಪ್ರತಿ ವರ್ಷ ಎವರೆಸ್ಟ್ ಶಿಖರ ಏರುವ ಮೂಲಕ ಈವರೆಗೆ 27 ಬಾರಿ ಈ ಸಾಧನೆ ಮಾಡಿದ್ದಾರೆ.
Achiever : 26ನೇ ಬಾರಿ ಮೌಂಟ್ ಎವರೆಸ್ಟ್ ಏರಿ ವ್ಯಕ್ತಿದ ಸಾಧನೆಗೆ ಬೇಷೆ ಎಂದ ನೆಟ್ಟಿಗರು!
‘ಈ ಸಾಧನೆಯನ್ನು ವೈಯಕ್ತಿಕವಾಗಿ ಮಾಡಲೇಬೇಕು ಎಂದೇನೂ ಮಾಡುತ್ತಿಲ್ಲ. ನಾನು ಮಾರ್ಗದರ್ಶಕನಾಗಿರುವ ಕಾರಣ ಇದು ನಡೆಯುತ್ತಿದೆ’ ಎಂದು ಕಮಿ ರಿಟಾ ಹೇಳಿದ್ದಾರೆ. 2019ರಲ್ಲಿ ಇವರು 6 ದಿನಗಳ ಅವಧಿಯಲ್ಲಿ 2 ಬಾರಿ ಪರ್ವತಾರೋಹಣ ಮಾಡಿದ್ದರು. ಹೆಚ್ಚಾಗಿ ಕಮಿ ಹಾಕಿಕೊಟ್ಟಮಾರ್ಗದಲ್ಲೇ ಇಂದು ಪರ್ವತಾರೋಹಿಗಳು ಶಿಖರ ಏರುತ್ತಾರೆ.
ಕಳೆದ ಭಾನುವಾರ ಮತ್ತೊಬ್ಬ ತರಬೇತುದಾರಾಗಿರುವ ಪಸಾಂಗ್ ದಾವಾ ಅವರು 26ನೇ ಬಾರಿ ಶಿಖರ ಏರುವ ಮೂಲಕ ಅತಿ ಹೆಚ್ಚು ಬಾರಿ ಮೌಂಟ್ ಎವರೆಸ್ಟ್ ಏರಿದವರಲ್ಲಿ ಕಮಿ ಜತೆ ಜಂಟಿ ದಾಖಲೆ ನಿರ್ಮಾಣ ಮಾಡಿದ್ದರು. 1953ರಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್‌ನ ಎಡ್ಮಂಡ್ ಹಿಲರಿ ಮತ್ತು ಶೆರ್ಪಾ ತೇನ್‌ಸಿಂಗ್ ಎವರೆಸ್ಟ್ ಶಿಖರ ಏರಿದ್ದರು.
ಮೌಂಟ್ ಎವರೆಸ್ಟ್‌ನಿಂದ ರಾತ್ರಿ ಹೊತ್ತು ಕೇಳಿ ಬರುತ್ತೆ ವಿಚಿತ್ರ ಶಬ್ದ, ಏನದು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.