ಮಾರುಕಟ್ಟೆ ಪ್ರವೇಶಿಸಿದ ಜಿವಿ ಮೊಬೈಲ್ಸ್‌ನ ಬನಾನಾ ಮೊಬೈಲ್

By Web DeskFirst Published Sep 1, 2018, 6:21 PM IST
Highlights

ಜಿವಿ ಮೊಬೈಲ್ಸ್ ಕಂಪೆನಿಯಿಂದ ನೂತನ ಫೋನ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆ, ಹೆಚ್ಚಿನ ಫೀಚರ್ಸ್, ಹಾಗೂ ಆಕರ್ಷ ವಿನ್ಯಾಸದೊಂದಿಗೆ ಗ್ರಾಹಕರನ್ನ ಮೋಡಿ ಮಾಡಲಿದೆ. ಇಲ್ಲಿದೆ ಜಿವಿ ಮೊಬೈಲ್ಸ್ ಕಂಪೆನಿಯ ನೂತನ ಬನಾನ್ ಫೋನ್ ವಿಶೇಷತೆ.

ಬೆಂಗಳೂರು(ಸೆ.01): ಭಾರತದಲ್ಲಿ ಪ್ರತಿ ದಿನ ಹೊಸ ಹೊಸ ಮೊಬೈಲ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಒಂದನ್ನೊಂದು ಮೀರಿಸುವ ಟೆಕ್ನಾಲಜಿ. ಅತ್ಯುತ್ತಮ ಫೀಚರ್ಸ್ ಹಾಗೂ ಕಡಿಮೆ ಬೆಲೆಯಲ್ಲಿ ಮೊಬೈಲ್‌ಗಳು ಲಭ್ಯವಿದೆ. ಇದೀಗ ಜಿವಿ ಮೊಬೈಲ್ ಕಂಪೆನಿ ಬನಾನ ಮೊಬೈಲ್ ಬಿಡುಗಡೆ ಮಾಡಿದೆ.

ಬಾಳೆ ಹಣ್ಣಿನ ಶೈಲಿಯ ಬನಾನಾ 6, ಎಸ್‌3, ಎನ್‌3 ಸೇರಿದಂತೆ ವೈವಿಧ್ಯಮಯ ಶ್ರೇಣಿಯ ಮೊಬೈಲ್ ಫೋನ್‌ಗಳನ್ನು ಜಿವಿ ಮೊಬೈಲ್ಸ್ ಬಿಡುಗಡೆ ಮಾಡಿದೆ. ಎಲ್ಲ ಫೋನ್‌ಗಳಲ್ಲೂ ಡ್ಯುಯಲ್ ಸಿಮ್, 3 ಎಂಪಿ ಹಾಗೂ 4 ಎಂಪಿ ಕ್ಯಾಮರಾ, ವೈರ್‌ಲೆಸ್‌ಎಫ್‌ಎಂ, ದೀರ್ಘಬಾಳಿಕೆಯ ಬ್ಯಾಟರಿ, ಎಕ್ಸ್‌ಪ್ಯಾಂಡಬಲ್ ಮೆಮೊರಿ ಇತ್ಯಾದಿ ವಿಶೇಷತೆಗಳಿದ್ದು ಇಂಟರ್‌ನೆಟ್ ಬಳಕೆಯ ವ್ಯವಸ್ಥೆಯೂ ಇದೆ.

ಬನಾನಾ 6 ಮೊಬೈಲ್ ಬಾಳೆಹಣ್ಣಿನ ವಿನ್ಯಾಸ ಹೊಂದಿದ್ದುತಿರುವಿನ ಹಿಂಬದಿ ಹಾಗೂ ಕೀಪ್ಯಾಡ್‌ಗೆ ಸ್ಲೈಡಿಂಗ್ ಕವರ್ ಹೊಂದಿದೆ. ಸುದೀರ್ಘ ಬಾಳಿಕೆಯ 1000 ಎಂಎಚ್ ಬ್ಯಾಟರಿ ಇದೆ. ಈ ಶ್ರೇಣಿಯ ಮೊಬೈಲ್‌ಗಳು 899 ರು, 1199 ರು , 1399ರು, 949 ರು.ಗಳಲ್ಲಿ ಲಭ್ಯ. 

click me!