ರಷ್ಯಾದ ಅಪಾಯಕಾರಿ ಸೇತುವೆ ಮೇಲೆ ಡಾ. ಬ್ರೋ ನಡೆದುಕೊಂಡು ಹೋಗಿರುವ ವಿಡಿಯೋ ಶೇರ್ ಮಾಡಿದ್ದಾರೆ. ಪ್ಲೀಸ್ ಇಂಥ ರಿಸ್ಕ್ ತಗೋಬೇಡಿ ಅಂತಿದ್ದಾರೆ ಫ್ಯಾನ್ಸ್
ಜಗತ್ತಿನ ಹಲವಾರು ದೇಶಗಳನ್ನು ಸುತ್ತಿ ಅಲ್ಲಿಯ ಕುತೂಹಲದ ಮಾಹಿತಿಗಳನ್ನು ಶೇರ್ ಮಾಡಿಕೊಳ್ಳುವ ಡಾ.ಬ್ರೋ ಖ್ಯಾತಿಯ ಗಗನ್ ರಷ್ಯಾದ ಸೋಚಿಯಲ್ಲಿರುವ ಅಪಾಯಕಾರಿ ಸೇತುವೆ ಮೇಲೆ ಡಾ.ಬ್ರೋ ಪ್ರಯಾಣ ಮಾಡಿರುವ ವಿಡಿಯೋ ಶೇರ್ ಮಾಡಿದ್ದಾರೆ. ಕಳೆದ ತಿಂಗಳು ಚೀನಾ ದೇಶವನ್ನು ಹೊಗಳಿ ವಿಡಿಯೋ ಮಾಡಿದ್ದರು ಡಾ.ಬ್ರೊ. ಚೀನಾದ ಬೀಜಿಂಗ್‌ನಲ್ಲಿ ವೀಡಿಯೋ ಮಾಡುತ್ತಾ ಮಾತನಾಡಿರುವ ಡಾ ಬ್ರೋ, ಮುಂದುವರೆದ ದೇಶದ ಮಕ್ಕಳೆಲ್ಲಾ ಸ್ಕೂಲ್ ಕಾಲೇಜ್ ಗಳಲ್ಲಿ, ಹೊಸ ಹೊಸ ಸ್ಕಿಲ್ (skill) ಕಲಿತರೆ , ನಮ್ಮ ಮಕ್ಕಳು ಜಾತಿ ಧರ್ಮ ಅಂತ ಕಿತ್ತಾಡ್ತಾವೇ! ನಾವು ಈಗಿರುವ ಚೀನಾ ಮಟ್ಟಕ್ಕೆ ಹೋಗಬೇಕಾದರೆ, ಇನ್ನೂ ಕನಿಷ್ಟ 70 ವರ್ಷ ಬೇಕು ಅಂದ್ರೆ, ಆಗ ಚೀನಾ ಇನ್ನೆಲ್ಲಿಗೆ ಹೋಗಿರುಂತೆ ಯೋಚಿಸಿ. ಜಾತಿ ಧರ್ಮ ಅನ್ನುವ ನಂಜು ಬಿಟ್ಟು ಹೊರಬನ್ನಿ ಎಂದು ಹೇಳಿದ್ದರು. ಇದರಿಂದ ಹಲವರ ಕೆಂಗಣ್ಣಿಗೆ ಅವರು ಗುರಿಯಾಗಿದ್ದರು. ಭಾರತೀಯನಾಗಿ ಚೀನಾಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ಹೊಗಳಿದ ಡಾ. ಬ್ರೋಗೆ ದೇಶದ್ರೋಹಿ ಪಟ್ಟ ಕಟ್ಟಿದ್ದರು. ಇದರ ಬೆನ್ನಲ್ಲೇ, ಕಳೆದೊಂದು ತಿಂಗಳಿನಿಂದ ಡಾ.ಬ್ರೋ ಸೈಲೆಂಟ್ ಆಗಿ ಬಿಟ್ಟಿದ್ದರು. ಚೀನಾವನ್ನು ಹೊಗಳಿ ಪೇಚಿಗೆ ಸಿಲುಕಿದ್ರಾ ಗಗನ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿತ್ತು.
ಇದರ ಬೆನ್ನಲ್ಲೇ ಇದೀಗ ಅಪಾಯಕಾರಿ ಎನ್ನುವಂಥ ರಷ್ಯಾದ ಸೇತುವೆಯ ವಿಡಿಯೋ ಶೇರ್ ಮಾಡಿದ್ದಾರೆ. ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ ಕಟ್ಟಲಾಗಿರುವ ಸೇತುವೆ ಇದಾಗಿದೆ. ಕಾಲು ಜಾರಿದ್ರೆ ಕೈಲಾಸವೇ ಗತಿ ಎಂದು ಹೇಳಿಕೊಂಡಿದ್ದಾರೆ ಡಾ. ಬ್ರೊ. ಈ ಸೇತುವೆ ಮೇಲೆ ಇದುವರೆಗೆ ಭಾರತದಿಂದ ಒಬ್ಬರೇ ಒಬ್ಬರು ಬಂದಿಲ್ಲ ಎಂದು ಅಲ್ಲಿಯ ಗೈಡ್ ಹೇಳಿದ್ದಾರೆ. ಅಂದರೆ ಗಗನ್ ಅವರು ಈ ಅಪಾಯಕಾರಿ ಸೇತುವೆ ಮೇಲೆ ನಡೆದುಕೊಂಡು ಹೋಗಿರುವ ಪ್ರಥಮ ಭಾರತೀಯರಾಗಿದ್ದಾರೆ. ಒಂದು ವರ್ಷದ ಹಿಂದೆ ಇಲ್ಲಿಯ ಅಪಾಯಕಾರಿ ಕೆಲವು ಆಟಗಳ ಕುರಿತು ಮಾಹಿತಿ ನೀಡಿದ್ದರು ಡಾ.ಬ್ರೋ, ಇದೀಗ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಹೃದಯ ಡವಡವ ಎನ್ನುತ್ತಿದ್ದು, ಪ್ಲೀಸ್ ಇಂಥ ರಿಸ್ಕ್ ತಗೋಬೇಡಿ ಅನ್ನುತ್ತಿದ್ದಾರೆ. ನಿಮ್ಮಿಂದ ಹಲವಾರು ಮಾಹಿತಿಗಳನ್ನು ಪಡೆಯುವುದು ಇದೆ. ಇಂಥ ರಿಸ್ಕ್ ತೆಗೆದುಕೊಂಡು ಹೆಚ್ಚೂ ಕಮ್ಮಿಯಾದರೆ ಕೋಟಿ ಕೋಟಿ ನಿಮ್ಮ ಅಭಿಮಾನಿಗಳ ನೋವು ಭರಿಸುವವರು ಯಾರು ಎನ್ನುತ್ತಿದ್ದಾರೆ.
ಚೀನಾ ಹೊಗಳಿದ ಕನ್ನಡ ಯೂಟ್ಯೂಬರ್ ಡಾ ಬ್ರೋಗೆ ದೇಶದ್ರೋಹಿ ಪಟ್ಟ: ಟಾರ್ಗೆಟ್ ಅಗ್ಬಿಟ್ಯಲ್ಲ ದೇವ್ರು ಎಂದ ಫ್ಯಾನ್ಸ್.!
ಅಂದಹಾಗೆ ಸೋಚಿಯ ಕುರಿತು ಗಗನ್ ಅವರು ಒಂದಷ್ಟು ಮಾಹಿತಿಗಳನ್ನು ಶೇರ್ ಮಾಡಿದ್ದಾರೆ. ರಷ್ಯಾದ ಅತಿದೊಡ್ಡ ರೆಸಾರ್ಟ್ ನಗರವಾಗಿದೆ. ನಗರವು ದಕ್ಷಿಣ ರಷ್ಯಾದ ಕಪ್ಪು ಸಮುದ್ರದ ಉದ್ದಕ್ಕೂ ಸೋಚಿ ನದಿಯ ಮೇಲೆ ನೆಲೆಗೊಂಡಿದೆ. ಇಲ್ಲಿಯ ಗ್ರಾಮೀಣ ಪ್ರದೇಶದಲ್ಲಿ 4 ಲಕ್ಷದ 43 ಸಾವಿರದ 562 ನಿವಾಸಿಗಳಿದ್ದರೆ, ನಗರ ಪ್ರದೇಶಗಳಲ್ಲಿ ಸುಮಾರು ಆರು ಲಕ್ಷ ನಿವಾಸಿಗಳು ನೆಲೆಸಿದ್ದಾರೆ. ಈ ನಗರವು 176.77 ಚದರ ಕಿಲೋಮೀಟರ್ (68.25 ಚದರ ಮೈಲಿ) ವಿಸ್ತೀರ್ಣವನ್ನು ಹೊಂದಿದೆ. ಗ್ರೇಟರ್ ಸೋಚಿ ಪ್ರದೇಶವು 3,502 ಚದರ ಕಿಲೋಮೀಟರ್ (1,352 ಚ. ಮೈಲಿ) ಗಿಂತ ಹೆಚ್ಚು ವ್ಯಾಪಿಸಿದೆ. ಸೋಚಿಯು 145 ಕಿಲೋಮೀಟರ್ (90 ಮೈಲಿ) ವರೆಗೆ ವ್ಯಾಪಿಸಿದೆ ಮತ್ತು ಇದು ಯುರೋಪ್‌ನ ಅತಿ ಉದ್ದದ ನಗರವಾಗಿದೆ. ದಕ್ಷಿಣ ಫೆಡರಲ್ ಜಿಲ್ಲೆಯ ಐದನೇ-ದೊಡ್ಡ ನಗರ, ಕ್ರಾಸ್ನೋಡರ್ ಕ್ಯಾರಿಯಲ್ಲಿ ಎರಡನೇ-ದೊಡ್ಡ ನಗರ ಮತ್ತು ಕಪ್ಪು ಸಮುದ್ರದ ಆರನೇ-ದೊಡ್ಡ ನಗರ ಎಂದು ಇದು ಎನಿಸಿದೆ.
ಅಂದಹಾಗೆ, ಡಾ. ಬ್ರೋ ಪರಿಚಯ ಮಾಡಿಸುವುದೇ ಬೇಡ. ಅಷ್ಟು ಮನೆ ಮಾತಾಗಿದ್ದಾರೆ ಇವರು. ನಮಸ್ಕಾರ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ.
ಚೀನಾದಲ್ಲಿ ರಸ್ತೆ ಮೇಲೆ ತಲೆಹರಟೆ ಮಾಡಿದ್ರೆ ಏನಾಗತ್ತೆ? ಡಾ.ಬ್ರೋ ವಿವರಿಸಿದ್ದಾರೆ ನೋಡಿ...
ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ ಯುವಕನೇ ಸಾಕ್ಷಿ. ತಾಲಿಬಾನ್, ಪಾಕಿಸ್ತಾನ್ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಇವರ ಹೆಸರು ಗಗನ್. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಇದನ್ನು ನೋಡಿ ಇವರ ಫ್ಯಾನ್ಸ್ ದಂಗಾದದ್ದೂ ಇದೆ. ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದಿದ್ದೂ ಇದೆ. ಆದರೂ ಧೈರ್ಯದಿಂದ ಗಗನ್ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ. ಈಗಲೂ ಇಂಥ ರಿಸ್ಕ್ ತಗೋಬೇಡಿ ಎನ್ನುತ್ತಿದ್ದಾರೆ.