ವೊಡಾಫೋನ್-ಐಡಿಯಾ ಗ್ರಾಹಕರ ಗಮನಕ್ಕೆ

By Web DeskFirst Published Jul 27, 2018, 10:41 AM IST
Highlights

 ಐಡಿಯಾ ಹಾಗೂ ವೊಡಾಫೋನ್ ವಿಲೀನವಾಗಲು ಅನುಮತಿ ದೊರಕಿದ್ದು ಇದರಿಂದ 43 ಕೋಟಿ ಗ್ರಾಹಕರ ಮೂಲಕ ಶೇ.35ರಷ್ಟು ಮಾರು ಕಟ್ಟೆ ಮೇಲೆ ಹಿಡಿತ ಸಾಧಿಸಿ ಭಾರತದ ಅತಿದೊಡ್ಡ ನೆಟ್‌ವರ್ಕ್ ಆಗಿ ಹೊರಹೊಮ್ಮಿವೆ. 

ನವದೆಹಲಿ: ವೊಡಾಫೋನ್ ಮತ್ತು ಐಡಿಯಾ ಸೆಲ್ಯೂಲರ್ ವಿಲೀನಕ್ಕೆ ಕೇಂದ್ರ ಸರ್ಕಾರ ಅಂತಿಮ ಅನುಮೋದನೆ ನೀಡಿದೆ. 

ಈ ಹಿನ್ನೆಲೆ ಒಟ್ಟು 43 ಕೋಟಿ ಗ್ರಾಹಕರ ಮೂಲಕ ಶೇ.35ರಷ್ಟು ಮಾರು ಕಟ್ಟೆ ಮೇಲೆ ಹಿಡಿತ ಸಾಧಿಸಿರುವ ವೊಡಾಫೋನ್-ಐಡಿಯಾ ಭಾರತದ ಅತಿದೊಡ್ಡ ನೆಟ್‌ವರ್ಕ್ ಆಗಿದೆ. 

ಈ ಹಿಂದೆ 34 ಕೋಟಿ ಚಂದಾದಾರರನ್ನು ಹೊಂದಿದ ಏರ್‌ಟೆಲ್ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದೆ. ವೊಡಾಫೋನ್ ಮತ್ತು ಐಡಿಯಾ ವಿಲೀನದಿಂದಾಗಿ ಮಾರುಕಟ್ಟೆಯಲ್ಲಿ ದೇಶದ ಅತಿ ಶ್ರೀಮಂತ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಸವಾಲು ಎದುರಿಸಲು ನೆರವಾಗಲಿದೆ ಎಂದು ಹೇಳಲಾಗಿದೆ.
 

click me!