ಶಂಖ ಏರ್: ಭಾರತದ ಹೊಸ ವಿಮಾನಯಾನ ಸೇವೆ ಟೇಕಾಫ್‌ಗೆ ಸಜ್ಜು

By Anusha Kb  |  First Published Sep 25, 2024, 2:53 PM IST

ಶಂಖ ಏರ್‌ಲೈನ್ಸ್‌ ಉತ್ತರ ಪ್ರದೇಶದ ಮೊದಲ ದೇಶೀಯ ವಿಮಾನಯಾನ ಸೇವೆಯಾಗಿದ್ದು, ನೋಯ್ಡಾವನ್ನು ತನ್ನ ಪ್ರಮುಖ ಕೇಂದ್ರವನ್ನಾಗಿ ಮಾಡಿಕೊಂಡಿದೆ. ದೆಹಲಿ ಎನ್‌ಸಿಆರ್‌ ಸುತ್ತಮುತ್ತಲಿನ ಪ್ರದೇಶಗಳನ್ನು ಸಂಪರ್ಕಿಸುವ ಗುರಿಯನ್ನು ಇದು ಹೊಂದಿದೆ.


ಏರ್ ಇಂಡಿಯಾ, ಸ್ಪೈಸ್ ಜೆಟ್‌, ಇಂಡಿಗೋ, ಸೇರಿದಂತೆ ಹಲವು ವಿಮಾನಯಾನ ಸೇವೆಗಳ ನಂತರ ಈಗ ಹೊಸದೊಂದು ಏರ್‌ಲೈನ್ಸ್‌ ಭಾರತದ ಆಕಾಶದಲ್ಲಿ ಕಾರ್ಯಾಚರಣೆ ನಡೆಸಲಿದೆ. ಅದೇ ಶಂಖ ಏರ್‌ಲೈನ್ಸ್‌. ಇದು ಭಾರತದ ಉತ್ತರ ಪ್ರದೇಶ ಮೂಲದ ಹೊಸ ದೇಶೀಯ ವಿಮಾನಯಾನ ಸೇವೆಯಾಗಿದೆ. ಅಲ್ಲದೇ ಇದು ಆ ರಾಜ್ಯದಿಂದ ಬರುತ್ತಿರುವ  ಮೊದಲ ವಿಮಾನಯಾನ ಸೇವೆಯಾಗಿದೆ. ನೋಯ್ಡಾದಲ್ಲಿ ಸರ್ಕಾರವು ನಿರ್ಮಿಸುತ್ತಿರುವ ಹೊಸ ವಿಮಾನ ನಿಲ್ದಾಣವನ್ನು ಈ ಶಂಖ ವಾಯುಯಾನ ಸಂಸ್ಥೆಯೂ ತನ್ನ ಪ್ರಮುಖ ಕೇಂದ್ರವಾಗಿಸಿಕೊಳ್ಳಲಿದೆ. ಶಂಖ್ ಏರ್ ಈಗ ಬೋಯಿಂಗ್ 737-800ಎನ್‌ಜಿ ಹೆಸರಿನ ವಿಮಾನದಲ್ಲಿ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದೆ. ಇದಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣೆ ಪ್ರಮಾಣೀಕರಣ (no-objection certification) ಪಡೆಯುವ ಪ್ರಕ್ರಿಯೆಯು ಆರಂಭವಾಗಿದೆ.

ಶಂಖ್‌ ಏರ್‌ಲೈನ್ಸ್ನ ಸ್ಥಾಪಕರು ಯಾರು:  ಶರ್ವನ್ ಕುಮಾರ್ ವಿಶ್ವಕರ್ಮ ಅವರು ಈ ಶಂಖ್‌ ವಿಮಾನಯಾನ ಕಂಪನಿ ಸ್ಥಾಪಕರಾಗಿದ್ದಾರೆ. ಅವರ ಸಂಸ್ಥೆಯ ಮ್ಯಾನೇಜ್ಮೆಂಟ್‌ ತಂಡವು ಇತ್ತೀಚೆಗೆ ಏರ್‌ಪೋರ್ಡ್‌ನ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ವಿಮಾನ ಕಾರ್ಯಾಚರಣೆ ಯೋಜನೆಯ ಬಗ್ಗೆ ಖಚಿತಪಡಿಸಿದ್ದಾರೆ.

Tap to resize

Latest Videos

undefined

ಬೆಂಗಳೂರು-ಟೋಕಿಯೋ ವಿಮಾನ ಸಂಚಾರ ಹೆಚ್ಚಳ, ವಾರಕ್ಕೆ 5 ದಿನ ಪ್ರಯಾಣ!

ಶಂಖ್ ಏರ್‌ ಸಂಪೂರ್ಣ ಸೇವೆಯ ಸುರಕ್ಷತೆಯ ಪ್ರಯಾಣವನ್ನು ತನ್ನ ಪ್ರಯಾಣಿಕರಿಗೆ ಒದಗಿಸಲಿದೆ. ದೆಹಲಿ ಎನ್‌ಸಿಆರ್‌ ಪ್ರದೇಶದ ಸುತ್ತಮುತ್ತ ಬಲವಾದ ಸಂಪರ್ಕವನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತದೊಳಗಿನ ಹಲವು ನಗರಗಳನ್ನು ಸಂಪರ್ಕಿಸುವ ಗುರಿಯನ್ನು ಇದು ಹೊಂದಿದೆ. ಗ್ರೇಟರ್ ನೋಯ್ಡಾ, ನೋಯ್ಡಾ, ಮೀರತ್, ಗಾಜಿಯಾಬಾದ್, ಫರಿದಾಬಾದ್, ದಕ್ಷಿಣ ಗುರುಗ್ರಾಮ್‌ ಮತ್ತು ಆಗ್ರಾದಂತಹ ಪ್ರದೇಶಗಳಿಗೆ ಇದು ಪ್ರಮುಖ ಸಂಪರ್ಕ ಕೇಂದ್ರವಾಗಿದೆ. ಇದು ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸಮಾನವಾದ ಅಂತರಾಷ್ಟ್ರೀಯ ವಾಯುಯಾನ ಪರಿಸರ ವ್ಯವಸ್ಥೆಯಾಗುವ ನಿರೀಕ್ಷೆಯಿದೆ. ಈ ಹೊಸ ಬೆಳವಣಿಗೆಯೊಂದಿಗೆ, ಶಂಖ್ ಏರ್, ಭಾರತೀಯ ವಾಯುಯಾನ ವಲಯದಲ್ಲಿ ಮಹತ್ವದ  ಪ್ರವೇಶ ಮಾಡಿದೆ. ಅದರಲ್ಲೂ ಉತ್ತರ ಪ್ರದೇಶಕ್ಕೆ ತನ್ನ ವಿಮಾನ ಪ್ರಯಾಣ ಮೂಲಸೌಕರ್ಯ ಮತ್ತು ಸೇವೆಗಳನ್ನು ಸುಧಾರಿಸಲು ಸಾಕಷ್ಟು ಸಜ್ಜಾಗಿದೆ.

ಶಂಖ್ ಏರ್‌ನ ಪ್ರಮುಖ ಡೆಸ್ಟಿನೇಷನ್:  ದೆಹಲಿ ಎನ್‌ಸಿಆರ್‌  ಪ್ರದೇಶವಾದ ಗ್ರೇಟರ್‌ ನೋಯ್ಡಾ, ನೋಯ್ಡಾ, ಮೀರತ್, ಗಾಜಿಯಾಬಾದ್, ಫರಿದಾಬಾದ್, ಗುರುಗ್ರಾಮ್‌ನಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಸುಲಭವಾಗಿ ಪ್ರಯಾಣ ಸೇವೆಯನ್ನು ಈ ಶಂಖ್ ಏರ್‌ಲೈನ್ಸ್ ಒದಗಿಸಲಿದೆ. ಇದರ ಜೊತೆಗೆ ದೇಶದ ಪ್ರಮುಖ ನಗರಗಳನ್ನು ಇದು ಸಂಪರ್ಕಿಸಲಿದೆ. ಅದರಲ್ಲೂ ವಿಶೇಷವಾಗಿ ಲಕ್ನೋ, ವಾರಣಾಸಿ, ಗೋರಖ್‌ಪುರವನ್ನು ಕನೆಕ್ಟ್ ಮಾಡುವ ಗುರಿಯನ್ನು ಹೊಂದಿದೆ. ಅಲ್ಲದೇ ಮುಂದೆ ಭೋಗಪುರಂ ಏರ್‌ಪೋರ್ಟ್‌, ಪುಣೆ ಇಂಟರ್‌ನ್ಯಾಷನಲ್ ಏರ್ಪೋರ್ಟ್‌, ನವಿ ಮುಂಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟನ್ನು ಇದು ಸಂಪರ್ಕಿಸುವ ಗುರಿ ಹೊಂದಿದೆ. 

ವಿಶ್ವದ ಅತಿದೊಡ್ಡ ಏರ್‌ಲೈನ್‌ ಕಂಪನಿಗಳು, ಟಾಪ್‌ 10 ಲಿಸ್ಟ್‌ನಲ್ಲಿ ಭಾರತದ ಏಕೈಕ ಬ್ರ್ಯಾಂಡ್‌!

click me!