ಡಿಸ್ನಿ+ ಹಾಟ್‌ಸ್ಟಾರ್‌ನಂತೆ ನೆಟ್‌ಫ್ಲಿಕ್ಸ್‌ನಲ್ಲೂ ಶೀಘ್ರದಲ್ಲೇ ಲೈವ್‌ ಸ್ಟ್ರೀಮಿಂಗ್ ಆರಂಭ?

Published : May 16, 2022, 07:30 PM IST
ಡಿಸ್ನಿ+ ಹಾಟ್‌ಸ್ಟಾರ್‌ನಂತೆ ನೆಟ್‌ಫ್ಲಿಕ್ಸ್‌ನಲ್ಲೂ ಶೀಘ್ರದಲ್ಲೇ ಲೈವ್‌ ಸ್ಟ್ರೀಮಿಂಗ್ ಆರಂಭ?

ಸಾರಾಂಶ

ನೆಟ್‌ಫ್ಲಿಕ್ಸನ ಇತ್ತೀಚಿನ ಗಳಿಕೆಯ ವರದಿಯಲ್ಲಿ, ಸ್ಟ್ರೀಮಿಂಗ್ ಸೇವೆಯು ಒಂದು ದಶಕದಲ್ಲಿ ಮೊದಲ ಬಾರಿಗೆ ಚಂದಾದಾರರನ್ನು ಕಳೆದುಕೊಳ್ಳುತ್ತಿದೆ ಎಂದು ವರದಿ ಮಾಡಿದೆ

Netflix livestreaming: ನೆಟ್‌ಫ್ಲಿಕ್ಸ್ ಮೊದಲ ತ್ರೈಮಾಸಿಕದ ನಷ್ಟವನ್ನು ಸರಿದೂಗಿಸಲು ಹೊಸ ಚಂದಾದಾರರನ್ನು ಸೇರಿಸಲು ಉತ್ಸುಕವಾಗಿದೆ. ವರ್ಷದ ಮೊದಲ ಮೂರು ತಿಂಗಳಲ್ಲಿ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಸುಮಾರು 200,000 ಚಂದಾದಾರರನ್ನು ಕಳೆದುಕೊಂಡ ನಂತರ, ಹೆಚ್ಚಿನ ಚಂದಾದಾರರನ್ನು ಆಕರ್ಷಿಸಲು ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.  ವಿಡಿಯೋ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ನಲ್ಲಿ ಶೀಘ್ರದಲ್ಲೇ ಲೈವ್‌  ಸ್ಟ್ರೀಮಿಂಗ್‌ ಫೀಚರ್‌ ಬಿಡುಗಡೆಯಾಬಹುದು ಎಂದು ವರದಿಗಳು ಸೂಚಿಸಿವೆ.  ನೆಟ್‌ಫ್ಲಿಕ್ಸ್ ಪ್ರಸ್ತುತ ಸ್ಟ್ಯಾಂಡ್-ಅಪ್ ಕಾರ್ಯಕ್ರಮಗಳು ಮತ್ತು ಇತರ ಲೈವ್ ಕಂಟೆಂಟ್ ಲೈವ್‌ಸ್ಟ್ರೀಮಿಂಗ್  ವೈಶಿಷ್ಟ್ಯ ಬಿಡುಗಡೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಡೆಡ್‌ಲೈನ್‌ನ ವರದಿ ತಿಳಿಸಿದೆ.  

ನೆಟ್‌ಫ್ಲಿಕ್ಸ್‌ ಲೈವ್‌ಸ್ಟ್ರೀಮ್‌ ವೈಶಿಷ್ಟ್ಯವು ರಿಯಾಲಿಟಿ ಶೋ, ಕಾಂಪಿಟಿಷನ್‌ ಶೋಸ್‌, ಗೇಮಿಂಗ್‌ ಶೋಸ್‌ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯಂತಹ ಕಾರ್ಯಕ್ರಮಗಳನ್ನು  ಪ್ರಸಾರ ಮಾಡುವ ಸಾಧ್ಯತೆಯಿದೆ ಎಂದು  ವರದಿ ಹೇಳಿದೆ.  ಲೈವ್ ಹಾಸ್ಯ ಕಾರ್ಯಕ್ರನಗಳನ್ನೂ  ಪ್ರಸಾರ ಮಾಡಲು ನೆಟ್‌ಫ್ಲಿಕ್ಸ್ ಈ ವೈಶಿಷ್ಟ್ಯವನ್ನು ಬಳಸಬಹುದು ಎಂದು ಹೇಳಲಾಗಿದೆ

ಈ ವರ್ಷ, ನೆಟ್‌ಫ್ಲಿಕ್ಸ್ ತನ್ನ ಮೊದಲ ಲೈವ್ ಮತ್ತು ಇನ್-ಪರ್ಸನ್ ಹಾಸ್ಯ ಉತ್ಸವವನ್ನು ನೆಟ್‌ಫ್ಲಿಕ್ಸ್ ಈಸ್ ಎ ಜೋಕ್ ಫೆಸ್ಟ್  ಆಯೋಜಿಸಿತ್ತು. ಲಾಸ್ ಏಂಜಲೀಸ್ ಮೂಲದ ಈವೆಂಟ್ ಹಲವಾರು ದಿನಗಳವರೆಗೆ ಸ್ಟ್ರೀಮ್‌ ಆಗಿತ್ತು ಮತ್ತು ಅಲಿ ವಾಂಗ್, ಬಿಲ್ ಬರ್, ಜೆರ್ರಿ ಸೀನ್‌ಫೆಲ್ಡ್, ಜಾನ್ ಮುಲಾನಿ ಮುಂತಾದವರನ್ನು ಒಳಗೊಂಡಂತೆ 130 ಕ್ಕೂ ಹೆಚ್ಚು ಜನಪ್ರಿಯ ಹಾಸ್ಯನಟರನ್ನು ಒಳಗೊಂಡಿತ್ತು. 

ಇದನ್ನೂ ಓದಿ: ಇನ್ಮುಂದೆ ನೆಟ್‌ಫ್ಲಿಕ್ಸ್‌ನಲ್ಲೂ ಜಾಹೀರಾತು? ವರ್ಷದ ಅಂತ್ಯದ ವೇಳೆಗೆ ಹೊಸ ಯೋಜನೆ ಲಾಂಚ್?

ಇಲ್ಲಿಯವರೆಗೆ, ಮುಂಬರುವ ವೈಶಿಷ್ಟ್ಯದ ಬಗ್ಗೆ ಇನ್ನೂ ಹೆಚ್ಚು ತಿಳಿದಿಲ್ಲ ಮತ್ತು ನೆಟ್‌ಫ್ಲಿಕ್ಸ್ ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ನೆಟ್‌ಫ್ಲಿಕ್ಸ್‌ನ ಅತಿದೊಡ್ಡ ಪ್ರತಿಸ್ಪರ್ಧಿಗಳಲ್ಲಿ ಒಂದಾದ ಡಿಸ್ನಿ ಪ್ಲಸ್ ಈಗಾಗಲೇ ಲೈವ್‌ಸ್ಟ್ರೀಮ್‌ ವೈಶಿಷ್ಟ್ಯಕ್ಕೆ ಬಂಬಲ ಹೊಂದಿದೆ.  ಫೆಬ್ರವರಿಯಲ್ಲಿ, ಡಿಸ್ನಿ ಪ್ಲಸ್ ಅಕಾಡೆಮಿ ಪ್ರಶಸ್ತಿಗಳ ನೇರ ಪ್ರದರ್ಶನವನ್ನು ಪ್ರಸಾರ ಮಾಡಿತ್ತು. 

ಇನ್ನು  ಡಿಸ್ನಿ ಪ್ಲಸ್ ಸೆಲೆಬ್ರಿಟಿ ಡ್ಯಾನ್ಸ್ ಸ್ಪರ್ಧೆಯ ಸರಣಿಗಳಿಗೆ ಈಗ ಹೆಸರುವಾಸಿಯಾಗಿದೆ. ಡ್ಯಾನ್ಸಿಂಗ್ ವಿಥ್ ದಿ ಸ್ಟಾರ್ಸ್, ಇದು ಈ ವರ್ಷದ ಕೊನೆಯಲ್ಲಿ ವೇದಿಕೆಯಲ್ಲಿ ಲೈವ್ ಸರಣಿಯಾಗಿ ಪಾದಾರ್ಪಣೆ ಮಾಡಲು ಸಿದ್ಧವಾಗಿದೆ.

ನೆಟ್‌ಫ್ಲಿಕ್ಸನ ಇತ್ತೀಚಿನ ಗಳಿಕೆಯ ವರದಿಯಲ್ಲಿ, ಸ್ಟ್ರೀಮಿಂಗ್ ಸೇವೆಯು ಒಂದು ದಶಕದಲ್ಲಿ ಮೊದಲ ಬಾರಿಗೆ ಚಂದಾದಾರರನ್ನು ಕಳೆದುಕೊಳ್ಳುತ್ತಿದೆ ಎಂದು ವರದಿ ಮಾಡಿದೆ, ಆದರೆ ಡಿಸ್ನಿ ಪ್ಲಸ್ 2022 ರ ಮೊದಲ ತ್ರೈಮಾಸಿಕದಲ್ಲಿ 7.9 ಮಿಲಿಯನ್ ಹೊಸ ಬಳಕೆದಾರರನ್ನು ಸೇರಿಸುವಲ್ಲಿ ಯಶಸ್ವಿಯಾಗಿದೆ. ಆದಾಯ ಮತ್ತು ಚಂದಾದಾರರ ಕುಸಿತವನ್ನು ಎದುರಿಸಲು ಸಹಾಯ ಮಾಡಲು, ನೆಟ್‌ಫ್ಲಿಕ್ಸ್ ಪಾಸ್ವರ್ಡ್ ಹಂಚಿಕೆಯನ್ನು ತಡೆ ಹಿಡಿಉವುದರ ಜೊತೆಗೆ ಅಗ್ಗದ ಜಾಹೀರಾತು-ಬೆಂಬಲಿತ ಸ್ಟ್ರೀಮಿಂಗ್ ಆಯ್ಕೆಯನ್ನು ಸೇರಿಸುವ ಬಗ್ಗೆ ಸುಳಿವು ನೀಡಿದೆ.

ನೆಟ್‌ಫ್ಲಿಕ್ಸ್ ಚಂದಾದಾರರಲ್ಲಿ ಕುಸಿತ: ಹಣದುಬ್ಬರ, ರಷ್ಯಾ ಉಕ್ರೇನ್ ಯುದ್ಧ ಯುದ್ಧ ಮತ್ತು ತೀವ್ರ ಪೈಪೋಟಿಯು ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಚಂದಾದಾರರ ನಷ್ಟಕ್ಕೆ ಕಾರಣವಾಗಿದ್ದು, ಭವಿಷ್ಯದಲ್ಲಿ ಕಂಪನಿ ಇನ್ನಷ್ಟು ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ. ಕೋವಿಡ್‌ ಸಮಯದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದ್ದ ನೆಟ್‌ಫ್ಲಿಕ್ಸ್‌ ಈಗ ಚಂದಾದಾರರನ್ನು ಕಳೆದುಕೊಂಡಿದ್ದು  ಸ್ಟ್ರೀಮಿಂಗ್ ಕಂಪನಿಯಲ್ಲಿ ಹಠಾತ್ ಬದಲಾವಣೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ಭಾರತೀಯ ಮಕ್ಕಳು ಆನ್‌ಲೈನ್ ವಂಚನೆ ಬಲಿಯಾಗುವ ಸಾಧ್ಯತೆ ಹೆಚ್ಚು: McAfee 2022 ವರದಿ

ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ನೆಟ್‌ಫ್ಲಿಕ್ಸ್ ಚಂದಾದಾರಿಕೆಯಲ್ಲಿ ಏರಿಕೆಯಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಕಂಪನಿಯು ತನ್ನ ಚಂದಾದಾರಿಕೆ ವ್ಯವಹಾರದ ಏರಿಳಿತಗಳನ್ನು ಅರ್ಥೈಸಿಕೊಳ್ಳಲು ವಿಫಲವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಪ್ರತಿಸ್ಪರ್ಧಿಗಳ ಬೆಳವಣಿಗೆ  ಮತ್ತು ಬಳಕೆದಾರರು ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವ ಖಾತೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಬೆಳೆಯಲು ಕಷ್ಟವಾಗುವಂತೆ ತೋರುತ್ತಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌