
ಕುತೂಹಲದ, ತಮಾಷೆಯ ಕಣ್ಣಿನಿಂದ ನೋಡುವವರಿಗೆ ಜಗತ್ತಿನಲ್ಲಿ ವಿಷಯಗಳಿಗೆ ಕೊರತೆಯಾಗುವುದಿಲ್ಲ. ಆದರಲ್ಲೂ ಭಾರತದಂಥ ಬೃಹತ್ ದೇಶದಲ್ಲಿ ಪ್ರತಿದಿನ, ಪ್ರತಿಕ್ಷಣ ನಡೆಯುವ ಡ್ರಾಮಾಗಳು, ವಿಚಿತ್ರವಾದರೂ ನಿಜ ಸಂಗತಿಗಳು, ವಿಭಿನ್ನ ನಂಬಿಕೆ, ಆಚರಣೆಗಳು- ಪ್ರತಿ ಕೋನದಿಂದಲೂ ಸುದ್ದಿಯಾಗಿ ಜಗತ್ತಿನ ಮೂಲೆಮೂಲೆಗೂ ಮನರಂಜನೆ ನೀಡುತ್ತಲೇ ಇರುತ್ತವೆ. ಇತ್ತೀಚಿನ ಅಂಥ ಕೆಲ ಸಂಗತಿಗಳ ಗುಚ್ಛಗಳಿಲ್ಲಿವೆ... ಓದಿ, ನಕ್ಕು ಹಗುರಾಗಿ.
ಹೂಸಿನ ಸ್ಪರ್ಧೆ
ಈ ವಿಚಾರದಲ್ಲಿ ಪ್ರತಿ ಮನೆಯಲ್ಲೂ ಒಬ್ಬರಾದರೂ ಘಟಾನುಘಟಿಗಳಿರಬಹುದು. ಆದರೆ, ಸೂರತ್‌ನ ರೆಸ್ಟೋರೆಂಟ್ ಇದನ್ನು ಸ್ಪರ್ಧೆಯಾಗಿ ಏರ್ಪಡಿಸಿದಾಗ ರಿಜಿಸ್ಟರ್ ಮಾಡುವ ಧೈರ್ಯ ತೋರಿದ್ದು ಕೇವಲ 200 ಮಂದಿ. ಅದರಲ್ಲೂ ಭಾಗವಹಿಸಲು ಅಲ್ಲಿ ಬಂದವರು ಇಪ್ಪತ್ತೇ ಮಂದಿ. ನೂರಾರು ಸಭಿಕರ ಎದುರಿಗೆ ವೇದಿಕೆ ಏರುವ ಧೈರ್ಯ ತೋರಿದವರು ಕೇವಲ ಮೂರು ಜನ. ಅತಿ ಉದ್ದದ, ಅತಿ ಹೆಚ್ಚು ಶಬ್ದದ ಹಾಗೂ ಸಂಗೀತದಂತೆ ರಾಗವಾಗಿ ಬಿಡುವ ವಿಭಾಗಗಳಲ್ಲಿ ಪ್ರಶಸ್ತಿ ಇಡಲಾಗಿತ್ತು. ಆದರೆ, ವೇದಿಕೆ ಏರಿದವರಿಗೆ ಆ ಸಮಯಕ್ಕೆ ಬರಬೇಕಲ್ಲ... ಯಾರಿಗೂ ಗಾಳಿ ಹೊರ ಬರದೆ ಕಡೆಗೆ ಸುಮ್ಮನೆ ಕೆಳಗಿಳಿದು ಹೋಗುವಂತಾಯಿತು. ಮೂಗು ಮುಚ್ಚಿಕೊಂಡು ಕಾಯುತ್ತಿದ್ದ ಸಭಿಕರೆಲ್ಲ ನಿರಾಸೆಯಿಂದ ಮನೆಗೆ ಮರಳಿದರು.
ದೇಶದಲ್ಲೇ ಮೊದಲು ಹೂಸು ಬಿಡುವ ಸ್ಪರ್ಧೆ
ವರನ ಸ್ನೇಕ್ ಡ್ಯಾನ್ಸ್
ಉತ್ತರ ಭಾರತದಲ್ಲಿ ವಿವಾಹಗಳೆಂದರೆ ಅಲ್ಲೊಂದು ಸ್ನೇಕ್ ಡ್ಯಾನ್ಸ್ ಇರಲೇಬೇಕು. ಸ್ನೇಕ್ ಡ್ಯಾನ್ಸ್ ಎಂದ ಮೇಲೆ ಅಲ್ಲಿ ಹಾವಿನಂತೆ ತಲೆಯಾಡಿಸುತ್ತಾ ನಾಲಿಗೆ ಹೊರಳಾಡಿಸುತ್ತಾ, ನೆಲದ ಮೇಲೆಲ್ಲ ವಕ್ರಪಕ್ರವಾಗಿ ಹರಿದಾಡಲೇಬೇಕು. ಜೋಡಿ ಈ ನೃತ್ಯ ಮಾಡುತ್ತಿದ್ದರೆ ಅದೊಂಥರಾ ಮಾದಕ ಕಳೆ ಪಡೆದುಕೊಳ್ಳುತ್ತದೆ. ಕಳೆದ ವರ್ಷ ಉತ್ತರ ಪ್ರದೇಶದ ಬರೇಲಿಯ ಮಧುಮಗನೊಬ್ಬ ಇಂಥ ನೃತ್ಯ ಮಾಡಿ ವಧುವನ್ನು ಮೆಚ್ಚಿಸುವ ಹಪಹಪಿಗೆ ಬಿದ್ದ. ಆದರೆ, ಆತನ ನೃತ್ಯ ನೋಡಿ ಭಯಗೊಂಡ ವಧು ವಿವಾಹವನ್ನೇ ಕ್ಯಾನ್ಸಲ್ ಮಾಡಿಸಿದಳು. ಅಷ್ಟೇ ಅಲ್ಲ, ಕುಡಿದ ಮತ್ತಿನಲ್ಲಿ ನುಲಿದಾಡುತ್ತಾ ಕುಣಿಯುತ್ತಿದ್ದ ವರನನ್ನು ತಡೆಯಲು ಪೋಲೀಸರೇ ಬರಬೇಕಾಯಿತು. ನಂತರ ವರನ ಕಡೆಯವರಿಗೆ ವಧುವಿನ ಮನೆಯವರು ನೀಡಿದ ವಸ್ತುಗಳನ್ನೆಲ್ಲ ಹಿಂದಿರುಗಿಸುವಂತೆ ಖಡಕ್ ವಾರ್ನಿಂಗ್ ಕೊಟ್ಟು, ಲಿಖಿತ ಹೇಳಿಕೆ ದಾಖಲಿಸಿಕೊಂಡು ಪೋಲೀಸರು ಹಿಂದಿರುಗಿದರು.
ಶಿವಲಿಂಗಕ್ಕೆ ಮಾಸ್ಕ್
ನಾವೆಲ್ಲ ವಾಯು ಮಾಲಿನ್ಯ ಹೆಚ್ಚಾದಾಗ ಮಾಸ್ಕ್ ಧರಿಸುವುದು ಸರಿಯಷ್ಟೇ. ಆದರೆ ಪಾಪ, ಗುಡಿಯಲ್ಲಿರುವ ದೇವರುಗಳು ಹೇಗೆ ಈ ಮಾಲಿನ್ಯದಿಂದ ರಕ್ಷಿಸಿಕೊಳ್ಳಬೇಕು?! ಹಾಗೆಂದು ಯೋಚಿಸಿದ ವಾರಣಾಸಿಯ ತಾರಕೇಶ್ವರ ದೇವಾಲಯದ ಪೂಜಾರಿಗಳು ಕಳೆದ ತಿಂಗಳು ಶಿವಲಿಂಗ ಸೇರಿದಂತೆ ಎಲ್ಲ ದೇವರ ವಿಗ್ರಹಗಳಿಗೂ ಮಾಲಿನ್ಯವಿರೋಧಿ ಮಾಸ್ಕ್ ತೊಡಿಸಿ ತಮ್ಮ ಭಕ್ತಿ ಮೆರೆದರು. ಶಸ್ತ್ರಕ್ರಿಯೆ ಸಂದರ್ಭದಲ್ಲಿ ವೈದ್ಯರು ಬಳಸುವಂಥ ಮಾಸ್ಕ್ ಅದಾಗಿತ್ತು. ದೇವರಿಗೆ ಇದರಿಂದ ಖುಷಿಯಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ, ಅವುಗಳಿಗೆ ಪೂಜಿಸುವ ಪೂಜಾರಿಗಳಿಗೆ ಇರುವ ಕಾಳಜಿ, ನಂಬಿಕೆಯಂತೂ ಮೆಚ್ಚತ್ಕದ್ದೇ. ಇಂಥದ್ದೊಂದು ಘಟನೆ ಭಾರತದ ಹೊರತು ಇನ್ನೆಲ್ಲಾದರೂ ನಡೆಯಲು
ಪ್ರವಾಸ ಮಡೋರಿಗೆ ಕೇಂದ್ರದಿಂದ ಸಿಹಿ ಸುದ್ದಿ
ಸಾಧ್ಯವೇ ಹೇಳಿ?
ಕಚೇರಿಯಲ್ಲಿ ಕೂರಲೂ ಹೆಲ್ಮೆಟ್!
ಟು ವ್ಹೀಲರ್‌ನಲ್ಲಿ ಹೋಗುತ್ತಲಂತೂ ಹೆಲ್ಮೆಟ್ ಧರಿಸುವುದು ಕಡ್ಡಾಯ ಸರಿ. ಆದರೆ, ಕಳೆದ ತಿಂಗಳು ಉತ್ತರ ಪ್ರದೇಶದ ಬಾಂದಾದಲ್ಲಿನ ರಾಜ್ಯ ವಿದ್ಯುತ್ ವಿಭಾಗದ ಉದ್ಯೋಗಿಗಳು ಕಚೇರಿಯೊಳಗೆ ಹೆಲ್ಮೆಟ್ ಧರಿಸಿ ಕುಳಿತು ಸುದ್ದಿಯಾಗಿದ್ದರು. ಕಾರಣ? ಅವರ ಕಚೇರಿ ಹಳತಾಗಿ ಯಾವಾಗ ಚಾವಣಿ ಕುಸಿದು ತಲೆ ಮೇಲೆ ಬೀಳುವುದೋ ಎಂಬ ಭಯ ಇದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಂಬಂಧಿಸಿದವರಿಗೆ ಎಷ್ಟು ಬಾರಿ ಹೇಳಿದರೂ ಬೇರೆ ಕಚೇರಿಗೆ ವರ್ಗಾಯಿಸುವುದಾಗಲೀ, ಇರುವ ಕಟ್ಟಡವನ್ನೇ ರಿಪೇರಿ ಮಾಡಿಸುವುದಾಗಲೀ, ಮಾಡುವ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಬಹುಷಃ ಕಚೇರಿಯಲ್ಲಿ ಉದ್ಯೋಗಿಗಳು ಹೆಲ್ಮೆಟ್ ಧರಿಸಿ ಕೂರುವ ಫೋಟೋಗಳು ವೈರಲ್ ಆದ ಮೇಲಾದರೂ ಮೇಲಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿರಬಹುದೆಂಬುದು ನಮ್ಮ ನಂಬಿಕೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.