ಆಕಾಶ ಏರ್‌ ಬಿಗ್‌ ಆಫರ್‌: 1599 ರೂಪಾಯಿಗೆ ಫ್ಲೈಟ್‌ ಟಿಕೆಟ್‌, ಯಾವಾಗ ಬುಕ್‌ ಮಾಡ್ಬಹುದು?

By Santosh Naik  |  First Published Dec 28, 2024, 11:55 PM IST

2025 ಜನವರಿ 7 ರಿಂದ ಪ್ರಯಾಣ ದಿನಾಂಕವಿರುವ ಟಿಕೆಟ್‌ಗಳನ್ನು ಬುಕ್ ಮಾಡಬಹುದು.


ನವದೆಹಲಿ (ಡಿ.28): ದೇಶದ ಅತ್ಯಂತ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಆಕಾಶ ಏರ್, ಹೊಸ ವರ್ಷದ ಮಾರಾಟವನ್ನು ಘೋಷಿಸಿದೆ. ಆಫರ್ ಪ್ರಕಾರ 1599 ರೂಪಾಯಿಯಿಂದ ನೀವು ಟಿಕೆಟ್‌ ಬುಕ್‌ ಮಾಡಬಹುದು. ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಈ ಆಫರ್ ಲಭ್ಯವಿದೆ. ಆಕಾಶ ಏರ್‌ನ ವೆಬ್‌ಸೈಟ್ www.akasaair.com ಅಥವಾ ಮೊಬೈಲ್ ಆಪ್ ಮೂಲಕ ಪ್ರಯಾಣಿಕರು ತಮ್ಮ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಅಂತರರಾಷ್ಟ್ರೀಯ ಮಾರ್ಗಗಳಲ್ಲಿ NEWYEAR ಪ್ರೋಮೋ ಕೋಡ್ ಬಳಸಿ 25% ವರೆಗೆ ರಿಯಾಯಿತಿ ಪಡೆಯಬಹುದು. 2024 ಡಿಸೆಂಬರ್ 31 ರಿಂದ 2025 ಜನವರಿ 3 ರವರೆಗೆ ಪ್ರಯಾಣಿಕರು ಟಿಕೆಟ್ ಬುಕ್ ಮಾಡಬಹುದು. 2025 ಜನವರಿ 7 ರಿಂದ ಪ್ರಯಾಣ ದಿನಾಂಕವಿರುವ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

Tap to resize

Latest Videos

undefined

ಪ್ರಯಾಣಿಕರಿಗೆ ಮೊಬೈಲ್ ಫೋನ್‌ಗಳನ್ನು ಒಳಗೊಂಡಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಲು ಯುಎಸ್‌ಬಿ ಪೋರ್ಟ್‌ಗಳು, ಆರೋಗ್ಯಕರ ಆಹಾರವನ್ನು ಒಳಗೊಂಡ ಆನ್‌ಬೋರ್ಡ್ ಊಟ ಸೇವೆ ಮುಂತಾದ ಹಲವು ಸೌಲಭ್ಯಗಳನ್ನು ಆಕಾಶ  ಏರ್ ಒದಗಿಸುತ್ತದೆ. ಜೊತೆಗೆ, ಪ್ರಯಾಣಿಕರು ತಮ್ಮ ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸಲು ಅವಕಾಶವಿದೆ. ದೃಷ್ಟಿಹೀನರಿಗಾಗಿ ಬ್ರೈಲ್ ಲಿಪಿಯಲ್ಲಿ ಸುರಕ್ಷತಾ ಸೂಚನಾ ಕಾರ್ಡ್ ಮತ್ತು ಆನ್‌ಬೋರ್ಡ್ ಮೆನು ಕಾರ್ಡ್‌ಗಳನ್ನು ಆಕಾಶ ಏರ್ ಪರಿಚಯಿಸಿದೆ.

ನೆಲಮಂಗಲ ಆಕ್ಸಿಡೆಂಟ್‌ನಲ್ಲಿ ಮಗ, ಸೊಸೆ, ಮೊಮ್ಮಕ್ಕಳ ಕಳೆದುಕೊಂಡ ಶೋಕ, ಚಂದ್ರಮ್‌ ತಂದೆ ಈರಗೊಂಡ ಕೂಡ ಸಾವು!

ಇದೇ ವೇಳೆ, ಸಮಯಪಾಲನೆಗೆ ಸಂಬಂಧಿಸಿದಂತೆ ವಾಯುಯಾನ ಸಚಿವಾಲಯ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಆಕಾಶ ಏರ್ ಅಗ್ರಸ್ಥಾನದಲ್ಲಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನೀಡಿರುವ ಅಂಕಿಅಂಶಗಳ ಪ್ರಕಾರ, 92.6% ಸಮಯಪಾಲನೆ ಹೊಂದಿರುವ ವಿಮಾನಯಾನ ಸಂಸ್ಥೆಯಾಗಿದೆ ಆಕಾಶ ಏರ್. ಇಂಡಿಗೋ ಮತ್ತು ವಿಸ್ತಾರವನ್ನು ಹಿಂದಿಕ್ಕಿ ಆಕಾಶ ಏರ್ ಅಗ್ರಸ್ಥಾನ ಪಡೆದಿದೆ.

ಸಿಖ್ಖರಲ್ಲಿ ಅಂತ್ಯಸಂಸ್ಕಾರ ಹೇಗೆ ಮಾಡಲಾಗುತ್ತದೆ? ಹಿಂದೂ ಸಂಪ್ರದಾಯಕ್ಕಿಂತ ಇದು ಹೇಗೆ ಭಿನ್ನ

click me!