
ಅಯೋಧ್ಯೆಯ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಮಧ್ಯೆಯೇ ಎಲ್ಲೆಲ್ಲೂ ರಾಮನಾಮ ಜಪಿಸಲಾಗುತ್ತಿದೆ. ವಿದೇಶಿಗಳಲ್ಲಿಯೂ ಶ್ರೀರಾಮ ಪಠಣೆ ನಡೆದಿದೆ. ಶ್ರೀರಾಮನಚಂದ್ರನ ಕುರುಹು ಇರುವ ವಿಶ್ವದ ಜಾಗಗಳೆಲ್ಲವೂ ಈಗ ಒಂದೊಂದಾಗಿಯೇ ಮುನ್ನೆಲೆಗೆ ಬರುತ್ತಿದೆ. ಅಂಥ ಸ್ಥಳಗಳಲ್ಲಿ ಒಂದು ಚಿತ್ರಕೂಟ. ಇದು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿದೆ. ಈ ಚಿತ್ರಕೂಟದ ಕುತೂಹಲದ ಮಾಹಿತಿ ನೀಡಿದ್ದಾರೆ ಡಾ. ಬ್ರೋ. ಇದಾಗಲೇ ಶ್ರೀರಾಮ ಚಂದ್ರನ ಕುರಿತಾದ ಹಲವು ಜಾಗಗಳನ್ನು ಪರಿಚಯಿಸಿರುವ ಡಾ.ಬ್ರೋ ಇದೀಗ ಚಿತ್ರಕೂಟದ ಮಾಹಿತಿ ನೀಡಿದ್ದಾರೆ.
ಅಂದಹಾಗೆ, ಚಿತ್ರಕೂಟವು ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಭಗವಾನ್ ರಾಮ, ಸೀತೆ ಮತ್ತು ಲಕ್ಷ್ಮಣರ ನೆನಪುಗಳು ಈ ಸ್ಥಳದ ಪ್ರತಿಯೊಂದು ಮೂಲೆಯಲ್ಲಿ ನೆಲೆಸಿದೆ. ಚಿತ್ರಕೂಟ ಧಾಮವು ಮಂದಕನಿ ನದಿಯ ದಡದಲ್ಲಿದೆ. ಒಂದು ಕಾಲದಲ್ಲಿ ಇಲ್ಲಿ ಅನೇಕ ಅಶೋಕ ವೃಕ್ಷಗಳು ಇದ್ದುದರಿಂದ ಈ ಸ್ಥಳಕ್ಕೆ ಚಿತ್ರಕೂಟ ಎಂದು ಹೆಸರಿಸಲಾಯಿತು. ಇದನ್ನು ಸಂತರ ನಗರ ಎಂದೂ ಕರೆಯುತ್ತಾರೆ. ಚಿತ್ರಕೂಟವು ಸಂಸ್ಕೃತ ಪದವಾಗಿದ್ದು, ಪರ್ವತ ವೀಕ್ಷಣೆಗಳ ವಿಶಿಷ್ಟ ಕೇಂದ್ರವಾಗಿದೆ ಎಂಬ ಮಾಹಿತಿ ಇದೆ. ಇದರ ಬಗ್ಗೆ ಡಾ.ಬ್ರೋ ವಿವರಣೆ ನೀಡಿದ್ದಾರೆ. ಹನ್ನೊಂದುವರೆ ವರ್ಷ ಜಾಗ ಇದಾಗಿದ್ದು, ಇಲ್ಲಿ ಶ್ರೀರಾಮನ ಕುರುಹುಗಳು ಇಂದಿಗೂ ಇರುವ ಬಗ್ಗೆ ಅವರು ವಿವರಣೆ ನೀಡಿದ್ದಾರೆ. ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಈ ಗುಹೆಯ ಸೌಂದರ್ಯವನ್ನು ವರ್ಣಿಸಿದ್ದಾರೆ. ಇದೇ ವೇಳೆ ಸೀತಾಮಾತೆ ಸ್ನಾನ ಮಾಡುತ್ತಿದ್ದ ಜಾಗವನ್ನು ತೋರಿಸಿರುವ ಡಾ.ಬ್ರೋ. ಒಂದು ದಿನ ಮಯಾಂಕ್ ರಾಕ್ಷಸ ಸೀತಾಮಾತೆಯ ಬಟ್ಟೆ ಕದ್ದ ಕಥೆ ಹೇಳಿದ್ದಾರೆ. ಆಗ ಲಕ್ಷ್ಮಣ ಮಯಾಂಕ್ ರಾಕ್ಷಸನನ್ನು ಕೊಂದು ಹಾಕಿದ ಕಥೆ ಹೇಳಿದ್ದಾರೆ. ಇಲ್ಲಿಯೇ ಗೋದಾವರಿ ಗುಪ್ತವಾಗಿ ಹರಿಯುತ್ತಿರುವ ವಿಷಯವನ್ನೂ ತಿಳಿಸಿರುವ ಗಗನ್, ಈ ಸ್ಥಳವನ್ನು ಗುಪ್ತ ಗೋದಾವರಿ ಎಂದೂ ಹೇಳುವುದಾಗಿ ವಿವರಿಸಿದ್ದಾರೆ.
ದೇವಸ್ಥಾನ ಪ್ರವೇಶ ನಿಷಿದ್ಧವೆಂದು ದೇಹವನ್ನೇ ರಾಮನ ಗುಡಿ ಮಾಡಿಕೊಂಡ ಜನಾಂಗದ ಇಂಟರೆಸ್ಟಿಂಗ್ ವಿಷ್ಯವಿದು!
ಇನ್ನು ಚಿತ್ರಕೂಟದ ಇತಿಹಾಸದ ಕುರಿತು ಹೇಳುವುದಾದರೆ, ಪ್ರಾಚೀನ ಕಾಲದಲ್ಲಿ ಚಿತ್ರಕೂಟವು ಕೌಶಲ ಸಾಮ್ರಾಜ್ಯದ ಅಡಿಯಲ್ಲಿತ್ತು. ಪುರಾತತ್ವ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಈ ಜಾಗ ಹೊಂದಿದೆ. ಪ್ರತಿ ಅಮವಾಸ್ಯೆಯ ದಿನ ಲಕ್ಷಾಂತರ ಭಕ್ತರು ಇಲ್ಲಿ ಸೇರುತ್ತಾರೆ. ದೀಪಾವಳಿ, ಶರದ್ ಪೂರ್ಣಿಮಾ, ಮಕರ ಸಂಕ್ರಾಂತಿ ಮತ್ತು ರಾಮ ನವಮಿಯಂದು ವಿಶೇಷ ಕಾರ್ಯಕ್ರಮಗಳನ್ನು ಚಿತ್ರಕೂಟದಲ್ಲಿ ಆಯೋಜಿಸಲಾಗುತ್ತದೆ.
ಗೋಸ್ವಾಮಿ ತುಳಸಿದಾಸರು ಚಿತ್ರಕೂಟವನ್ನು ವಿವರಿಸುವಾಗ, ಜಗತ್ತಿನಲ್ಲಿ ಕತ್ತಲೆ ಆವರಿಸಿದರೂ, ಶ್ರೀರಾಮನ ಕೃಪೆಯಿಂದ ಚಿತ್ರಕೂಟಕ್ಕೆ ಏನೂ ಆಗುವುದಿಲ್ಲ ಎಂದು ಬರೆದಿದ್ದಾರೆ. ಪುರಾಣಗಳ ಪ್ರಕಾರ, ಸತಿ ಅನಸೂಯಾ ಚಿತ್ರಕೂಟದಲ್ಲಿಯೇ ಬ್ರಹ್ಮ, ವಿಷ್ಣು ಮತ್ತು ಮಹೇಶರಿಗೆ ಜನ್ಮ ನೀಡಿದಳು. ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿದಾಸರು ಚಿತ್ರಕೂಟದಲ್ಲಿ ಜನಿಸಿದರು. ಅವರ ತಂದೆ ಆತ್ಮಾರಾಮ್ ದುಬೆ ಅವರು ಪ್ರತಿಷ್ಠಿತ ಸರಯುಪರಿನ್ ಬ್ರಾಹ್ಮಣರಾಗಿದ್ದರು. ಅವರು ಹುಟ್ಟಿದ ತಕ್ಷಣ, ತುಳಸಿದಾಸರು ರಾಮ್ ಎಂಬ ಹೆಸರನ್ನು ಉಚ್ಚರಿಸಿದರು, ನಂತರ ಅವರ ಹೆಸರು ರಾಂಬೋಲ್ ಆಯಿತು. ತುಳಸಿದಾಸರು ಶ್ರೀ ರಾಮಚರಿತಮಾನಸ್, ಹನುಮಾನ್ ಚಾಲೀಸಾ, ಗೀತಾವಲಿ ಮತ್ತು ತುಳಸಿ ದೋಹವಲಿ ಸೇರಿದಂತೆ ಅನೇಕ ಇತರ ಮಹಾಕಾವ್ಯಗಳನ್ನು ರಚಿಸಿದ್ದಾರೆ.
ರಾಮ ಭಕ್ತರ ಆಸೆ ಕೊನೆಗೂ ಈಡೇರಿಸಿದ ಡಾ.ಬ್ರೋ: ರಾಮಲಲ್ಲಾ ಮಂದಿರದ ಮುಖ್ಯದ್ವಾರದಲ್ಲಿ ಗಗನ್ ವಿವರಣೆ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.