ತಿರುಪತಿಯಲ್ಲಿ ಉತ್ಪಾದನೆಯಾಗಲಿಗೆ Mi TV-ಇನ್ನು ಅಗ್ಗವಾಗಲಿದೆ ಬೆಲೆ!

By Web DeskFirst Published Oct 7, 2018, 1:11 PM IST
Highlights

ಚೀನಾ ಮೂಲಕ ಕ್ಸಿಯೋಮಿ ಸಂಸ್ಥೆ  Mi ಟಿವಿಗಳು ಮತ್ತಷ್ಟು ಅಗ್ಗವಾಗಲಿದೆ. ಭಾರತದಲ್ಲೇ ಉತ್ವಾದನೆ ಆರಂಭಿಸಲು ಮುಂದಾಗಿರುವ ಎಂಐ ಟಿವಿ ಇಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲು ನಿರ್ಧರಿಸಿದೆ.

ತಿರುಪತಿ(ಅ.07): ಕ್ಸಿಯೋಮಿ ಸಂಸ್ಥೆಯ Mi  TV ಈಗಾಗಲೇ ಭಾರತದಲ್ಲಿ ಲಭ್ಯವಿದೆ. ಕಡಿಮೆ ಬೆಲೆ ಹಾಗೂ ಗರಿಷ್ಠ ಫೀಚರ್ಸ್‌ನೊಂದಿಗೆ ಇತರ ಬ್ಯಾಂಡ್ ಟಿವಿಗಳಿಗೆ ಇದೀಗ Mi LED Tv ಭಾರಿ ಪೈಪೋಟಿ  ನೀಡುತ್ತಿದೆ. ಇದೀಗ ಚೀನಾ ಮೂಲದ ಕ್ಸಿಯೋಮಿ ಕಂಪೆನಿ ತನ್ನ ಎಂಐ ಟಿವಿ ಉತ್ವಾದನೆಯನ್ನ ಭಾರತದಲ್ಲೇ ಮಾಡಲು ನಿರ್ಧರಿಸಿದೆ.

ಭಾರತದಲ್ಲಿ ಟಿವಿ ಉತ್ಪಾದನೆ ಮಾಡಲು ಕ್ಸಿಯೋಮಿ ಕಂಪೆನಿ ಭಾರತದ ಡಿಕ್ಸೊನ್ ಟೆಕ್ನಾಲಜಿ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಆಂಧ್ರಪ್ರದೇಶದ ತಿರುಪತಿ ಬಳಿ 32 ಎಕರೆ ಭೂಮಿಯಲ್ಲಿ ನೂತನ MI ಟಿವಿ ಫ್ಯಾಕ್ಟರಿ ಆರಂಭವಾಗಲಿದೆ.

850 ಮಂದಿಗೆ ಉದ್ಯೋಗ ಹಾಗೂ ಪ್ರತಿ ತಿಂಗಳು 1 ಲಕ್ಷ ಎಂಐ ಟಿವಿ ಉತ್ವಾದಿಸಲು ಕಂಪೆನಿ ನಿರ್ಧರಿಸಿದೆ. ಈ ಮೂಲಕ ಭಾರತದ ಟಿವಿ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಕ್ಸಿಯೋಮಿ ಎಂಐ ಈಗಾಗಲೇ ಕಾರ್ಯಾರಂಭಿಸಿದೆ.

ಆಂಧ್ರಪ್ರದೇಶದಲ್ಲಿ ಎಂಐ ಟಿವಿಗಳು ಉತ್ಪಾದನೆಯಾಗುವುದರಿಂದ  ಟಿವಿ ಬೆಲೆ ಮತ್ತಷ್ಟು ಅಗ್ಗವಾಗಲಿದೆ. ಈಗಾಗಲೇ ಎಂಐ ಟಿವಿಗಳು ಕಡಿಮೆ ಬೆಲೆ ಅನ್ನೋ ಹೆಗ್ಗಳಿಕಗೆ ಪಾತ್ರವಾಗಿದೆ. ಇನ್ಮುಂದೆ Mi TV ಮತ್ತಷ್ಟು ಅಗ್ಗವಾಗಲಿದೆ.

click me!