ಈ ಸ್ಥಳದಲ್ಲಿ ಪ್ರತಿ ವರ್ಷ ಆತ್ಮಹತ್ಯೆ ಮಾಡಿಕೊಳ್ಳುತ್ವೆ ಸಾವಿರಾರು ಪಕ್ಷಿಗಳು !

ಪ್ರಾಣಿ, ಪಕ್ಷಿಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ವೆ ಅಂದ್ರೆ ನೀವು ನಂಬ್ತೀರಾ? ಭಾರತದ ಒಂದು ಸ್ಥಳ ಪಕ್ಷಿಗಳ ಸೂಸೈಡ್ ಪಾಯಿಂಟ್ ಆಗಿದೆ. ಅದು ಯಾವ್ದು, ಅದ್ರ ವಿಶೇಷ ಏನು ಎಂಬ ಮಾಹಿತಿ ಇಲ್ಲಿದೆ. 
 

Jatinga Mysterious Suicide Point of Birds in India

ಆತ್ಮಹತ್ಯೆ (suicide) ಅಪರಾಧ. ಇದು ಗೊತ್ತಿದ್ರೂ ಅನೇಕರು ಆತ್ಮಹತ್ಯೆ ಮಾಡಿಕೊಳ್ತಾರೆ. ದೇಶದಲ್ಲಿ ಕೆಲ ಆತ್ಮಹತ್ಯಾ ಸ್ಥಳಗಳೂ ಇವೆ. ಉಳಿದ ಸ್ಥಳಗಳಿಗಿಂತ ಆ ಜಾಗದಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣ ವರದಿ ಆಗುವ ಕಾರಣ ಅದನ್ನು ಸುಸೈಡ್ ಪಾಯಿಂಟ್ (Suicide Point) ಎಂದೇ ಕರೆಯಲಾಗುತ್ತದೆ. ಆತ್ಮಹತ್ಯೆ ಎಂದಾಗ ನಮಗೆ ಮನುಷ್ಯ ಮಾತ್ರ ನೆನಪಿಗೆ ಬರ್ತಾನೆ. ಬರೀ ಮನುಷ್ಯ ಮಾತ್ರವಲ್ಲ ಪಕ್ಷಿಗಳೂ ಆತ್ಮಹತ್ಯೆ ಮಾಡಿಕೊಳ್ತವೆ ಅಂದ್ರೆ ನೀವು ನಂಬ್ಲೇಬೇಕು. ಪಕ್ಷಿಗಳು ತಮ್ಮ ಜೀವಕ್ಕೆ ಕುತ್ತು ತಂದುಕೊಳ್ತವೆ. ಅದೂ ಒಂದೇ ಸ್ಥಳಕ್ಕೆ ಬಂದು ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಭಾರತದಲ್ಲಿ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳವೊಂದಿದೆ. ಅಲ್ಲಿ ಪ್ರತಿ ವರ್ಷ ಸಾವಿರಾರು ಪಕ್ಷಿಗಳು ತಮ್ಮ ಪ್ರಾಣ ತ್ಯಾಗ ಮಾಡುತ್ತವೆ. ಆ ಸ್ಥಳದ ಮಾಹಿತಿ ಇಲ್ಲಿದೆ.  

ಪಕ್ಷಿ (bird)ಗಳ ಸಾವಿನ ಕಣಿವೆ ಯಾವುದು? : ಪಕ್ಷಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಅದೇ ಕಾರಣಕ್ಕೆ ಇದನ್ನು ಪಕ್ಷಿಗಳ ಸಾವಿನ ಕಣಿವೆ ಎಂದು ಕರೆಯಾಗುತ್ತದೆ. ಈಗ ನಾವು ಹೇಳ ಹೊರಟಿರುವ ಜಾಗ ಅಸ್ಸಾಂನಲ್ಲಿದೆ. ಇಲ್ಲಿನ ದಿಮಾ ಹಸಾವೊ ಜಿಲ್ಲೆಯ ಜಟ್ಟಿಂಗ ಎಂಬ ಹಳ್ಳಿಯಲ್ಲಿ ಪಕ್ಷಿಗಳ ಆತ್ಮಹತ್ಯೆಯ ಹಲವು ಪ್ರಕರಣ ವರದಿ ಆಗ್ತಿರುತ್ತವೆ. ಜಟ್ಟಿಂಗ ಗ್ರಾಮ, ಅಸ್ಸಾಂನ ಗುವಾಹಟಿಯಿಂದ ದಕ್ಷಿಣಕ್ಕೆ ಸುಮಾರು 330 ಕಿಲೋಮೀಟರ್ ದೂರದಲ್ಲಿದೆ. ಈ ಸ್ಥಳಕ್ಕೆ ಹತ್ತಿರದ ಪಟ್ಟಣ ಹಫ್ಲಾಂಗ್ ಪಟ್ಟಣ. ಇದು 9 ಕಿಲೋಮೀಟರ್ ದೂರದಲ್ಲಿದೆ. ಈ ಹಳ್ಳಿ, ಪಕ್ಷಿಗಳ ಆತ್ಮಹತ್ಯೆಯಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಗ್ರಾಮದಲ್ಲಿ ಖಾಸಿ-ಪನಾರ್ ಬುಡಕಟ್ಟಿನ ಜನರು ವಾಸಿಸುತ್ತಿದ್ದಾರೆ.

Latest Videos

ವಿಶ್ವ ಗೆದ್ದ ನಮ್ಮ ಆಹಾರ ಪದ್ಧತಿ, ಏಷ್ಯಾ 50 ಅತ್ಯುತ್ತಮ ಹೊಟೇಲ್ ಪಟ್ಟಿಯಲ್ಲಿ ಭಾರತದ ಹೆಸರು

ಇದು ಆತ್ಮಹತ್ಯೆಯಾ? : ಒಂದೇ ಜಾಗಕ್ಕೆ ಬಂದು ಪಕ್ಷಿಗಳು ಸಾಯುತ್ತವೆ. ಇದು ಆತ್ಮಹತ್ಯೆಯೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಪಕ್ಷಿಗಳ ಆತ್ಮಹತ್ಯೆ ಪ್ರಕರಣವನ್ನು ನೈಸರ್ಗಿಕ ವಿದ್ಯಮಾನವೆಂದು ಪರಿಗಣಿಸಲಾಗುತ್ತಿದೆ. ಇಲ್ಲಿಯವರೆಗೆ ಇದ್ರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗ್ತಿಲ್ಲ. ವಿಜ್ಞಾನಿಗಳು ಈ ವಿಷಯದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. 

ಯಾವ ಸಮಯದಲ್ಲಿ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ? : ಇಲ್ಲಿ ವಲಸೆ ಹಕ್ಕಿಗಳು ಮಾತ್ರವಲ್ಲದೆ ಸ್ಥಳೀಯ ಹಕ್ಕಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಇಲ್ಲಿ ಹಕ್ಕಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಸಂಜೆ 6 ರಿಂದ ರಾತ್ರಿ 10 ರವರೆಗೆ ಇಲ್ಲಿ ಹಕ್ಕಿಗಳು ಸಾಯುವುದು ಹೆಚ್ಚು. ಸ್ಥಳೀಯ ಜನರು ಈ ಪಕ್ಷಿಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ. ಇಲ್ಲಿ ವಯಸ್ಸಾದ ಹಕ್ಕಿಗಳು ಮಾತ್ರವಲ್ಲ ಅಪ್ರಾಪ್ತ ಹಕ್ಕಿಗಳು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತವೆ. 

ಭಾರತದ ಟಾಪ್-10 ಪ್ರಸಿದ್ಧ ಕಟ್ಟಡಗಳು: ಕರ್ನಾಟಕದಲ್ಲಿ ಎಷ್ಟಿವೆ ಗೊತ್ತಾ?

ಇದಕ್ಕೆ ಕಾರಣ ಏನು? : ಪಕ್ಷಿಗಳು ಇದೇ ಸ್ಥಳಕ್ಕೆ ಬಂದು ಸಾಯಲು ಕಾರಣ ಏನು ಎನ್ನುವ ಪ್ರಶ್ನೆಗೆ ಕೆಲವರು ಉತ್ತರ ನೀಡಿದ್ದಾರೆ. ಸೆಪ್ಟೆಂಬರ್ ಹಾಗೂ ನವೆಂಬರ್ ತಿಂಗಳಲ್ಲಿಯೇ ಪಕ್ಷಿಗಳು ಸಾಯಲು ಮುಖ್ಯ ಕಾರಣ ಪ್ರಕೃತಿ ಎನ್ನಲಾಗುತ್ತದೆ. ಈ ಸಮಯದಲ್ಲಿ ಬೇಗ ಸಂಜೆಯಾಗುತ್ತದೆ. ಬೇಗ ಕತ್ತಲು ಆವರಿಸುತ್ತದೆ. ಎತ್ತರದ ಬೆಟ್ಟಗಳಿಂದ ಆವೃತವಾದ ಜಟಿಂಗಾದಲ್ಲಿ ಬೇಗನೆ ಕತ್ತಲಾಗುತ್ತದೆ. ಈ ಸಮಯದಲ್ಲಿ ಗಾಳಿಯ ಒತ್ತಡ ಹೆಚ್ಚಾಗಿರುತ್ತದೆ. ದಟ್ಟವಾದ ಮಂಜು ಇಡೀ ಪ್ರದೇಶವನ್ನು ಆವರಿಸುತ್ತದೆ. ಕತ್ತಲೆಯಾದ ಕಾರಣ ಹಕ್ಕಿಗಳಿಗೆ ಸರಿಯಾಗಿ ಕಾಣದೆ ಅವು ಯಾವುದಾದ್ರೂ ವಸ್ತುವಿಗೆ ಡಿಕ್ಕಿ ಹೊಡೆದು ಸಾವನ್ನಪ್ಪುತ್ತವೆ ಎಂದು ಅಂದಾಜಿಸಲಾಗಿದೆ.  

tags
vuukle one pixel image
click me!