International Mountain Day: ಅಂತಾರಾಷ್ಟ್ರೀಯ ಪರ್ವತ ದಿನದ ಮಹತ್ವ ಏನು ಗೊತ್ತಾ?

By Suvarna News  |  First Published Dec 11, 2023, 12:34 PM IST

ಪ್ರತಿವರ್ಷ ಡಿಸೆಂಬರ್ 11 ರಂದು ಅಂತರಾಷ್ಟ್ರೀಯ ಪರ್ವತ ದಿನವನ್ನು ಆಚರಿಸಲಾಗುತ್ತದೆ. ಅಂತರಾಷ್ಟೀಯ ಪರ್ವತ ದಿನದ ಮಹತ್ವ, ಈ ಬಾರಿಯ ಥೀಮ್ ಮತ್ತು ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ  


ಜೀವಸಂಕುಲದ  ಉಳಿವಿಗಾಗಿ ಪರ್ವತಗಳು ವಹಿಸುವ ಪಾತ್ರದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಡಿಸೆಂಬರ್ 11 ರಂದು ಅಂತರಾಷ್ಟ್ರೀಯ ಪರ್ವತ ದಿನವನ್ನು (International Mountain Day)ಆಚರಿಸಲಾಗುತ್ತದೆ. ನಮ್ಮ ಜೀವನದಲ್ಲಿ ಪರ್ವತಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು, ಪರ್ವತಗಳ ಅಭಿವೃದ್ಧಿಯಲ್ಲಿರುವ ಅವಕಾಶಗಳು ಮತ್ತು ನಿರ್ಬಂಧಗಳನ್ನು ತಿಳಿಸಲು, ಮಾನವ ಮತ್ತು ಪರಿಸರದ ನಡುವೆ ಬಾಂಧವ್ಯ ಸೃಷ್ಟಿಸುವ ಸಲುವಾಗಿ ಪ್ರತಿ ವರ್ಷ ಆಚರಿಸಲಾಗುತ್ತದೆ.

ಪರ್ವತಗಳು (Mountain) ನಿಸರ್ಗದ ಒಡವೆಗಳಿದ್ದಂತೆ, ಇವು ಭೂಮಿಯ ಭೂ ಮೇಲ್ಮೈಯ ಸುಮಾರು 27 ಪ್ರತಿಶತವನ್ನು ಆವರಿಸಿದೆ ಮಾತ್ರವಲ್ಲದೆ, ವಿಶ್ವದ ಶೇ. 15 ಜನಸಂಖ್ಯೆಗೆ ಮನೆಯು ಹೌದು. ಪರ್ವತಗಳು ಪ್ರಪಂಚದ ಅರ್ಧದಷ್ಟು ಜೀವವೈವಿಧ್ಯತೆಗಳ (Biodiversity) ಹಾಟ್‌ಸ್ಪಾಟ್‌ಗಳಾಗಿವೆ. ಶುದ್ಧ ಗಾಳಿ,ನೀರು ಮತ್ತು ಔಷಧಗಳನ್ನು ಪೂರೈಸುವ ತಾಣವಾಗಿದೆ. ವೈವಿಧ್ಯಮಯ ಸಸ್ಯರಾಶಿ, ಪ್ರಾಣಿಸಂಕುಲಕ್ಕೆ ನೆಲೆಯಾಗಿದೆ. ಅನೇಕ ಸಾಂಸ್ಕೃತಿಕವಾಗಿ ವೈವಿಧ್ಯಮಯ ಸಮುದಾಯಗಳಿಗೆ ನೆಲೆಯಾಗಿದೆ. ಆದಾಗ್ಯೂ, ಪರ್ವತಗಳು ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಬಳಲುತ್ತಿವೆ. ಅದನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದ್ದು, ತಮ್ಮ ಜೀವವೈವಿಧ್ಯತೆಯನ್ನು ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವದ ಜನರಿಗೆ ನೆನಪಿಸಲು ಅಂತರರಾಷ್ಟ್ರೀಯ ಪರ್ವತ ದಿನವನ್ನು ಆಚರಿಸುವುದು ಮಹತ್ವದಾಗಿದೆ.

Latest Videos

undefined

ಇದನ್ನೂ ಓದಿ: ಇನ್ಮುಂದೆ ಕೈಲಾಸ ಯಾತ್ರೆ ಬಹಳ ಸುಲಭ: ಚೀನಾ, ನೇಪಾಳಕ್ಕೆ ಹೋಗ್ದೆ ಉತ್ತರಾಖಂಡದಿಂದ್ಲೇ ಪ್ರಯಾಣಿಸಿ!

ಅಂತರಾಷ್ಟ್ರೀಯ ಪರ್ವತ ದಿನ 2023 ಥೀಮ್ (Theme): ಈ ಬಾರಿಯ ಅಂತರಾಷ್ಟ್ರೀಯ ಪರ್ವತ ದಿನದ ಥೀಮ್ ಪರ್ವತ ಪರಿಸರ ವ್ಯವಸ್ಥೆಯನ್ನು ಮರುಸ್ಥಾಪಿಸುವುದು (Restoring Mountain Ecosystem) ಇದು ಪರ್ವತದ ಪರಿಸರ ವ್ಯವಸ್ಥೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಗುರಿ ಹೊಂದಿದೆ.

ಅಂತರಾಷ್ಟ್ರೀಯ ಪರ್ವತ ದಿನದ ಇತಿಹಾಸ: ವಿಶ್ವಸಂಸ್ಥೆಯ ಅಧಿಕೃತ ವೆಬ್ಸೈಟ್ ಪ್ರಕಾರ, ನ್ಯೂಯಾರ್ಕ್ನಲ್ಲಿರುವ ಯುನೈಟೆಡ್ ನೇಷನ್ಸ್ ಪ್ರಧಾನ ಕಛೇರಿಯು ಡಿಸೆಂಬರ್ 11, 2001 ರಂದು ಅಂತರಾಷ್ಟ್ರೀಯ ಪರ್ವತಗಳ ವರ್ಷವನ್ನು ಆರಂಭಿಸಿತು. ನಂತರ, 2002ರಲ್ಲಿ, ಅಂತರಾಷ್ಟ್ರೀಯ ಪರ್ವತಗಳ ವರ್ಷವನ್ನು ಜಾಗೃತಿ ಮೂಡಿಸುವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಗುರುತಿಸಲಾಯಿತು. ವಿಶ್ವಸಂಸ್ಥೆ ಡಿಸೆಂಬರ್ 11 ಅನ್ನು ಅಂತರಾಷ್ಟ್ರೀಯ ಪರ್ವತ ದಿನ ಎಂದು ಗೊತ್ತುಪಡಿಸಿತು. 

ಇದನ್ನೂ ಓದಿಉತ್ತರಕನ್ನಡ: ಹಿಮಾಚಲ ಪ್ರದೇಶದ ಪರ್ವತ ಏರಿ ಸಾಧನೆಗೈದ ಗೋಕರ್ಣದ ಯುವಕರು..!

ಪರ್ವತ ಅಭಿವೃದ್ಧಿ ಪಡಿಸಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆ  ಅಂತರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿತು. ಮೊದಲ ಅಂತರರಾಷ್ಟ್ರೀಯ ಪರ್ವತ ದಿನವನ್ನು ಡಿಸೆಂಬರ್ 11, 2003 ರಂದು ಆಚರಿಸಲಾಯಿತು. ಪ್ರತಿ ವರ್ಷ ಈ ದಿನಕ್ಕೆ ಒಂದೊಂದು ಥೀಮ್ ನಿಗದಿಪಡಿಸಲಾಗುತ್ತದೆ. 

-ಸಿಂಧು ಕೆ ಟಿ 
ಕುವೆಂಪು ವಿಶ್ವವಿದ್ಯಾಲಯ 

click me!