
ಸಾರ್ವಜನಿಕ ಶೌಚಾಲಯವನ್ನು ಬಳಸುವವರಿಗೆ ಅದೇನೋ ಅಸಡ್ಡೆ. ಮನೆಯಂತೆ ಅದನ್ನೂ ಸ್ವಚ್ಛವಾಗಿಡಬೇಕು ಎನ್ನುವ ಮನಸ್ಥಿತಿ ಜನರಲ್ಲಿ ಇರೋದಿಲ್ಲ. ನಾವೊಬ್ಬರು ಕೊಳಕು ಮಾಡಿದ್ರೆ, ನೀರು ಹಾಕದೆ ಹೋದ್ರೆ ಏನಾಯ್ತು, ಬೇರೆಯವರು ಮಾಡ್ತಾರಲ್ಲ, ಹಣ ನೀಡೋದಿಲ್ವಾ.. ಹೀಗೆ ನಾನಾ ರೀತಿ ಆಲೋಚನೆ ಮಾಡಿ ಸಾರ್ವಜನಿಕ ಶೌಚಾಲಯ ಬಳಸ್ತಾರೆ. ಸಾರ್ವಜನಿಕ ಶೌಚಾಲಯವನ್ನು ಎಷ್ಟು ಕ್ಲೀನ್ ಮಾಡಿದ್ರೂ ಕ್ಲೀನ್ ಆಗದಿರಲು ಇದೇ ಮುಖ್ಯ ಕಾರಣ. ಪುರುಷರ ಶೌಚಾಲಯ ಕ್ಲೀನಿಂಗ್ ನಲ್ಲಿ ಒಂದು ಕೈ ಮುಂದಿರುತ್ತದೆ. ಅವರ ನಿಖರತೆಯ ಕೊರತೆಯಿಂದಾಗಿ ಶೌಚಾಲಯ ಹೆಚ್ಚು ಕೊಳಕಾಗಿರುತ್ತದೆ. ಇದಕ್ಕೆ ಆಂಸ್ಟರ್‌ಡ್ಯಾಮ್‌ನ ಶಿಪೋಲ್ ವಿಮಾನ ನಿಲ್ದಾಣ ಹೊರತಾಗಿರಲಲ್ಲ. ಆದ್ರೆ ಈಗ ಅಲ್ಲಿನ ಪರಿಸ್ಥಿತಿ ಬದಲಾಗಿದೆ. ಶುಚಿಗೊಳಿಸುವ ವೆಚ್ಚವನ್ನು ಕಡಿಮೆ ಮಾಡಲು ವಿಮಾನ ನಿಲ್ದಾಣ ಅನುಸರಿಸಿ ಹೊಸ ವಿಧಾನ ವರ್ಕ್ ಔಟ್ ಆಗಿದೆ. ಪುರುಷರ ಗಮನವನ್ನು ಒಂದೆಡೆ ಸೆಳೆಯಲು ಶಿಪೋಲ್ ವಿಮಾನ ನಿಲ್ದಾಣ ಮೂತ್ರದ ನೊಣವನ್ನು ಪರಿಚಯಿಸಿದೆ. ಇದು ಸಂಪೂರ್ಣ ವರ್ಕ್ ಔಟ್ ಆಗಿದೆ.
ವಿಮಾನ (Plane) ನಿಲ್ದಾಣದ ಶೌಚಾಲಯದಲ್ಲಿ ನೊಣ (Fly) : ಶೌಚಾಲಯ (Toilet) ದ ವಿನ್ಯಾಸಕಾರರು ಸ್ಪ್ಲಾಶ್‌ಬ್ಯಾಕ್ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಬಹಳ ಹಿಂದಿನಿಂದಲೂ ಆಸಕ್ತಿ ಹೊಂದಿದ್ದರು. ಶೌಚಾಲಯದ ಕ್ಲೀನಿಂಗ್ ಸುಲಭವಲ್ಲ. ಪುರುಷರ ಶೌಚಾಲಯ ಮತ್ತಷ್ಟು ಸವಾಲು. ಯಾಕೆಂದ್ರೆ ಮೂತ್ರ ಆಮ್ಲೀಯವಾಗಿರುವ ಕಾರಣ ಸ್ಪ್ಲಾಶ್ ಬ್ಯಾಕ್ ಮೇಲ್ಮೈ ನೋಟವನ್ನು ಹಾಳು ಮಾಡುತ್ತದೆ. ಗೋಡೆಗಳ ಮೇಲೆ ಮೂತ್ರ ಬಿದ್ದಾಗ ಕೊಳಕಾಗುವುದಲ್ಲದೆ, ಮಣ್ಣು, ಧೂಳನ್ನು ಹಿಡಿದಿಡುತ್ತದೆ. ಅಲ್ಲಿಯೇ ಬ್ಯಾಕ್ಟೀರಿಯಾ ಮತ್ತು ಇತರ ರೋಗಕಾರಕಗಳು ಬೆಳೆಯಲು ಶುರುವಾಗುತ್ತದೆ. ಶೌಚಾಲಯ ವಾಸನೆ ಬರಲು ಶುರುವಾಗುತ್ತದೆ. ಒಟ್ಟಾರೆಯಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುವ ಜನರಿಗೆ ಸ್ಪ್ಲಾಶ್‌ಬ್ಯಾಕ್ ಕಷ್ಟಕರವಾದ ಸವಾಲಾಗಿದೆ. ಇದನ್ನು ತಪ್ಪಿಸುವುದು ಅವರ ಗುರಿಯಾಗಿತ್ತು. ಪುರುಷರ ಗಮನವನ್ನು ಕೇಂದ್ರೀಕರಿಸಿದಾಗ ಇದು ಸಾಧ್ಯ ಎಂಬುದನ್ನು ವಿನ್ಯಾಸಕಾರರು ಅರಿತುಕೊಂಡರು.
ಗಂಡ-ಹೆಂಡತಿ ಮಧ್ಯೆ ಇಷ್ಟೆಲ್ಲಾ ವಯಸ್ಸಿನ ಅಂತರ ಇರಬಾರದು ಯಾಕೆ ಗೋತ್ತಾ..?
ನಂತ್ರ ಒಂದು ಸಣ್ಣ ನೊಣದ ಚಿತ್ರವನ್ನು ಯೂರಿನಲ್ ಬೌಲ್ ನಲ್ಲಿ ಕೆತ್ತಲಾಯ್ತು. ಶಿಪೋಲ್ ವಿಮಾನನಿಲ್ದಾಣದ ಪುರುಷರ ಶೌಚಾಲಯದ ಎಲ್ಲ ಯೂರಿನಲ್ ಬೌಲ್ ನಲ್ಲಿ ನೊಣದ ಚಿತ್ರವನ್ನು ಕೆತ್ತಲಾಗಿದೆ. ನೊಣದ ಚಿತ್ರದಿಂದ ಅಲ್ಲಿನ ಸ್ವಚ್ಛತೆ ಕೆಲಸ ಸ್ವಲ್ಪಮಟ್ಟಿಗೆ ಕಡಿಮೆ ಆಗಿದೆ.
ಶೌಚಾಲಯದಲ್ಲಿ ನೊಣದ ಚಿತ್ರವೇ ಏಕೆ? : ನೊಣ ಕಾಣಿಸಿಕೊಂಡಿದೆ ಅಂದ್ರೆ ಅದು ಅನೈರ್ಮಲ್ಯವನ್ನು ಸೂಚಿಸುತ್ತದೆ. ಒಂದ್ವೇಳೆ ಬೇರೆ ಸುಂದರ ಜೀವಿಯಾದ್ರೆ ಜನರು ಅದನ್ನು ನಿರ್ಲಕ್ಷ್ಯ ಮಾಡ್ಬಹುದು. ಅದೇ ದೊಡ್ಡ ಜೀವಿ ಚಿತ್ರ ಬಿಡಿಸಿದ್ರೆ ಜನರು ಭಯಗೊಂಡು, ಮೂತ್ರ ವಿಸರ್ಜನೆ ಮಾಡದೆ ಇರಬಹುದು. ಆದ್ರೆ ನೊಣ ಇದಕ್ಕೆ ಹೊಂದಿಕೆಯಾಗುತ್ತದೆ. ನೊಣ ಅನೈರ್ಮಲ್ಯವನ್ನು ಸೂಚಿಸುವ ಕಾರಣ ಜನರ ಗಮನ ಸಂಪೂರ್ಣ ಅದ್ರ ಮೇಲಿರುತ್ತದೆ. ಆಗ ಸ್ಪ್ಲಾಶ್‌ಬ್ಯಾಕ್ ಕಡಿಮೆಯಾಗುತ್ತದೆ.
ಗಂಡ-ಹೆಂಡತಿ ಮಧ್ಯೆ ಇಷ್ಟೆಲ್ಲಾ ವಯಸ್ಸಿನ ಅಂತರ ಇರಬಾರದು ಯಾಕೆ ಗೋತ್ತಾ..?
ಇದು ಸ್ಪ್ಲಾಶ್‌ಬ್ಯಾಕ್ ಅನ್ನು ಎಷ್ಟು ಕಡಿಮೆ ಮಾಡುತ್ತದೆ ಎನ್ನುವುದು ನಿಖರವಾಗಿಲ್ಲ. ಶೇಕಡಾ 80 ರಷ್ಟು ಕಡಿಮೆ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ. ಸ್ವಚ್ಛತೆ ವಿಷ್ಯದಲ್ಲಿ ಉಳಿತಾಯವಾಗಿದೆ ಎಂಬುದನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಶೇಕಡಾ ಎಂಟರಷ್ಟು ಸ್ವಚ್ಛತೆ ವೆಚ್ಛ ಕಡಿಮೆ ಆಗಿದೆ ಎಂದು ಅಂದಾಜಿಸಲಾಗಿದೆ.
ಮೂತ್ರದ ನೊಣವನ್ನು ಎಡ್ ಕೀಬೂಮ್ ಹುಟ್ಟುಹಾಕಿದರು. ಶುಚಿಗೊಳಿಸುವ ವಿಭಾಗದ ವ್ಯವಸ್ಥಾಪಕ ಜೋಸ್ ವ್ಯಾನ್ ಬೆಡಾಫ್ ಇದ್ರ ಬಗ್ಗೆ ಸೂಚಿಸಿದರು. 1960 ರ ದಶಕದಲ್ಲಿ ಸೇನೆಯಲ್ಲಿದ್ದಾಗ ವ್ಯಾನ್ ಬೆಡಾಫ್ ಇದ್ರ ಬಗ್ಗೆ ಆಲೋಚನೆ ಮಾಡಿದ್ದರು. ಭೌತಿಕ ವಿನ್ಯಾಸ ಬದಲಾವಣೆ ಸ್ಪ್ಲಾಶ್‌ಬ್ಯಾಕ್ ಕಡಿಮೆ ಮಾಡುತ್ತದೆ ಎಂಬುದನ್ನು ಅವರು ಅರಿತಿದ್ದರು. ಆಂಸ್ಟರ್‌ಡ್ಯಾಮ್‌ನ ಶಿಪೋಲ್ ವಿಮಾನ ನಿಲ್ದಾಣದ ನಂತ್ರ ಅನೇಕ ಕಡೆ ಈ ವಿಧಾನದ ಪ್ರಯೋಗ ನಡೆದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.