ಶಿವ ಭಕ್ತರು, ಮಹಾದೇವನ ದೇವಸ್ಥಾನ ಹುಡುಕಿ ಕೊಂಡು ಹೋಗ್ತಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದರೆ ನಮ್ಮ ನೆರೆ ರಾಷ್ಟ್ರದಲ್ಲಿರುವ ಅನನ್ಯ ದೇವಸ್ಥಾನಕ್ಕೆ ಭೇಟಿ ನೀಡಿ. ಅಲ್ಲಿಗೆ ಹೋಗಲು ದೇಹಕ್ಕೆ ಶಕ್ತಿ ಅಗತ್ಯವಿದ್ರೂ ಹೋದ್ಮೇಲೆ ಎಲ್ಲ ಮರೆತುಹೋಗುವಂತಹ ದೇವಸ್ಥಾನ ಅದು.
ಭಾರತ ಅಧ್ಬುತಗಳ ನಾಡು. ಇಲ್ಲಿ ಲಕ್ಷಾಂತರ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ತನ್ನದೇ ಆತ ಭಿನ್ನತೆಯನ್ನು ಹೊಂದಿದೆ. ಕೆಲ ದೇವಸ್ಥಾನಗಳಲ್ಲಿ ನಡೆಯುವ ಘಟನೆಗಳು ನಮ್ಮ ಕಲ್ಪನೆಗೆ ನಿಲುಕದ್ದಾಗಿರುತ್ತವೆ. ಹೀಗೂ ಇದ್ಯಾ ಎಂದು ಪ್ರಶ್ನೆಯನ್ನು ಹುಟ್ಟುಹಾಕುತ್ತೆ. ದೇವಸ್ಥಾನಕ್ಕೆ ಭೇಟಿ ನೀಡಲು ಇಷ್ಟವಿಲ್ಲ ಎನ್ನುವವರನ್ನು ಕೂಡ ಕೆಲ ದೇವಸ್ಥಾನಗಳಲ್ಲಿರುವ ಸಕಾರಾತ್ಮಕ ಶಕ್ತಿ, ಅಚ್ಚರಿ ಎನ್ನಿಸುವ ವಾಸ್ತುಶಿಲ್ಪಕ್ಕೆ ಮಾರು ಹೋಗ್ತಾರೆ. ಅಲ್ಲಿನ ಪವಾಡಗಳನ್ನು ನೋಡಿ ಬೆರಗಾಗ್ತಾರೆ. ನಾವೀಗ ಅಂತಹದ್ದೇ ಒಂದು ದೇವಸ್ಥಾನದ ಬಗ್ಗೆ ನಿಮಗೆ ಹೇಳ್ತೇವೆ. ಜೀವನದಲ್ಲಿ ಒಂದು ಬಾರಿಯಾದ್ರೂ ನೀವು ಈ ದೇವಸ್ಥಾನಕ್ಕೆ ಭೇಟಿ ನೀಡಿ.
ಮಹಾದೇವ (Mahadeva ) ನ ಅನನ್ಯ ಮಂದಿರ ಇದು: ಈಗ ನಾವು ಹೇಳ ಹೊರಟಿರುವುದು ಕೇದಾರೇಶ್ವರ (Kedareshwar) ಗುಹೆ ದೇವಾಲಯದ ಬಗ್ಗೆ. ಇದು ಮಹಾರಾಷ್ಟ್ರ (Maharashtra)ದ ಅಹಮದ್‌ನಗರ ಜಿಲ್ಲೆಯ ಹರಿಶ್ಚಂದ್ರಗಡ ಎಂಬ ಬೆಟ್ಟದ ಕೋಟೆಯಲ್ಲಿ ನೆಲೆ ನಿಂತಿದೆ. ಕೇದಾರೇಶ್ವರ ಗುಹೆ ದೇವಾಲಯವು ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ. ಇದು ಒಂದು ಗುಹೆಯಲ್ಲಿ ನೆಲೆಗೊಂಡಿದ್ದು ಮಾತ್ರವಲ್ಲದೆ ವರ್ಷಪೂರ್ತಿ ಇಲ್ಲಿ ನೀರಿರುತ್ತದೆ. ಇದು ತುಂಬಾ ಹಳೆಯ ದೇವಾಲಯ .ಈ ಗುಹೆಗಳು ಶಿಲಾಯುಗಕ್ಕೆ ಸೇರಿದವು ಎಂದು ಹೇಳಲಾಗುತ್ತದೆ. ಗುಹೆಯ ಮಧ್ಯಭಾಗದಲ್ಲಿ ಸುಮಾರು ಐದು ಅಡಿಗಳ ಶಿವಲಿಂಗವಿದೆ. ಶಿವಲಿಂಗವನ್ನು ತಲುಪಲು ನೀವು ನೀರಿನಲ್ಲಿ ಹೋಗ್ಬೇಕು. ನಿಮ್ಮ ಸೊಂಟದವರೆಗೆ ಬರುವಷ್ಟು ನೀರು ಅಲ್ಲಿರುತ್ತದೆ ನೀರಿನಲ್ಲೇ ನಿಂತು ನೀವು ಶಿವಲಿಂಗದ ದರ್ಶನಪಡೆಯಬೇಕು.
ತಂತ್ರಜ್ಞಾನದಲ್ಲಿ ಮುಂದುವರೆದ ಈ ದೇಶದಲ್ಲಿ ಜನರು ಎಸ್ಕಲೇಟರ್‌ನಲ್ಲಿ ಓಡಾಡೋಹಾಗಿಲ್ಲ!
ಒಂದೇ ಕಂಬದ ಮೇಲೆ ನಿಂತಿದೆ ದೇವಸ್ಥಾನ : ಈ ದೇವಸ್ಥಾನದ ಇನೊಂದು ವಿಶೇಷವೆಂದ್ರೆ ಇದು ಒಂದೇ ಕಂಬದ ಮೇಲಿದೆ. ಲಿಂಗದ ಸುತ್ತಲೂ ನಾಲ್ಕು ಕಂಬಗಳಿದ್ದವು ಎಂಬುದಕ್ಕೆ ಸಾಕ್ಷ್ಯವಿದೆ. ಆದ್ರೆ ಈಗ ಒಂದು ಕಂಬ ಮಾತ್ರ ಉಳಿದಿದೆ. ಈ ಒಂದು ಕಂಬವೇ ಇಡೀ ಗುಹೆಯ ಭಾರವನ್ನು ಹೊತ್ತು ನಿಂತಿದೆ. ಕಂಬಗಳು ಯುಗಗಳು ಅಥವಾ ಸಮಯದ ಸಂಕೇತಗಳಾಗಿವೆ ಎಂದು ನಂಬಿಲಾಗಿದೆ. ಆಯಾ ಯುಗ ಮುಗಿದಂತೆ ಕಂಬ ನಾಶವಾಗುತ್ತದೆ. ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿಯುಗದ ಸಂಕೇತ ಈ ಕಂಬಗಳು. ಸತ್ಯಯುಗ, ತ್ರೇತಾಯುಗ ಹಾಗೂ ದ್ವಾಪರ ಯುಗ ಮುಗಿಯುತ್ತಿದ್ದಂತೆ ತಲಾ ಒಂದೊಂದು ಕಂಬ ನಾಶವಾಯ್ತು ಎಂದು ಹೇಳಲಾಗುತ್ತದೆ. ಪ್ರಸ್ತುತ ಇರುವ ಒಂದೇ ಕಂಬ ಇದು ಕೊನೆಯ ಮತ್ತು ಅಂತಿಮ ಯುಗವನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ. ಈ ಕಂಬ ಮುರಿದಾಗ ಪ್ರಪಂಚ ಅಂತ್ಯಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಈ ಗುಹೆಯ ಗೋಡೆಯ ಮೇಲೆ ನೀವು ಶಿಲ್ಪಕಲೆಗಳನ್ನು ಕೂಡ ನೋಡಬಹುದು.
ಈ ದೇವಸ್ಥಾನದ ಇನ್ನೊಂದು ವಿಶೇಷವೇನು ಗೊತ್ತಾ? : ಕೇದಾರನಾಥ ಗುಹೆಯಲ್ಲಿ ಸಾಕಷ್ಟು ಕುತೂಹಲಕಾರಿ ಅಂಶ ಅಡಗಿದೆ. ಇಲ್ಲಿನ ಶಿವಲಿಂಗದ ಎಲ್ಲ ಕಡೆ ನೀರಿದ್ದು, ಆ ನೀರು ಬೇಸಿಗೆಯಲ್ಲಿ ತಣ್ಣಗೆ ಹಾಗೂ ಚಳಿಗಾಲದಲ್ಲಿ ಬೆಚ್ಚಗಿರುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ವಿಜ್ಞಾನಿಗಳು ಕೂಡ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇನ್ನೊಂದು ವಿಶೇಷವೆಂದ್ರೆ ಮಳೆ ಎಷ್ಟೇ ಬಂದ್ರೂ ಈ ಶಿವಲಿಂಗ ಮಾತ್ರ ನೀರಿನಲ್ಲಿ ಮುಳುಗೋದಿಲ್ಲ. ಮಳೆ ಬಂದು ನೀರು ಹೆಚ್ಚಾಗ್ತಿದ್ದಂತೆ ಶಿವಲಿಂಗ ಕೂಡ ಎತ್ತರಕ್ಕೆ ಏರುತ್ತದೆ.
ನವರಾತ್ರಿ ಸಮಯದಲ್ಲಿ ಮದುವೆ ಯಾಕೆ ನಡೆಯೋದಿಲ್ಲ? ಇಲ್ಲಿದೆ ಸಂಪೂರ್ಣ ವಿವರ
ಕೇದಾರನಾಥ ಗುಹೇ ತನ್ನ ವಿಶಿಷ್ಟ ನಿರ್ಮಾಣ ಮತ್ತು ನಂಬಿಕೆಯಿಂದ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ಚಾರಣಕ್ಕೆ ಬರುವವರ ಸಂಖ್ಯೆ ಹೆಚ್ಚು. ಗುಹೆ ಸುತ್ತ ಸುಂದರ ಪರಿಸರ ಹಾಗೂ ಕಾಡು, ಪ್ರವಾಸಿಗರಿಗೆ ಮುದ ನೀಡುತ್ತದೆ. ಪಚ್ನೈನಿಂದ ಪ್ರಾರಂಭವಾಗುವ ಹಾದಿಯನ್ನು ನೀವು ಸುಲಭವಾಗಿ ಹಾಗೂ ವೇಗವಾಗಿ ಗುಹೆಯನ್ನು ತಲುಪಬಹುದು.