2 ಲಕ್ಷದೊಳಗೆ ಕೈಗೆಟುಕುವ ವಿದೇಶಿ ಹನಿಮೂನ್‌ ತಾಣಗಳು!

By Web Desk  |  First Published Nov 14, 2019, 10:48 AM IST

ಬಜೆಟ್ ಫ್ರೆಂಡ್ಲೀ ವಿದೇಶಿ ಹಾಲಿಡೇ ತಾಣಗಳಿವು. ಜೀವಮಾನ ಪೂರ್ತಿ ಮರೆಯಲಾರದ ಹನಿಮೂನ್‌ಗೆ ಹೇಳಿ ಮಾಡಿಸಿದ ಸ್ಥಳಗಳು. 


ಮದುವೆಯಾಗುತ್ತಿದ್ದೀರಿ, ಹಲವು ವರ್ಷಗಳಿಂದ ಕನಸು ಕಂಡಂತೆ ಹನಿಮೂನ್‌ಗೆ ವಿದೇಶಕ್ಕೆ ಹೋಗಬೇಕಿದೆ. ಎಲ್ಲಿಗಪ್ಪಾ ಹೋಗುವುದು ಎಂದು ಯೋಚಿಸುತ್ತಿದ್ದೀರಾದರೆ ಇಲ್ಲಿದೆ ನೋಡಿ ಪುಟ್ಟ ಪಟ್ಟಿ. ಬಜೆಟ್ ಇಬ್ಬರಿಂದ 2 ಲಕ್ಷ ಎಂದುಕೊಂಡರೂ ಅದರಲ್ಲಿ ಫ್ಲೈಟ್, ಆಹಾರ, ಹೋಟೆಲ್, ಚಟುವಟಿಕೆಗಳು ಎಲ್ಲ ಸೇರಿಯೂ ಎಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳದೆ, ಹಣಕ್ಕೆ ಮೀರಿ ಹೆಚ್ಚನ್ನು ಪಡೆದುಕೊಂಡು ಬರುವುದು ಹೇಗೆ ಎಂದೆಲ್ಲ ವಿವರಣೆ ಇಲ್ಲಿ ಸಿಗುತ್ತದೆ. 

ಗ್ರೀಸ್

Latest Videos

ಪುರಾತನ ಸಂಸ್ಕೃತಿ, ಸುಂದರ ಬೀಚ್‌ಗಳು, ಲಕ್ಷುರಿ ರೆಸ್ಟೋರೆಂಟ್‌ಗಳು, ಕಂಫರ್ಟ್ ನೀಡುವ ಹೋಟೆಲ್‌ಗಳು ಇನ್ನೂ ಹಲವುಗಳನ್ನೊಳಗೊಂಡ ಚೆಂದದ ಪ್ಯಾಕೇಜ್ ಗ್ರೀಸ್. ಇಲ್ಲಿ ಹನಿಮೂನ್ ಪ್ಲ್ಯಾನ್ ಮಾಡಿದರೆ ಸಂತೋರಿನಿ ಹಾಗೂ ಅಥೆನ್ಸ್ ಹೋಗಲೇಬೇಕಾದ ದ್ವೀಪಗಳು. ಆದರೆ ಹೆಚ್ಚು ಪ್ರೈವೆಸಿ ಬೇಕು, ಜನಜಂಗುಳಿ ಇರಬಾರದು ಎಂಬುದು ನಿಮ್ಮ ಇಚ್ಛೆಯಾಗಿದ್ದಲ್ಲಿ ಸಿಫ್ನೋಸ್‌ಗೆ ಹೋಗಬಹುದು. ಮೇನಿಂದ ಜುಲೈ, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್ ಗ್ರೀಸ್ ಹೋಗಲು ಬೆಸ್ಟ್ ಟೈಂ. 

ಭಾರತದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸೋಕೆ ಈ ಸ್ಥಳಗಳು ಬೆಸ್ಟ್!

ಇಲ್ಲಿ ಹಲವು ದ್ವೀಪಗಳಿವೆಯೆಂದು ಎಲ್ಲವನ್ನೂ ನೋಡಬೇಕೆಂಬ ದುರಾಸೆ ಬಿಟ್ಟುಬಿಡಿ. ಆಗ ನಿಮ್ಮ ಸಮಯವೆಲ್ಲ ಒಂದಾದ ಮೇಲೊಂದು ದೋಣಿ ಏರುವುದರಲ್ಲಿ, ಅವಕ್ಕೆ ಕಾಯುವುದರಲ್ಲೇ ಕಳೆದುಹೋಗುತ್ತದೆ. ಬದಲಿಗೆ ಎರಡರಿಂದ ಮೂರು ದ್ವೀಪಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಶಾಂತ ಮನಸ್ಸಿನಿಂದ ಸ್ಥಳದ ಸೌಂದರ್ಯವನ್ನು ಆಸ್ವಾದಿಸಿ. ಗ್ರೀಸ್ ಎಕ್ಸ್‌ಪ್ಲೋರ್ ಮಾಡಲು ತಜ್ಞರ ಸಹಾಯ ಪಡೆವುದು ಉತ್ತಮ. 

ಪ್ರಮುಖ ಆಕರ್ಷಣೆಗಳು: ಆಕ್ರೋಪೋಲಿಸ್, ಅಥೆನ್ಸ್, ಡೆಲ್ಫಿ, ಸ್ಯಾಂಟೋರಿನಿ, ರೋಡ್ಸ್ ಪಟ್ಟಣ, ಸಮರಿಯಾ ಗಾರ್ಜ್. 

ಥೈಲ್ಯಾಂಡ್

ಥೈಲ್ಯಾಂಡ್ ಅತ್ಯಂತ ಬಜೆಟ್ ಫ್ರೆಂಡ್ಲಿಯಾದ ದೇಶ. ಹಾಗಂಥ ಇಲ್ಲಿನ ಸುಖ, ಸೌಕರ್ಯ, ಸೌಂದರ್ಯಗಳ್ಯಾವುದಕ್ಕೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಪರ್ವತಗಳು, ಬ್ಯುಸಿ ಬೀಚ್‌ಗಳು, ಏಕಾಂತದಲ್ಲಿರುವ ಸಮುದ್ರ ತೀರಗಳು, ಸಿಕ್ಕಾಪಟ್ಟೆ ಚಟುವಟಿಕೆಯಿಂದ ಕೂಡಿರುವ ಸಿಟಿ ಲೈಫ್, ವನ್ಯಜೀವಿ ಧಾಮಗಳು - ಪ್ರತಿ ಜೋಡಿಗೂ ಆಸ್ವಾದಿಸಲು ಇಲ್ಲಿ ಏನಾದರೂ ಇದ್ದೇ ಇದೆ. ಇದೇ ಕಾರಣಕ್ಕೆ ಥೈಲ್ಯಾಂಡ್ ಹೊರಟರೆ ಯಾವುದನ್ನು ನೋಡುವುದು, ಯಾವುದನ್ನು ಬಿಡುವುದು ಎಂಬುದೇ ದೊಡ್ಡ ಗೊಂದಲವಾಗುತ್ತದೆ. 

ಎಲ್ಲಕ್ಕೂ ಮೊದಲು ಫುಕೆಟ್ ದ್ವೀಪಕ್ಕೆ ಪ್ಲ್ಯಾನ್ ಮಾಡಿ. ಇಲ್ಲಿನ ಬೀಚ್‌ಗಳು, ಸುಂದರ ಚಾರಣ ಸೌಕರ್ಯವುಳ್ಳ ಪರ್ವತಗಳು, ರುಚಿಕರ ಆಹಾರ ಸಂಪತ್ತನ್ನು ಹೊಂದಿದ ಉತ್ತಮ ಹೋಟೆಲ್‌ಗಳು, ನಿದ್ರೆಯೇ ಮರೆತ ನೈಟ್‌ಲೈಫ್, ಶಾಪಿಂಗ್ ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಳ್ಳಿ. ಹೆಚ್ಚು ಪ್ರಕೃತಿ ಪ್ರೇಮಿಗಳಾದರೆ ಉತ್ತರ ಥೈಲ್ಯಾಂಡ್ ಕಡೆ ಹೊರಡಬಹುದು. 

ಪ್ರಮುಖ ಆಕರ್ಷಣೆಗಳು: ಕ್ವಾಯ್ ನದಿಯ ಸೇತುವೆ, ಎರಾವನ್ ರಾಷ್ಟ್ರೀಯ ಉದ್ಯಾನ, ಮು ಖೋ ಹಾಂಗ್, ಹ್ಯಾಟ್ ಕ್ಯರಾನ್, ಖಾವ್ ಫನಾಮ್ ಬೆಂಚಾ ರಾಷ್ಟ್ರೀಯ ಉದ್ಯಾನ, ಖೋ ಮುಖ್, ಥಾಮ್ ಮೊರಾಕಟ್ ಗುಹೆ, ಕ್ಯಾಥೋಲಿಕ್ ಚರ್ಚ್ ಛತಾಂಬುರಿ. 

ಮಾಲ್ಡೀವ್ಸ್

ಬೀಚ್ ಎಂದರೆ ಏನು ಅನುಭವ ಕೊಡುವುದೋ ಅದೆಲ್ಲಕ್ಕಿಂತ ವಿಭಿನ್ನ ನೋಟ, ಅನುಭವ ಕೊಡುವ ತಾಣ ಮಾಲ್ಡೀವ್ಸ್. ಇಲ್ಲಿನ ದ್ವೀಪಗಳು ಈ ಲೋಕದ್ದೇ ಹೌದಾ ಎಂದು ಅನುಮಾನ ಹುಟ್ಟಿಸುವಷ್ಟು ಸೊಗಸಾಗಿವೆ. ಇಲ್ಲಿನ ರೊಮ್ಯಾಂಟಿಕ್ ವಾತಾವರಣ ನವಜೋಡಿಗಳಿಗೆ ಮೂಡ್ ಬಸ್ಟರ್. ಇಲ್ಲಿನ ನೀಲವರ್ಣದ ನೀರಿನಲ್ಲಿ ಸ್ಕೂಬಾ ಡೈವಿಂಗ್, ಫಿಶಿಂಗ್, ಸ್ನೋರ್ಕೆಲಿಂಗ್ ಮಾಡುವುದು ಮರೆಯಬೇಡಿ. ಇದರ ಹೊರತಾಗಿ ಸ್ಪಾ, ಪಿಕ್‌ನಿಕ್ ಮಾಡಬಹುದು. ಇದರೊಂದಿಗೆ ಸೀಸೈಡ್ ಕ್ಯಾಂಡಲ್ ಲೈಟ್ ಡಿನ್ನರ್ ಇಲ್ಲದೆ ಹನಿಮೂನ್ ಸಂಪೂರ್ಣವಾಗಲು ಸಾಧ್ಯವೇ ಇಲ್ಲ. 

ಪ್ರಮುಖ ಆಕರ್ಷಣೆಗಳು: ಫಾ ಮುಲಕು, ಕುದಾಹುವಧೂ, ಮಿಹಿರಿ ದ್ವೀಪಗಳು, ಗ್ರ್ಯಾಂಡ್ ಫ್ರೈಡೇ ಮಸೀದಿ, ನಲಗುರೈಧೂ ಬೀಚ್, ಮಾಲ್ಡೀವ್ಸ್ ರಾಷ್ಟ್ರೀಯ ಮ್ಯೂಸಿಯಂ. 

ಫಿಜಿ ಐಲ್ಯಾಂಡ್ಸ್

ಫಿಜಿ ಐಲ್ಯಾಂಡ್‌ಗಳಲ್ಲಿ ಲಕ್ಷುರಿಯಾದ ರೆಸಾರ್ಟ್‌ಗಳೆಲ್ಲ ನಿಮ್ಮ ಬಜೆಟ್‌ನೊಳಗೆ ನಿಲುಕುವುದು ಒಂದು ಪ್ಲಸ್ ಪಾಯಿಂಟ್. ವರ್ಷವಿಡೀ ಇಲ್ಲಿಗೆ ಭೇಟಿ ನೀಡಲು ತಕ್ಕ ಸಮಯವೇ. ಇಲ್ಲಿ ಸ್ಕೈ ಡೈವಿಂಗ್, ಡರ್ಟ್ ಬೈಕಿಂಗ್, ರಿವರ್ ರ್ಯಾಫ್ಟಿಂಗ್, ಟ್ರೆಕಿಂಗ್, ಸ್ಕೂಬಾ ಡೈವಿಂಗ್ ಮುಂತಾದ ಚಟುವಟಿಕೆಗಳಲ್ಲಿ ಈಗಷ್ಟೇ ಜೊತೆಯಾದ ನಿಮ್ಮ ಜೋಡಿಯೊಂದಿಗೆ ಪಾಲುದಾರರಾಗುವುದಕ್ಕಿಂತ ಉತ್ತಮವಾದುದು ಮತ್ತೇನಿದೆ? 

ಪ್ರಮುಖ ಆಕರ್ಷಣೆಗಳು: ತವೇನಿ ದ್ವೀಪದ ಬೌಮ ರಾಷ್ಟ್ರೀಯ ಉದ್ಯಾನವನ, ಮಮಾನುಕಾ ದ್ವೀಪದ ಕ್ಲೌಡ್‌ಬ್ರೇಕ್, ಬ್ಲೂ ಲಗೂನ್ ಕ್ರೂಸ್, ವಿಟಿ ಲೇವುನಲ್ಲಿ ಬೆಖಾ ಲಗೂನ್. 

ಹೋಗಬೇಕೆಂದರೂ ಈ ವಿಶೇಷ ಸ್ಥಳಗಳಿಗೆ ನೀವೆಂದೂ ಹೋಗಲಾರಿರಿ!

ಮಾರಿಷಸ್

ಮಾರಿಷಸ್ ಎಂದರೆ ಬೀಚ್ ಹೊರತಾಗಿ ಇನ್ನೇನು ಇಲ್ಲ ಎಂದು ನಿಮಗೆನಿಸಬಹುದು. ಆದರೆ, ಈ ಬೀಚ್‌ಗಳೇ ಅದೆಷ್ಟು ಇಂಪ್ರೆಸಿವ್ ಆಗಿವೆ ಎಂದರೆ ಅದರ ಹೊರತಾಗಿ ಬೇರೇನಾದರೂ ಬೇಕೆಂದೇ ಅನಿಸದು. ಬಾಲಿವುಡ್ ಚಿತ್ರಗಳು, ಕಾದಂಬರಿಕಾರರಿಗೆಲ್ಲ ಫೇವರೇಟ್ ಆಗಿರುವ ಮಾರಿಷಸ್‌ನಲ್ಲಿ ಜಗತ್ತಿನಲ್ಲೇ ಅಪರೂಪವೆನಿಸುವ ಕೆಲ ಸ್ಥಳಗಳನ್ನು ನೋಡಬಹುದು. 
ದಿ ಗ್ರ್ಯಾಂಡ್ ಬೇ ಹಾಗೂ ಪೆರಿಬೆರೆ ಮಿಸ್ ಮಾಡಬೇಡಿ. ಶಾಪಿಂಗ್, ಡೈನಿಂಗ್, ಕ್ಲಬ್ಬಿಂಗ್ ಮಾಡಲೇಬೇಕು. 

ಪ್ರಮುಖ ಆಕರ್ಷಣೆಗಳು: ಗ್ರ್ಯಾಂಡ್ ಬೇ, ಶಾಮೆರಲ್ ಕಲರ್ಡ್ ಅರ್ಥ್, ಕಸೆಲಾ ನೇಚರ್ ಪಾರ್ಕ್.

ಈಜಿಪ್ಟ್

ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯಿಂದ ಕೂಡಿರುವ ಈಜಿಪ್ಟ್ ಎಂದರೆ ಥಟ್ ಅಂತ ತಲೆಗೆ ಬರುವುದು ಪಿರಮಿಡ್‌ಗಳು ಹಾಗೂ ನೈಲ್ ನದಿ. ಇಲ್ಲಿ ಇತಿಹಾಸ ಪ್ರೇಮಿಗಳಿಗೆ ಆಸ್ವಾದಿಸಿ ಮುಗಿಸಲಾರದಷ್ಟು ಸಂಪತ್ತಿದೆ. ನಿಮ್ಮ ಸಂಗಾತಿಯೊಂದಿಗೆ ನೈಲ್ ನದಿಯ ತೀರದಲ್ಲಿ ಕೈ ಕೈ ಹಿಡಿದು ನಡೆಯಬಹುದು ಇಲ್ಲವೇ ಕ್ರೂಸ್ ಹೋಗಬಹುದು. 

ಪ್ರಮುಖ ಆಕರ್ಷಣೆಗಳು: ಸಿವಾ ಓಯಸಿಸ್, ಈಜಿಪ್ಟಿಯನ್ ಮ್ಯೂಸಿಯಂ, ವ್ಯಾಲಿ ಆಫ್ ಕಿಂಗ್ಸ್, ನೈಲ್ ಕ್ರೂಸ್, ರೆಡ್ ಸೀ ರೀಫ್, ಕರ್ನಾಕ್, ಗಿಝಾ ನೆಕ್ರೋಪೋಲಿಸ್. 

click me!