ಐಫೋನ್ ವಾಟ್ಸಪ್‌ಗೆ 4 ಹೊಸ ಫೀಚರ್‌ಗಳು

By Web DeskFirst Published Oct 26, 2018, 3:26 PM IST
Highlights

ಐಫೋನ್‌ಗಳಿಗೆ ವಾಟ್ಸಪ್ ಸಂಸ್ಥೆ ಹೊಸ ಫೀಚರ್‌ಗಳನ್ನು ಒದಗಿಸಿದೆ. ಸದ್ಯ ಐಫೋನ್ ಎಕ್ಸ್ ಸೀರೀಸ್‌ನ ಮೊಬೈಲ್‌ಗಳಿಗೆ ಮಾತ್ರ ಈ ಫೀಚರ್ ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಉಳಿದ ಮಾಡೆಲ್‌ಗಳಿಗೂ ಬರುವುದು ನಿಶ್ಚಿತ.

ಆಮೇಲೆ ಆ್ಯಂಡ್ರಾಯ್ಡ್ ಫೋನ್‌ಗಳಿಗೂ ಈ ಫೀಚರ್ ಸಿಗಬಹುದು. ಐಫೋನ್ ಎಕ್ಸ್ ಆರ್, ಐಫೋನ್ ಎಕ್ಸ್‌ಎಸ್, ಐಫೋನ್ ಎಕ್ಸ್ ಎಸ್ ಮ್ಯಾಕ್ಸ್ ಮೊಬೈಲ್‌ಗಳಲ್ಲಿ ಆಡಿಯೋ ಮೆಸೇಜ್, ಬಬಲ್ ಮೆನುಗಾಗಿ ಹೊಸ ಇಂಟರ್‌ಫೇಸ್ ಹಾಗೂ ಸ್ಟೇಟಸ್‌ನಲ್ಲಿ ಮರು ಸಂದೇಶ ಕಳುಹಿಸಲು ಮತ್ತಷ್ಟು ಆಪ್ಷನ್‌ಗಳನ್ನು ವಾಟ್ಸಪ್ ನೀಡಿದೆ. ಈ ಎಲ್ಲಾ ಅಪ್‌ಡೇಟ್‌ಗಳು ಐಒಎಸ್ ವರ್ಷನ್ 2.18.100ರಲ್ಲಿ ಕಾಣಸಿಗುತ್ತದೆ.

ಈ ಹಿಂದೆ ಆಡಿಯೋ ಸಂದೇಶ ಕಳುಹಿಸಿತ್ತಿದ್ದ ವ್ಯಕ್ತಿಯ ಸಂದೇಶವನ್ನು ಓದುಗ ಒಂದೊಂದಾಗಿಯೇ ಕೇಳಬೇಕಿತ್ತು. ಆದರೆ ಈ ನೂತನ ಅಪ್‌ಡೇಟ್‌ನಲ್ಲಿ ಆ ಸಮಸ್ಯೆ ಇಲ್ಲ. ವಾಯ್ಸ್ ಮೆಸೇಜ್ಗಳನ್ನು ನಿರಂತರವಾಗಿ ಕೇಳಬಹುದಾಗಿದ್ದು, ಒಂದೊಂದೇ ಕೇಳಬೆಕೆಂದಿಲ್ಲ. ಇದರೊಂದಿಗೆ ಬಬಲ್ ಆ್ಯಕ್ಷನ್ ಮೆನುನಲ್ಲಿಯೂ ಕೆಲವೊಂದು ಬದಲಾವಣೆಯನ್ನು ಕಾಣಬಹುದಾಗಿದೆ. ಡಿಲೀಟ್, ರಿಪ್ಲೈ, ಫಾರ್‌ವರ್ಡ್, ಸ್ಟಾರ್, ಕಾಪಿ ಹೀಗೆ ಹಲವಾರು ವಿಭಾಗದಲ್ಲಿ ಬದಲಾವಣೆ ಕಾಣಬಹುದಾಗಿದೆ. ಇದರೊಂದಿಗೆ ವಾಟ್ಸಪ್ ಕಾಲ್ ಅನ್ನು ಕೂಡ ಮತ್ತೊಮ್ಮೆ ಡಿಸೈನ್ ಮಾಡಲಾಗಿದೆ. 

ಈ ಹಿಂದಿನ ವಾಟ್ಸಪ್‌ನ ಸ್ಟೇಟಸ್‌ನಲ್ಲಿ ಗಿಫ್, ಟೆಕ್ಸ್ಟ್ ಸಂದೇಶ, ಚಿತ್ರಗಳು, ವಿಡಿಯೋ ಮೂಲಕವಷ್ಟೇ ರಿಪ್ಲೈ ಮಾಡಬಹುದಾಗಿತ್ತು. ಈ ಹೊಸ ವರ್ಷನ್‌ನಲ್ಲಿ ಇದಕ್ಕೆ ಮತ್ತಷ್ಟು ಜೋಡಣೆಯಾಗಿದ್ದು, ಇದರಲ್ಲಿ ವಾಯ್ಸ್ ಮೆಸೇಜ್, ನೀವಿರುವ ಸ್ಥಳ ಅಂದರೆ ಲೊಕೇಶನ್, ಡಾಕ್ಯುಮೆಂಟ್ಸ್, ಅಲ್ಲದೆ ನಿಮ್ಮ ಕಾಂಟೆಕ್ಟ್‌ಗಳನ್ನು ಕಳುಹಿಸುವ ಸೌಲಭ್ಯ ಇದರಲ್ಲಿದೆ. ಇದು ಮುಂದೆ ಬರುವ ಎಲ್ಲಾ ಆ್ಯಂಡ್ರಾಯ್ಡ್ ಆ್ಯಪ್‌ಗಳಲ್ಲೂ ಈ ಹೊಸ ವಾಟ್ಸಅಪ್ ವರ್ಷನ್ ಅಳವಡಿಸಲಾಗುತ್ತದೆ.

click me!