ಜಾರ್ಜಿಯಾ ದೇಶದ ಪರಿಚಯ ಮಾಡಿಕೊಟ್ಟಿರೋ ಡಾ.ಬ್ರೋ ಜಾರ್ಜಿಯಾ ತಾಯಿ ಅಂದ್ರೆ ಮದರ್ ಆಫ್ ಜಾರ್ಜಿಯಾದ ಕುತೂಹಲದ ಮಾಹಿತಿಯನ್ನು ತೆರೆದಿಟ್ಟಿದ್ದಾರೆ.
ಗೋ ಪ್ರವಾಸ ಎಂಬ ಸಂಸ್ಥೆ ಹುಟ್ಟುಹಾಕಿದ ಮೇಲೆ ವಿದೇಶಗಳಿಗೆ ತಿರುಗಿ ಅಲ್ಲಿನ ಸುದ್ದಿಗಳನ್ನು ಕೊಡುವುದನ್ನು ಕಡಿಮೆ ಮಾಡಿರುವ ಡಾ.ಬ್ರೋ ಅರ್ಥಾತ್ ಗಗನ್ ಅವರು ಇದೀಗ ತಮ್ಮ ಜಾರ್ಜಿಯಾ ಪ್ರವಾಸದ ವಿಶೇಷ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮದೇ ಆದ ಹಾಸ್ಯದ ಶೈಲಿಯಲ್ಲಿ ಕನ್ನಡದಲ್ಲಿಯೇ ಜಾರ್ಜಿಯಾದ ವಿವಿಧ ಸ್ಥಳಗಳ ಮಾಹಿತಿ ನೀಡಿರುವ ಅವರು ಸ್ನೇಹಿತರಿಗೆ ವೈನ್ ಕೊಟ್ಟು, ಶತ್ರುಗಳ ರುಂಡ ಚೆಂಡಾಡುವ 'ತಾಯಿ'ಯ ಪರಿಚಯ ಮಾಡಿಸಿದ್ದಾರೆ. ಈಕೆಯನ್ನು ಮದರ್ ಆಫ್ ಜಾರ್ಜಿಯಾ ಎಂದು ಕರೆಯಲಾಗುತ್ತದೆ. ಈಕೆಯ ಒಂದು ಕೈಯಲ್ಲಿ ಪಾತ್ರೆ, ಇನ್ನೊಂದು ಕೈಯಲ್ಲಿ ಕತ್ತಿ ಇರುವುದನ್ನು ನೋಡಬಹುದು. ಪಾತ್ರೆಯಲ್ಲಿ ವೈನ್ ಇದ್ದು ಅದನ್ನು ಸ್ನೇಹಿತರಿಗೆ ನೀಡುವುದಾಗಿಯೂ, ಕತ್ತಿಯಿಂದ ಶತ್ರುಗಳನ್ನು ನಾಶ ಮಾಡುವ ಪ್ರತೀಕ ಇದು ಎಂದು ಗಗನ್ ವಿವರಿಸಿದ್ದಾರೆ.
ಈಕೆಯ ಹೆಸರು ಕಾರ್ಟ್ಲಿಸ್ ಡೆಡಾ. ಜಾರ್ಜಿಯಾದ ರಾಜಧಾನಿ ಟಿಬಿಲಿಸಿಯಲ್ಲಿ ಈಕೆಯ ಪ್ರತಿಮೆಯನ್ನು ಕೆತ್ತಲಾಗಿದೆ. . ಟಿಬಿಲಿಸಿ ತನ್ನ 1,500 ನೇ ವಾರ್ಷಿಕೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಅಂದರೆ 1958 ರಲ್ಲಿ ಜಾರ್ಜಿಯಾದ ಸೊಲೊಲಾಕಿ ಬೆಟ್ಟದ ತುದಿಯಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಜಾರ್ಜಿಯನ್ ಶಿಲ್ಪಿ ಎಲ್ಗುಜಾ ಅಮಾಶುಕೆಲಿ ಇದನ್ನು ಕೆತ್ತಿದ್ದಾರೆ. ಈ ಮಹಿಳೆ ಜಾರ್ಜಿಯಾದ ರಾಷ್ಟ್ರೀಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಇಪ್ಪತ್ತು ಮೀಟರ್ ಅಲ್ಯೂಮಿನಿಯಂ ಆಕೃತಿಯಿಂದ ವಿನ್ಯಾಸಗೊಳಿಸಲಾಗಿದೆ. ಇದರ ವಿಷಯವನ್ನು ಡಾ.ಬ್ರೋ ಶೇರ್ ಮಾಡಿಕೊಂಡಿದ್ದಾರೆ. ಜಾರ್ಜಿಯಾದ ತಾಯಿ ಎಂದು ಕರೆಸಿಕೊಳ್ಳುವ ಈ ಪ್ರತಿಮೆಯು ಜಾರ್ಜಿಯನ್ ಸಂಸ್ಕೃತಿ ಮತ್ತು ಪರಂಪರೆಯ ಪ್ರಮುಖ ಸಂಕೇತ ಎಂದು ಬಿಂಬಿಸಲಾಗಿದೆ. ಇದು ದೇಶದ ಶಕ್ತಿ, ಆತಿಥ್ಯ ಮತ್ತು ಸ್ವಾಗತಿಸುವ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಟಿಬಿಲಿಸಿಗೆ ಭೇಟಿ ನೀಡುವ ಯಾರಿಗಾದರೂ ಇದು ಭೇಟಿ ನೀಡಲೇಬೇಕಾದ ತಾಣವಾಗಿದೆ. ಈ ನಗರವು ದೇಶದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ತಾಯಿಯ ಪ್ರತಿಮೆಯು ಜಾರ್ಜಿಯನ್ ಜನರ ನಿರಂತರ ಮನೋಭಾವಕ್ಕೆ ಸಾಕ್ಷಿಯಾಗಿದೆ ಮತ್ತು ಅವರ ವಿಶಿಷ್ಟ ಗುರುತನ್ನು ಆಚರಿಸಲು ಮತ್ತು ಸಂರಕ್ಷಿಸುವ ಅವರ ಸಂಕಲ್ಪವಾಗಿದೆ. ಈ ಬಗ್ಗೆ ಡಾ. ಬ್ರೋ ಪರಿಚಯಿಸಿದ್ದಾರೆ.
ಅಂತರ್ಧರ್ಮೀಯ ಪ್ರೇಮಿಗಳ ಕೌತುಕದ ಕಥೆ: ಗಂಟೆಗೊಮ್ಮೆ ಸ್ಮಾರಕಗಳ ಸಮಾಗಮ! ಡಾ.ಬ್ರೋ ಬಾಯಲ್ಲಿ ಕೇಳಿ...
ಇದೇ ವಿಡಿಯೋದಲ್ಲಿ ಡಾ.ಬ್ರೋ. ಜಾರ್ಜಿಯಾದ ನಿನೊ ಮತ್ತು ಅಲಿಯ ಪ್ರೇಮದ ಸಂಕೇತವಾಗಿ ರೂಪಿಸಲಾಗಿರುವ ಎರಡು ಆಕೃತಿ ಬಗ್ಗೆಯೂ ವಿವರಿಸಿದ್ದಾರೆ. ಹತ್ತು ನಿಮಿಷಗಳ ಕಾಲ, ಆಕೃತಿಗಳು ತಮ್ಮ ನೃತ್ಯ ಪ್ರದರ್ಶಿಸುತ್ತವೆ, ಎರಡೂ ಆಕೃತಿಗಳು ಅಲ್ಲಿ ಇಲ್ಲಿ ರೌಂಡ್ ಹಾಕುತ್ತಾ ಬಂದು ಸಮಾಗಮಗೊಳ್ಳುತ್ತವೆ. ಗಂಟೆಗೊಮ್ಮೆ ಹೀಗ ಸಮಾಗಮಗೊಳ್ಳುತ್ತವೆ. ಪ್ರತಿಮೆಗಳ ಎತ್ತರವು ಸರಾಸರಿ ಮನುಷ್ಯನಿಗಿಂತ ಸ್ವಲ್ಪ ಎತ್ತರವಾಗಿದೆ, ಆದರೆ ಅವು ನಿಂತಿರುವ ಎತ್ತರದ ಪೀಠವು ಅವುಗಳನ್ನು ಸ್ಮಾರಕವನ್ನಾಗಿಸಲಾಗಿದೆ. ಬಟುಮಿಯಲ್ಲಿನ ಅತ್ಯಂತ ರೋಮ್ಯಾಂಟಿಕ್ ಪ್ರತಿಮೆ ಇದು ಎನ್ನಲಾಗಿದೆ. ಇವರ ಅಮರ ಪ್ರೀತಿಯನ್ನು ಚಲನೆಗಳಲ್ಲಿ ಜೀವಂತವಾಗಿದೆ. ಸಮುದ್ರದ ಜೊತೆಯಲ್ಲಿ ಸೂರ್ಯಾಸ್ತದ ಕಿರಣಗಳಲ್ಲಿ ಈ ಆಕೃತಿ ಮೋಡಿ ಮಾಡುತ್ತದೆ ಎಂದು ಅವರು ವಿವರಿಸಿದ್ದಾರೆ.
ಅಷ್ಟಕ್ಕೂ ಡಾ.ಬ್ರೋ ಈಗ ಎಲ್ಲರ ಮನೆಮಾತಾಗಿರುವ ಯುವಕ. ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ.
ಅತಿದೊಡ್ಡ ಮುಸ್ಲಿಂ ರಾಷ್ಟ್ರಕ್ಕೆ ಗಣಪನ ಕಾವಲು! ಜ್ವಾಲಾಮುಖಿಯ ಬದಿ ಕುಳಿತ ಕೌತುಕದ ಸ್ಟೋರಿ ಡಾ.ಬ್ರೋ ಬಾಯಲ್ಲಿ...