ಅರೆರೆ! ಇಲ್ಲಿ ನಿಂತು ಡಾ.ಬ್ರೋ ಇದೇನ್‌ ಮಾಡ್ತಿದ್ದಾರೆ? ಚೀನಾದಲ್ಲಿ ನಕ್ಕು ನಗಿಸುವ ಆಟವಿದು!

By Suvarna News  |  First Published Nov 7, 2023, 1:31 PM IST

ಚೀನಾಕ್ಕೆ ಭೇಟಿ ಕೊಟ್ಟಿದ್ದ ಡಾ.ಬ್ರೋ ಅಲ್ಲಿಯ ಕುತೂಹಲದ ಆಟದ ಕುರಿತು ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. 
 


ಜಗತ್ತಿನ ಹಲವಾರು ದೇಶಗಳನ್ನು ಸುತ್ತಿ ಅಲ್ಲಿಯ ಕುತೂಹಲದ ಮಾಹಿತಿಗಳನ್ನು ಶೇರ್‌ ಮಾಡಿಕೊಳ್ಳುವ ಡಾ.ಬ್ರೋ ಖ್ಯಾತಿಯ ಗಗನ್‌ ಅವರು   ಚೀನಾಕ್ಕೂ ಭೇಟಿ ನೀಡಿ, ಇದಾಗಲೇ ಅಲ್ಲಿಯ ಕೆಲವೊಂದು ಮಾಹಿತಿಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ  ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ ಚೀನಾದ ಮಹಾಗೋಡೆ (ಗ್ರೇಟ್‌ ವಾಲ್‌ ಆಫ್‌ ಚೀನಾ) ವಿಷಯದ ಕುರಿತು ಮಾಹಿತಿ ನೀಡಿದ್ದರು. ಈ ಗೋಡೆಯನ್ನು ನೋಡುವ ಬಾಲ್ಯದ ಕನಸು ನನಸಾಗಿದೆ ಎನ್ನುತ್ತಲೇ ಡಾ.ಬ್ರೋ  ಅದರ ಕುತೂಹಲದ ಮಾಹಿತಿಯನ್ನು ಶೇರ್‌ ಮಾಡಿಕೊಂಡಿದ್ದರು.  ಕೇಬಲ್‌ ಕಾರಿನ ಮೇಲೆ ಹೋಗುತ್ತ 21 ಸಾವಿರ ಕಿಲೋ ಮೀಟರ್‌ ಇರುವ ಗೋಡೆಯ  ವೀಕ್ಷಣೆ ಜೊತೆಗೆ ಒಂದಿಷ್ಟು ಮಾಹಿತಿ ನೀಡಿದ್ದರು ಡಾ. ಬ್ರೋ.   

ಇದೀಗ ಡಾ.ಬ್ರೋ ಅವರು ಚೀನಾದಲ್ಲಿರುವ ಆಟವೊಂದರ ಪರಿಚಯ ಮಾಡಿಸಿದ್ದಾರೆ. ಇದು ಸಕತ್‌ ಇಂಟರೆಸ್ಟಿಂಗ್‌ ಆಗಿದೆ. ಮೊಳೆಗಳ ರೀತಿಯಲ್ಲಿ ಜೋಡಿಸಲಾಗಿದೆ. ಇದನ್ನು ಪ್ರೆಸ್‌ ಮಾಡಿದ್ರೆ ಎಲ್ಲಾ ಮೊಳೆಗಳೂ ಹಿಂದಕ್ಕೆ ಹೋಗುತ್ತವೆ. ನಂತರ ಅದರ ಮೇಲೆ ನೀವು ಗಟ್ಟಿಯಾಗಿ ಪ್ರೆಸ್‌ ಮಾಡಿ ನಿಂತರೆ ಸಾಕು, ಅದರ ಅಚ್ಚು ಒತ್ತುತ್ತದೆ. ಆಗ ಹಿಂಬದಿಯಿಂದ ನಿಮ್ಮ ದೇಹದ ಅಚ್ಚನ್ನು ನೋಡಬಹುದು. ಇದು ನೋಡಲು ಬಹಳ ಮಜವಾಗಿರುತ್ತದೆ. ಇದರಲ್ಲಿ ಹಲವಾರು ಮಂದಿ ತಮ್ಮ ಅಚ್ಚನ್ನು ನೋಡಿ ಖುಷಿ ಪಡುವುದನ್ನು ವಿಡಿಯೋದಲ್ಲಿ ನೋಡಬಹುದು. ಅದರಂತೆಯೇ ಡಾ. ಬ್ರೋ ಕೂಡ ತಮ್ಮ ಅಚ್ಚನ್ನು ಒತ್ತಿರುವುದನ್ನು ನೋಡಬಹುದು. ಇದೊಂದು ಫೇಮಸ್‌ ಆಟದ ಸಾಮಾನು ಎಂದು ಹೇಳಿರುವ ಡಾ.ಬ್ರೋ ತಮ್ಮ ಎಂದಿನ ಹಾಸ್ಯದ ಧಾಟಿಯಲ್ಲಿ ಇದರ ಮಾಹಿತಿ ನೀಡಿದ್ದಾರೆ. ಚೀನಾದ ಈ ಆಟದ ಸಾಮಗ್ರಿ ನೋಡಿ ಡಾ.ಬ್ರೋ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ. 

Tap to resize

Latest Videos

10 ಲಕ್ಷ ಜನರ ಸಮಾಧಿ ಮೇಲೆ ಕಟ್ಟಿದ ಚೀನಾ ಮಹಾಗೋಡೆ: ಕುತೂಹಲದ ಮಾಹಿತಿ ಬಿಚ್ಚಿಟ್ಟ ಡಾ.ಬ್ರೋ

 ಡಾ.ಬ್ರೋ ಸದ್ಯ ಮನೆಮನೆ ಮಾತಾಗುತ್ತಿದ್ದಾರೆ. ಇವರಿಗೆ ಕ್ರಿಕೆಟ್‌ ಕಮೆಂಟ್‌ ಹೇಳಲು ಇತ್ತೀಚೆಗೆ ಸ್ಟಾರ್ಟ್ಸ್​ ಸ್ಪೋರ್ಟ್ಸ್​ ಕೂಡ ಆಹ್ವಾನ ನೀಡಿತ್ತು. ಅರ್ಚಕರ ಮಗನಾಗಿ  ಕುಟುಂಬದಲ್ಲಿ ಹುಟ್ಟಿ, ಪೌರೋಹಿತ್ಯ ಕಲಿತು, ಪೂಜಾ ಪುನಸ್ಕಾರ ಮಾಡುತ್ತ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಹುಡುಗ ಡಾ.ಬ್ರೋ ಅವರನ್ನು ಸ್ಟಾರ್ಟ್ಸ್​ ಸ್ಪೋರ್ಟ್ಸ್​ನಂಥ ಚಾನೆಲ್​ ಕರೆದು ಇಂಥದ್ದೊಂದು ಅವಕಾಶ ನೀಡಿದೆ ಎಂದರೆ ಅದು ಸಾಧಾರಣ ಮಾತಲ್ಲ. ತಾಲಿಬಾನ್, ಪಾಕಿಸ್ತಾನ​ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ.  ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. 

ಉಗಾಂಡಾಕ್ಕೆ ಹೋಗಿ ಅಭಿಮಾನಿಗಳಿಗೆ ಆತಂಕವನ್ನೂ ಮೂಡಿಸಿದ್ದಾರೆ. ತಾಲೀಬಾನಿಗಳನ್ನೂ ಮಾತನಾಡಿಸಿ ಫ್ಯಾನ್ಸ್​ಗೆ ಶಾಕ್​ ನೀಡಿದ್ದಾರೆ.  ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ . ಆದರೂ ಧೈರ್ಯದಿಂದ ಗಗನ್​ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ. ಮೊನ್ನೆಯಷ್ಟೇ ಸೋಮಾಲಿಯಾಕ್ಕೂ ಹೋಗಿ ಅಲ್ಲಿ ಕಡಲ್ಗಳ್ಳರನ್ನೂ ಮಾತನಾಡಿಸಿ ಬಂದಿದ್ದಾರೆ. ಚೀನಾವನ್ನು ಹೊಗಳಿ ದೇಶದ್ರೋಹಿ ಪಟ್ಟವನ್ನೂ ಕಟ್ಟಿಕೊಂಡವರು ಡಾ.ಬ್ರೋ.  

ಸಿಂಪಲ್​ ಅವಲಕ್ಕಿಗೆ ಟೇಸ್ಟಿ ಬೆಂಡೇಕಾಯಿ ಫ್ರೈ: ನಟಿ ಅದಿತಿ ಪ್ರಭುದೇವ ರೆಸಿಪಿ ನೋಡಿದ್ರೆ ಬಾಯಲ್ಲಿ ನೀರೂರತ್ತೆ!
 

click me!