ಜಿಪಿಎಸ್ ನೋಡ್ಕೊಂಡು ಗಾಡಿ ಓಡಿಸಿ ಸಮುದ್ರಕ್ಕಿಳಿಸಿದ ಕುಡುಕಿ: ವಿಡಿಯೋ ವೈರಲ್

By Anusha Kb  |  First Published May 7, 2023, 1:22 PM IST

ಇಲ್ಲೊಬ್ಬಳು ಮಹಿಳೆ ಕುಡಿದ ಮತ್ತಿನಲ್ಲಿ ಗೂಗಲ್ ಮ್ಯಾಪ್ ಬಳಸಿ ಗಾಡಿ ಓಡಿಸಿದ್ದು, ಸೇರಬೇಕಾದಲ್ಲಿಗೆ ಸೇರದೆ ಸೀದಾ ಗಾಡಿಯನ್ನು ಸಮುದ್ರಕ್ಕಿಳಿಸಿದ್ದಾಳೆ  ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ನವದೆಹಲಿ: ತಂತ್ರಜ್ಞಾನ ಬಹಳ ಮುಂದುವರೆದಿದೆ.  ತಂತ್ರಜ್ಞಾನದ ನೆರವಿನಿಂದ ಜಗತ್ತಿನ ಒಂದು ಮೂಲೆಯಲ್ಲಿರುವ ವ್ಯಕ್ತಿ ಮತ್ತೊಂದು ಮೂಲೆಯಲ್ಲಿರುವ ವ್ಯಕ್ತಿಯನ್ನು  ಯಾವ ಕ್ಷಣದಲ್ಲಿ ಬೇಕಾದರೂ ಸಂಪರ್ಕಿಸಬಹುದಾಗಿದೆ. ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಅಥವಾ ಜಿಪಿಎಸ್ ಆಧರಿಸಿ ಪ್ರವಾಸ ಹೊರಡುವ ಅನೇಕರಿದ್ದಾರೆ.  ಅದನ್ನಾಧರಿಸಿ ಹೊಸ ಹೊಸ ಪ್ರದೇಶಗಳಿಗೆ ಭೇಟಿ ನೀಡುವರಿದ್ದಾರೆ.  ಆದರೆ ತಂತ್ರಜ್ಞಾನ ಎಲ್ಲಾ ಸಮಯದಲ್ಲೂ ಕೆಲಸ ಮಾಡುವುದಿಲ್ಲ. ಕೆಲವೊಮ್ಮೆ ನಮ್ಮ ಅನುಭವ ಅಥವಾ ಬುದ್ಧಿವಂತಿಕೆಯನ್ನು ಬಳಸಬೇಕುತ್ತದೆ. ಇಲ್ಲದೇ ಹೋದರೆ ದೊಡ್ಡ ಅನಾಹುತವಾಗುವುದಂತೂ ಪಕ್ಕಾ.

ಜಿಪಿಎಸ್‌ನ ಅವಾಂತರಗಳು ಅನೇಕ ಬಾರಿ ಸಾಬೀತಾಗಿವೆ. ಜಿಪಿಎಸ್ ಅಥವಾ ಗೂಗಲ್ ಮ್ಯಾಪ್ ಆಧರಿಸಿ ಹೊರಟ ಕೆಲವರು ಎಲ್ಲೋ ಸೇರುವ ಬದಲು ಇನ್ನೆಲ್ಲೋ ಸೇರಿದ್ದಾರೆ. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಕುಡಿದ ಮತ್ತಿನಲ್ಲಿ ಗೂಗಲ್ ಮ್ಯಾಪ್ ಬಳಸಿ ಗಾಡಿ ಓಡಿಸಿದ್ದು, ಸೇರಬೇಕಾದಲ್ಲಿಗೆ ಸೇರದೆ ಸೀದಾ ಗಾಡಿಯನ್ನು ಸಮುದ್ರಕ್ಕಿಳಿಸಿದ್ದಾಳೆ  ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Tap to resize

Latest Videos

undefined

ಅವರು ಕಾರೊಂದರಲ್ಲಿ (car) ಪ್ರವಾಸ ಹೊರಟವರಾಗಿದ್ದು, ಜಿಪಿಎಸ್ (GPS) ಸೂಚಿಸಿದಂತೆ ವಾಹನವನ್ನು ಚಾಲನೆ ಮಾಡುತ್ತಿದ್ದರು.  ಆದರೆ ಅವರು ನಂಬಿದ ಜಿಪಿಎಸ್ ಅವರನ್ನು ಸಮುದ್ರಕ್ಕಿಳಿಸಿದೆ.  ಕಾರಿನ ಸಮೇತ ಸಮುದ್ರಕ್ಕಿಳಿದ ಅವರನ್ನು ಸ್ಥಳೀಯ ನಾಗರಿಕರು ರಕ್ಷಣೆ ಮಾಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. 

Bengaluru: ಕಾರಿನ ಜಿಪಿಎಸ್‌ನಿಂದ ಬಯಲಾಯ್ತು ಪತ್ನಿಯ ಅನೈತಿಕ ಸಂಬಂಧ..!

ಈ ವೀಡಿಯೋವನ್ನು ಘಟನೆಯ ಪ್ರತ್ಯಕ್ಷದರ್ಶಿಗಳು ಮೊದಲಿಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್‌ ಮಾಡಿದ್ದಾರೆ ಎನ್ನಲಾಗಿದ್ದು, ವಿಡಿಯೋದಲ್ಲಿ ಸ್ಥಳೀಯ ಜನರು ಸಮುದ್ರಕ್ಕೆ ಹಾರಿ ಮುಳುಗುತ್ತಿರುವ ಕಾರಿನಿಂದ ಪ್ರವಾಸಿಗರನ್ನು ಹೊರಕ್ಕೆಳೆದು ರಕ್ಷಿಸುತ್ತಿದ್ದಾರೆ.  ಅದೃಷ್ಟವಶಾತ್ ಕಾರು ಸಮುದ್ರದಲ್ಲಿ ಮುಳುಗುವ ಮೊದಲು ಕಾರಿನಲ್ಲಿದ್ದ ಇಬ್ಬರೂ ಪ್ರವಾಸಿಗರನ್ನು ಸುರಕ್ಷಿತವಾಗಿ ಕಾರಿನ ಕಿಟಕಿ ಮೂಲಕ ಮೇಲಕ್ಕೆತ್ತಿ ರಕ್ಷಿಸಲಾಗಿದೆ. 

ಇನ್ಸ್ಟಾಗ್ರಾಮ್ ಬಳಕೆದಾರರಾದ Christie Hutchinson ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಘಟನೆ ನಡೆಯುವ ವೇಳೆ ಅವರು ಸ್ಥಳದಲ್ಲಿ ಉಪಸ್ಥಿತರಿದ್ದರೂ ಎಂದು ತಿಳಿದು ಬಂದಿದೆ.  ವಿಡಿಯೋ ಶೇರ್ ಮಾಡಿ ಕ್ರಿಸ್ಟಿ ಹಚಿನ್ಸನ್ ಹೀಗೆ ಬರೆದುಕೊಂಡಿದ್ದಾರೆ, ನಾನು ಮಳೆಯಿಂದ ಆಶ್ರಯ ಪಡೆಯಲು ಯತ್ನಿಸುತ್ತಾ ಅಲ್ಲಿ ಕುಳಿತಿದ್ದೆ, ಅಷ್ಟರಲ್ಲಿ ಕಾರೊಂದು ಅತ್ಯಂತ ವೇಗವಾಗಿ ನಮ್ಮ ದೋಣಿಯತ್ತ ಬರುತ್ತಿರುವುದನ್ನು ನಾನು ನೋಡಿದೆ' ಎಂದು ಅವರು ಬರೆದುಕೊಂಡಿದ್ದಾರೆ. 

3368 ಆ್ಯಂಬುಲೆನ್ಸ್‌ಗೆ ಜಿಪಿಎಸ್‌: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಈ ವಿಡಿಯೋ ಇದೀಗ ಜಿಪಿಎಸ್ ಬಳಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು  ಹಾಕಿದೆ.  ಅನೇಕರು ಆಕೆ ದಾರಿ ಪತ್ತೆಗಾಗಿ ಯಾವ ಮ್ಯಾಪ್ ಅನ್ನು ಬಳಸಿದ್ದಳು ಎಂಬುದನ್ನು ತಿಳಿಯಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಮತ್ತೆ ಕೆಲವರು ತಂತ್ರಜ್ಞಾನದ ಜೊತೆ ನಮ್ಮ ಬುದ್ಧಿಯನ್ನು ಕೂಡ ಬಳಸಬೇಕು ಇಲ್ಲದಿದ್ದರೆ ದೊಡ್ಡ ಅನಾಹುತವಾಗಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಜಿಪಿಎಸ್ ಯಾವಾಗಲೂ ಸರಿಯಾದ ಮಾರ್ಗವನ್ನು ತೋರಿಸುವುದಿಲ್ಲ, ಕೆಲವೊಂದು ಸಂದರ್ಭಗಳಲ್ಲಿ ಅದು ನಿಮ್ಮ ದಾರಿ ತಪ್ಪಿಸಬಹುದು,  ಹೀಗಾಗಿ ಅಪರಿಚಿತ ಪ್ರದೇಶಗಳಿಗೆ ತೆರಳುವಾಗ ಜಿಪಿಎಸ್‌ಗಿಂತ ಸ್ಥಳೀಯರ ಜೊತೆ ಆ ಬಗ್ಗೆ ವಿಚಾರಿಸುವುದು ಬಹಳ ಶ್ರೇಯಸ್ಕರ. 

 
 
 
 
 
 
 
 
 
 
 
 
 
 
 

A post shared by Christie H (@thehutchess)

 

click me!