ಬೆಂಗಳೂರು ಟು ಸಿಕ್ಕಿಂ ಕನ್ನಡಿಗರ ಬೈಕ್ ರೈಡ್‌, ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುವ ಉದ್ದೇಶ

By Vinutha Perla  |  First Published Aug 3, 2023, 12:08 PM IST

ಬೈಕ್ ರೈಡ್‌ ಏನು ಎಲ್ರೂ ಹೋಗ್ತಾರೆ. ಬೋರಾಗುತ್ತೆ ಅಂತ ಕೆಲವ್ರು, ಮೋಜು-ಮಸ್ತಿಗೆ ಅಂತ ಇನ್ನು ಕೆಲವ್ರು. ಹೀಗೆ ಕಾರಣಗಳು ಬೇರೆ ಬೇರೆ. ಆದ್ರೆ ಬೆಂಗಳೂರಿನಲ್ಲೊಂದು ಯುವಕರ ತಂಡ ಒಂದು ಸದುದ್ದೇಶವನ್ನಿಂಟುಕೊಂಡು ಬೆಂಗಳೂರು ಟು ಸಿಕ್ಕಿಂ ಬೈಕ್‌ ರೈಡ್ ಹೋಗೋಕೆ ಮುಂದಾಗಿದೆ. ಅದೇನು ಅನ್ನೋ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ. 


ಟ್ರಾವೆಲ್ ಮಾಡೋದು ಹಲವರ ನೆಚ್ಚಿನ ಹವ್ಯಾಸ. ಇತ್ತೀಚಿಗೆ ಟ್ರಾವೆಲ್ ವ್ಲಾಗಿಂಗ್ ಸಹ ಟ್ರೆಂಡ್ ಆಗ್ತಿರೋ ಕಾರಣ ಹೆಚ್ಚಿನವರು ಸೋಲೋ ರೈಡ್‌, ಗ್ರೂಪ್ ರೈಡ್ ಹೋಗೋಕೆ ಇಷ್ಟಪಡ್ತಾರೆ. ಸಾಮಾನ್ಯವಾಗಿ ಬಹುತೇಕರು ವೀಕೆಂಡ್ ಎಂಜಾಯ್‌ ಮಾಡೋಕೆ, ಆಫೀಸ್ ಟೆನ್ಶನ್ ಕಳೆಯೋಕೆ ಈ ರೀತಿ ಟ್ರಿಪ್ ಅಥವಾ ರೈಡ್ ಹೋಗೋ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇಲ್ಲೊಂದು ಯುವಕರ ತಂಡ ಇದೆಲ್ಲಕ್ಕಿಂತ ಸ್ಪೆಷಲ್ ಆಗಿ ಒಂದು ನಿರ್ಧಿಷ್ಟ ಗುರಿಯನ್ನಿಟ್ಟುಕೊಂಡು ಗ್ರೂಪ್‌ ರೈಡ್ ಹೋಗೋಕೆ ಮುಂದಾಗಿದೆ. ಅದೇನು, ಗ್ರೂಪ್‌ ರೈಡ್ ಹೋಗ್ತಿರೋದು ಎಲ್ಲಿಂದ, ಎಲ್ಲಿಗೆ ಮೊದಲಾದ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ. 

ಸೋಷಿಯಲ್ ಮೀಡಿಯಾಗಳು ಬಂದಾಗಿನಿಂದ ಟ್ರಾವೆಲ್ ಅನ್ನೋದು ಹೆಚ್ಚಿಗೆ ಟ್ರೆಂಡ್ ಆಗ್ತಿದೆ. ಹಿಂದೆಲ್ಲಾ ಬೇಸರವಾದಾಗ ಸಮಯ ಕಳೆಯಲು ಕೆಲವೊಂದು ಜಾಗಗಳಿಗೆ ಹೋಗಿ ಜಾಗವನ್ನು ಕಣ್ತುಂಬಾ ನೋಡಿ ಮರಳಿ ಬರ್ತಿದ್ರು. ಆದ್ರೆ ಈಗಲ್ಲ ಇನ್‌ಸ್ಟಾಗ್ರಾಂ, ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲು, ರೀಲ್ಸ್ ಮಾಡಲೆಂದೇ ಟ್ರಾವೆಲ್ ಮಾಡುವವರಿದ್ದಾರೆ. ಸ್ಟ್ರೆಸ್ ಕಳೆಯೋಕೆಂದು ಇಂಥಾ ಜಾಗ (Place)ಗಳಿಗೆ  ಹೋಗಿ ಸ್ನ್ಯಾಕ್ಸ್ ಪ್ಯಾಕೆಟ್ಸ್‌, ಮದ್ಯದ ಬಾಟಲಿಗಳನ್ನು ಎಸೆದು ಬರುವವರು ಮತ್ತಷ್ಟು ಮಂದಿ. ಇಂಥಾ ಬೇಜವಾಬ್ದಾರಿ ಪ್ರವಾಸಿಗರಿಂದಲೇ (Tourist) ಟೂರಿಸ್ಟ್ ಪ್ಲೇಸ್‌ಗಳು ಬಹುತೇಕ ಪ್ಲಾಸ್ಟಿಕ್ ಮಯವಾಗಿಬಿಟ್ಟಿವೆ. 

Tap to resize

Latest Videos

ಪ್ರವಾಸಿಗರಿಗೆ ಗುಡ್‌ನ್ಯೂಸ್‌: ವೀಕ್ಷಣೆಗೆ ಮುಕ್ತಗೊಂಡ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಜಲಪಾತಗಳು

ಬೆಂಗಳೂರು-ಸಿಕ್ಕಿಂಗೆ ಯೂಟ್ಯೂಬರ್ ಗೌತಮ್ ನಾಯ್ಡು ತಂಡದ ಬೈಕ್ ರೈಡ್
ಪ್ರವಾಸಿ ತಾಣಗಳಿಗೆ ಹೋಗಿ ಪ್ಲಾಸ್ಟಿಕ್ ಪ್ಯಾಕೆಟ್‌, ಬಾಟಲಿಗಳನ್ನು ಎಸೆಯುವುದು ಸಾಮಾನ್ಯ ಎಂಬಂತಾಗಿದೆ. ಆದರೆ ಈ ಪ್ಲಾಸ್ಟಿಕ್ ಪರಿಸರಕ್ಕೆ ಅದೆಷ್ಟು ಮಾರಕ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಅಲ್ಲಲ್ಲಿ ಎಸೆದಿರೋ ಪ್ಲಾಸ್ಟಿಕ್ ತ್ಯಾಜ್ಯವು ಮಣ್ಣಲ್ಲಿ (Soil) ಬೆರೆಯುವುದಿಲ್ಲ. ನೀರಲ್ಲಿ ಮುಳುವುದಿಲ್ಲ. ಬೆಂಕಿಯಿಂದಲೂ ಸಂಪೂರ್ಣವಾಗಿ ನಾಶವಾಗುವುದಲ್ಲ. ಹೀಗಾಗಿಯೇ ಇದು ಮಣ್ಣಿನ ಗುಣಮಟ್ಟವನ್ನು ಕಳೆಯುವುದರ ಜೊತೆಗೆ ಗಿಡ, ಪ್ರಾಣಿ, ಮನುಷ್ಯನಿಗೂ ಅಪಾಯಕಾರಿಯಾಗಿ (Dangerous) ಪರಿಣಮಿಸುತ್ತದೆ. ಈ ಬಗ್ಗೆ ಜನರಿಗೆ ಸಂದೇಶ ನೀಡಲೆಂದೇ ಬೆಂಗಳೂರಿನ ಟೆಕ್ಕಿ ಮತ್ತಿವರ ತಂಡ ಬೆಂಗಳೂರಿನಿಂದ ಸಿಕ್ಕಿಂಗೆ ರೋಡ್ ಟ್ರಿಪ್ ಮಾಡಲು ಮುಂದಾಗಿದ್ದಾರೆ.

11 ರಾಜ್ಯಗಳಲ್ಲಿ 3 ಮಂದಿ ಕನ್ನಡಿಗರ ಪ್ರಯಾಣ, ಪ್ಲಾಸ್ಟಿಕ್ ಕುರಿತು ಜಾಗೃತಿ
ಬೆಂಗಳೂರಿನ ಟೆಕ್ಕಿ ಮತ್ತು ಯೂಟ್ಯೂಬರ್ ಆಗಿರುವ ಗೌತಮ್ ನಾಯ್ಡು ಅವರು ತಮ್ಮ ಇಬ್ಬರು ಗೆಳೆಯರಾದ ಮಹಾಲಕ್ಷ್ಮಿಪುರಂನಲ್ಲಿರುವ ದಾವಣಗೆರೆ ಬೆಣ್ಣೆ ದೋಸೆ ಹೊಟೇಲ್ ಮಾಲೀಕ ವರುಣ್ ಮತ್ತು ಫಾರ್ಮಾಇಂಡಸ್ಟ್ರಿಯಲ್ಲಿ ಕೆಲಸ ಮಾಡ್ತಿರೋ ಮಧು ಜೊತೆಗೂಡಿ ಬೆಂಗಳೂರಿನಿಂದ ಸಿಕ್ಕಿಂಗೆ ರೋಡ್ ಟ್ರಿಪ್ ಮಾಡಲು ಮುಂದಾಗಿದ್ದಾರೆ. ಈ ಗ್ರೂಪ್ ರೈಡ್ ತಂಡ ಬರೋಬ್ಬರಿ 6000 ಕಿ.ಮೀ ದೂರವನ್ನು ಕ್ರಮಿಸುವ ಗುರಿಯನ್ನು ಇಟ್ಟುಕೊಂಡಿದೆ. ಕರ್ನಾಟಕ, ಆಂಧ್ರ ಪ್ರದೇಶ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಈ 11 ರಾಜ್ಯಗಳಲ್ಲಿ ಪ್ರಯಾಣಿಸಲಿದ್ದಾರೆ. 11 ರಾಜ್ಯಗಳಲ್ಲಿ 3 ಮಂದಿ ಕನ್ನಡಿಗರು ಪ್ರಯಾಣಿಸಿ ಜೀರೋ ಪ್ಲಾಸ್ಟಿಕ್ ಬಳಸಿ ಎಂದು ಜಾಗೃತಿ (Awareness) ಮೂಡಿಸಲಿದ್ದಾರೆ. 

ಕೇರಳದ ಈ ಸುಂದರ ಹಳ್ಳಿಯೀಗ ಪ್ರವಾಸಿಗರ ಸ್ವರ್ಗ, ಊರವರಿಗೆ ಮಾತ್ರ ನರಕ!

19 ದಿನಗಳ ಬೈಕ್ ರೈಡ್ ಆಗಸ್ಟ್ 5ರಂದು ಬೆಂಗಳೂರಿನಿಂದ ಆರಂಭ
ಸಿಕ್ಕಿಂನ ಹೆಚ್ಚಿನ ಪ್ರವಾಸಿ ಸ್ಥಳಗಳನ್ನು ಅನ್ವೇಷಿಸುವುದು ಮತ್ತು ಯುಟ್ಯೂಬ್ ವ್ಲಾಗ್‌ಗಳ ಮೂಲಕ ಸಿಕ್ಕಿಮೀಸ್ ಜನರ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ತೋರಿಸುವ ಕೆಲಸವನ್ನು ಮಾಡಲಿದ್ದಾರೆ. ಈ ಪ್ರಯಾಣದಲ್ಲಿ ಶೂನ್ಯ ಪ್ಲಾಸ್ಟಿಕ್ ಬಳಸುತ್ತಿರುವುದು ಗಮನಿಸಬೇಕಾದ ವಿಚಾರ. ಶೂನ್ಯ ಪ್ಲಾಸ್ಟಿಕ್ ತ್ಯಾಜ್ಯದೊಂದಿಗೆ ನಾವು ಹೇಗೆ ಪ್ರಯಾಣಿಸಬಹುದು ಎಂಬುದನ್ನು ವೀಕ್ಷಕರಿಗೆ ತೋರಿಸುವುದು ಇವರ ಮುಖ್ಯ ಉದ್ದೇಶವಾಗಿದೆ. ವಿಶಾಖಪಟ್ಟಣಂ, ಪುರಿ, ಸಿಕ್ಕಿಂ ಮತ್ತು ವಾರಣಾಸಿಯಂತಹ ಸ್ಥಳಗಳನ್ನು ಅನ್ವೇಷಿಸುವ ಒಟ್ಟು 19 ದಿನಗಳ ಬೈಕ್ ರೈಡ್ ಇದಾಗಿದ್ದು, ಪ್ರಯಾಣದ ಉದ್ದಕ್ಕೂ ಪ್ರತಿದಿನ ಸುಮಾರು 600 ಕಿ.ಮೀ ಕ್ರಮಿಸುವ ಗುರಿಯಿಟ್ಟುಕೊಂಡಿದ್ದಾರೆ.

ಆಗಸ್ಟ್ 5, ಶನಿವಾರದಿಂದ ಪ್ರಯಾಣ ಆರಂಭಿಸುತ್ತಿದ್ದು, ಆಗಸ್ಟ್ 4ರಂದು ಶುಕ್ರವಾರ ಸಂಜೆ 6 ಗಂಟೆಗೆ ಮಹಾಲಕ್ಷಿಪುರಂನ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಎಲ್ಲಾ ಮೂರು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪೂಜೆಯನ್ನು ಮಾಡುವ ಮೂಲಕ ತಂಡವು ಫ್ಲ್ಯಾಗ್‌ಆಫ್‌ನ್ನು ಏರ್ಪಡಿಸಿದೆ. ಶಾಸಕ ಅಭ್ಯರ್ಥಿ ಕೇಶವ ಮೂರ್ತಿ ಅವರು ಈ ಸಂದರ್ಭದಲ್ಲಿ ಭಾಗವಹಿಸಿ ರೈಡರ್ಸ್‌ಗೆ ಶುಭ ಹಾರೈಸಲಿದ್ದಾರೆ

ಅದೇನೆ ಇರ್ಲಿ, ಶೂನ್ಯ ಪ್ಲಾಸ್ಟಿಕ್ ಬಳಕೆಯ ಸದುದ್ದೇಶವನ್ನಿಟ್ಟುಕೊಂಡು ಈ ರೀತಿ ರೈಡ್ ಹೋಗ್ತಿರೋದು ಬೆಂಗಳೂರಿನ ತಂಡ ಅನ್ನೋದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಇವರ ಪ್ರಯಾಣ ಸುಖಕರವಾಗಿರಲಿ ಅಂತ ನಾವೂ ಸಹ ಹ್ಯಾಪಿ ಜರ್ನಿ, ಆಲ್‌ ದಿ ಬೆಸ್ಟ್ ಹೇಳೋಣ.

click me!