ಒಂದು ಗಂಟೆಯ ದಾರಿಗೆ ಮೂರು ಗಂಟೆ ವೈಟಿಂಗ್ ಟೈಂ; ರಾಪಿಡೋ ಆಟೋ ಪೋಸ್ಟ್ ವೈರಲ್‌

Published : Aug 02, 2023, 02:22 PM ISTUpdated : Aug 02, 2023, 02:26 PM IST
ಒಂದು ಗಂಟೆಯ ದಾರಿಗೆ ಮೂರು ಗಂಟೆ ವೈಟಿಂಗ್ ಟೈಂ; ರಾಪಿಡೋ ಆಟೋ ಪೋಸ್ಟ್ ವೈರಲ್‌

ಸಾರಾಂಶ

ಬೆಂಗಳೂರಿನ ಟ್ರಾಫಿಕ್‌ ಜಗದಗಲಕ್ಕೂ ಸುದ್ದಿಯಾಗಿರೋ ವಿಚಾರ. ಸಿಲಿಕಾನ್ ಸಿಟಿಯ ಟ್ರಾಫಿಕ್‌ನಲ್ಲಿ ಸಿಲುಕಿ ಇಂಟರ್‌ವ್ಯೂ, ಕೆಲ್ಸ, ಫಂಕ್ಷನ್ ಹೀಗೆ ಹಲವನ್ನು ಮಿಸ್ ಮಾಡ್ಕೊಂಡವರಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನಡೆದಿರೋ ಇನ್ನೊಂದು ಘಟನೆ ಎಲ್ಲರ ಹುಬ್ಬೇರುವಂತೆ ಮಾಡಿದೆ. 

ಸಿಲಿಕಾನ್ ಸಿಟಿ ಅಂದ್ರೆ ಹೇಗೆ ಇಲ್ಲಿನ ಕಲರ್‌ಫುಲ್ ಲೈಫ್ ನೆನಪಿಗೆ ಬರುತ್ತೋ ಹಾಗೆಯೇ ಇಲ್ಲಿನ ಟ್ರಾಫಿಕ್ ಸಮಸ್ಯೆ ಕಣ್ಮುಂದೆ ಬರದೇ ಇಲ್ಲ. ಗಂಟೆಗಟ್ಟಲೆ ನಿಂತಲ್ಲೇ ನಿಂತಿರುವ ವಾಹನಗಳು, ಹಾರ್ನ್ ಹೊಡೆದು ಸುಸ್ತಾಗುವ ಸವಾರರು. ಪೀಕ್ ಅವರ್‌ನಲ್ಲಂತೂ ಹೇಳೋದೇ ಬೇಡ. ವಾಹನಗಳು ಚಲಿಸದೇ ನಿಂತಲ್ಲೇ ನಿಂತಿರುತ್ತವೆ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿ ಇಂಟರ್‌ವ್ಯೂ, ಕೆಲ್ಸ, ಫಂಕ್ಷನ್ ಹೀಗೆ ಹಲವನ್ನು ಮಿಸ್ ಮಾಡ್ಕೊಂಡವರಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನಡೆದಿರೋ ಇನ್ನೊಂದು ಘಟನೆ ಎಲ್ಲರ ಹುಬ್ಬೇರುವಂತೆ ಮಾಡಿದೆ. 

ಬೆಂಗಳೂರಿನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಟ್ರಾವೆಲ್ ಮಾಡೋದು ಅಂದ್ರೆ ತಲೆಕಟ್ಟು ಹೋಗುತ್ತೆ. ಟ್ರಾಫಿಕ್, ಬುಕ್ ಆಗದ ಆಟೋಗಳು, ಬುಕ್ ಆದ್ರೂ ಡಿಸ್ಟೆನ್ಸ್ ನೋಡಿ ಕ್ಯಾನ್ಸಲ್ ಮಾಡೋ ಕ್ಯಾಬ್‌ಗಳು. ಅಬ್ಬಬ್ಬಾ..ಸಮಸ್ಯೆ ಒಂದಾ ಎರಡಾ..ಇಂಥಾ ಸಮಸ್ಯೆಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೀಕ್ ಬೆಂಗಳೂರು ಎಂಬ ಹೆಸರಿನಲ್ಲಿ ವೈರಲ್ ಆಗುತ್ತಿರುತ್ತವೆ. ಹಾಗೆಯೇ ಸದ್ಯ ವ್ಯಕ್ತಿಯೊಬ್ಬ ಬೆಂಗಳೂರು ರಾಪಿಡೊ ಆಟೋ ಬುಕ್ ಮಾಡಿದ್ದು, ಇದರಲ್ಲಿ ಮುಕ್ಕಾಲು ಗಂಟೆಯ ದಾರಿಗೆ ಮೂರು ಗಂಟೆ ವೈಟ್ ಮಾಡುವಂತೆ ಸೂಚಿಸಿರೋ ಪೋಸ್ಟ್ ಎಲ್ಲೆಡೆ ವೈರಲ್ ಆಗ್ತಿದೆ. 

ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಆಗೋಕೆ ಕಾರಣವೇನು, ಸಂಚಾರಿ ಪೊಲೀಸರ ಟ್ವೀಟ್ ವೈರಲ್

ಮುಕ್ಕಾಲು ಗಂಟೆಯ ದಾರಿ, ಮೂರು ಗಂಟೆ ವೈಟಿಂಗ್ ಟೈಂ
@deyalla_ ಎಂಬ ಹೆಸರಿನ ಟ್ವಿಟರ್ ಬಳಕೆದಾರರು Rapidoದಲ್ಲಿ ಆಟೋವನ್ನು ಬುಕ್ ಮಾಡಿದ  ಅಪ್ಲಿಕೇಶನ್‌ನಿಂದ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡಿದ್ದಾರೆ. ವ್ಯಕ್ತಿ ಆಟೋ ಬುಕ್ ಮಾಡಿದ್ದಕ್ಕೆ ಚಾಲಕ (Driver) ರೈಡ್‌ಗೆ ಓಕೆ ಅಂದಿದ್ದಾನೆ. ಆದರೆ ಇದಕ್ಕೆ ನೀಡಿರುವ ವೈಟಿಂಗ್ ಲಿಸ್ಟ್ ಬೆಚ್ಚಿಬೀಳಿಸುವಂತಿದೆ. ಇದು ಮುಕ್ಕಾಲು ಗಂಟೆಯ ದಾರಿಗೆ ಬರೋಬ್ಬರಿ ಮೂರು ಗಂಟೆಯ ತನಕ ವೈಟ್ ಮಾಡುವಂತೆ ಸೂಚಿಸುತ್ತದೆ. ಟ್ವಿಟರ್‌ನಲ್ಲಿ 'Rapido ವೇಯ್ಟ್ ಟೈಮ್,  45 ನಿಮಿಷಗಳ ಪ್ರಯಾಣಕ್ಕಾಗಿ (Travel) 3.7 ಗಂಟೆಗಳಿಗಿಂತ ಹೆಚ್ಚು ಕಾಲ ಕಾಯಬೇಕು' ಎಂಬ ಶೀರ್ಷಿಕೆಯಡಿ ಇದನ್ನು ಪೋಸ್ಟ್ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.

ವೈರಲ್ ಆಗಿರೋ ಪೋಸ್ಟ್‌ಗೆ ಸ್ವತಃ ರಾಪಿಡೋ ಕಾಮೆಂಟ್ ಮಾಡಿದೆ. 'ಹಾಯ್‌, ನೀವು ಎದುರಿಸಿದ ಅನಾನುಕೂಲತೆಗಾಗಿ (Problem) ಕ್ಷಮೆ ಕೋರುತ್ತೇವೆ. ನಿಮ್ಮ ಅಗತ್ಯದ ಸಮಯದಲ್ಲಿ ಚಾಲಕರು ಲಭ್ಯವಿಲ್ಲದ್ದಕ್ಕೆ ಕ್ಷಮೆ (Apology) ಕೋರುತ್ತೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು' ಎಂದು ಉತ್ತರ ನೀಡಿದೆ. 

Bengaluru- ಸಂಚಾರ ದಟ್ಟಣೆ ತಗ್ಗಿಸಲು ಡ್ರೋನ್‌ ಮೊರೆಹೋದ ಪೊಲೀಸರು

ಬೆಂಗಳೂರಿನಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ, ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ಹಾಸ್ಯಮಯ ಅನುಭವವನ್ನು (Experience) ಹಂಚಿಕೊಂಡಿದ್ದರು, ಅಲ್ಲಿ ಆಟೋ ಚಾಲಕ 24-ಕಿಲೋಮೀಟರ್ ಪ್ರಯಾಣಕ್ಕಾಗಿ ಸವಾರಿ ವಿನಂತಿಯನ್ನು ಬಹುತೇಕ ಒಪ್ಪಿಕೊಂಡಿದ್ದನು. ಆದರೆ ಆಗಮನದ ಸಮಯವು 71 ನಿಮಿಷಗಳನ್ನು ತೋರಿಸಿತ್ತು.

ಬಳಕೆದಾರರು ರೈಡ್‌ನ್ನು ಆಕ್ಸೆಪ್ಟ್ ಮಾಡಿಕೊಂಡಿದ್ದಕ್ಕಾಗಿ ತಮಾಷೆಯಾಗಿ ಚಾಲಕನಿಗೆ ಗೌರವವನ್ನು ವ್ಯಕ್ತಪಡಿಸಿದ್ದರು. ಅದೇನೆ ಇರ್ಲಿ, ಬೆಂಗಳೂರು ಕ್ಯಾಬ್, ಆಟೋಗಳ ವಿಚಾರ ಟ್ರಾಫಿಕ್‌ನಿಂದಾಗಿ ಆಗಾಗ ವೈರಲ್ ಆಗಿ ಎಲ್ಲರ ಗಮನ ಸೆಳೀತಿರೋದಂತೂ ನಿಜ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿವೃತ್ತಿ ನಂತ್ರವೂ ಪರದಾಡಬೇಕಾಗಿಲ್ಲ, ನೆಮ್ಮದಿ ಜೀವನಕ್ಕೆ ಈ ದೇಶಗಳು ಬೆಸ್ಟ್
ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​