ವಿಮಾನದಲ್ಲಿನ ಶೌಚಾಲಯದ ತ್ಯಾಜ್ಯ ಎಲ್ಲಿಗೆ ಹೋಗುತ್ತದೆ? ವಿಷಯ ಗೊತ್ತಾದ್ರೆ ನೀವು ಆಶ್ಚರ್ಯ ಪಡುತ್ತೀರಿ

Airplane News: ವಿಮಾನದಲ್ಲಿನ ಶೌಚಾಲಯದ ತ್ಯಾಜ್ಯವನ್ನು ನಿರ್ವಹಿಸಲು ವಿಶೇಷ ವೈಜ್ಞಾನಿಕ ತಂತ್ರಗಳನ್ನು ಬಳಸಲಾಗುತ್ತದೆ. ಶೌಚಾಲಯದಲ್ಲಿನ ತ್ಯಾಜ್ಯವನ್ನು ಕೊಳಕು ಟ್ಯಾಂಕ್‌ನೊಳಗೆ ಸಂಗ್ರಹಿಸಲಾಗುತ್ತದೆ ಮತ್ತು ಆನೋಡೈಸ್ಡ್ ಲಿಕ್ವಿಡ್ ಎಂಬ ರಾಸಾಯನಿಕವನ್ನು ಬಳಸಲಾಗುತ್ತದೆ.

A special scientific technique for handling toilet waste on board an airplane mrq

Airplane Toilets: ಭೂಮಿಯಿಂದ ಸಾವಿರಾರು ಮೀಟರ್ ಎತ್ತರರಲ್ಲಿ ಮೋಡಗಳ ಮಧ್ಯೆ ಹಾರಾಟ ನಡೆಸುವ ಪ್ರಯಾಣವೇ ತುಂಬಾ ವಿಭಿನ್ನವಾಗಿರುತ್ತದೆ. ಸಾಮಾನ್ಯ ಜನರಿಗೆ ವಿಮಾನ ಪ್ರಯಾಣ ಮಾಡೋದು ಬಹುದೊಡ್ಡ ಕನಸು ಆಗಿರುತ್ತದೆ. ಕೆಲವೇ ಗಂಟೆಗಳಲ್ಲಿ ನೂರಾರು ಕಿಲೋ ಮೀಟರ್ ಪ್ರಯಾಣವನ್ನು ವಿಮಾನ ಪೂರ್ಣಗೊಳಿಸುತ್ತದೆ.  ವಿಮಾನ ಭೂಮಿಯಿಂದ ಎತ್ತರಕ್ಕೆ ಹೋಗುತ್ತಿದ್ದಂತೆ ವಾತಾವರಣ ಸಂಪೂರ್ಣವಾಗಿ ಬದಲಾಗುತ್ತದೆ. ವಿಮಾನದ ಒಳಗೆ ಮತ್ತು ಹೊರಗಡೆ ಇರೋ ವಾತಾವರಣ ಸಂಪೂರ್ಣವಾಗಿರುತ್ತದೆ. ನಾವು ಭೂಮಿಯಿಂದ ಎಷ್ಟು ಎತ್ತರದಲ್ಲಿದ್ದೇವೆ? ಹೊರಗಿನ ವಾತಾವರಣ ಹೇಗಿದೆ ಎಂಬುದರ ಮಾಹಿತಿಯನ್ನು ಪೈಲಟ್‌ಗಳು ನೀಡುತ್ತಿರುತ್ತಾರೆ. ಪ್ರಯಾಣಿಕರಿಗೆ ವಿಮಾನದಲ್ಲಿ ಪಾನೀಯ, ಆಹಾರ ಸೇರಿದಂತೆ ಇನ್ನಿತರ ಸೌಲಭ್ಯಗಳು ಸಿಗುತ್ತಿರುತ್ತವೆ. 

ರೈಲುಗಳ ರೀತಿಯಲ್ಲಿಯೇ ವಿಮಾನಗಳಲ್ಲಿಯೂ ಶೌಚಾಲಯದ ವ್ಯವಸ್ಥೆ ಇರುತ್ತದೆ. ವಿಮಾನದ ಶೌಚಾಲಯದಲ್ಲಿ ಸಂಗ್ರಹವಾಗುವ ತ್ಯಾಜ್ಯದ ವಿಸರ್ಜನೆ ಹೇಗೆ ಆಗುತ್ತೆ ಎಂಬುದರ ಬಗ್ಗೆ ಬಹುತೇಕರಿಗೆ ತಿಳಿದಿರಲ್ಲ. ಈ ತ್ಯಾಜ್ಯದ ನಿರ್ವಹಣೆ  ಹೇಗೆ ಆಗುತ್ತೆ ಅಂತ ತಿಳಿದರೆ ನೀವು ಖಂಡಿತವಾಗಿ ಆಶ್ಚರ್ಯಪಡುತ್ತೀರಿ. ತ್ಯಾಜ್ಯ ನಿರ್ವಹಣೆಗಾಗಿ ವಿಶೇಷ ವೈಜ್ಞಾನಿಕ ತಂತ್ರಗಳನ್ನು ಬಳಕೆ ಮಾಡಲಾಗುತ್ತದೆ. 

Latest Videos

ಹೇಗೆ ನಿರ್ವಹಣೆ?
ನೀವು ವಿಮಾನದಲ್ಲಿ ಶೌಚಾಲಯವನ್ನು ಬಳಸುವಾಗ, ಫ್ಲಶ್ ಬಟನ್ ಒತ್ತಿದಾಗ, ಒಂದು ಕವಾಟ ತೆರೆಯುತ್ತದೆ. ಈ ಕವಾಟ ವಿಮಾನದ ಒಳಗಿನ ಮತ್ತು ಹೊರಗಿನ ವಾತಾವರಣದ ಒತ್ತಡದ ವ್ಯತ್ಯಾಸವನ್ನು ಬಳಸುವ ಶಕ್ತಿಶಾಲಿ ನಿರ್ವಾತ ವ್ಯವಸ್ಥೆ ಹೊಂದಿರುತ್ತದೆ. ಸಾಮಾನ್ಯವಾಗಿ ವಿಮಾನಗಳು 30 ರಿಂದ 40 ಸಾವಿರ ಅಡಿ ಎತ್ತರದಲ್ಲಿ ಹಾರುವಾಗ ಹೊರಗಿನ ವಾತಾವರಣದ ಒತ್ತಡ ತುಂಬಾ ಕಡಿಮೆ ಇರುತ್ತದೆ. ಈ ವಾತಾವರಣದ ಲಾಭ ಪಡೆದು ಶೌಚಾಲಯದಲ್ಲಿನ ಕವಾಟ ತ್ಯಾಜ್ಯವನ್ನು ಕೊಳಕು ಟ್ಯಾಂಕ್‌ನೊಳಗೆ ಸಂಗ್ರಹವಾಗುತ್ತದೆ. 

ವಿಮಾನಗಳಲ್ಲಿನ ಶೌಚಾಲಯ ವ್ಯವಸ್ಥೆಯನ್ನು ಪರಿಸರವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ರಾಸಾಯನಿಕಗಳು ಜೈವಿಕ ವಿಘಟನೀಯವಾಗಿದ್ದು, ತ್ಯಾಜ್ಯವನ್ನು ಒಳಚರಂಡಿ ವ್ಯವಸ್ಥೆಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನಗಳು ನಡೆಯುತ್ತಿವೆ. ವಿಮಾನ ಶೌಚಾಲಯದಲ್ಲಿನ ನೀರಿನ ಬಳಕೆ ಕಡಿಮೆ ಮಾಡುವ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗಿದೆ. ಮನೆಗಳಲ್ಲಿ ಶೌಚಾಲಯ ಪ್ಲಶ್ ಮಾಡಿದಾಗ 6 ರಿಂದ 10 ಲೀಟರ್ ನೀರು ಬೇಕಾಗುತ್ತದೆ. ಆದ್ರೆ ವಿಮಾನದಲ್ಲಿ ಕೇವಲ 0.5 ರಿಂದ 1 ಲೀಟರ್ ನೀರು ಬೇಕಾಗುತ್ತದೆ. 

ಇದನ್ನೂ ಓದಿ: ಜಮೀನಿಗೆ ಕೂಲಿ ಕೆಲಸಕ್ಕೆ ಬಂದ ಮಹಿಳೆಯರನ್ನು ವಿಮಾನದಲ್ಲಿ ಟೂರ್ ಮಾಡಿಸಿದ ಹರಪನಹಳ್ಳಿ ರೈತ!

ಆನೋಡೈಸ್ಡ್ ಲಿಕ್ವಿಡ್ ವಿಶೇಷ ರಾಸಾಯನಿಕ ಬಳಕೆ
ಶೌಚಾಲಯದಲ್ಲಿನ ವಾಸನೆ ನಿಯಂತ್ರಿಸಲು ಮತ್ತು ನೀರಿನ ಬಳಕೆ ಕಡಿಮೆ ಮಾಡಲು  "ಆನೋಡೈಸ್ಡ್ ಲಿಕ್ವಿಡ್" ಎಂಬ ರಾಸಾಯನಿಕವನ್ನು ಬಳಸಲಾಗುತ್ತದೆ. ಈ ರಾಸಾಯನಿಕ ವಾಸನೆಯನ್ನು ಹೋಗಲಾಡಿಸೋದು ಮಾತ್ರವಲ್ಲ ತ್ಯಾಜ್ಯದ ಕೊಳೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಕೊಳಕು ಟ್ಯಾಂಕ್‌ನಲ್ಲಿ ಹೆಚ್ಚು ನೀರು ಸಂಗ್ರಹವಾಗದಂತೆಯೂ ನೋಡಿಕೊಳ್ಳುತ್ತದೆ. ಇದರಿಂದ ವಿಮಾನಕ್ಕೆ ಹೆಚ್ಚುವರಿ ತೂಕ ಉಂಟಾಗೋದನ್ನು ತಪ್ಪಿಸುತ್ತದೆ. ಆನೋಡೈಸ್ಡ್ ಲಿಕ್ವಿಡ್ ತೊಟ್ಟಿಯೊಳಗೆ ಮುಚ್ಚಿ ಉಳಿಯುವುದರಿಂದ ಮತ್ತು ನಂತರ ಸರಿಯಾಗಿ ವಿಲೇವಾರಿ ಮಾಡುವುದರಿಂದ, ಅದು ಪರಿಸರಕ್ಕೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ.

ಇದನ್ನೂ ಓದಿ: ವಿಮಾನದಲ್ಲಿ ಯಾವ ಸೀಟು ಸೇಫ್‌? ಇಲ್ಲಿದೆ ಮಾಹಿತಿ!

tags
vuukle one pixel image
click me!