ಬೆಂಗಳೂರಿನಿಂದ ಅಯೋಧ್ಯೆಗೆ ವಿಶೇಷ ರೈಲು, ಅತೀ ಕಡಿಮೆ ದುಡ್ಡಿನಲ್ಲಿ ಹೋಗಿ ಬರ್ಬೋದು

By Vinutha Perla  |  First Published Jan 7, 2024, 11:47 AM IST

ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೇಶದ ವಿವಿಧೆಡೆಯಿಂದ ಜನರು ಹೊರಟಿದ್ದಾರೆ ಜನರಿಗೆ  ಅನುಕೂಲವಾಗಲೆಂದು ಭಾರತೀಯ ರೈಲ್ವೇ ದೇಶದ ವಿವಿಧ ಮೂಲಗಳಿಂದ ರೈಲುಗಳನ್ನು ಓಡಿಸುತ್ತಿದೆ. ಹಾಗೆಯೇ ಬೆಂಗಳೂರಿನಿಂದ ಅಯೋಧ್ಯೆ ನಡುವೆ ಸದ್ಯ ಹೆಚ್ಚುವರಿ ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ರೈಲುಗಳ ವೇಳಾಪಟ್ಟಿ, ದರದ ಮಾಹಿತಿ ಇಲ್ಲಿದೆ.


ಜನವರಿ 22ರಂದು ಉದ್ಘಾಟನೆಯಾಗುತ್ತಿರುವ  ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ಮೂಲೆಗಳಿಂದ ಜನರು ಅತ್ತ ತೆರಳುತ್ತಿದ್ದಾರೆ. ಶ್ರೀರಾಮನ ಜನ್ಮಸ್ಥಳವನ್ನು ಸೇರಲು ಸಾರಿಗೆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಹಾಗೆಯೇ, ಭಾರತೀಯ ರೈಲ್ವೇ ಸಹ ಹೆಚ್ಚುವರಿ ರೈಲುಗಳನ್ನು ಒದಗಿಸುತ್ತಿದೆ. ಅಯೋಧ್ಯೆಗೆ ಜನರು ತೆರಳಲು ಅನುಕೂಲವಾಗಲೆಂದು ಭಾರತೀಯ ರೈಲ್ವೇ ದೇಶದ ವಿವಿಧ ಮೂಲಗಳಿಂದ ರೈಲುಗಳನ್ನು ಓಡಿಸುತ್ತಿದೆ. ಹಾಗೆಯೇ ಬೆಂಗಳೂರಿನಿಂದಲೂ ರೈಲುಗಳು ಅಯೋಧ್ಯೆಗೆ ತೆರಳಲಿವೆ. ಬೆಂಗಳೂರಿನಿಂದ ಅಯೋಧ್ಯೆ ನಡುವೆ ಸದ್ಯ ಹೆಚ್ಚುವರಿ ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ರೈಲುಗಳ ವೇಳಾಪಟ್ಟಿ, ದರದ ಮಾಹಿತಿ ಇಲ್ಲಿದೆ.

ಬೆಂಗಳೂರು ಮತ್ತು ಅಯೋಧ್ಯೆ ಜಂಕ್ಷನ್ ನಡುವೆ ಹಲವಾರು ರೈಲುಗಳು ಸಂಚರಿಸುತ್ತವೆ. ಇದರಲ್ಲಿ ಹೆಚ್ಚಿನ ರೈಲು ಯಶವಂತಪುರ ಜಂಕ್ಷನ್‌ನಿಂದ ಅಯೋಧ್ಯೆಗೆ ಹೊರಡುತ್ತದೆ. ಇದು ಭಾರತೀಯ ರೈಲ್ವೇ ಜಾಲದಲ್ಲಿ ಅತ್ಯಂತ ಜನನಿಬಿಡ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ತಡೆರಹಿತ ಪ್ರಯಾಣ ನಡೆಸಲು ಮುಂಚಿತವಾಗಿ ರೈಲ್ವೇ ಟಿಕೆಟ್‌ ಬುಕ್‌ ಮಾಡಬಹುದಾಗಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಪ್ರಯಾಣಿಕರು ಆಫ್‌ಲೈನ್ ಮತ್ತು ಆನ್‌ಲೈನ್ ಮೋಡ್‌ಗಳನ್ನು ಬಳಸಿಕೊಳ್ಳಬಹುದು.

Tap to resize

Latest Videos

undefined

ಕರಾವಳಿಗರಿಗೆ ಸಂತಸ, ಮಡ್ಗಾಂವ್‌- ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿ ಬದಲಾವಣೆ

ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿ
 ಭಾರತೀಯ ರೈಲ್ವೇಯ ಅಧಿಕೃತ ವೆಬ್‌ಸೈಟ್‌ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಆನ್‌ಲೈನ್ ಬುಕಿಂಗ್ ಮಾಡಬಹುದು, ಅಲ್ಲಿ ಪ್ರಯಾಣಿಕರು ಆಸನ ಲಭ್ಯತೆಯನ್ನು ಪರಿಶೀಲಿಸಿ ಅನುಕೂಲಕರವಾದ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಪ್ರಯಾಣಿಕರು ಊಟದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಐಆರ್‌ಸಿಟಿಸಿ ಅಧಿಕೃತ ಅಡುಗೆ ಪಾಲುದಾರ ರೈಲ್‌ಮಿತ್ರದ ಸಹಯೋಗದೊಂದಿಗೆ 450+ ನಿಲ್ದಾಣಗಳಲ್ಲಿ ಇ-ಕೇಟರಿಂಗ್ ಸೇವೆಗಳನ್ನು ನೀಡುತ್ತದೆ. ಇದರಲ್ಲಿ ಪ್ರಯಾಣಿಕರು ತಮ್ಮ ರೈಲು ಪ್ರಯಾಣದ ಸಮಯದಲ್ಲಿ ರೆಸ್ಟೋರೆಂಟ್‌ನ ಬಿಸಿ ಬಿಸಿ ಆಹಾರವನ್ನು ಸವಿಯಬಹುದು.

ಬೆಂಗಳೂರಿನಿಂದ ಅಯೋಧ್ಯೆಗೆ ಹೋಗುವ ರೈಲುಗಳು
ರೈಲು ಸಂಖ್ಯೆ 15024 ಯಶವಂತಪುರ-ಗೋರಖ್‌ಪುರ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್‌. ಈ ರೈಲು ಬೆಂಗಳೂರಿನ ಯಶವಂತಪುರದಿಂದ ರಾತ್ರಿ 11:40 ಕ್ಕೆ ಹೊರಟು ಮರುದಿನ ಸಂಜೆ 04:26ಕ್ಕೆ ಅಯೋಧ್ಯೆಯನ್ನು ತಲುಪುತ್ತದೆ. ರೈಲು ಸಂಖ್ಯೆ 22534 ಯಶವಂತಪುರ ಗೋರಖ್‌ಪುರ ನಡುವೆ ಎಕ್ಸ್‌ಪ್ರೆಸ್‌ ಈ ರೈಲು ಬೆಂಗಳೂರಿನ ಯಶವಂತಪುರದಿಂದ ರಾತ್ರಿ 11:40 ಕ್ಕೆ ಹೊರಟು ಮರುದಿನ ಸಂಜೆ 03:50ಕ್ಕೆ ನಿಗೋರಖ್‌ಪುರವನ್ನು ತಲುಪುತ್ತದೆ.ರೈಲು ಸಂಖ್ಯೆ 12592 ಯಶವಂತಪುರ ಗೋರಖ್‌ಪುರ ನಡುವೆ ಎಕ್ಸ್‌ಪ್ರೆಸ್‌ ಈ ರೈಲು ಬೆಂಗಳೂರಿನ ಯಶವಂತಪುರದಿಂದ ಸಂಜೆ 05:20 ಕ್ಕೆ ಹೊರಟು ಮರುದಿನ ಸಂಜೆ 01:17ಕ್ಕೆ ನಿಗದಿತ ಸ್ಥಳವನ್ನು ತಲುಪುತ್ತದೆ.

Dharmasthala Laksha Deepotsava: ಹೋಗೋದು ಹೇಗೆ?

ಅಯೋಧ್ಯೆಗೆ ಸಾಮಾನ್ಯ ಟಿಕೆಟ್ ದರ ಬೆಲೆ 840.99 ರೂ. ಆಗಿದೆ. ಪ್ರಥಮ ದರ್ಜೆ ಟಿಕೆಟ್‌ ದರ 2,183.79 ರೂ. ಅಯೋಧ್ಯೆಗೆ ಮೊದಲ ರೈಲು  3:10 am ಆಗಿದ್ದು, ಕೊನೆಯ ರೈಲು ರಾತ್ರಿ 11:40 ಕಿಮೀ ಇರುತ್ತದೆ.

click me!