
ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಚೀನಾ ಭಾರೀ ಮುಂದಿದೆ ಎನ್ನುವ ಸಂಗತಿ ಎಲ್ಲರಿಗೂ ಗೊತ್ತು. ಅಲ್ಲಿನ ಹಳ್ಳಿ, ಪಟ್ಟಣಗಳನ್ನು ಸುತ್ತಿ ಬಂದವರ ಅನುಭವದ ಮಾತುಗಳು ಸಹ ಇದನ್ನೇ ಹೇಳುತ್ತವೆ. ಚೀನಾ ದೇಶ ಅತ್ಯಂತ ಉತ್ತಮ ಇಂಜಿನಿಯರಿಂಗ್ ಕೌಶಲವನ್ನು ಸಹ ತನ್ನದಾಗಿಸಿಕೊಂಡಿದೆ. ವಿಶ್ವದಲ್ಲೇ ಅದ್ಭುತ ಎನಿಸುವ ರಚನೆಗಳನ್ನು ನಿರ್ಮಿಸಿ ತೋರಿಸಿದೆ. ಭಾರತದ ಜತೆ ಚೀನಾದ ಸಂಬಂಧ ಚೆನ್ನಾಗಿರದಿದ್ದರೂ ಆ ದೇಶದ ಜನರ ಕೌಶಲ್ಯವನ್ನು ಮೆಚ್ಚಿಕೊಳ್ಳದಿರಲು ಸಾಧ್ಯವಿಲ್ಲ. ಎಷ್ಟೋ ಜನ ಚೀನಾಕ್ಕೆ ಹೋಗಿ ಬಂದವರು ಅಲ್ಲಿನ ನಗರಗಳ ಸೌಂದರ್ಯ, ಹಳ್ಳಿಗಳ ಸ್ವಚ್ಛತೆಯನ್ನು ಕೊಂಡಾಡುತ್ತಾರೆ. ಅಲ್ಲಿನ ಹೋಟೆಲ್ ಗಳಲ್ಲಿ ಬಡವರಿಗಾಗಿ ಇರುವ ವ್ಯವಸ್ಥೆಯನ್ನು ಮೆಚ್ಚಿಕೊಳ್ಳುತ್ತಾರೆ. ಇದೀಗ, ಚೀನಾದ ಬಗ್ಗೆ ಭಾರತೀಯರು ಮೆಚ್ಚಿಕೊಳ್ಳುವ ಮತ್ತೊಂದು ಅಂಶವನ್ನು ಪ್ರವಾಸಿಗರೊಬ್ಬರು ಹಂಚಿಕೊಂಡಿದ್ದಾರೆ. ಚೀನಾಕ್ಕೆ ತೆರಳಿದ್ದ ಭಾರತೀಯ ಪ್ರವಾಸಿಗರೊಬ್ಬರು ಅಲ್ಲಿನ ವಿಮಾನನಿಲ್ದಾಣದ ಸ್ಕ್ಯಾನ್ ಮಷಿನ್ (Scan Machine) ನಲ್ಲಿ ನಮ್ಮ ದೇಶದ ಪಾಸ್ ಪೋರ್ಟ್ ಅನ್ನು ಹಾಕಿದಾಗ ಆ ಮಷಿನ್ ಅವರೊಂದಿಗೆ ಹಿಂದಿ ಭಾಷೆಯಲ್ಲಿ ಮಾತನಾಡಲು ಆರಂಭಿಸಿತು ಎನ್ನುವ ಕುತೂಹಕಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಚೀನಾಕ್ಕೆ (China) ಹೋಗಿದ್ದ ಶಂತನು ಗೋಯೆಲ್ ಎನ್ನುವವರು ತಮ್ಮ ಈ ಅನುಭವವನ್ನು ಸೋಷಿಯಲ್ ಮೀಡಿಯಾ (Social Media) ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಅವರ ಈ ವಿಚಾರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, 7 ಲಕ್ಷಕ್ಕೂ (Lakh) ಅಧಿಕ ಜನ ವೀಕ್ಷಣೆ ಮಾಡಿದ್ದಾರೆ. ಚೀನಾದ ಯಾವ ವಿಮಾನ ನಿಲ್ದಾಣದಲ್ಲಿ (Airport) ಈ ಅನುಭವವಾಗಿದೆ ಎನ್ನುವುದನ್ನು ಅವರು ಹೇಳಿಲ್ಲ. ಆದರೆ, ಅಲ್ಲಿನ ಅತ್ಯಾಧುನಿಕ ವ್ಯವಸ್ಥೆ (Developed Facility) ಮಾತ್ರ ಅಚ್ಚರಿ ತರಿಸಿದೆ.
ವಿಮಾನನಿಲ್ದಾಣ ಹಾಗೂ ಮಷಿನ್ (Machine) ಚಿತ್ರವನ್ನು ಪೋಸ್ಟ್ ಮಾಡಿರುವ ಶಂತನು ಗೋಯೆಲ್, “ಚೀನಾದಲ್ಲಿ ನಾನು ಅಚ್ಚರಿಗೆ ಒಳಗಾದೆ. ಸ್ಕ್ಯಾನ್ ಮಷಿನ್ ಹಿಂದಿಯಲ್ಲಿ (Hindi) ಮಾತನಾಡಲು ಆರಂಭಿಸಿತು. ಅದರಲ್ಲಿ ಭಾರತೀಯರಿಗಾಗಿ ಹಿಂದಿ ಭಾಷೆಯನ್ನು (Language) ಡಿಫಾಲ್ಟ್ ಆಗಿ ಅಳವಡಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಹಿಂದೂ-ಮುಸ್ಲಿಂ ಮಗಳಿಗೆ ಕ್ರೈಸ್ತ ಸಂಪ್ರದಾಯದ ಮದುವೆ: ಆಮೀರ್ ಖಾನ್ ಕಣ್ಣೀರಿಂದೇ ಭಾರಿ ಚರ್ಚೆ!
ಆಯಾ ದೇಶದ ಭಾಷೆಯೊಂದಿಗೆ ವ್ಯವಹಾರ!
ಚೀನಾದಲ್ಲಿರುವ ಇಂತಹ ಸೌಲಭ್ಯದ ಬಗ್ಗೆ ಜನರು ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನೂ ಕೇಳಲು ಆರಂಭಿಸಿದ್ದಾರೆ. ಮಷಿನ್ ನಲ್ಲಿ ಹಿಂದಿ ಭಾಷೆಯ ಹೊರತಾಗಿ ಬೇರೆ ಯಾವುದಾದರೂ ಭಾಷೆಯನ್ನು ಅಳವಡಿಸಲಾಗಿದೆಯೇ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಶಂತನು ಅವರು, “ಇಂಟರ್ ಫೇಸ್ ನಲ್ಲಿ ಅಂತಹ ಯಾವುದೇ ಅಂಶವನ್ನು ನೋಡಿಲ್ಲ. ಸ್ಕ್ಯಾನ್ (Scan) ಮಾಡುತ್ತಿರುವ ಪಾಸ್ ಪೋರ್ಟ್ ನ (Passport) ದೇಶದ ಅಧಿಕೃತ ಭಾಷೆಯ ಮೂಲಕ ಮಷಿನ್ ವ್ಯವಹರಿಸುತ್ತದೆ’ ಎಂದು ತಿಳಿಸಿದ್ದಾರೆ. ಉದಾಹರಣೆಗೆ, ಸ್ಪ್ಯಾನಿಷ್, ಜರ್ಮನ್, ಫ್ರೆಂಚ್ ಹೀಗೆ ಹಲವು ದೇಶಗಳ ಅಧಿಕೃತ ಭಾಷೆಗಳಲ್ಲಿ ಮಷಿನ್ ವ್ಯವಹರಿಸಬಲ್ಲದು.
2019ರಿಂದಲೂ ಇದೆ
“ಭಾರತೀಯ (Indian) ಪಾಸ್ ಪೋರ್ಟ್ ಗಾಗಿ ಹಿಂದಿ ಡಿಫಾಲ್ಟ್ (Default) ಭಾಷೆಯಾಗಿತ್ತು. ಬೇರೆ ಭಾಷೆಗಳೂ ಇವೆಯೇ ಎನ್ನುವುದು ಇಂಟರ್ ಫೇಸ್ ನಲ್ಲಿ ಕಾಣಿಸುತ್ತಿರಲಿಲ್ಲ’ ಎಂದು ಶಂತನು ಹೇಳಿರುವುದಕ್ಕೆ ಪ್ರತಿಯಾಗಿ ಒಬ್ಬರು ಮತ್ತೊಂದು ಕುತೂಹಲಕರ (Interesting) ಸಂಗತಿಯನ್ನು ಹಂಚಿಕೊಂಡಿದ್ದಾರೆ.
ತೆಂಗಿನ ಮರಗಳ ಮಧ್ಯೆ ಲೆಹೆಂಗಾದಲ್ಲಿ ಮಿಂಚಿದ ಪೂಜಾ ಹೆಗ್ಡೆ: ಇದು ನಮ್ಮ ತುಳುನಾಡು ಎಂದ ಫ್ಯಾನ್ಸ್!
ಅದೆಂದರೆ, ಚೀನಾದಲ್ಲಿ ಇಂತಹ ಮಷಿನ್ ಹೊಸದಲ್ಲ. ಇದು ಸಾಮಾನ್ಯ ಸಂಗತಿ. 2019ರಿಂದಲೂ ಈ ಮಷಿನ್ ಇದೆ. ಚೀನಾದಲ್ಲಿ ಮಾತ್ರವಲ್ಲ, ಸಿಂಗಾಪುರ, ಥಾಯ್ಲೆಂಡ್ ಗಳಲ್ಲೂ ಈ ರೀತಿಯ ಸೌಲಭ್ಯ ಇದೆ ಎಂದು ಹೇಳಿದ್ದಾರೆ. ಒಬ್ಬರು ಸೋಷಿಯಲ್ ಮೀಡಿಯಾ ಬಳಕೆದಾರರು “ಕೆಲವು ನಾಚಿಕೆಯಿಲ್ಲದ ಜನ ಭಾರತದಲ್ಲೇ ಇದ್ದರೂ ಹಿಂದಿ ಮಾತನಾಡಲು ಮುಜುಗರ ಪಡುತ್ತಾರೆ’ ಎಂದು ಬೇಸರಿಸಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.