ದಕ್ಷಿಣ ಆಫ್ರಿಕಾದ ಉಗಾಂಡಾದ ಕುತೂಹಲದ ಪ್ರದೇಶವೊಂದರ ಪರಿಚಯ ಮಾಡಿಸಿದ್ದಾರೆ ಡಾ.ಬ್ರೋ. ಇಲ್ಲಿಯ ಈ ರಾಜರಿಗೆ ಊರವರೆಲ್ಲ ಹೆಂಡತಿಯರು!
ದೇಶ-ವಿದೇಶಗಳನ್ನು ಸುತ್ತತ್ತಾ ಬಗೆಬಗೆಯ ಮಾಹಿತಿ ತಿಳಿಸುತ್ತಿರುವ ಡಾ.ಬ್ರೋ ಅರ್ಥಾತ್ ಗಗನ್ ಇದೀಗ ದಕ್ಷಿಣ ಆಫ್ರಿಕಾದ ಉಗಾಂಡದ ಕುತೂಹಲ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ಜೀವವನ್ನೇ ಪಣಕ್ಕಿಟ್ಟು ಹಲವಾರು ಮುಸ್ಲಿಂ ರಾಷ್ಟ್ರಗಳನ್ನೂ ಸುತ್ತಿ ಬಂದಿರುವ ಗಗನ್ ಅವರು ಇದೀಗ ಆದಿವಾಸಿಗಳಿಂದ ತುಂಬಿರುವ, ಕೆಲವೊಂದು ಭಯಾನಕ ಎನ್ನುವಂಥ ಬುಡಕಟ್ಟು ಜನಾಂಗದವರು ವಾಸಿಸುತ್ತಿರುವ ಉಗಾಂಡಕ್ಕೆ ಭೇಟಿ ನೀಡಿ ಅಲ್ಲಿಯ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ. ಉಗಾಂಡಾದಲ್ಲಿ ರಾಜರು ಆಳುತ್ತಿದ್ದ ಸಮಯ ಹಾಗೂ ಅವರು ಸತ್ತ ಮೇಲೆ ಅವರ ಸಮಾಧಿಯ ಕಥೆಯನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ ಡಾ. ಬ್ರೋ.
1835 ರಲ್ಲಿ ರಾಜರ ಆಳ್ವಿಕೆ ಶುರುವಾಗಿದ್ದು, ಅಲ್ಲಿಂದ ಕ್ರಮೇಣ ನಾಲ್ವರು ರಾಜರು ಈ ಪ್ರದೇಶವನ್ನು ಆಳಿದ್ದಾರೆ. ಅವರ ಸಮಾಧಿ, ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು... ಹೀಗೆ ತಲೆತಲಾಂತರಗಳಿಂದ ಆಳಿದ ರಾಜರ ಕುಟುಂದವರ ಸಮಾಧಿಯನ್ನು ಅಲ್ಲಿ ಮಾಡಲಾಗಿದೆ. ಈ ಸಮಾಧಿಯಲ್ಲಿ ಅವರ ಪತ್ನಿಯರು ವಾಸವಾಗಿರುವುದು ವಿಶೇಷ. ಅಷ್ಟಕ್ಕೂ ಇಲ್ಲಿಯ ರಾಜರಿಗೆ ಊರಿನ ತುಂಬಾ ಹೆಂಡತಿಯರು ಇರುವ ವಿಷಯವನ್ನು ಡಾ.ಬ್ರೋ ಹೇಳಿದ್ದಾರೆ. ನಾಲ್ವರು ರಾಜರು ತೀರಿಕೊಂಡಾಗ ಒಂದೇ ಜಾಗದಲ್ಲಿ ಅವರನ್ನು ಹೂತು ಹಾಕಿದ್ದರು. ಇದೀಗ ಸಮಾಧಿ ಒಳಗಡೆ ಯಾರನ್ನೂ ಬಿಡುವುದಿಲ್ಲ. ಅಲ್ಲಿ ಹೆಂಗಸರು ವಾಸಿಸುತ್ತಿದ್ದು, ಅವರೆಲ್ಲರೂ ಈ ಜಾಗದಲ್ಲಿ ಇರುವುದು ತಮ್ಮದೇ ಪತಿಯ ಸಮಾಧಿ ಎನ್ನುತ್ತಾರೆ ಎಂದು ಗಗನ್ ವಿವರಿಸಿದರು.
ಉಗಾಂಡಾ ಕಾಡಲ್ಲಿ ಡಾ. ಬ್ರೋಗೆ ಅವ್ರ ಅಜ್ಜಿ ಸಿಕ್ರಂತೆ! ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಖುಷ್
ಇಲ್ಲಿ, ಕಿಬಿರ ಎನ್ನುವ ಕಾಡು ಇದೆ. ಇದರಲ್ಲಿ ರಾಜರ ಆತ್ಮ ಇದೆ ಎನ್ನುಲಾಗುತ್ತದೆಯಂತೆ. ಆದ್ದರಿಂದ ಇಲ್ಲಿಗೆ ಯಾರೂ ಹೋಗುವಂತಿಲ್ಲ. ದಕ್ಷಿಣ ಆಫ್ರಿಕಾ ಖನಿಜಗಳ ಸಂಪತ್ತಿನ ಬೀಡು. ಆದರೆ ಇಲ್ಲಿ ಆಡಳಿತ ಮಾಡುವವರು, ಸರಿಯಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಇಲ್ಲಿಯ ದೇಶಿಗಳಿಗೆ ಸಮಸ್ಯೆಗಳು ಹೆಚ್ಚಾಗಿ ಎಂದಿದ್ದಾರೆ ಗಗನ್. ಕುತೂಹಲದ ವಿಷಯವೊಂದನ್ನು ಡಾ.ಬ್ರೋ ಬಿಚ್ಚಿಟ್ಟಿದ್ದಾರೆ. ಅದೇನೆಂದರೆ ಅದೇ ರಾಜರ ಅದೇ ಮಕ್ಕಳು ಒಂದು ಧರ್ಮ, ಮುಂದಿನ ಪೀಳಿಗೆ ಮತ್ತೊಂದು ಧರ್ಮ. ಕೆಲವರು ಕ್ರೈಸ್ತರಾಗಿದ್ದು, ಮತ್ತೆ ಕೆಲವರು ಇಸ್ಲಾಂ ಧರ್ಮಕ್ಕೆ ಸೇರಿದ್ದು, ಅವರ ಧರ್ಮಾನುಸಾರ ಇಲ್ಲಿ ಸಮಾಧಿ ಇರುವ ಬಗ್ಗೆ ಡಾ.ಬ್ರೋ ತಿಳಿಸಿದರು.
ಕೆಲ ದಿನಗಳ ಹಿಂದಷ್ಟೇ ಡಾ. ಬ್ರೋ ಉಗಾಂಡಾದ ಅಚ್ಚರಿಯ ಮಹಿಳೆಯರೊಬ್ಬರನ್ನು ಪರಿಚಯಿಸಿದ್ದರು. ಈ ತಾಯಿ (Mother) 40ನೇ ವಯಸ್ಸಿನಲ್ಲಿಯೇ ಮಹಿಳೆ 44 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಹೆಸರು ಮರಿಯಮ್ ನಬಾಟೆಂಜಿ. ಉಗಾಂಡಾದ ಮುನೊಕೊದಲ್ಲಿ ವಾಸಿಸುವ ಮೇರಿಯಮ್ (Mariam ) ತನ್ನ ಜೀವನದ 18 ವರ್ಷಗಳನ್ನು ಗರ್ಭಾವಸ್ಥೆಯಲ್ಲಿ ಕಳೆದಿದ್ದಾಳೆ. ಮೂರು ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ನಾಲ್ಕು ಬಾರಿ ತ್ರಿವಳಿ ಮಕ್ಕಳಿಗೆ ಮತ್ತು 6 ಬಾರಿ ಒಟ್ಟಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
India vs Pak: ಗುಜರಾತ್ ತಲುಪಿದ ಡಾ. ಬ್ರೋ ಕ್ರಿಕೆಟ್ನ ಏನೇನ್ ಮಾಹಿತಿ ನೀಡಿದ್ರು ಕೇಳಿ...