ಗಂಗಾ, ಯಮುನೆ, ಸರಸ್ವತಿಯ ಒಡಲು ತ್ರಿವೇಣಿ ಸಂಗಮದ ಸಂಪೂರ್ಣ ದರ್ಶನ ಮಾಡಿ ಪುಳಕಿತರಾದ ಭಕ್ತರು

By Suvarna News  |  First Published Jan 20, 2024, 11:54 AM IST

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ಸುತ್ತಲಿನ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುತ್ತಿರುವ ಡಾ.ಬ್ರೋ ಇದೀಗ ತ್ರಿವೇಣಿ ಸಂಗಮದ ದರ್ಶನ ಮಾಡಿಸಿದ್ದಾರೆ.
 


ಗಂಗಾ, ಯಮುನಾ ಮತ್ತು ಸರಸ್ವತಿ ಈ ಮೂರು ನದಿಗಳು ಸೇರುವ ಸ್ಥಳವೇ ತ್ರಿವೇಣಿ ಸಂಗಮ. ಅಲಹಾಬಾದ್‌ನ ಅತ್ಯಂತ ಪ್ರಸಿದ್ಧ ಪವಿತ್ರ ಸ್ಥಳಗಳಲ್ಲಿ ಒಂದು ಎನಿಸಿರುವ ತ್ರಿವೇಣಿ ಸಂಗಮವು,  ಹಿಂದೂಗಳಿಗೆ ಪವಿತ್ರ ಎಂದೇ ಹೇಳಲಾಗುತ್ತದೆ.  ಇಲ್ಲಿನ ಒಂದು ಸ್ನಾನ ಒಬ್ಬರ ಎಲ್ಲ ಪಾಪಗಳನ್ನು ತೊಳೆದುಹಾಕುತ್ತದೆಂದು ಮತ್ತು  ಪುನರ್ಜನ್ಮದ ಚಕ್ರದಿಂದ ಮುಕ್ತಗೊಳಿಸುತ್ತ ಎಂದೂ ನಂಬಲಾಗಿದೆ. ಹಿಂದೂ ಪುರಾಣಗಳ ಪ್ರಕಾರ ಸರ್ವಶಕ್ತನ ಕೈಯಿಂದ ಮಕರಂದ ಬಿದ್ದ ಸ್ಥಳವೇ ಸಂಗಮ ಎಂದು ಪ್ರಸಿದ್ಧವಾಗಿದೆ. ಸಾವಿನ ನಂತರ ಸ್ವರ್ಗಕ್ಕೆ ಸ್ಪಷ್ಟವಾದ ಮಾರ್ಗವನ್ನು ಕಂಡುಕೊಳ್ಳುವ ಮತ್ತು ಜೀವನ ಮತ್ತು ಸಾವಿನ ಶಾಶ್ವತ ಚಕ್ರದಿಂದ ಹೊರಬರಲು ಇದು ಒಂದು ಸ್ಥಳವಾಗಿದೆ ಎನ್ನಲಾಗುತ್ತದೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಪವಿತ್ರ ಸ್ಥಳಗಳ ಪರಿಚಯವನ್ನು ಮಾಡಿಸುತ್ತಿರುವ ಕನ್ನಡದ ಕಣ್ಮಣಿ ಡಾ.ಬ್ರೋ ಇದೀಗ ಈ ಪವಿತ್ರ ಸ್ಥಳವಾಗಿರುವ ತ್ರಿವೇಣಿ ಸಂಗಮದ ಪರಿಚಯ ಮಾಡಿಸಿದ್ದಾರೆ.

ತ್ರಿವೇಣಿ ಸಂಗಮ ಎಂದರೆ ಮಹಾಕುಂಭಮೇಳದ ಕೇಂದ್ರಬಿಂದು.  12 ವರ್ಷಗಳಿಗೆ ಒಮ್ಮೆ  ನಡೆಯುವ ಪ್ರಸಿದ್ಧ ಮತ್ತು ಅತ್ಯಂತ ಪವಿತ್ರವಾದ ಕುಂಭಮೇಳ ಇಲ್ಲಿ ನಡೆಯುತ್ತದೆ.  ಈ ಮೇಳಕ್ಕೆ  ಪ್ರಪಂಚದ ಮೂಲೆ ಮೂಲೆಗಳಿಂದ ಕೋಟ್ಯಂತರ ಮಂದಿ ಆಗಮಿಸುತ್ತಾರೆ.  ಇಲ್ಲಿಯೇ ಕೆಲವೇ ಅಂತರಗಳ ದೂರದಲ್ಲಿ  ಹನುಮಾನದ ದೇವಾಲಯವೂ ಇದೆ. ಇದರ ವಿಶೇಷತೆ ಎಂದರೆ  ಗಂಗಾ ನದಿಯ ನೀರಿನ ಮಟ್ಟ ಏರಿದಾಗ ಈ ದೇವಾಲಯ ಮುಳುಗುತ್ತದೆ. ಇದಕ್ಕೆ ಸಂಬಂಧಿಸಿದ ಒಂದು ಪೌರಾಣಿಕ ಕಥೆ ಕೂಡ ಇದೆ.  ಗಂಗಾ ನದಿಯ ನೀರು ಭಗವಾನ್ ಹನುಮಾನ್ ವಿಗ್ರಹದ ಪಾದವನ್ನು ಮುಟ್ಟಲು ಏರುತ್ತದೆ ಎಂದು ಹೇಳಲಾಗುತ್ತದೆ. ಇಂಥದ್ದೊಂದು ಸ್ಥಳದ ಸಂಪೂರ್ಣ ದರ್ಶನ ಮಾಡಿಸಿದ್ದಾರೆ ಡಾ.ಬ್ರೋ.

Tap to resize

Latest Videos

ಹೊಸ ವರ್ಷಕ್ಕೆ ಹೊಸ ಸರ್​ಪ್ರೈಸ್​: ಅಯೋಧ್ಯೆ ಪುಣ್ಯಭೂಮಿಯಲ್ಲಿ ಡಾ.ಬ್ರೋ- ರಾಮಾಯಣ ನಂಟಿರೋ ನೇಪಾಳಕ್ಕೂ ಭೇಟಿ

ಬಳಿಕ ಪ್ರಯಾಗರಾಜಕ್ಕೆ ಭೇಟಿ ಕೊಟ್ಟು ಭಾರದ್ವಾಜ ಮುನಿಗಳನ್ನು ರಾಮ-ಸೀತಾ ಭೇಟಿ ಮಾಡಿದ ಸ್ಥಳದ ಕುರಿತೂ ಮಾಹಿತಿ ನೀಡಿದರು. 14 ವರ್ಷ ವನವಾಸಕ್ಕೆ ಹೋಗುವ ಪೂರ್ವದಲ್ಲಿ ರಾಮ-ಸೀತಾ ಇಲ್ಲಿಗೆ ಭೇಟಿ ಕೊಟ್ಟಾಗ ಭಾರದ್ವಾಜ ಮುನಿಗಳು ಬೇಸರಿಸಿಕೊಂಡಿದ್ದನ್ನು ತಿಳಿಸಿದರು.  ಅರ್ಧ ಕುಂಭಮೇಳ, ಪೂರ್ಣ ಕುಂಭಮೇಳ, ಮಹಾ ಕುಂಭಮೇಳದ ಸಂಪೂರ್ಣ ಮಾಹಿತಿ ನೀಡಿ ಅಲ್ಲಿಯ ಸೌಂದರ್ಯವನ್ನು ಪರಿಚಯಿಸಿದ್ದಾರೆ ಡಾ.ಬ್ರೋ. 

ಈ ಹಿಂದಿನ ವಿಡಿಯೋದಲ್ಲಿ ಗಗನ್​ ಅವರು,  ಅಯೋಧ್ಯೆಯ ಹಲವಾರು ಸ್ಥಳ, ದೇಗುಲಗಳ ದರ್ಶನ ಮಾಡಿಸಿದ್ದರು.  ಇಲ್ಲಿ ಹಲವಾರು ದೇಗುಲಗಳು ಇದ್ದರೂ ಮೊದಲಿಗೆ ಹನುಮಾನ ಗಡಿಯಲ್ಲಿ ಹನುಮಂತನ ದರ್ಶನ ಮಾಡಿಯೇ ಜನರು ಮುಂದಿನ ದರ್ಶನ ಮಾಡುತ್ತಾರೆ. ಹನುಮಂತ ಭೂಲೋಕದಲ್ಲಿ ಶ್ರೀರಾಮನ ಜಪ ಮಾಡುತ್ತಾ ಇರುವ ಸ್ಥಳ ಇದು. ಅಯೋಧ್ಯೆಯಲ್ಲಿ ವಿರಾಜಮಾನ ನಿಲ್ಲಿಸಿರುವ ಹನುಮಂತನ ನೋಡಿ ಎನ್ನುತ್ತಲೇ ಹನುಮಂತನ ದರ್ಶನವನ್ನೂ ಮಾಡಿಸಿದ್ದರು. ಇದೇ ಸಂದರ್ಭದಲ್ಲಿ ನಮಗೆ ಇದಾಗಲೇ ಹನುಮಂತನ ಅಪ್ಪಣೆಯಾಗಿದೆ. ರಾಮನ ಹುಡುಕಿಕೊಂಡು ಹೋಗುವುದೇ ನಮ್ಮ ಕೆಲಸ ಎನ್ನುತ್ತಲೇ ಹಲವಾರು ವಿಷಯಗಳನ್ನು ತಿಳಿಸಿದ್ದರು. 

ಶ್ರೀರಾಮ 11 ವರ್ಷ ವನವಾಸ ಮಾಡಿದ ಚಿತ್ರಕೂಟ ಹೇಗಿದೆ? ಗುಪ್ತ ಗೋದಾವರಿಯೂ ಇಲ್ಲೇ ಇದ್ದಾಳೆ!
 

click me!