
ಕೆಲವೊಮ್ಮೆ ವೈದ್ಯಲೋಕಕ್ಕೆ ಅಚ್ಚರಿ ಹುಟ್ಟಿಸುವ, ಯಾರ ಊಹೆಗೂ ನಿಲುಕದ ಘಟನೆಗಳು ಸಂಭವಿಸುತ್ತವೆ. ಅಂಥದ್ದರಲ್ಲಿ ಒಂದು ಈಗ ಚೀನಾದಲ್ಲಿ ನಡೆದಿದೆ. ಮಹಿಳೆಯರೊಬ್ಬರಿಗೆ ಎರಡು ಗರ್ಭಕೋಶ ಇರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಈ ಎರಡೂ ಪ್ರತ್ಯೇಕ ಗರ್ಭಕೋಶದಿಂದ ಈ ಮಹಿಳೆ ಈಗ ಅವಳಿ- ಜವಳಿ ಮಕ್ಕಳನ್ನು ಹೆತ್ತಿದ್ದಾರೆ! ಈಕೆ ಹೆಸರು ಲೀ. ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಎರಡು ಪ್ರತ್ಯೇಕ ಗರ್ಭದಿಂದ ಜನಿಸಿದ್ದು, ಇಬ್ಬರೂ ಆರೋಗ್ಯವಂತರಾಗಿದ್ದಾರೆ ಎನ್ನಲಾಗಿದೆ. ಇಬ್ಬರೂ ಮಕ್ಕಳು ಅಮ್ಮನ ಗರ್ಭದಲ್ಲಿ ಪ್ರತ್ಯೇಕ ವಿಲ್ಲಾದಲ್ಲಿ ವಾಸವಾಗಿದ್ದರು ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.
ಅಂದಹಾಗೆ, ಜಾಗತಿಕವಾಗಿ ಸುಮಾರು 0.3 ಪ್ರತಿಶತ ಮಹಿಳೆಯರಿಗೆ ಹೀಗೆ ಎರಡು ಗರ್ಭಕೋಶ ಇರುತ್ತದೆ ಎನ್ನುತ್ತಾರೆ ವೈದ್ಯರು. 10 ಲಕ್ಷದಲ್ಲಿ ಒಬ್ಬರಿಗೆ ಈ ರೀತಿ ಆಗುತ್ತದೆ ಎನ್ನುವುದು ಅವರ ಮಾತು. ಮಕ್ಕಳು ತಲಾ 3.3 ಕೆಜಿ ಮತ್ತು 2.4 ಕೆಜಿ ತೂಗುತ್ತಿದ್ದಾರೆ. "ನೈಸರ್ಗಿಕ ಗರ್ಭಧಾರಣೆಯ ಮೂಲಕ ಎರಡು ಗರ್ಭಾಶಯಗಳಲ್ಲಿ ಗರ್ಭಿಣಿಯಾಗುವುದು ಬಹಳ ಅಪರೂಪ. 37 ವಾರಗಳ ನಂತರ ಈ ರೀತಿ ಯಶಸ್ವಿ ಜನನ ಆಗುವುದು ಇನ್ನೂ ಅಪರೂಪ ಎನ್ನುತ್ತಾರೆ ಪ್ರಸೂತಿ ತಜ್ಞ ಕೈ ಯಿಂಗ್. ಚೀನಾದ ಸ್ಟೇಟ್ ಬ್ರಾಡ್‌ಕಾಸ್ಟರ್ ಸಿಸಿಟಿವಿ ವರದಿಯ ಪ್ರಕಾರ, ಅಲಬಾಮಾದಲ್ಲಿ ಮಹಿಳೆಯೊಬ್ಬರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದೇ ರೀತಿಯಲ್ಲಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಈ ಅಪರೂಪದ ಸ್ಥಿತಿಯನ್ನು ಹೊಂದಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಗರ್ಭಪಾತಗಳು, ಅಕಾಲಿಕ ಜನನಗಳು ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳ ಹೆಚ್ಚಿನ ಅಪಾಯವನ್ನು ಒಳಗೊಂಡಂತೆ ಆಗಾಗ್ಗೆ ತೊಡಕುಗಳನ್ನು ಎದುರಿಸುತ್ತಾರೆ. ಆದರೆ ಇದೀಗ ಲೀ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ ಎಂದಿದ್ದಾರೆ.
ಅಬ್ಬಬ್ಬಾ... ಇನ್ಮುಂದೆ ನಿಮ್ಮ ಕನಸನ್ನೂ ರೆಕಾರ್ಡ್ ಮಾಡ್ಬೋದು, ಮತ್ತೊಮ್ಮೆ ವೀಕ್ಷಿಸಲೂಬಹುದು!
ಈ ಹಿಂದೆ ಲೀ ಅವರು ಗರ್ಭ ಧರಿಸಿದ್ದರು. ಆದರೆ 27ನೇ ವಾರದಲ್ಲಿ ಗರ್ಭಪಾತವಾಗಿತ್ತು. ಕಳೆದ ಜನವರಿಯಲ್ಲಿ ಮತ್ತೊಮ್ಮೆ ಗರ್ಭ ಧರಿಸಿದ್ದರು. ಗರ್ಭಧಾರಣೆಯನ್ನು ದೃಢಪಡಿಸಿದ ನಂತರ, ಕ್ಸಿಯಾನ್ ಆಸ್ಪತ್ರೆಯ ವೈದ್ಯರು ಒಂಬತ್ತು ತಿಂಗಳು ವಿಶೇಷ ರೀತಿಯಲ್ಲಿ ಆರೈಕೆ ಮಾಡಿದ್ದರು. ಸಿಸೇರಿಯನ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಲಾಗಿದೆ. ಯಶಸ್ವಿ ಹೆರಿಗೆಯಾದ ಕೇವಲ ನಾಲ್ಕು ದಿನಗಳ ನಂತರ ಲಿ ಮತ್ತು ನವಜಾತ ಶಿಶುಗಳನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ.
ಈ ಪ್ರಕರಣವು 2019 ರಿಂದ ಇದೇ ರೀತಿಯ ಪ್ರಕರಣವನ್ನು ನೆನಪಿಗೆ ತರುತ್ತದೆ, ಬಾಂಗ್ಲಾದೇಶದ ಮಹಿಳೆಯು ಅಕಾಲಿಕ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮೊದಲ ಮಗು ಹುಟ್ಟಿದ ಒಂದು ತಿಂಗಳ ನಂತರ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಳು. ಬಿಬಿಸಿ ಪ್ರಕಾರ, ವೈದ್ಯರು, ಆ ಸಂದರ್ಭದಲ್ಲಿ, ಮಹಿಳೆಗೆ ಎರಡು ಗರ್ಭಾಶಯಗಳಿವೆ ಮತ್ತು ಎರಡನೇ ಗರ್ಭದಲ್ಲಿ ಮತ್ತೊಂದು ಮಗು ಇರುವುದನ್ನು ಕಂಡುಹಿಡಿದಿದ್ದರು.
ನಟಿ ಅಮೃತಾ ಅಯ್ಯಂಗಾರ್ಗೆ ಇದೇನಾಯ್ತು? ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.