ಯಾವ ಫೋಟೋದಲ್ಲೂ ನಕ್ಷತ್ರವಿಲ್ಲ: ಅಪೋಲೋ ಮೂನ್ ಲ್ಯಾಂಡಿಂಗ್ ಫೇಕ್?

By Web DeskFirst Published Jun 7, 2019, 3:29 PM IST
Highlights

ಜು.20, 1969, ಮಾನವ ಇತಿಹಾಸದ ಸುವರ್ಣ ದಿನ| ತನ್ನ ಬುದ್ಧಿಮತ್ತೆಯಿಂದಲೇ ಚಂದ್ರನ ಮೇಲೆ ಕಾಲಿಟ್ಟಿದ್ದ ಮಾನವ| ಚಂದ್ರನ ಮೇಲ್ಮೆ ಸ್ಪರ್ಶಿಸಿದ್ದ ಅಮೆರಿಕದ ಖಗೋಳ ಸಂಸ್ಥೆ ನಾಸಾದ ಅಪೋಲೋ 11 ಯಾನ| ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ನೀಲ್ ಆರ್ಮ್‌ಸ್ಟ್ರಾಂಗ್| ನಾಸಾ ನಿಜಕ್ಕೂ ಚಂದ್ರನ ಮೇಲೆ ಮಾನವರನ್ನು ಕಳುಹಿಸಿತ್ತಾ?| ನಾಸಾದ ಚಂದ್ರನ ಫೋಟೋಗಳಲ್ಲಿವೆ ಹಲವು ಅನುಮಾನಗಳು| ಗಾಳಿಯೇ ಇಲ್ಲದ ಚಂದ್ರನಲ್ಲಿ ಅಮೆರಿಕದ ಬಾವುಟ ಹಾರಿದ್ದೇಗೆ?| ಚಂದ್ರನ ಮೇಲ್ಮೈ ಫೋಟೋಗಳಲ್ಲಿ ಒಂದೂ ನಕ್ಷತ್ರ ಕಾಣಿಸುತ್ತಿಲ್ಲವೇಕೆ?| ನಾಸಾ ಈ ಅನುಮಾನ ಪರಿಹರಿಸಿದ್ದೇಗೆ?| 

ವಾಷಿಂಗ್ಟನ್(ಜೂ.07): ಅದು ಜು.20, 1969. ಮಾನವ ನಾಗರಿಕತೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರದಿಡಬೇಕಾದ ದಿನ. ತನ್ನ ಬುದ್ಧಿಮತ್ತೆಯಿಂದಲೇ ಬ್ರಹ್ಮಂಡ ಸೀಳಿದ್ದ ಮಾನವ, ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ನೆಲ ಮುಟ್ಟಿ ಬಂದಿದ್ದ.

ಜು.20, 1969ರಂದು ಅಮೆರಿಕದ ಖಗೋಳ ಸಂಸ್ಥೆ ನಾಸಾದ ಅಪೋಲೋ 11 ಎಂಬ ಯಾನ ಚಂದ್ರನ ಮೇಲ್ಮೈ ಯಶಸ್ವಿಯಾಗಿ ಇಳಿದಿತ್ತು. ನೀಲ್ ಆರ್ಮ್‌ಸ್ಟ್ರಾಂಗ್ ಯಾನದಿಂದ ಕೆಳಗಿಳಿದು ಚಂದ್ರನ ನೆಲ ಸ್ಪರ್ಶಿಸಿದ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಈ ಮೂಲಕ ರಷ್ಯಾ ಜೊತೆಗಿನ ಖಗೋಳ ಅನ್ವೇಷಣೆ ಯುದ್ಧದಲ್ಲಿ ಅಮೆರಿಕ ಜಯ ದಾಖಲಿಸಿತ್ತು. ಆದರೆ ನಾಸಾದ ಅಪೋಲೋ 11 ಮಿಶನ್ ಒಂದು ಸುಳ್ಳಿನ ಕಂತೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ.

ಇದಕ್ಕೆ ಪುರಾವೆ ಎಂಬಂತೆ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಓಡಾಡುತ್ತಿರುವ ಫೋಟೋ ಅಥವಾ ವಿಡಿಯೋದಲ್ಲಿ ಅಮೆರಿಕದ ರಾಷ್ಟ್ರೀಯ ಧ್ವಜ ಹಾರಾಡುತ್ತಿದ್ದು, ಚಂದ್ರನ ಮೇಲೆ ಗಾಳಿಯೇ ಇಲ್ಲ ಎಂದಾದ ಮೇಲೆ ಬಾವುಟ ಹಾರಾಡಲು ಹೇಗೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದರು. ಅಲ್ಲದೇ ನೀಲ್ ಅವರ ನೆರಳು ಹಿಂಬದಿಯಲ್ಲಿ ಕಾಣಿಸಿಕೊಂಡ ಬಗೆ ಕುರಿತೂ ಹಲವು ಅನುಮಾನಗಳು ಎದ್ದಿದ್ದವು.

ಆದರೆ ಎಲ್ಲಕ್ಕಿಂತ ಪ್ರಮುಖವಾಗಿ ಫಾಕ್ಸ್ ಟಿಲಿವಿಶನ್ ನೆಟ್ ವರ್ಕ್ 2001ರಲ್ಲಿ ‘ಡಿಡ್ ವಿ ಲ್ಯಾಂಡ್ ಆನ್ ದಿ ಮೂನ್’ ಎಂಬ ಸಾಕ್ಷ್ಯಚಿತ್ರ ಬಿತ್ತರಿಸಿತ್ತು. ಇದರಲ್ಲಿ ಚಂದ್ರನ ಮೇಲಿಂದ ಕ್ಲಿಕ್ಕಿಸಿದ ಫೋಟೋಗಳಲ್ಲಿ ಭೂಮಿ ಸ್ಪಷ್ಟವಾಗಿ ಕಾಣಿಸುತ್ತದೆಯಾದರೂ, ಒಂದೇ ಒಂದು ನಕ್ಷತ್ರ ಕಾಣಿಸದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿತ್ತು.

ನೀಲ್ ಆರ್ಮ್‌ಸ್ಟ್ರಾಂಗ್ ಅಮೆರಿಕದ ಬಾವುಟ ಹಿಡಿದು ನಿಂತಿರುವ ಫೋಟೋದಲ್ಲಿ ಹಿಂದುಗಡೆ ಭೂಮಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಅಲ್ಲದೇ ಚಂದ್ರನ ಮೇಲ್ಮೈ ಮೇಲಿಂದ ಭೂಮಿ ಉದಯಿಸುತ್ತಿರುವ ಫೋಟೋ ಕೂಡ ಇದೆ. ಆದರೆ ಈ ಎಲ್ಲ ಫೋಟೋಗಳಲ್ಲಿ ಒಂದೇ ಒಂದು ನಕ್ಷತ್ರ ಕಂಡಿಲ್ಲ.

ನಾಸಾದ ಸ್ಪಷ್ಟನೆ ಏನು?:

ಆದರೆ ಈ ಕುರಿತಾದ ಅನುಮಾನಗಳಿಗೆ ತೆರೆ ಎಳೆದಿರುವ ನಾಸಾ, ಇದಕ್ಕೆ ಕ್ಯಾಮರಾದ ಶೆಟರ್‌ಗಳೇ ಕಾರಣ ಎಂದು ಹೇಳಿದೆ. ನಾಸಾ ದ ಕ್ಯಾಮರಾಗಳು ಹೈ ಶೆಟರ್ ಸ್ಪೀಡ್ ತಂತ್ರಜ್ಞಾನ ಹೊಂದಿದ್ದು, ನಿರ್ದಿಷ್ಟ ವಸ್ತುವನ್ನಷ್ಟೇ ಲೆನ್ಸ್ ಗ್ರಹಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

ಇದಕ್ಕಾಗಿ ನಾವು ಬಳಸುವ ಮೊಬೈಲ್ ಫೋನ್ ಉದಾಹರಣೆ ನೀಡಿರುವ ನಾಸಾ, ಮೊಬೈಲ್ ಫೋನ್‌ನಲ್ಲಿ ರಾತ್ರಿ ಆಗಸದ ಫೋಟೋ ಕ್ಲಿಕ್ಕಿಸಿದರೆ ನಿರ್ದಿಷ್ಟ ಗಾತ್ರದ ವಸ್ತುಗಳಷ್ಟೇ ಸೆರೆಯಾಗುತ್ತವೆ ಹೊರತು ಚಿಕ್ಕ ಗಾತ್ರದ ನಕ್ಷತ್ರಗಳಲ್ಲ ಎಂದು ಅನುಮಾನ ವ್ಯಕ್ತಪಡಿಸುವವರ ಬಾಯಿ ಮುಚ್ಚಿಸಿದೆ.

click me!