ಜಿಯೋ ಸಿಮ್ ಇಲ್ಲದೇ ಫ್ರೀ ಇಂಟರ್ನೆಟ್ ಪಡೆಯುವುದು ಹೇಗೆ? ಇಲ್ಲಿವೆ 10 ಮಾರ್ಗಗಳು

Published : Dec 19, 2016, 11:08 AM ISTUpdated : Apr 11, 2018, 01:10 PM IST
ಜಿಯೋ ಸಿಮ್ ಇಲ್ಲದೇ ಫ್ರೀ ಇಂಟರ್ನೆಟ್ ಪಡೆಯುವುದು ಹೇಗೆ? ಇಲ್ಲಿವೆ 10 ಮಾರ್ಗಗಳು

ಸಾರಾಂಶ

ನಿಮ್ಮಲ್ಲಿ ಜಿಯೋ ಸಿಮ್ ಇಲ್ಲ, ಆದರೂ ಫ್ರೀ ಇಂಟರ್ನೆಟ್ ಬೇಕು ಎಂಬ ಆಸೆ ಇದ್ದವರು ತುಂಬಾ ಜನರಿದ್ದಾರೆ ಆದರೆ ಹೇಗೆ ಪ್ರೀ ಇಂಟರ್ನೆಟ್ ಪಡೆಯುವುದು ಎಂಬ ಗೊಂದಲದಲ್ಲಿರುತ್ತಾರೆ. ನಿಮ್ಮಲ್ಲೂ ಈ ಗೊಂದಲವಿದ್ದರೆ ನೀವು ಈ ಸ್ಟೋರಿಯನ್ನು ತಪ್ಪದೇ ಓದಿ. ಜಿಯೋ ಇಲ್ಲದೆ ಫ್ರೀ ಇಂಟರ್ನೆಟ್ ಬಳಸುವ ಸುಲಭ 10 ಉಪಾಯಗಳು ಇಲ್ಲಿವೆ.

ನಿಮ್ಮಲ್ಲಿ ಜಿಯೋ ಸಿಮ್ ಇಲ್ಲ, ಆದರೂ ಫ್ರೀ ಇಂಟರ್ನೆಟ್ ಬೇಕು ಎಂಬ ಆಸೆ ಇದ್ದವರು ತುಂಬಾ ಜನರಿದ್ದಾರೆ ಆದರೆ ಹೇಗೆ ಪ್ರೀ ಇಂಟರ್ನೆಟ್ ಪಡೆಯುವುದು ಎಂಬ ಗೊಂದಲದಲ್ಲಿರುತ್ತಾರೆ. ನಿಮ್ಮಲ್ಲೂ ಈ ಗೊಂದಲವಿದ್ದರೆ ನೀವು ಈ ಸ್ಟೋರಿಯನ್ನು ತಪ್ಪದೇ ಓದಿ. ಜಿಯೋ ಇಲ್ಲದೆ ಫ್ರೀ ಇಂಟರ್ನೆಟ್ ಬಳಸುವ ಸುಲಭ 10 ಉಪಾಯಗಳು ಇಲ್ಲಿವೆ.

ನೀವು ಒಪೆರಾ ವೆಬ್ ಪಾಸ್ ಮೂಲಕ ಮೊಬೈಲ್ ಫೋನ್'ನಲ್ಲಿ ಫ್ರೀಯಾಗಿ ಇಂಟರ್ನೆಟ್ ಬಳಸಬಹುದು. ಇದಕ್ಕಾಗಿ ನೀವು ನಿಮ್ಮ ಮೊಬೈಲ್'ನಲ್ಲಿ ಒಪೆ5ರಾ ಮಿನಿ ಬ್ರೌಸರ್ ಓಪನ್ ಮಾಡಬೇಕು. ಬಳಿಕ ಸ್ಪೀಡ್ ಡಯಲ್ ಸ್ಟಾರ್ಟ್ ಸ್ಕ್ರೀನ್'ನಲ್ಲಿ ವೊಡಾಫೋನ್ ಇಂಟರ್ನೆಟ್ ಪಾಸ್/ ಐಡಿಯಾ ವೆಬ್ ಪಾಸ್ ಎಂಬ ಾಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ 'ಗೇಟ್ ಫ್ರೀ ಬ್ರೌಸಿಂಗ್ ಬೈ ಫ್ರೀಚಾರ್ಜ್' ಆಯ್ಕೆ ಮಾಡಿಕೊಂಡು ದಿನವಿಡೀ ಉಚಿತವಾಗಿ ಇಂಟರ್ನೆಟ್ ಬ್ರೌಸ್ ಮಾಡಿ.

ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ 3ಜಿ ಇಲ್ಲವೇ 4ಜಿ ಕನೆಕ್ಷನ್'ನ್ನು ನಿಮ್ಮ ಕಂಪ್ಯೂಟರ್'ನೊಂದಿಗೆ ಥೆದರ್ ಮಾಡಿಕೊಳ್ಳಿ. ಆ್ಯಂಡ್ರಾಯ್ಡ್ ಬಳಕೆದಾರರಾಗಿದ್ದರೆ ವೈ ಫೈ ಥೆದರಿಂಗ್ ಮಾಡಿಕೊಳ್ಳಲು ಫೋನ್'ನ್ನು ರೂಟ್ ಮಾಡಿಕೊಳ್ಳಬೇಕು. ಆದರೆ ಯುಎಸ್'ಬಿ ಥೆದರಿಂಗ್'ನಲ್ಲಿ ಇದರ ಅಗತ್ಯವಿಲ್ಲ. ಇನ್ನು ಐಫೋನ್ ಬಳಕೆದಾರರು ಜೆಲ್ ಬ್ರೇಕ್ ಮಾಡಿಕೊಳ್ಳಬೇಕಾಗುತ್ತದೆ. ಅದನ್ನು ಹೊರತುಪಡಿಸಿ 'ಥೆದರಿಂಗ್ ಆ್ಯಪ್' ಬಳಸಿಯೂ ಥೆದರಿಂಗ್ ಮಾಡಿ ಫ್ರೀಯಾಗಿ ಇಂಟರ್ನೆಟ್ ಬಳಸಿಕೊಳ್ಳಬಹುದು.

ನೀವು ನಗರ ಪ್ರದೇಶದ ನಿವಾಸಿಗಳಾದರೆ ಈ ಸೌಲಭ್ಯ ಸಿಗುತ್ತದೆ. ನಗರ ಪ್ರದೇಶಗಳಲ್ಲಿ ಕೇಬಲ್ ಕಂಪೆನಿಗಳು ಹಾಟ್ ಸ್ಪಾಟ್ ಮೂಲಕ ಉಚಿತ ಇಂಟರ್ನೆಟ್ ಸೇವೆ ನೀಡುತ್ತವೆ. ಇದಕ್ಕಾಗಿ ನೀವು ಮೊದಲು ನಿಮ್ಮ ಕೇಬಲ್ ಪ್ರೊವೈಡರ್ ವೆಬ್'ಸೈಟ್'ನಲ್ಲಿ ತಯಾವೆಲ್ಲಾ ಸ್ಥಳಗಳಲ್ಲಿ ಹಾಟ್'ಸ್ಪಾಟ್ ಸೇವೆ ನೀಡುತ್ತಾರೆಂದು ಗುರುತಿಸಿಕೊಂಡು ಬಳಿಕ ಕೇಬಲ್ ಆಪರೇಟರ್ಸ್'ನ್ನು ಸಂಪರ್ಕಿಸಿ ಈ ಸೇವೆಯನ್ನು ನೀಡಲು ಕೇಳಬೇಕು.

: ಹಲವಾರು ಬಾರಿ ಉಚಿತ ವೈ-ಫೈ ಸೇವೆ ಕೆಲವೇ ಗಂಟೆಗಳಿಗೆ ಲಭ್ಯವಿರುತ್ತದೆ. ಒಂದು ವೇಳೆ ನೀವಿದನ್ನು ದೀರ್ಘ ಕಾಲ ಬಳಸಲು ಇಚ್ಛಿಸುತ್ತೀರಾದರೆ ಎಮ್'ಎಸ್'ಸಿ ಅಡ್ರೆಸ್ ಸ್ಪೂಫಿಂಗ್ ಮಾಡಿಕೊಳ್ಳಬಹುದು. ಹೊಸ ಎಮ್'ಎಸ್'ಸಿ ಅಡ್ರೆಸ್ ಸ್ಪೂಫ್ ಮಾಡುವುದರಿಂದ ನೀವು ಅನ್'ಲಿಮಿಟೆಡ್ ಫ್ರೀ ಇಂಟರ್ನೆಟ್ ಬಳಸಬಹುದು.

ರಿಟೇಲ್'ಮೀನಟ್ ಡಾಟ್ ಕಾಮ್, ಗೈಡ್'ಲಿಂಗ್ ಮೊದಲಾದ ವೆಬ್'ಸೈಟ್'ಗಳು ಕೆಲವೊಂದು ಕೂಪನ್'ಗಳನ್ನು ನೀಡುತ್ತವೆ. ಇದನ್ನು ಬಳಸಿ ನೀವು ಉಚಿತ ಇಂಟರ್ನೆಟ್ ಬಳಸಬಹುದು. ಈ ಕಂಪೆನಿಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಫಾಲೋ ಮಾಡುವುದರಿಂದ ನೀವು ಹೆಚ್ಚೆಚ್ಚು ಕೂಪನ್'ಗಳನ್ನು ಪಡೆಯಬಹುದು.

ಕೆಲವೊಂದು ಹೊಟೇಲ್ ಹಾಗೂ ಕೆಲ ಕಂಪೆನಿಗಳು ಲಾಯಲ್ಟಿ ಪ್ರೋಗ್ರಾಂಗೆ ಹಾಜರಾದರೆ ನಿಮಗೆ ಉಚಿತ ಇಂಟರ್ನೆಟ್ ಬಳಸುವ ಅವಕಾಶ ನೀಡುತ್ತವೆ. ಈ ಲಾಯಲ್ಟಿ ಪ್ರೋಗ್ರಾಂಗಳಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಸ್ವೀಕರಿಸುವುದಿಲ್ಲ ಆದರೆ ಸೈನ್ ಅಪ್ ಮಾಡುವುದರಿಂದ ಈ ಕಂಪೆನಿಗಳಿಂದ ಕೆಲವೊಂದು ಮೇಲ್'ಗಳು ನಿಮಗೆ ಬರುತ್ತಿರುತ್ತವೆ. ಹೀಗಾಗಿ ನಿಮ್ಮ ಮೇಲ್'ನಲ್ಲಿ ಸ್ಪ್ಯಾಮ್ ಪೋಲ್ಡರ್'ನ್ನು ಸರಿಯಾಗಿ ನಿರ್ವಹಿಸುವುದು ಅಗತ್ಯ.

ಈ ಮೂಲಕ ನೀವು ಪ್ರತಿಯೊಂದು ವೆಬ್'ಸೈಟ್ ನೋಡಲು ಸಾಧ್ಯವಿಲ್ಲ. ಆದರೆ ಟೈಮ್ ಪಾಸ್ ಮಾಡಲು ನಿಮಗೆ ಉಚಿತ ಇಂಟರ್ನೆಟ್ ಬೇಕಾದರೆ ಈ ರೀತಿ ಮಾಡಬಹುದು. ಬಹಳಷ್ಟು ಪೇ ಹಾಟ್'ಸ್ಪಾಟ್'ಗಳು ಕೆಲವೊಂದು ವೆಬ್'ಸೈಟ್'ಗಳ ಬಳಕೆಯನ್ನು ಉಚಿತವಾಗಿ ನೀಡುತ್ತವೆ. ಉದಾಹರಣೆಗೆ ಡೆಲ್ಟ್ ಏರ್'ಲೈನ್ಸ್ ಮೂಲಕ ಅಮೆಜಾನ್, ಪೀಪಲ್ ಮ್ಯಾಗ್ಸಿನ್ ಹಾಗೂ ವಾಲ್ ಸ್ಟ್ರೀಟ್ ಜರ್ನಲ್'ನಂತಹ ವೆಬ್ಸೈಟ್'ಗಳನ್ನು ಉಚಿತವಾಗಿ ಬಳಸುವ ಆಯ್ಕೆ ನೀಡಿವೆ.

ಕೆಲವೊಂದು ಆ್ಯಪ್'ಗಳ ಮೂಲಕ ನೀವು ಉಚಿತ ಹಾಗೂ ಗುಪ್ತವಾಗಿರುವ ವೈ-ಫೈ ನೆಟ್ವರ್ಕ್'ಗಳನ್ನು ಹುಡುಕಬಹುದಾಗಿದೆ. ವಿಶೇಷವಾಗಿ ಇಲೆಕ್ಟ್ರಾನಿಕ್ಸ್ ಹಾಗೂ ವಿಮಾನ ನಿಲ್ದಾಣಗಳ ಪ್ರೀಮಿಯರ್ ಲಾಂಚ್ ಸಂದರ್ಭದಲ್ಲಿ ಈ ಸೌಲಭ್ಯ ಸಿಗುತ್ತದೆ. ಆದರೆ ಈ ಕುರಿತಾಗಿ ಹೆಚ್ಚಿನ ಜನರಿಗೆ ಮಾಹಿತಿ ನೀಡುವುದರಿಂದ ನಿಮಗೆ ನಷ್ಟವಾಗಬಹುದು. ಯಾಕೆಂದರೆ ಹೆಚ್ಚಿನ ಜನರು ಬಳಸುವುದು ಅಧಿಕಾರಿಗಳ ಗಮನಕ್ಕೆ ಬಂದರೆ ಪಾಸ್'ವರ್ಡ್ ಹಾಕುವ ಸಾಧ್ಯತೆಗಳಿವೆ.

ವೈ-ಫೈನಂತಹ ಹಾಟ್'ಸ್ಪಾಟ್ ಡೇಟಾ ಬೇಸ್'ಗಳು ಹತ್ತಿರದಲ್ಲಿರುವ ಹಾಟ್'ಸ್ಪಾಟ್ ಕುರಿತಾದ ಮಾಹಿತಿ ನೀಡುತ್ತವೆ. ಇದಕ್ಕಾಗಿಯೇ ಐಫೋನ್ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್'ಗಾಗಿಯೇ ವಿಶೇಷವಾದ ಆ್ಯಪ್'ನ್ನು ತಯಾರಿಸಲಾಗಿದೆ, ಈ ಮೂಲಕ ನೀವೂ ಉಚಿತವಾಗಿ ಇಂಟರ್ನೆಟ್ ಬಳಸಬಹುದು.

ಸ್ಟಾರ್ ಬಾಕ್ಸ್ ಇಲ್ಲವೇ ಮೆಕ್ ಡೊನಾಲ್ಡ್ಸ್'ನಂತಹ ಕೆಲವು ಹೊಟೇಲ್'ಗಳು ಫ್ರೀ ವೈ-ಫೈ ಸೇವೆ ನೀಡುತ್ತವೆ. ಇಂತಹ ಸ್ಥಳಗಳ ಕುರಿತಾಗಿ ಮಾಹಿತಿ ಸಂಗ್ರಹಿಸಿ, ನೆನಪಿಟ್ಟುಕೊಳ್ಳಿ. ಬಳಿಕ ನೀವು ಯಾವತ್ತಾದರೂ ಇಂತಹ ಸ್ಥಳಗಳಿಗೆ ತೆರಳಿದಾಗ ಅಲ್ಲಿ ನೀಡುವ ಫ್ರೀ ಇಂಟರ್ನೆಟ್ ಸೌಲಭ್ಯ ಬಳಸಲು ಮರೆಯದಿರಿ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಬಾಹ್ಯಾಕಾಶದಲ್ಲೂ ಆರೋಗ್ಯ ತುರ್ತುಪರಿಸ್ಥಿತಿ : ತುರ್ತು ಕಾರ್ಯಾಚರಣೆ
ಗ್ರೋಕ್‌ನಲ್ಲಿ ನೈಜ ವ್ಯಕ್ತಿ ಅಶ್ಲೀಲ ಚಿತ್ರ ಸೃಷ್ಟಿ ಅವಕಾಶಕ್ಕೆ ಬ್ರೇಕ್‌