ವಿಶ್ವದ ಏಕಮಾತ್ರ 7 ಸ್ಟಾರ್​ ಹೋಟೆಲ್​ನಲ್ಲಿ ಡಾ.ಬ್ರೋ: ಟಾಯ್ಲೆಟ್​ನಿಂದ ಹಿಡಿದು ಮುಟ್ಟಿದ್ದೆಲ್ಲವೂ ಚಿನ್ನವೇ!

By Suvarna News  |  First Published Jan 6, 2024, 4:38 PM IST

ವಿಶ್ವದ ಏಕಮಾತ್ರ 7 ಸ್ಟಾರ್​ ಹೋಟೆಲ್​ ಅನ್ನು ಡಾ.ಬ್ರೋ ಪರಿಚಯಿಸಿದ್ದಾರೆ.  ಟಾಯ್ಲೆಟ್​ನಿಂದ ಹಿಡಿದು ಮುಟ್ಟಿದ್ದೆಲ್ಲವೂ ಚಿನ್ನವೇ ಚಿನ್ನ ಎಂದಿದ್ದಾರೆ. ಅಭಿಮಾನಿಗಳು ಏನಂದ್ರು ನೋಡಿ... 
 


ಇದು ವಿಶ್ವದ ಏಕಮಾತ್ರ ಸೆವೆನ್​ ಸ್ಟಾರ್​ ಹೋಟೆಲ್​. ಇಲ್ಲಿ ಮುಟ್ಟಿದ್ದೆಲ್ಲವೂ ಚಿನ್ನವೇ.  ನೆಲ, ಟಿವಿ, ಮೆಟ್ಟಿಲು... ಅಷ್ಟೇ ಏಕೆ ಟಾಯ್ಲೆಟ್ಟೂ ಚಿನ್ನದ್ದು, ಟಾಯ್ಲೆಟ್​ನಲ್ಲಿ ಇರುವ ಫ್ಲಷ್​ ಕೂಡ ಚಿನ್ನದ್ದು... ಅಬ್ಬಬ್ಬಾ ಎಲ್ಲವೂ ಚಿನ್ನವೇ ಚಿನ್ನ. ಹಿಂದೊಮ್ಮೆ ಇದೇ ಹೋಟೆಲ್​ನಲ್ಲಿ ರಾಜ-ರಾಣಿಯೂ ಉಳಿದುಕೊಳ್ಳುತ್ತಿದ್ದರು. ಇದೇ ಕಾರಣಕ್ಕೆ ಇಲ್ಲಿ ಎಲ್ಲವೂ ಚಿನ್ನವೇ. ಈ ಹೋಟೆಲ್​ನಲ್ಲಿ ಉಳಿದುಕೊಳ್ಳುವ ಮನಸ್ಸಿದ್ದರೆ ಒಂದು ರಾತ್ರಿಗೆ 20 ಲಕ್ಷ ರೂಪಾಯಿಗಳು. ಇಷ್ಟು ದುಡ್ಡು ಕೊಟ್ಟರೆ ಸಕಲ ಐಷಾರಾಮಿ ಸೌಲಭ್ಯಗಳು ನಿಮ್ಮ ಬಳಿಗೆ ಬರುತ್ತವೆ. ಇಲ್ಲಿರುವ ಚಿನ್ನವನ್ನು ನೋಡಿ ಸ್ವಲ್ಪ ಚಿನ್ನ ಕೆರೆದುಕೊಳ್ಳೋಣ ಅಂತ ನೋಡಿದ್ರೆ, ಅಲ್ಲಿ ಹದ್ದಿನ ಕಣ್ಣಿಟ್ಟಿರೋ ಸೆಕ್ಯುರಿಟಿಗಳು ನಿಮ್ಮನ್ನು ಕೆರೆದು ಹಾಕ್ತಾರಷ್ಟೇ... 

... ಹೀಗೆಂದು ತಮಾಷೆ ಮಾಡುತ್ತಲೇ ವಿಶ್ವದ ಏಕಮಾತ್ರ ಸೆವೆನ್​ ಸ್ಟಾರ್​ ಹೋಟೆಲ್​ನ ಪರಿಚಯ ಮಾಡಿಸಿದ್ದಾರೆ ಡಾ.ಬ್ರೋ ಖ್ಯಾತಿಯ ಗಗನ್​. ಅಂದಹಾಗೆ, ಈ ಐಷಾರಾಮಿ ಹೋಟೆಲ್​ ಇರುವುದು ದುಬೈನಲ್ಲಿ. ಅದರ ಹೆಸರು ಬುರ್ಜ್​ ಅಲ್​ ಅರಬ್​ (Burj Al Arab in Dubai). ಈ ಹೋಟೆಲ್​ನಲ್ಲಿ ಉಳಿದುಕೊಳ್ಳುವುದು ದೂರದ ಮಾತು, ಬರಿ ಕಣ್ಣುಗಳಿಂದ ನೋಡುವುದು ಬಹುತೇಕ ಮಂದಿಗೆ ಕನಸಿನ ಮಾತೇ. ಈ ಹೋಟೆಲ್​ ಒಳಗೆ ಹೇಗಿರಬಹುದು ಎಂದು ಅಲ್ಲಿಗೆ ಹೋಗಿ ಬಂದವರಿಂದ ಕೇಳಬೇಕಷ್ಟೇ. ಇದೀಗ ಡಾ.ಬ್ರೋ ಅವರು ಹೋಟೆಲ್​ನ ಸಂಪೂರ್ಣ ಪರಿಚಯವನ್ನು ವಿಡಿಯೋ ಮೂಲಕ ಮಾಡಿಸಿದ್ದಾರೆ. ಅಷ್ಟಕ್ಕೂ ಡಾ.ಬ್ರೋ ಅವರು ಇದರ ಸಂಪೂರ್ಣ ವಿಡಿಯೋ ಅನ್ನು ಕೆಲ ತಿಂಗಳ ಹಿಂದೆ ಹಾಕಿದ್ದರು. ಇದೀಗ ತಮ್ಮ ಹಳೆಯ ವಿಡಿಯೋಗಳ ತುಣುಕುಗಳನ್ನು ಪುನಃ ಅಪ್​ಲೋಡ್​  ಮಾಡುತ್ತಿದ್ದಾರೆ. ಕುತೂಹಲ ಎನಿಸುವ ವಿಡಿಯೋಗಳನ್ನು ಅವರು  ಮತ್ತೆ ಶೇರ್​ ಮಾಡುತ್ತಿದ್ದು, ಅದರಲ್ಲಿ ಒಂದು ಈ ಚಿನ್ನದ ಹೋಟೆಲ್​.

Tap to resize

Latest Videos

undefined

100 ವರ್ಷದ ಹಳೆಯ ಕ್ಯಾಮೆರಾಕ್ಕೆ ಪೋಸ್​ ಕೊಟ್ಟ ಡಾ.ಬ್ರೋ: ಕಾಬುಲ್​ ಟೆಕ್ನಿಕ್​ ವಿವರಿಸಿದ್ದು ಹೀಗೆ...

ಇಲ್ಲಿರುವ ರಾಜ-ರಾಣಿಯ ರೂಮುಗಳನ್ನು ಡಾ.ಬ್ರೋ ತೋರಿಸಿದ್ದಾರೆ. ರಾಣಿ ಇಲ್ಲಿ ಉಳಿದುಕೊಂಡಿದ್ದಾಗ ಆಕೆಗೆ ಬಬ್ಬಲ್​ ಬಾತ್​ ಬೇಕಿತ್ತಂತೆ. ಇಂದಿಗೂ ಅದೇ ಇದ್ದು, ಇಲ್ಲಿ ಬಬ್ಬಲ್​ ಬಾತ್​ ಫೇಮಸ್​  ಆಗಿದೆ. ಇಲ್ಲಿ ಒಂದು ದಿನಕ್ಕೆ 20 ಲಕ್ಷ ಬಾಡಿಗೆ ಇದೆ. ಮಾಮೂಲಿನಂತೆ ಈ ವಿಡಿಯೋ ಹಾಕಿದ ತಕ್ಷಣವೇ ಲಕ್ಷಾಂತರ ಮಂದಿ ಡಾ.ಬ್ರೋಗೆ ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಅಯೋಧ್ಯೆಯ ವಿಡಿಯೋ ಹಾಕಿದಾಗಿನಿಂದ ಕೆಲವರ ಕೆಂಗಣ್ಣಿಗೆ ಗುರಿಯಾಗಿರುವ ಡಾ.ಬ್ರೋ ಅವರ ಅವಹೇಳನ ಮಾಡಲಾಗುತ್ತಿದೆ. ಇದರ ಬಗ್ಗೆ ಕಮೆಂಟ್​ಗಳ ಮೂಲಕ ತಿಳಿಸುತ್ತಿರುವ ಡಾ.ಬ್ರೋ ಅಭಿಮಾನಿಗಳು .... ದೇವಲೋಕ ಹಾಳಾಗುವುದಿಲ್ಲ ಎನ್ನುತ್ತಿದ್ದಾರೆ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ.  ನೀವು ಕನ್ನಡದ ಕಣ್ಮಣಿ. ಲಕ್ಷಾಂತರ ಅಭಿಮಾನಿಗಳು ನಿಮ್ಮ ಹಿಂದೆ ಇದ್ದಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಧೈರ್ಯ ತುಂಬುತ್ತಿದ್ದಾರೆ. 

ಅಷ್ಟಕ್ಕೂ,  ಕಳೆದೊಂದು ತಿಂಗಳಿನಿಂದ ಯಾವುದೇ ವಿಡಿಯೋ ಅಪ್​ಲೋಡ್​ ಮಾಡದೇ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದ ಹಾಗೂ ಅಭಿಮಾನಿಗಳ ಚಿಂತೆಗೂ ಕಾರಣರಾಗಿದ್ದ ಡಾ.ಬ್ರೋ ಅರ್ಥಾತ್​ ಗಗನ್​ ಅವರು ಹೊಸ ವರ್ಷದಂದು  ಶ್ರೀರಾಮನ ಪುಣ್ಯಭೂಮಿ ಅಯೋಧ್ಯೆಯಲ್ಲಿ ಕಾಣಿಸಿಕೊಂಡಿದ್ದರು.  ಅಯೋಧ್ಯೆಯ ಜೊತೆಗೆ ರಾಮಾಯಣಕ್ಕೆ ನಂಟಿರುವ ನೇಪಾಳಕ್ಕೂ ಭೇಟಿ ಕೊಟ್ಟು ಹಲವಾರು ವಿಷಯಗಳನ್ನು ಶೇರ್​  ಮಾಡಿಕೊಂಡಿದ್ದರು. ಈ ಮೂಲಕ ಡಾ.ಬ್ರೋ ಹೊಸ ವರ್ಷಕ್ಕೆ ಹೊಸ ಸರ್​ಪ್ರೈಸ್​ ನೀಡಿದ್ದು, ಅಭಿಮಾನಿಗಳ ಮನಸ್ಸನ್ನು ತಣಿಸಿದ್ದರು. ಒಂದು ತಿಂಗಳಿಂದ ವಿಡಿಯೋಗಾಗಿ ಕಾಯುತ್ತಿದ್ದ ಡಾ.ಬ್ರೋ ಫ್ಯಾನ್ಸ್​ ಖುಷಿಯಿಂದ ನಲಿದಾಡಿದರು. ಒಂದೇ ದಿನದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ಅವರ ವಿಡಿಯೋ ವೀಕ್ಷಿಸಿದರು. ಅಯೋಧ್ಯೆಯ ಶ್ರೀರಾಮನೆಂದರೆ  ಒಂದು ರಾಜಕೀಯ ಪಕ್ಷಕ್ಕಷ್ಟೇ ಸೀಮಿತ ಎಂದುಕೊಂಡವರು ಕೆಲವರು ಡಾ.ಬ್ರೋ ಅನ್ನು ಟೀಕಿಸಿದ್ದೂ ಆಯ್ತು. ವಿದೇಶಗಳಲ್ಲಿ ಸುತ್ತಾಡುತ್ತಾ ಅಲ್ಲಿಯ ವಿಷಯವನ್ನು ಕಲೆ ಹಾಕಿ ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಹಾಡಿ ಹೊಗಳಿದ ಕೆಲವರು ನಮ್ಮದೇ ಭೂಮಿಯಲ್ಲಿನ ಶ್ರೀರಾಮನ ಕುರಿತು ಹೇಳಿದಾಗ ಗಗನ್​ ವಿರುದ್ಧವೇ ಸಮರ ಸಾರುವುದೂ ನಡೆಯುತ್ತಿದೆ.

 ಹೊಸ ವರ್ಷಕ್ಕೆ ಹೊಸ ಸರ್​ಪ್ರೈಸ್​: ಅಯೋಧ್ಯೆ ಪುಣ್ಯಭೂಮಿಯಲ್ಲಿ ಡಾ.ಬ್ರೋ- ರಾಮಾಯಣ ನಂಟಿರೋ ನೇಪಾಳಕ್ಕೂ ಭೇಟಿ

click me!