ತಾಜ್‌ಮಹಲ್‌ ಹೆಸರಿನಲ್ಲಿ ಬೆತ್ತಲೆ ಕ್ಲಬ್‌ ನಡೆಸಿದ್ರಾ ಟ್ರಂಪ್‌?

Suvarna News   | Asianet News
Published : Feb 19, 2020, 05:58 PM ISTUpdated : Feb 20, 2020, 10:37 AM IST
ತಾಜ್‌ಮಹಲ್‌ ಹೆಸರಿನಲ್ಲಿ ಬೆತ್ತಲೆ ಕ್ಲಬ್‌ ನಡೆಸಿದ್ರಾ ಟ್ರಂಪ್‌?

ಸಾರಾಂಶ

ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಆಗ್ರಾದ ತಾಜ್‌ಮಹಲ್‌ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭೇಟಿ ಕೊಡ್ತಾರಾ, ಇಲ್ವಾ ಎಂಬುದೀಗ ಕುತೂಹಲದ ವಿಷ್ಯ. ಆದರೆ ತಾಜ್‌ಮಹಲ್‌ ಹೆಸರಿಗೂ ಟ್ರಂಪ್‌ಗೂ ತುಂಬ ಹಿಂದಿನ ನಂಟು ಇದೆ, ನಿಮಗೆ ಗೊತ್ತಾ?  

ಅಮೆರಿಕದ ಅಧ್ಯಕ್ಷನಾಗುವ ಮುನ್ನ ಡೊನಾಲ್ಡ್‌ ಟ್ರಂಪ್‌ ನ್ಯೂಯಾರ್ಕ್, ಲಾಸ್‌ವೇಗಾಸ್‌, ಅಟ್ಲಾಂಟಿಕ್‌ ಸಿಟಿ ಮುಂತಾದೆಡೆ ಜೂಜು ಕ್ಲಬ್‌ಗಳನ್ನು ನಡೆಸುತ್ತಿದ್ದ ವಿಲಾಸಿ ಶ್ರೀಮಂತ ಎಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ. ಅಮೆರಿಕದ ಬಹುತೇಕ ಪ್ರಜೆಗಳನ್ನು ಜೂಜಿನ ಆಮಿಷಕ್ಕೆ ಸಿಲುಕಿಸಿ ದಿವಾಳಿ ಎಬ್ಬಿಸಿದ ಜೂಜುಕೋರರ ದೊರೆ ಈತ. ಟ್ರಂಪ್‌ ತಾಜ್‌ಮಹಲ್‌ ಎಂಬ ಹೆಸರಿನ ಒಂದು ವಿಲಾಸಿ, ಐಷಾರಾಮಿ ಕಟ್ಟಡ ಇವರ ಮಾಲಿಕತ್ವದಲ್ಲಿತ್ತು. ಅದರಲ್ಲಿ ಜೂಜಾಡುವ ಕ್ಯಾಸಿನೋ ಕ್ಲಬ್‌ಗಳು ಹೇರಳವಾಗಿದ್ದವು. ಈ ತಾಜ್‌ಮಹಲ್‌ ಕಟ್ಟಡವೇ ಅಮೆರಿಕದ ಅತಿ ದೊಡ್ಡ ಕ್ಯಾಸಿನೋ ಕ್ಲಬ್‌.

ಈ ತಾಜ್‌ಮಹಲ್‌ನಲ್ಲಿ ಒಂದು ಸ್ಟ್ರಿಪ್‌ ಕ್ಲಬ್‌ ಕೂಡ ಇದೆ. ಸ್ಟ್ರಿಪ್‌ ಕ್ಲಬ್‌ ಅಂದ್ರೆ ಗೊತ್ತಲ್ಲ, ಮಾದಕ ತರುಣಿಯರು ಕುಣಿಯುತ್ತಾ ಕುಣಿಯುತ್ತಾ ಮೈಮೇಲಿರುವ ಬಟ್ಟೆಯನ್ನೆಲ್ಲ ತೆಗೆದೊಗೆದು ನೋಡುವವರ ಉಸಿರು ಏದುಸಿರಾಗುವಂತೆ ಮಾಡುವ ಕ್ಲಬ್‌. ಅಮೆರಿಕದಲ್ಲಿ ಇಂಥ ಮೊತ್ತ ಮೊದಲ ಕ್ಯಾಸಿನೋ ಸ್ಟ್ರಿಪ್‌ ಕ್ಲಬ್‌ ಆರಂಭಿಸಿದ್ದು ಟ್ರಂಪ್, 2012ರಲ್ಲಿ. ಜೂಜು ಮತ್ತು ಮಾದಕ ಕುಣಿತವನ್ನು ಜೊತೆಗೆ ಸೇರಿಸಿದ ಡೆಡ್ಲಿ ಕಾಂಬಿನೇಶನ್‌ ಇದಾಗಿದ್ದರೂ, ಟ್ರಂಪ್‌ ವಿಚಾರದಲ್ಲಿ ಮಾತ್ರ ಅದು ವರ್ಕೌಟ್‌ ಆಗಲಿಲ್ಲ.

 

ಭಾರತ-ಚೀನಾ ಗಡಿಯಲ್ಲಿದೆ ರಹಸ್ಯ ಕಣಿವೆ
 

ಅದು ಆಗಿದ್ದು ಹೀಗೆ.

1989ರಲ್ಲಿ ಈ ಕಟ್ಟಡದ ನಿರ್ಮಾಣ ಆರಂಭವಾಯಿತು, ಮೊದಲು ಇದರ ಒಡೆತನ ಬೇರೊಬ್ಬ ಉದ್ಯಮಿಯ ಬಳಿ ಇತ್ತು. ಈತ ಈ ಕಟ್ಟಡವನ್ನು ಅರ್ಧ ಕಟ್ಟಿ ಮುಗಿಸುವಷ್ಟರಲ್ಲಿ ದಿವಾಳಿಯೆದ್ದು ಹೋದ. ಆಗ ಅಟ್ಲಾಂಟಿಕ್‌ ಸಿಟಿಯಲ್ಲಿ ಆಗಲೇ ಎರಡು ಕ್ಯಾಸಿನೋ ಕ್ಲಬ್‌ಗಳನ್ನು ನಡೆಸುತ್ತಿದ್ದ ಟ್ರಂಪ್‌, ಈ ಅರ್ಧಕ್ಕೆ ನಿಂತ ಕಟ್ಟಡವನ್ನು ಖರೀದಿಸಿದ. ಇನ್ನಷ್ಟು ವಿಸ್ತರಿಸಿ ಟ್ರಂಪ್‌ ತಾಜಮ್‌ಮಹಲ್‌ ಎಂದು ಹೆಸರಿಟ್ಟ. ಕಟ್ಟಡದ ಮೂಲ ವಿನ್ಯಾಸಕ್ಕೆ ತನ್ನದೇ ಅಭಿರುಚಿಯನ್ನು ಸೇರಿಸಿ, ಆಗ್ರಾಧ ತಾಜ್‌ಮಹಲ್‌ನ ಹಾಗಿ ಇರುವ ಗುಂಬಜ್‌, ಮಿನಾರ್‌ಗಳನ್ನು ಕೂರಿಸಿದ. ಮೇಲ್ನೋಟಕ್ಕೆ ಇದು ಪರ್ಷಿಯನ್‌ ವಾಸ್ತುಶೈಲಿಯ ತಾಜ್‌ಮಹಲ್‌ ಮತ್ತು ಅಮೆರಿಕದ ವಾಸ್ತುಶೈಲಿಯ ಅರೆಬೆಂದ ಪಾಕದಂತೆ ಕಾಣುತ್ತದೆ. ಇದರೊಳಗೆ ಕ್ಯಾಸಿನೋ ಅಡ್ಡೆಗಳನ್ನು ಆರಂಭಿಸಿದ. ಇದು ಅಮೆರಿಕದಲ್ಲೇ ಅತಿ ದೊಡ್ಡ ಜೂಜಿನ ಅಡ್ಡೆ ಎಂದು ಹೆಸರು ಗಳಿಸಿತು. ಈ ಕಟ್ಟಡ ನಿರ್ಮಾಣ, ಒಳಗಡೆಯ ವೈಭವೋಪೇತ ಇಂಟೀರಿಯರ್‌ ಅಲಂಕಾರ- ಇವೆಲ್ಲದಕ್ಕೂ ನೂರು ಕೋಟಿ ಡಾಲರ್‌ ಖರ್ಚಾಗಿದೆ.
 

1998ರಲ್ಲಿ ಒಮ್ಮೆ ಟ್ರಂಪ್‌, ಈ ತಾಜ್‌ಮಹಲ್‌ ದಿವಾಳಿಯಾಗಿದೆ ಎಂದು ಘೋಷಿಸಿದ. ಹಾಗೆಂದರೆ ಮತ್ತೇನಿಲ್ಲ, ಇಲ್ಲಿ ಹಾಕಿದ ದುಡ್ಡ ವಾಪಸು ಬಂದಿಲ್ಲ ಎಂದರ್ಥ. ಹೀಗಾಗಿ ಇನ್ನಷ್ಟು ಬ್ಯುಸಿನೆಸ್‌ ಪಾಲುದಾರರು ಇದರಲ್ಲಿ ಷೇರು ಹೂಡಲು ಜೊತೆಯಾದರು. ಅನೇಕ ಮಂದಿ ಹೂಡಿದರು ಕೂಡ. ಹೀಗೆ ಹಣ ಹೂಡಿದವರೂ ಕೂಡ ದಿವಾಳಿಯಾಗುವಂತೆ ಮಾಡಿದ ಟ್ರಂಪ್‌, ತನ್ನ ವೈಯಕ್ತಿಕ ಆಸಕ್ತಿಯನ್ನು ಮಾತ್ರ ಹತ್ತು ಪಟ್ಟು ಹೆಚ್ಚಿಸಿಕೊಂಡರು. ಪಾಲುದಾರರ ಮೇಲೆಲ್ಲ ಕೇಸು ಜಡಿದರು. 2016ರಲ್ಲಿ ಮತ್ತೊಮ್ಮೆ, ತಾಜ್‌ಮಹಲ್‌ ದಿವಾಳಿ, ಅದರ ಜೊತೆ ತಾನೂ ದಿವಾಳಿ ಎಂದು ಘೋಷಿಸಿಕೊಂಡರು. ಈ ಕೇಸು ಈಗಲೂ ನಡೆಯುತ್ತಿದೆ.

ಅಹ್ಮದಾಬಾದ್, ಆಗ್ರಾಗೆ ಟ್ರಂಪ್ ಭೇಟಿ
 

2016ರಲ್ಲಿ ನಡೆಸಲು ಸಾಧ್ಯವಿಲ್ಲದೆ ತಾಜ್‌ಮಹಲ್‌ ಮುಚ್ಚಿಯೇಹೋಯಿತು. ನಂತರ ಇದನ್ನು ಹಾರ್ಡ್‌ರಾಕ್‌ ಇಂಟರ್‌ನ್ಯಾಷನಲ್‌ ಎಂಬ ಸಂಸ್ಥೆ ಖರೀದಿಸಿತು. ಅದು ಕಟ್ಟಡದ ಒಳಾಂಗಣವನ್ನೂ ಹೊರಾಂಗಣವನ್ನೂ ಹೊಸದಾಗಿ ರೂಪಿಸಿತು. ಟ್ರಂಪ್‌ನ ಹೆಸರನ್ನು ಕಿತ್ತು ಹಾಕಿತು. ಒಳಗಡೆ ಕ್ಯಾಸಿನೋಗಳು ಈಗಲೂ ಇವೆ. ಆದರೆ ಹೊರಗಡೆಯ ಭವ್ಯವಾದ ಗುಂಬಜ್‌, ಗೋಪುರ, ಮಿನಾರುಗಳನ್ನು ಕಿತ್ತು ಹಾಕಲಾಗಿದೆ. ಲಕ್ಷಾಂತರ ಮಂದಿ ಈ ಕ್ಯಾಸಿನೋಗಳಲ್ಲಿ ತಮ್ಮ ಬೆವರಿಳಿಸಿ ದುಡಿದ ಹಣವನ್ನು ಹೂಡಿ ಕುಬೇರರಾಗಲು ಪ್ರಯತ್ನಿಸುತ್ತಾರೆ. ಆದರೆ ಹಣವನ್ನೆಲ್ಲ ಕಳೆದುಕೊಂಡು ನಾಶವಾಗುತ್ತಾರೆ. ಟ್ರಂಪ್‌ ಥರದವರು ಮಾತ್ರ ಜೂಜಿನ ಅಡ್ಡೆಗಳನ್ನು ಕಟ್ಟಿ, ಸ್ಟ್ರಿಪ್‌ ಕ್ಲಬ್‌ಗಳನ್ನು ನಡೆಸಿ, ಸರಿಯಾದ ಟೈಮ್‌ ನೋಡಿ ಅಲ್ಲಿಂದ ಕಾಲು ಕಿತ್ತು, ದೇಶದ ಅಧ್ಯಕ್ಷರೂ ಆಗಿಬಿಡುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ನಿವೃತ್ತಿ ನಂತ್ರವೂ ಪರದಾಡಬೇಕಾಗಿಲ್ಲ, ನೆಮ್ಮದಿ ಜೀವನಕ್ಕೆ ಈ ದೇಶಗಳು ಬೆಸ್ಟ್