ರಾಜ್ಯದಲ್ಲಿ ಮೇ 10ರಂದು ಮತದಾನ ಮಾಡಿದ ಮತದಾರರಿಗೆ ನಂದಿ ಬೆಟ್ಟದಲ್ಲಿರವ ಮಯೂರ ಹೋಟೆಲ್ ಬುಕಿಂಗ್ ಮಾಡಲು ಶೇ.50 ರಿಯಾಯಿತಿ ನೀಡಲಾಗಿದೆ.
ಬೆಂಗಳೂರು (ಮೇ 06): ರಾಜ್ಯದಲ್ಲಿ ಮೇ 10 ರಂದು ನಡೆಯುವ ಮತದಾನ ದಿನದಂದು ಬೆಂಗಳೂರು ಸೇರಿ ರಾಜ್ಯದ ಸಾರ್ವಜನಿಕರು ಮತ ಚಲಾವಣೆ ಮಾಡಿದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಗಿರಿಧಾಮದ ಹೋಟೆಲ್ ಮಯೂರ ಫೈನ್ ಟಾಪ್‌ನಲ್ಲಿ ವಾಸ್ತವ್ಯ ಹೂಡಲು ಶೇ.50 ರಿಯಾಯಿತಿ ನೀಡುತ್ತಿದೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ಮೇ 10 ರಂದು ನಡೆಯುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮತದಾನ ಪ್ರಮಾಣ ಹೆಚ್ಚಳ ಮಾಡಲು ಚುನಾವಣಾ ಆಯೋಗ ಭಾರಿ ಕಸರತ್ತು ಮಾಡುತ್ತಿದೆ. ಇದಕ್ಕೆ ನೆರವಾಗುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿ. ವತಿಯಿಂದಲೂ ಮತದಾನ ಮಾಡಿದವರಿಗೆ ಹೋಟೆಲ್ ಬುಕಿಂಗ್‌ನಲ್ಲಿ ಶೇ.50 ರಿಯಾಯಿತಿಯನ್ನು ನೀಡಿದೆ. ಈ ಮೂಲಕ ಮತ ಚಲಾವಣೆ ಮಾಡಿ ಹೋಟೆಲ್‌ಗೆ ಬರುವವರಿಗೆ ಭಾರಿ ಅನುಕೂಲ ಆಗಲಿದೆ.
ಮೇ 10 ರಂದು ನಂದಿ ಗಿರಿಧಾಮಕ್ಕೆ ಪ್ರವೇಶ ನಿಷೇಧ
ಮತ ಚಲಾಯಿಸಿದವರಿಗೆ ಮಾತ್ರ ಆಫರ್: ರಾಜ್ಯದ ಮತದಾರರನ್ನು ಪ್ರೋತ್ಸಾಹಿಸುವ ಸಲುವಾಗಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ/ ಮತ ಚಲಾಯಿಸುವ ಮತದಾರರು ಅಥವಾ ಸಾರ್ವಜನಿಕರಿಗೆ ನಿಗಮದ ಹೋಟೆಲ್ ಮಯೂರ ಫೈನ್ ಟಾಪ್, ನಂದಿಬೆಟ್ಟ ಘಟಕದಲ್ಲಿ ವಾಸ್ತವ್ಯ ಹೊಂದುವುದರ ಮೇಲೆ ಶೇ.50 ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಈ ರಿಯಾಯಿತಿಯನ್ನು ಪಡೆಯಲಿಚ್ಛಿಸುವ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡಿ, ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು.
ಗಾಂಧಿ, ಟಿಪ್ಪು ಸುಲ್ತಾನ ತಂಗಿದ ಸ್ಥಳ: ಆಶ್ಚರ್ಯಕರ ನೋಟಗಳು, ಮನಸ್ಸಿಗೆ ಮುದ ನೀಡುವ ಹಾಗೂ ವಾಸ್ತವಿಕವಾದ ಅನುಭವಗಳಿಂದ ಆವೃತವಾಗಿರುವ ನಂದಿ ಬೆಟ್ಟ ಸ್ಥಳವು ಸ್ವರ್ಗದಂತೆ ಭಾಸವಾಗುತ್ತದೆ ಮತ್ತು ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಅತ್ಯುತ್ತಮ ಸ್ಥಳವಾಗಿದೆ. ನಂದಿ ಬೆಟ್ಟವು ನಗರದ ಸ್ವಂತ ಗಿರಿಧಾಮವಾಗಿದ್ದು, ಬೆಂಗಳೂರಿನಿಂದ ಕೇವಲ 60 ಕಿ.ಮೀ. ದೂರದಲ್ಲಿರುತ್ತದೆ. ಸಮುದ್ರ ಮಟ್ಟದಿಂದ 1455 ಮೀಟರ್ ಎತ್ತರದಲ್ಲಿರುವ ಈ ಪ್ರದೇಶವು ಪ್ರಶಾಂತ ವಾತಾವರಣ ಮತ್ತು ತಾಜಾ ಗಾಳಿಯನ್ನು ನೀಡುವ ತಾಣವಾಗಿದ್ದು, ಬೇಸಿಗೆ ತಾಪ ಕಳೆಯಲು ಟಿಪ್ಪು ಸುಲ್ತಾನ ಮತ್ತು ಬ್ರಿಟಿಷರು ಈ ಸ್ಥಳವನ್ನು ಬಳಸುತ್ತಿದ್ದರು ಎಂಬ ಖ್ಯಾತಿಯೂ ಇದೆ.
ವಸತಿ ಗೃಹದಲ್ಲಿ ರೆಸ್ಟೋರೆಂಟ್ ವ್ಯವಸ್ಥೆ: ನಂದಿ ಬೆಟ್ಟವು ಒಂದು ಪರಿಪೂರ್ಣ ಹಾಗೂ ಧೀರ್ಘ ಮನೋಲ್ಲಾಸ ತಾಣವಾಗಿದ್ದು, ಸಾಹಸಪ್ರಿಯರಿಗೆ ಉತ್ತಮ ಸ್ಥಳವಾಗಿದೆ. ಸದರಿ ಸ್ಥಳ ಎರಡು ಪ್ರಾಚೀನ ಶಿವನ ದೇವಾಲಯಗಳನ್ನು ಹೊಂದಿದ್ದು, ಒಂದು ದೇವಾಲಯವು ಬೆಟ್ಟದ ಪಾದದಲ್ಲಿ ಮತ್ತು ಇನ್ನೊಂದು ದೇವಾಲಯವು ಶಿಖರದಲ್ಲಿದ್ದು, ಬೆಟ್ಟಕ್ಕೆ ಆಕರ್ಷಕವಾಗಿದೆ. ಹೋಟೆಲ್ ಮಯೂರ ನಂದಿಬೆಟ್ಟವು, ಬೆಟ್ಟದ ಶಿಖರದಲ್ಲಿ 17 ಕೊಠಡಿಗಳ ವಸತಿ ಗೃಹ, ಡಿಲೆಕ್ಸ್ ರೂಮ್ (ಗಾಂಧೀ ನಿಲಯ), ಡಬಲ್ ರೂಮ್ (ಗಾಂಧಿ ನಿಲಯ ನ್ಯೂ ಬ್ಲಾಕ್) ಹೊಂದಿದೆ. ಅಲ್ಲದೇ, ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ರೆಸ್ಟೋರೆಂಟ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಸೂಚನೆ: ಸಂಜೆ 6.00 ಗಂಟೆಯೊಳಗೆ ಚೆಕ್ ಇನ್ ಆಗಬೇಕಾಗಿರುತ್ತದೆ.
ನಿಮ್ಮ ಅಮೂಲ್ಯವಾದ ಮತ ಚಲಾಯಿಸಿ, ವಂಡರ್ ಲಾ ಟಿಕೆಟ್ ಮೇಲೆ ಡಿಸ್ಕೌಂಟ್ ಪಡೆಯಿರಿ..!
ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಹಾಗೂ ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಭಾರತದ ಅತಿ ದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ ಲಾ ವಿಶೇಷ ರಿಯಾಯಿತಿ ಘೊಷಿಸಿದೆ.
ಜನಜಂಗುಳಿಯಿಂದ ದೂರ ಉಳಿಯಲು ಬಯಸಿದ್ರೆ… ಈ ಗಿರಿಧಾಮಗಳೇ ಸ್ವರ್ಗ
ಮೇ.10 ರಂದು ಮತದಾನ ಮಾಡುವ ಪ್ರತಿಯೊಬ್ಬ ನಾಗರಿಕನಿಗೂ ವಂಡರ್ ಲಾ ಪ್ರವೇಶ ಶುಲ್ಕದ ಮೇಲೆ ಶೇ.15 ರಷ್ಟು ರಿಯಾಯಿತಿ ನೀಡುತ್ತಿದೆ. ಈ ಕೊಡುಗೆಯು ಮೇ. 10 ರಿಂದ ಮೇ. 12ರವರೆಗೂ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿದ್ದು, ಬುಕ್ಕಿಂಗ್ ಪೋರ್ಟಲ್ ಮೇ.5ರಿಂದ ತೆರೆಕೊಳ್ಳಲಿದೆ. ತಮ್ಮ ಬುಕ್ಕಿಂಗ್‌ನನ್ನು https://www.wonderla.com/ ಮೂಲಕ ಮಾಡಿಕೊಳ್ಳಬಹುದು. ಪ್ರವೇಶ ದ್ವಾರದಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ ಮತದಾರರಿಗೆ ಕೈ ಬೆರಳಿಗೆ ಹಾಕಿದ ಶಾಹಿಯ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ.
ಈ ಕುರಿತು ಮಾತನಾಡಿದ ವಂಡರ್‌ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಿತ್ತಿಲಪಿಲ್ಲಿ, ಪ್ರತಿಯೊಬ್ಬ ನಾಗರಿಕನೂ ಮತದಾನ ಮಾಡುವುದು ಅವರ ಕರ್ತವ್ಯವಾಗಿದೆ. ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ನಮ್ಮ ಪುಟ್ಟ ಹೆಜ್ಜೆ ಎಂದರು. ಹೆಚ್ಚಿನ ಮಾಹಿತಿಗಾಗಿ +91 80372 30333 ಅಥವಾ +91 80350 73966 ಸಂಪರ್ಕಿಸಿಬಹುದಾಗಿದೆ.