ಬೆಂಗಳೂರಿನ ಆಟೋ ಚಾಲಕರ ಚಾತುರ್ಯ ಸಮಯ ಪ್ರಜ್ಞೆಯ ಬಗ್ಗೆ ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು ವೈರಲ್ ಆಗಿದೆ. ಆಟೋ ಚಾಲಕರೊಬ್ಬರು ರೈಲು ಮಿಸ್ ಮಾಡಿದ ವ್ಯಕ್ತಿಯನ್ನು ಮುಂದಿನ ನಿಲ್ದಾಣಕ್ಕೆ ರೈಲಿಗಿಂತ ಮೊದಲು ತಲುಪಿಸುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಆದಿಲ್ ಹುಸೇನ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ peakBengaluru (ಅತೀ ಹೆಚ್ಚು ವಾಹನ ದಟ್ಟಣೆ ಇರುವ ಸಮಯ) ಅನುಭವ ನನಗಾಯ್ತು, ನಾನು ಬೆಂಗಳೂರು ನಗರ ರೈಲು ನಿಲ್ದಾಣದಿಂದ ಮಧ್ಯಾಹ್ನ 1.40ಕ್ಕೆ ಹೊರಡುವ ಪಶುಪತಿ ಎಕ್ಸ್‌ಪ್ರೆಸ್ ರೈಲನ್ನು ಏರಬೇಕಿತ್ತು. ಆದರೆ ಕೆಲವು ಕೆಲಸಗಳಿದ್ದ ಕಾರಣ ನಾನು ಮಾರತಹಳ್ಳಿಯಿಂದ 12:50ಕ್ಕೆ ಪ್ರಯಾಣ ಆರಂಭಿಸಿದೆ. ಅಲ್ಲಿಂದ ರೈಲು ನಿಲ್ದಾಣಕ್ಕೆ 17 ಕಿಲೋ ಮೀಟರ್‌ಗಳ ದೂರ, ಆದರೆ ಟ್ರಾಫಿಕ್‌ನಿಂದಾಗಿ ನಾನು ನಿಗದಿತ ಸಮಯದಲ್ಲಿ ರೈಲು ನಿಲ್ದಾಣಕ್ಕೆ ತಲುಪುವ ಛಾನ್ಸ್ ಕಡಿಮೆ ಇತ್ತು.
ಪರಿಣಾಮ ನನ್ನ ಕ್ಯಾಬ್ (Cab) ರೈಲು ನಿಲ್ದಾಣ ತಲುಪುತ್ತಿದ್ದಂತೆ ಕೆಲವು ಕುತೂಹಲದಿಂದ ಇಣುಕುತ್ತಿದ್ದ ಆಟೋ ಡ್ರೈವರ್‌ಗಳು ನನ್ನ ಬಳಿ ಬಂದು ವಿಚಾರಿಸಲು ಶುರು ಮಾಡಿದರು. ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿಗೆ ಬಂದಿದ್ದೇ ಎಂದುನನ್ನನ್ನು ಕೇಳಿದ ಅವರು, ನಾನು ಹೌದು ಎಂದು ಹೇಳುತ್ತಿದ್ದಂತೆ ಅದು ಹೊರಟು ಹೋಯ್ತು ಎಂದರು. ಆದರೆ ನಾನು ಮಾತ್ರ ಮೈ ಟ್ರೈನ್ ಆಪ್‌ನಲ್ಲಿ (My Train app) ನಾನು, ಪ್ರಯಾಣಿಸಬೇಕಾದ ರೈಲು ಎಲ್ಲಿದೆ ಎಂದು ಹುಡುಕಾಡುತ್ತಿದ್ದು, ಪ್ಲಾಟ್‌ಫಾರ್ಮ್‌ಗೆ ಹೋಗಲು ಮುಂದಾದೆ.
ಬೆಂಗಳೂರಿನ ರಸ್ತೆಯಲ್ಲಿ ಫೆರಾರಿ ಸವಾರಿ, ಟ್ರಾಫಿಕ್‌ನಲ್ಲಿ ಸಿಲುಕಿರುವುದು ನೋಡಲು ನೋವಾಗುತ್ತೆ ಎಂದ ಫ್ಯಾನ್ಸ್!
ಆದರೆ ದುರಾದೃಷ್ಟವಶಾತ್ ರೈಲು ಹೋಗಿರುವುದು ನಿಜ ಎಂಬುದು ಪ್ಲಾಟ್ಫಾರ್ಮ್ ತಲುಪುತ್ತಿದ್ದಂತೆ ಅರಿವಾಯ್ತು, ಈ ವೇಳೆ ಆಟೋ ಚಾಲಕರೊಬ್ಬರು ನನ್ನನ್ನು ರೈಲು ಹೋಗುತ್ತಿದ್ದ ಮುಂದಿನ ರೈಲು ನಿಲ್ದಾಣಕ್ಕೆ ತಲುಪಿಸುವ ಭರವಸೆ ನೀಡಿದರು. ಆ ರೈಲು ನಿಲ್ದಾಣವೂ 27 ಕಿಲೋ ಮೀಟರ್ ದೂರ ಇತ್ತು. ಆದರೆ ನನ್ನ ಮನದಲ್ಲಿ ಗೊಂದಲವಿತ್ತು. ಆದರೆ ಆಟೋ ಚಾಲಕನನ್ನು ನಂಬಲು ಸಿದ್ಧನಾದೆ. ಏಕೆಂದರೆ ಆಟೋ ಚಾಲಕರು ನನಗೆ ತಾವು ನಿಮ್ಮನ್ನು ಮುಂದಿನ ರೈಲು ನಿಲ್ದಾಣಕ್ಕೆ (ಯಲಹಂಕ ರೈಲ್ವೆ ಸ್ವೇಷನ್) ನಿಗದಿತ ಸಮಯಕ್ಕೆ ತಲುಪಿಸಿದರೆ ಮಾತ್ರ ಹಣ ನೀಡುವಂತೆ ಕೇಳಿದರು. ಈ ವೇಳೆ ಆಟೋ ಚಾಲಕ ಈ ಕಾರ್ಯಕ್ಕಾಗಿ ತಮಗೆ ಇಬ್ಬರಿಗಾಗಿ 2500 ರೂಪಾಯಿ ನೀಡಬೇಕು ಎಂದು ಕೇಳಿದರು.
ಇದೇ ವೇಳೆ ರೈಲು ಮುಂದಿನ ನಿಲ್ದಾಣವನ್ನು ತಲುಪಲು ಕೇವಲ ಅರ್ಧ ಗಂಟೆಯಿರುವಾಗ ವಿಮಾನ ಬುಕ್ ಮಾಡಲು ನೋಡಿದರೆ ರೈಲ್ವೆ ಟಿಕೆಟ್‌ನ (Railway Ticket) ಬೆಲೆಗಿಂತ ಮೂರು ಪಟ್ಟು ಹೆಚ್ಚು ವೆಚ್ಚವಾಗುತ್ತದೆ ಎಂಬುದು ನನಗೂ ಗೊತ್ತಿತ್ತು. ಜೊತೆಗೆ ಸಮಯ 2.20 ಆಗಿತ್ತು. ಜೊತೆಗೆ ವಿಮಾನದಲ್ಲಿ ಹೋಗುವುದರಿಂದ ರೈಲಿನ ಎಸಿ ಟಿಕೆಟ್ (AC Ticket)ಕೂಡ ವೇಸ್ಟ್ ಆಗುತ್ತದೆ ಎಂದು ಚಿಂತಿಸಿದ ನಾನು ಆಗಿದ್ದಾಗಲಿ ಎಂದು ತಮ್ಮನ್ನು ಮುಂದಿನ ರೈಲು ನಿಲ್ದಾಣವನ್ನು ಸಮಯದೊಳಗೆ ತಲುಪಿಸುತ್ತೇವೆ ಎಂದ ಆಟೋ ಚಾಲಕನ (Auto Driver) ನಂಬಿ ಆಟೋ ಏರಿದೆ. ಅಲ್ಲದೇ ಆಟೋ ಚಾಲಕರು ನನ್ನನ್ನು ರೈಲು ನಿಲ್ದಾಣಕ್ಕೆ ನಿಗದಿತ ಸಮಯದೊಳಗೆ ತಲುಪಿಸಲು ಯಶಸ್ವಿಯೂ ಆದರು. ಹೀಗಾಗಿ ಮುಂದಿನ 20 ರಿಂದ 25 ನಿಮಿಷದಲ್ಲಿ ಆಟೋ ಚಾಲಕರು 2500 ರೂಪಾಯಿ ಗಳಿಸುವಲ್ಲಿ ಯಶಸ್ವಿಯೂ ಆದರು ಎಂದು ಹುಸೈನ್ ಬರೆದುಕೊಂಡಿದ್ದಾರೆ.
ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಕ್ಕಾಕೊಂಡಿದ್ದ ಗ್ರಾಹಕರಿಗೆ ರಸ್ತೆಯಲ್ಲೇ ಪಿಜ್ಜಾ ಡೆಲಿವರಿ ಮಾಡಿದ ಡೊಮಿನೋಸ್!
ಇಂತಹ ಆಟೋ ಚಾಲಕನ ಬುದ್ಧಿವಂತಿಕೆಗೆ ಈ ಪ್ರಯಾಣಿಕ ಹುಸೈನ್ (Adil Husain) ಭೇಷ್ ಎಂದಿದ್ದು, ಇಂತಹ ಆಟೋ ಚಾಲಕರು ನನ್ನಂತಹವರನ್ನೇ ಕಾಯುತ್ತಿರುತ್ತಾರೆ. ಈ ರೀತಿ ದಿನವೂ ಒಬ್ಬರು ಸಿಕ್ಕರೂ ಅವರು ತಿಂಗಳಿಗೆ ಆರಾಮವಾಗಿ 75 ಸಾವಿರ ಹಣ ಗಳಿಸುತ್ತಾರೆ ಎಂದು ಹುಸೈನ್ ಬರೆದುಕೊಂಡಿದ್ದಾರೆ. ಈ ಸ್ಟೋರಿ ಈಗ ಸಾಕಷ್ಟು ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.