
ಸಣ್ಣ ಪುಟ್ಟ ಸಾಹಸದಲ್ಲಿ ನಿಮ್ಮ ಸಂತೋಷದ ಕೀಲಿಕೈ ಇದೆ ಎಂದಾದಲ್ಲಿ ಅಂಥ ಸಾಹಸಗಳಿಗೆ ಅವಕಾಶಗಳು ಬೆಂಗಳೂರಿನ ಸುತ್ತಮುತ್ತ ಇವೆ. ಮೋಜಿನ ಚಾರಣ, ವಾಲ್ ಕ್ಲೈಂಬಿಂಗ್, ರಾಕ್ ಕ್ಲೈಂಬಿಂಗ್ ಇತ್ಯಾದಿಗಳು ನಿಮ್ಮ ದಿನವನ್ನು ಚಟುವಟಿಕೆಯುಕ್ತವಾಗಿಸುತ್ತವೆ.
ಅಂತರಗಂಗೆ ಗುಹೆ ಶೋಧ
ವಿಭೂತಿಪುರ, ಕೋಲಾರ ಜಿಲ್ಲೆ
ಚಾರಣಿಗರ ನಡುವೆ ಜನಪ್ರಿಯವಾಗಿರುವ ಅಂತರಗಂಗೆ ಬೆಂಗಳೂರಿನಿಂದ 50 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಪ್ರಾಕೃತಿಕವಾಗಿ ಸೃಷ್ಟಿಯಾಗಿರುವ ಕಲ್ಲಿನ ಗುಹೆಗಳ ನಡುವೆ ಸರಿದು ಹೋಗುವುದು, ಅದನ್ನು ಎಕ್ಸ್‌ಪ್ಲೋರ್ ಮಾಡುವುದು ವಿಶಿಷ್ಠ ಅನುಭವ. ಹೆಸರೇ ಹೇಳುವಂತೆ ಒಳಗೆ ನೀರು ಹರಿಯುವುದನ್ನು ಕೂಡಾ ಕಾಣಬಹುದು.
ತಾಜ್‌ಮಹಲ್ ಹೆಸರಿನಲ್ಲಿ ಬೆತ್ತಲೆ ಕ್ಲಬ್ ನಡೆಸಿದ್ರಾ ಟ್ರಂಪ್?...
ಅರ್ಬನ್ ಕ್ಲೈಂಬರ್ಸ್‌ನಲ್ಲಿ ವಾಲ್ ಕ್ಲೈಂಬಿಂಗ್
ಸ್ಪ್ರಿಂಗ್ ಫೀಲ್ಡ್, ಸರ್ಜಾಪುರ ರಸ್ತೆ, ಬೆಳ್ಳಂದೂರು
ರ್ಯಾಪೆಲ್ಲಿಂಗ್ ಮಾಡುವ ಮುನ್ನ ಸ್ವಲ್ಪ ಕಡಿಮೆ ಮಟ್ಟದ ಸಾಹಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಅಗತ್ಯ. ಬೆಂಗಳೂರಿನಲ್ಲಿರುವ ರಾಕ್ ಕ್ಲೈಂಬಿಂಗ್ ಜಿಮ್- ಅರ್ಬನ್ ಕ್ಲೈಂಬರ್ಸ್ ನಿಮಗೆ ಇಂಥ ಅವಕಾಶಗಳನ್ನು ಒದಗಿಸಿಕೊಡುತ್ತದೆ. ರಾಕ್ ಕ್ಲೈಂಬಿಂಗ್ ಅನುಭವವನ್ನು ನಿಯಂತ್ರಿತ ಆರ್ಟಿಫಿಶಿಯಲ್ ಸೆಟಿಂಗ್‌ನಲ್ಲಿ ನಿಮಗೆ ಮಾಡಿಸುತ್ತದೆ. ಅರ್ಬನ್ ಕ್ಲೈಂಬರ್ಸ್‌ನಲ್ಲಿ ನೀವು ಗೋಡೆ ಹತ್ತಲು ಒಂದಿಷ್ಟು ಅಡೆತಡೆಗಳು, ಅವನ್ನು ಮೀರಲು ಒಂದಷ್ಟು ಪ್ರಾಪರ್ಟಿ ನೀಡಿ ಮಜಾ ನೋಡಲಾಗುತ್ತದೆ.
ಕುಂತಿ ಬೆಟ್ಟ ಚಾರಣ
ಕುಂತಿ ಬೆಟ್ಟ, ರಾಜ್ಯ ಹೈವೇ, ಪಾಂಡವಪುರ
ಬೆಂಗಳೂರಿನಿಂದ 80 ಕಿಲೋಮೀಟರ್ ದೂರದಲ್ಲಿ ಪಾಂಡವಪುರ ಕೆರೆಗೆ ಹೊಂದಿಕೊಂಡು ನಿಂತಿದೆ ಕುಂತಿ ಬೆಟ್ಟ. ಸುತ್ತಣ ಪ್ರಾಕೃತಿಕ ಸೌಂದರ್ಯ ಸವಿಯುತ್ತಾ ಕುಂತಿ ಬೆಟ್ಟ ಚಾರಣ ಮಾಡಿ, ಇಳಿವಾಗ ಪಾಂಡವಪುರ ಕೆರೆಯತ್ತ ಸಾಗಿ. ಇಲ್ಲಿ ಹಲವು ವಾಟರ್ ಸ್ಪೋರ್ಟ್ಸ್ ಇದ್ದು, ಸಾಹಸಪ್ರಿಯರು ಅದನ್ನು ಎಂಜಾಯ್ ಮಾಡುವುದರಲ್ಲಿ ಅನುಮಾನವಿಲ್ಲ.
ಆಫ್ ರೋಡ್ ಅಡ್ವೆಂಚರ್ಸ್
ಡರ್ಟ್ ಮೇನಿಯಾ, ಕನಕಪುರ ರಸ್ತೆ, ನೆಲಗುಳಿ ವಿಲೇಜ್, ಬೆಂಗಳೂರು
ದೊಡ್ಡ ರೀತಿಯ ಸಾಹಸ ಕ್ರೀಡೆಗಳನ್ನು ನಿರೀಕ್ಷಿಸುವವರಿಗೆ ಕ್ವಾಡ್ ಬೈಕ್ ಎಂಬುದು ದೇವರು ಕೊಟ್ಟ ವರವೇ ಸರಿ. ಬೆಂಗಳೂರ ಹೊರವಲಯದಲ್ಲಿರುವ ಡರ್ಟ್ ಮೇನಿಯಾದಂಥ ಕ್ರೀಡಾ ಕೇಂದ್ರಗಳು ಆಫ್ ರೋಡ್ ಅಡ್ವೆಂಚರ್ ಬಯಸುವವರಿಗೆ ಬೆಸ್ಟ್ ಆಯ್ಕೆ.
ವಿಶ್ವದ 15 ಮನಸ್ಸು ಕದ್ದ ಮನೆ: ಒಳ ಬಂದು ನೋಡಿ ಸುಮ್ಮನೆ!...
ರಾಕ್ ಕ್ಲೈಂಬಿಂಗ್
ತುರಹಳ್ಳಿ ಕಾಡು, ಬೆಂಗಳೂರು
ಸುತ್ತ ಬಂಡೆಕಲ್ಲುಗಳ ಬೆಟ್ಟದಿಂದ ಕೂಡಿರುವ ಬೆಂಗಳೂರಿನಲ್ಲಿ ರಾಕ್ ಕ್ಲೈಂಬಿಂಗ್‌ಗೆ ಅವಕಾಶಗಳ ಕೊರತೆಯಾಗುವುದಿಲ್ಲ. ನಗರದ ಹಲವಾರು ಸಾಹಸಿ ಗುಂಪುಗಳು ರಾಕ್ ಕ್ಲೈಂಬಿಂಗ್‌ಗಾಗಿ ತುರಹಳ್ಳಿಯತ್ತ ಸಾಗುತ್ತವೆ. ಗಾರ್ಡನ್ ಸಿಟಿಯಿಂದ 13 ಕಿಲೋಮೀಟರ್ ದೂರದಲ್ಲಿದೆ ತುರಹಳ್ಳಿ ಅರಣ್ಯ ಪ್ರದೇಶ.
ಕ್ರಾಸ್ ಕಂಟ್ರಿ ಸೈಕ್ಲಿಂಗ್
ತಟ್ಟೆಕೆರೆ ಲೇಕ್
ಬೆಂಗಳೂರಿನ ಫಿಟ್ನೆಸ್ ಪ್ರಿಯರು ಸೈಕಲ್ ಮೇಲಿನ ತಮ್ಮ ಪ್ರೀತಿಯನ್ನು ಕ್ರಾಸ್ ಕಂಟ್ರಿ ಅಡ್ವೆಂಚರ್ ಆಗಿ ಬದಲಿಸಿಕೊಂಡಿದ್ದಾರೆ. ನಗರದಿಂದ ಹೊರಡುವ ಸೈಕ್ಲಿಸ್ಟ್‌ಗಳು ಅಕ್ಕಪಕ್ಕದ ಜಿಲ್ಲೆಗಳವರೆಗೆ ಹೋಗಿ ನಗರಕ್ಕೆ ಹಿಂದಿರುಗುತ್ತಾರೆ. ಕನಕಪುರ ತಾಲೂಕಿನ ತಟ್ಟೆಕೆರೆಯಂಥ ಶಾಂತ ಸ್ಥಳಗಳು ಸೈಕ್ಲಿಸ್ಟ್‌ಗಳಿಗೆ ಇಷ್ಟವಾದ ಗುರಿಗಳು. ಇದು ಸಾಹಸದ ಜೊತೆಗೆ ಅತ್ಯುತ್ತಮ ವ್ಯಾಯಾಮ ಕೂಡಾ. ಜೊತೆಗೆ, ಸುತ್ತಲ ಪರಿಸರ ಚೆನ್ನಾಗಿ ಗಮನಕ್ಕೆ ಬರುತ್ತದೆ.
ಝೋರ್ಬಿಂಗ್
ಡಿಸ್ಕವರಿ ವಿಲೇಜ್, ನಂದಿ ಹಿಲ್ಸ್
ಪಾರದರ್ಶಕ ಬಾಲೊಂದರಲ್ಲಿ ಕುಳಿತು ಉಳಿಜಾರಿನಲ್ಲಿ ಉರುಳುತ್ತಾ ಸಾಗುವವ ಅನನ್ಯ ಅನುಭವ ನೀಡುವ ಝೋರ್ಬಿಂಗ್ ನಂದಿ ಹಿಲ್ಸ್ ಬಳಿ ಇರುವ ಡಿಸ್ಕವರಿ ವಿಲೇಜ್‌ನಲ್ಲಿ ಲಭ್ಯ. ಬೆಂಗಳೂರಿಗೆ ಇದು ಹೊಸತಾದರೂ ಈಗ ಹಲವಾರು ರೆಸಾರ್ಟ್‌ಗಳು ಹಾಗೂ ಸ್ಪೋರ್ಟ್ಸ್ ಸೆಂಟರ್‌ಗಳು ಇದನ್ನು ತಾವು ನೀಡುವ ಚಟುವಟಿಕೆಗಳಲ್ಲೊಂದಾಗಿಸುತ್ತಿವೆ. ಇದಕ್ಕೆ ವಿಶೇಷ ಕೌಶಲ್ಯವೇನೂ ಬೇಡವಾಗಿದ್ದು, ಎಂಜಾಯ್ ಮಾಡಲಡ್ಡಿಯಿಲ್ಲ.
ಪೇಯಿಂಟ್ ಬಾಲ್
ಪೇಯಿಂಟ್ ಬಾಲ್ ಎಕ್ಸ್, ಬೇಗೂರು- ಕೊಪ್ಪ ರೋಡ್, ಬೆಟ್ಟದಾಸನಪುರ
ಕಾರ್ಪೋರೇಟ್ ಔಟಿಂಗ್‌ಗಳಲ್ಲಿ ಪೇಯಿಂಟ್ ಬಾಲ್ ಅತಿ ಜನಪ್ರಿಯ ಆಟ. ಗ್ರೂಪ್ ಆ್ಯಕ್ಟಿವಿಟಿ ಆಗಿರುವುದರಿಂದ ಹೆಚ್ಚು ಮಜವಾಗಿರುತ್ತದೆ ಕೂಡಾ. ಬೆಂಗಳೂರಿನಲ್ಲಿ ಹಲವು ರೆಸಾರ್ಟ್‌ಗಳಲ್ಲಿ ಪೇಯಿಂಟ್ ಬಾಲ್ ಆಡಲು ಅವಕಾಶವಿದ್ದರೂ ಮೈಲಸಂದ್ರದ ಪೇಯಿಂಟ್ ಬಾಲ್ ಎಕ್ಸ್ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.
ಪ್ಯಾರಾಗ್ಲೈಡಿಂಗ್
ನಂದಿ ಹಿಲ್ಸ್
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ನಂದಿ ಹಿಲ್ಸ್‌ನಲ್ಲಿ ಪ್ಯಾರಾಗ್ಲೈಡಿಂಗ್‌ಗೆ ಅವಕಾಶ ಕಲ್ಪಿಸಿದೆ. ಇದಕ್ಕೆ ಸಮ್ಮತಿ ನೀಡುವ ಮುನ್ನ ಜನರು ತರಬೇತಿ ಸೆಶನ್‌ಗಳಲ್ಲಿ ಭಾಗವಹಿಸುವುದು, ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಕಡ್ಡಾಯ. ಪ್ಯಾರಾಗ್ಲೈಡಿಂಗ್‌ನಲ್ಲಿ ನಂದಿ ಹಿಲ್ಸ್ ಬಳಿಯ ಸುತ್ತಣ ಹಸಿರು ಪ್ರಕೃತಿಯ ವೈಮಾನಿಕ ವೀಕ್ಷಣೆಯನ್ನು ಹಾರುತ್ತಾ ಮಾಡಬಹುದು.
ಪ್ಯಾರಾಸೈಲಿಂಗ್
ಜಕ್ಕೂರ್ ಏರೋಡ್ರಂ, ಯಲಹಂಕ
ಪ್ಯಾರಾಗ್ಲೈಡಿಂಗಿಗಿಂತ ಪ್ಯಾರಾಸೇಲಿಂಗ್ ಹೆಚ್ಚು ಸುರಕ್ಷಿತವಾದ ಸಾಹಸ ಕ್ರೀಡೆ. ವಾಹನಕ್ಕೆ ಪ್ಯಾರಾಚೂಟ್ ಕಟ್ಟಿ ವೇಗವಾಗಿ ಓಡಿಸಿ ಹಾರಿಸಲಾಗುತ್ತದೆ. ಹಾರಾಡುವ ಅನುಭವ ರೋಮಾಂಚನಗೊಳಿಸುವುದರಲ್ಲಿ ಅನುಮಾನವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.