
ಮಂಜುನಾಥ ಗದಗಿನ
ರಿವರ್ ರಾರಯಫ್ಟಿಂಗ್
ವಿಶಾಲವಾಗಿ ಹಬ್ಬಿ ಹರಿಯುತ್ತಿರುವ ಕಾಳಿ ನದಿಯಲ್ಲಿ ರಾರಯಫ್ಟಿಂಗ್ ಮಾಡಲು ಅವಕಾಶವಿದೆ. ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ಗಣೇಶಗುಡಿಯಲ್ಲಿ ರಾರಯಫ್ಟಿಂಗ್ ಮಾಡಬಹುದು. ತಜ್ಞರು ಜತೆಗಿರುತ್ತಾರೆ. ಲೈಫ್ ಜಾಕೇಟ್ ಇರುತ್ತದೆ. ರಿವರ್ ರಾರಯಫ್ಟಿಂಗ್ ಮಾಡುವುದೇ ಒಂದು ಮಜಾ. ರಭಸವಾಗಿ ಬರುವ ಅಲೆಗಳ ನಡುವೆ ಹೊಯ್ದಾಡುತ್ತಾ, ಹುಟ್ಟು ಹಾಕುತ್ತಾ ಸಾಕುವ, ನೀರಲೆಗಳ ಜೊತೆ ಚೆಲ್ಲಾಟ ಆಡುತ್ತಾ ಹೋಗುವುದೇ ಒಂದು ರೋಮಾಂಚನ.
ದಾಂಡೇಲಿ, ಜೋಯಿಡಾ ಗ್ರಾಮೀಣ ಪ್ರದೇಶದಲ್ಲಿ ವಿಚಿತ್ರ ಕಾಯಿಲೆ
ಸುಫಾ ಡ್ಯಾಂ
ಗಣೇಶಗುಡಿ ಬಳಿ ಇರುವ ಸುಫಾ ಡ್ಯಾಂ ನೋಡದೇ ವಾಪಸ್ ಹೋಗುವಂತಿಲ್ಲ. ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಜಲಾಶಯ ಇಡೀ ಸುಫಾವನ್ನು ಮುಳುಗಿಸಿದ್ದರೂ, ಗಣೇಶಗುಡಿ ಎಂಬ ಸುಂದರ ಸಣ್ಣ ಊರನ್ನು ಸೃಷ್ಟಿಸಿದೆ. ಜೋರು ಮಳೆಗಾಲದಲ್ಲಿ ಡ್ಯಾಂನ ಗೇಟು ತೆಗೆಯುತ್ತಾರೆ. ಧುಮ್ಮಿಕ್ಕುವ ನೀರಿನ ರಭಸ ನೋಡುವುದೇ ಆನಂದ. ಎಲ್ಲ ಗೇಟ್‌ಗಳಿಂದ ನೀರು ಬಿಟ್ಟಾಗ ಬಣ್ಣ ಬಣ್ಣದ ಬೆಳಕಿನ ಮೂಲಕ ನೀರನ್ನು ವಿಭಿನ್ನ ಬಣ್ಣಗಳಲ್ಲಿ ಕಾಣುವಂತಹ ವ್ಯವಸ್ಥೆ ಮಾಡಿರುತ್ತಾರೆ.
ಗಣೇಶ ಗುಡಿ ಹಾಗೂ ಸುತ್ತಲ 40-50 ಕಿಮಿನಲ್ಲಿ ಅದ್ಭುತವಾದ ಪ್ರಾಕೃತಿಕ ಸ್ಥಳಗಳಿವೆ. ಇದರೊಟ್ಟಿಗೆ ಅನೇಕ ಜಲಕ್ರೀಡೆಗಳನ್ನು ಇಲ್ಲಿ ಸವಿಯಬಹುದಾಗಿದೆ. ಜಲಕ್ರೀಡೆಗಳು ಸೂಕ್ತ ದರದಲ್ಲಿ ದೊರೆಯುತ್ತವೆ. ಅದು ನುರಿತ ತಜ್ಞರೊಂದಿಗೆ.- ಪ್ರಮೋದ ರೇವಣಕರ, ವೈಲ್ಡ್‌ಲೈಫ್ ಅಡ್ವೆಂಚರ್ ಸಿಬ್ಬಂದಿ
ಹೋದ್ರೆ ಏನೇನು ನೋಡಬಹುದು?
ಗಣೇಶನದ ಗುಡಿಯ ಸುತ್ತಲ 40 ಕಿಮೀಯಲ್ಲಿ ಉಳವಿಯ ಆಕಳಗವಿ, ಬಾಪೇಲಿಯ ವ್ಯೂ ಪಾಯಿಂಟ್, ಪಣಸೋಲಿಯ ವೈಲ್ಡ್ ಲೈಫ್ ಸಫಾರಿ, ಕುಳಗಿಯ ನೇಚರ್ ಕ್ಯಾಂಪ್, ಕಾರ್ಟೂನ್ ಪಾರ್ಕ್, ಕ್ರೊಕೊಡೈಲ್ ಪಾರ್ಕ್, ಮೌಲಂಗಿ ಇಕೋ ಪಾರ್ಕ್, ಅಂಬಿಕಾ ನಗರದ ವ್ಯೂ ಪಾಯಿಂಟ್ ಹೀಗೆ ವೈವಿಧ್ಯಮಯ ಪ್ರಾಕೃತಿಕ ಹಾಗೂ ಅಡ್ವೆಂಚರ್ ತಾಣಗಳಿವೆ.
ಉದ್ಘಾಟನೆ ಆದರೂ ಪ್ರವಾಸಿಗರ ಉಪಯೋಗಕ್ಕಿಲ್ಲ ‘ಕೆನೋಪಿ ವಾಕ್’!
ವನ್ಯಜೀವಿ ಧಾಮ ಸಫಾರಿ
ಇಲ್ಲಿನ ವೈಲ್ಡ್‌ಲೈಫ್ ಸಫಾರಿಯಲ್ಲಿ ಹುಲಿ, ಆನೆ, ಚಿರತೆ, ಮೊಸಳೆ ಅಷ್ಟೇ ಅಲ್ಲದೇ ಅಪರೂಪದ ಹಕ್ಕಿಗಳನ್ನೂ ಇಲ್ಲಿ ವೀಕ್ಷಿಸಬಹುದು. ಸುತ್ತ ಹಬ್ಬಿದ ಹಸಿರು ಮೌಲಂಗಿ ಪಾರ್ಕ್ನ ವಿಶೇಷ. ಮೌಲಂಗಿ ಬಹಳ ಹಿತವಾದ ಒನ್ ಡೇ ಪಿಕ್‌ನಿಕ್ ಸ್ಥಳ ಕೂಡಾ ಹೌದು. ಕಡಿದಾದ ಇಳಿಜಾರಲ್ಲಿ ಇಳಿಯುವುದು, ಬಂಡೆಗಳನ್ನು ಹತ್ತಿಳಿಯುವ ಸಾಹಸದ ಆಟಗಳನ್ನು ಇಲ್ಲಿ ಆಡಬಹುದು. ಅಪರೂಪದ ಸಸ್ಯಸಂಕುಲಗಳೂ ಇಲ್ಲಿವೆ. ಅಂಬಿಕಾನಗರದಿಂದ ಬೊಮ್ಮನಳ್ಳಿಗೆ ಹೋಗುವ ಮಾರ್ಗದಲ್ಲಿ ವೀಕ್ಷಣಾ ಗೋಪುರ ಒಂದಿದೆ. ಇಲ್ಲಿಗೆ ಬೆಳಗ್ಗೆ ಹಾಗೂ ಸಂಜೆ ಹೋದ್ರೆ ಅದ್ಭುತ ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಸವಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.