Published : Apr 13, 2026, 07:01 AM ISTUpdated : Apr 13, 2026, 11:25 PM IST

State News Live: ಸರ್​ ರೀ ನನ್​ ಲವ್​ ನಿಮ್​ ಕೈಯಲ್ಲಿ ಐತ್ರಿ , ಒಂದ್​ ಸಲ ಪಾಸ್​ ಮಾಡ್ರಿ, ನಿಮ್​ ಕಾಲ್​ ಬೀಳ್ತಿನ್ರಿ, 500 ತಗೊಂಡು ಚಾ ಕುಡೀರಿ

ಸಾರಾಂಶ

ಬೆಂಗಳೂರು (ಏ.13): ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿರಿಯ ಶಾಸಕರ ಒತ್ತಡ ತೀವ್ರಗೊಂಡಿದೆ. ಪುನಾರಚನೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್‌ನ 25 ಮಂದಿ ಹಿರಿಯ ಶಾಸಕರು ವರಿಷ್ಠರನ್ನು ಭೇಟಿ ಮಾಡಲು ಭಾನುವಾರ ಸಂಜೆ ದೆಹಲಿಗೆ ತಲುಪಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಮೂರು ವರ್ಷ ಪೂರೈಸುವ ಹೊಸ್ತಿಲಲ್ಲಿ ನಿಂತಿದೆ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಉಪಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

Student's request

11:25 PM (IST) Apr 13

ಸರ್​ ರೀ ನನ್​ ಲವ್​ ನಿಮ್​ ಕೈಯಲ್ಲಿ ಐತ್ರಿ , ಒಂದ್​ ಸಲ ಪಾಸ್​ ಮಾಡ್ರಿ, ನಿಮ್​ ಕಾಲ್​ ಬೀಳ್ತಿನ್ರಿ, 500 ತಗೊಂಡು ಚಾ ಕುಡೀರಿ

ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವುದಾಗಿ ಗೆಳತಿ ಹೇಳಿದ್ದಾಳೆಂಬ ಕಾರಣಕ್ಕೆ, ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಶಿಕ್ಷಕರಿಗೆ ತನ್ನನ್ನು ಪಾಸ್ ಮಾಡುವಂತೆ ಮನವಿ ಮಾಡಿದ್ದಾನೆ. 500 ರೂಪಾಯಿ ನೋಟು ಇಟ್ಟು ಬರೆದ ಈ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Read Full Story

11:06 PM (IST) Apr 13

ವಿಜಯ್‌ ರಾಘವೇಂದ್ರಗೆ 2ನೇ ಮದುವೆ ಮಾಡಲು ಆ ನಟಿಯರ ಮನೆಯವ್ರು ಮುಂದಾದ್ರಾ? ವೈರಲ್‌ ಪೋಸ್ಟ್‌ ಸತ್ಯ ಬೇರೆ ಇದೆ!

Actor Vijay Raghavendra: ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಏನೇನೋ ವಿಚಾರಗಳು ಹರಿದಾಡುತ್ತಿರುತ್ತವೆ. ಲೈಕ್ಸ್‌, ಕಾಮೆಂಟ್ಸ್‌ಗೋಸ್ಕರ ಸತ್ಯಕ್ಕೆ ದೂರವಾದ ವಿಚಾರಗಳು ಪೋಸ್ಟ್‌ ಆಗುತ್ತಿರುತ್ತವೆ. ಈಗ ವಿಜಯ್‌ ರಾಘವೇಂದ್ರ ಎರಡನೇ ಮದುವೆ ವಿಚಾರದ ಬಗ್ಗೆ ಕೂಡ ಒಂದು ಪೋಸ್ಟ್‌ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು?

 

Read Full Story

10:16 PM (IST) Apr 13

ಚಿನ್ನುಮರಿ ಕೊಟ್ಟ ಒಂದೊಂದು ಏಟಿಗೆ ಜಯಂತ್ ವಿಲವಿಲ; ಮುಂದೇನು ಮಾಡ್ತಾನೆ ಸೈಕೋ ಗಂಡ?

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ, ಸೈಕೋ ಜಯಂತ್ ಮನೆ ಸೇರಿರುವ ಜಾನು ಸಂಪೂರ್ಣ ಬದಲಾಗಿದ್ದಾಳೆ. ಜಿರಳೆ ಸೇರಿಸಿದ ಹಾಲನ್ನು ಜಯಂತ್‌ಗೆ ಕುಡಿಸಿ, ಮನೆಯ ವಸ್ತುಗಳ ಸ್ಥಾನ ಬದಲಾಯಿಸಿ, ಇನ್ನು ಮುಂದೆ ತಾನು ಹೇಳಿದಂತೆ ಕೇಳಬೇಕು ಎಂದು ಎಚ್ಚರಿಕೆ ನೀಡುವ ಮೂಲಕ ಜಯಂತ್‌ಗೆ ತಿರುಗೇಟು ನೀಡುತ್ತಿದ್ದಾಳೆ.
Read Full Story

10:04 PM (IST) Apr 13

50 ವರ್ಷಕ್ಕಿಂತ ಮುಂಚೆ ಗಂಡ-ಹೆಂಡ್ತಿ ನಡುವೆ ದೈಹಿಕ ಸಂಬಂಧ ಕಡಿಮೆಯಾದ್ರೆ ಆಗೋ ಸಮಸ್ಯೆ ಒಂದಾ ಎರಡಾ?

Husband wife Relationship: ಗಂಡ-ಹೆಂಡತಿ ನಡುವೆ ಪ್ರೀತಿ ಕಡಿಮೆಯಾದರೆ, ಅದು ಒಟ್ಟಾರೆಯಾಗಿ ಅವರ ದಾಂಪತ್ಯದ ಮೇಲೂ ಪರಿಣಾಮ ಬೀರುತ್ತದೆ. ಒಂದು ವೇಳೆ ಅವರಿಬ್ಬರು ದೈಹಿಕವಾಗಿ ದೂರವಾದರೆ, ಅದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಎಷ್ಟೆಲ್ಲಾ ಸಮಸ್ಯೆಗಳು ಬರಬಹುದು ಎಂಬುದು ನಿಮಗೆ ತಿಳಿದಿದೆಯೇ? 

 

Read Full Story

09:43 PM (IST) Apr 13

ಮಂತ್ರಿ ಸ್ಥಾನಕ್ಕಾಗಿ ದೆಹಲಿ ಚಲೋ ಮಾಡುತ್ತಿರುವುದು ನಾಚಿಕೇಗೇಡಿನ ಸಂಗತಿ - ಸಂಸದ ಜಗದೀಶ ಶೆಟ್ಟರ್

ಹೈಕಮಾಂಡ್ ಮೇಲೆ ಒತ್ತಡ ಹಾಕಲು ದೆಹಲಿಗೆ ತೆರಳಬೇಕಿದ್ದ ಕಾಂಗ್ರೆಸ್ ಶಾಸಕರು ಮಂತ್ರಿ ಸ್ಥಾನಕ್ಕಾಗಿ ದೆಹಲಿ ಚಲೋ ಮಾಡುತ್ತಿರುವುದು ನಾಚಿಕೇಗೇಡಿನ ಸಂಗತಿ ಎಂದು ಸಂಸದ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.

Read Full Story

08:39 PM (IST) Apr 13

ಸರ್ಕಾರಿ ಶಾಲೆಗಳು ಅಮೃತ ಮಹೋತ್ಸವ ಆಚರಿಸಿಕೊಳ್ಳುವುದು ಸಂತಸದ ಸಂಗತಿ

ಖಾಸಗಿ ಶಾಲೆಗಳ ಅಬ್ಬರದ ನಡುವೆ ಸರ್ಕಾರಿ ಶಾಲೆಗಳು ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸಿಕೊಳ್ಳುವುದು ಸಂತಸದ ಸಂಗತಿ. ಸರ್ಕಾರಿ ಶಾಲೆಗಳು ಉಳಿದಾಗ ಮಾತ್ರ ಗ್ರಾಮೀಣ ಭಾಗದ ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

Read Full Story

08:26 PM (IST) Apr 13

ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಗಮನವಹಿಸಿ - ಅಧಿಕಾರಿಗಳಿಗೆ ವಿಜಯೇಂದ್ರ ಸೂಚನೆ

ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರು, ರೈತರು ವಿದ್ಯುತ್ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ ಎಂದು ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

Read Full Story

08:12 PM (IST) Apr 13

ಸಹಕಾರ ಕ್ಷೇತ್ರ ರೈತರ ಬದುಕಿನ ಜೀವನಾಡಿಯಾಗಿದ್ದು, ಭ್ರಷ್ಟಾಚಾರಿಗಳು ನುಸುಳಬಾರದು - ಡಾ.ಕೆ.ಸುಧಾಕರ್

ಹೈನುಗಾರಿಕೆ ರೈತನ ಪ್ರಬಲ ಅಸ್ತ್ರವಾಗಿದೆ. ಕೃಷಿಯಿಂದಲೇ ಜೀವನ ಸಾಗಿಸುವ ರೈತರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

Read Full Story

07:57 PM (IST) Apr 13

ಪೊಲೀಸ್​ ಸ್ಟೇಷನ್​ ಮೆಟ್ಟಿಲೇರಿತು ಬೆಂಗಳೂರು ಬೆಕ್ಕುಗಳ ಲವ್​ ಸ್ಟೋರಿ! ಪೊಲೀಸರು ಸುಸ್ತು- ಆಗಿದ್ದೇನು

ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಎರಡು ಬೆಕ್ಕುಗಳ ಪ್ರೇಮ ಪ್ರಕರಣವು ಅವುಗಳ ಮಾಲೀಕರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿದೆ. ಈ ಗಲಾಟೆಯು ಆ್ಯಸಿಡ್ ದಾಳಿಯ ಹಂತಕ್ಕೆ ತಲುಪಿ, ಪೊಲೀಸ್ ಠಾಣೆಯ ಮೆಟ್ಟಿಲೇರಿ, ಕೊನೆಗೆ ತಾಯಿ ಬೆಕ್ಕಿನಿಂದ ಮರಿಗಳನ್ನು ಬೇರ್ಪಡಿಸುವಲ್ಲಿ ಅಂತ್ಯಗೊಂಡಿದೆ.
Read Full Story

07:54 PM (IST) Apr 13

ಸಿಇಟಿ ವಿಚಾರದಲ್ಲಿ ಮಹತ್ವದ ಅಪ್‌ಡೇಟ್, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರಾಧಿಕಾರ ಸೂಚನೆ

ಸಿಇಟಿ ವಿಚಾರದಲ್ಲಿ ಮಹತ್ವದ ಅಪ್‌ಡೇಟ್, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿದೆ. ಕೆಲ ವಿಚಾರಗಳಲ್ಲಿ ಗೊಂದಲ ಬೇಡ ಎಂದು ಪ್ರಾಧಿಕಾರ ಹೇಳಿದೆ. ವಿದ್ಯಾರ್ಥಿಗಳಿಗೆ ನೀಡಿದ ಸೂಚನೆ ಏನು?

Read Full Story

07:49 PM (IST) Apr 13

ಗೊತ್ತಿಲ್ಲ ಅಲ್ವಾ ನಿಮ್ಗೆ? ಕನ್ನಡದ ಈ ಮೇರನಟರು 'ಸ್ತ್ರೀ' ಪಾತ್ರದಲ್ಲಿ ನಟಿಸಿದ್ದಾರೆ; ಯಾವ ಚಿತ್ರ ನೋಡಿ!

ಯಾವುದೇ ಭಾಷೆಯ ಚಿತ್ರರಂಗದಲ್ಲಿ ನಟರು ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ, ಕಥೆಗೆ ಪೂರಕವಾಗಿ ನಟಿಯರ ಬದಲು ನಟರೇ ನಟಿಸಬೇಕಾದ ಅನಿವಾರ್ಯತೆ ಎದುರಾದಾಗ, ನಿರ್ದೇಶಕರೇ ಅಂತಹ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಆಗ ಆ ಚಿತ್ರದ ನಟರು ಸ್ಟಾರ್ ನಟರು, ಮೇರು ನಟರೇ ಆಗಿದ್ದರೂ ಸ್ತ್ರೀ ಪಾತ್ರ ಮಾಡಬೇಕಾಗುತ್ತದೆ.

Read Full Story

07:22 PM (IST) Apr 13

ಹಾಸನ - ಪ್ರೀತಿಸಿದ ವಿವಾಹಿತೆ ಜೊತೆ ಓಡಿ ಹೋಗಿ ಕಾರಲ್ಲಿ ತಾಳಿ ಕಟ್ಟಿದ ಪ್ರಿಯಕರ! 8 ವರ್ಷದ ವಿವಾಹ ತ್ಯಜಿಸಿದ ಮಹಿಳೆ!

ಹಾಸನದಲ್ಲಿ ಎಂಟು ವರ್ಷಗಳ ವಿವಾಹಿತ ಮಹಿಳೆಯೊಬ್ಬಳು, ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಗಂಡನನ್ನು ತೊರೆದು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಸಾಂತ್ವನ ಕೇಂದ್ರದಿಂದ ಬಂದ ಕೆಲವೇ ಸಮಯದಲ್ಲಿ ಆಕೆ ಪರಾರಿಯಾಗಿ, ಕಾರಿನಲ್ಲೇ ಪ್ರಿಯಕರನಿಂದ ತಾಳಿ ಕಟ್ಟಿಸಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.
Read Full Story

07:00 PM (IST) Apr 13

ವಿದ್ಯಾರ್ಥಿಗಳ ಕನಸಿಗೆ ಫೀಸು ಕಂಟಕ, ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇ.7.5ರಷ್ಟು ಹೆಚ್ಚಳ!

ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಮತ್ತು ಆಡಳಿತ ಮಂಡಳಿ ಕೋಟಾದ ಸೀಟುಗಳ ಶುಲ್ಕವನ್ನು ಶೇ.7.5ರಷ್ಟು ಹೆಚ್ಚಿಸಲು ಸರ್ಕಾರ ಅನುಮೋದನೆ ನೀಡಿದೆ. 2026-27ನೇ ಸಾಲಿನಿಂದ ಜಾರಿಗೆ ಬರಲಿರುವ ಈ ನಿರ್ಧಾರದಿಂದ ಎಂಜಿನಿಯರಿಂಗ್ ಪ್ರವೇಶ ಮತ್ತಷ್ಟು ದುಬಾರಿಯಾಗಲಿದ್ದು, ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಲಿದೆ. ಆದರೆ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
Read Full Story

06:50 PM (IST) Apr 13

ಉಸ್ತುವಾರಿ ಸಚಿವರೆ ನಿಮ್ಮ ಮುಖವಾಡ ಕಳಚುತ್ತೇನೆ - ಸಂಸದ ಡಾ.ಕೆ.ಸುಧಾಕರ್ ಎಚ್ಚರಿಕೆ

ಎಲ್ಲ ದಾಖಲೆಯೂ ನನ್ನ ಬಳಿ ಇದೆ. ನನಗೆ ಸವಾಲು ಹಾಕ ಬೇಡಿ. ನಿಮ್ಮ ಮುಖವಾಡ ಕಳಚುವ ಕೆಲಸ ಸದ್ಯದಲ್ಲೇ ಮಾಡುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ಗೆ ಎಚ್ಚರಿಕೆ ನೀಡಿದರು.

Read Full Story

06:34 PM (IST) Apr 13

ವಿದೇಶಕ್ಕೆ ಹೋಗಿ ನೆಲೆಸಿರುವ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ನಟಿಯರಿವರು; ಯಾರು ಎಲ್ಲಿದ್ದಾರೆ ನೋಡಿ!

ಈ ನಟಿಯರಲ್ಲಿ ಅನೇಕರು ಈಗ ಸಿನಿಮಾಗಳಲ್ಲಿ ನಟನೆ ಮಾಡುತ್ತಿಲ್ಲ. ಈ ಮೊದಲು ಕನ್ನಡದ ಹಲವು ಸಿನಿಮಾಗಳಲ್ಲಿ ಈ ನಟಿಯರು ನಟಿಸಿದ್ದರು. ಆದರೆ, ತಮ್ಮತಮ್ಮ ಮದುವೆ ಬಳಿಕ ಈ ಎಲ್ಲಾ ನಟಿಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಕೆಲವರು ಮತ್ತೆ ಭಾರತಕ್ಕೆ ವಾಪಸ್ ಕೂಡ ಆಗಿದ್ದಾರೆ. 

Read Full Story

06:29 PM (IST) Apr 13

ಹರಿಹರ ಪೀಠದಲ್ಲಿ ಸಂಘರ್ಷ - ಉಚ್ಚಾಟನೆ ಬಳಿಕ ವಚನಾನಂದ ಸ್ವಾಮೀಜಿ ಮೊದಲ ರಿಯಾಕ್ಷನ್, ಮಠಕ್ಕೆ ರಾಜಕೀಯ ಮುಖಂಡರ ಭೇಟಿ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟ್, ಜಗದ್ಗುರು ವಚನಾನಂದ ಸ್ವಾಮೀಜಿಗಳನ್ನು ಪದಚ್ಯುತಿಗೊಳಿಸಿದೆ. ಇದು ವ್ಯವಸ್ಥಿತ ಷಡ್ಯಂತ್ರ ಎಂದು ಸ್ವಾಮೀಜಿಗಳು ಆರೋಪಿಸಿದ್ದು, ಲೆಕ್ಕಪತ್ರ ಕೇಳಿದ್ದೇ ಇದಕ್ಕೆ ಕಾರಣ ಎಂದಿದ್ದಾರೆ. ಈ ಘಟನೆಯಿಂದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಠದ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
Read Full Story

06:21 PM (IST) Apr 13

ಹೆಗಡೆ ಪುತ್ರನ ಪಾಸ್‌ಪೋರ್ಟ್‌ - ಬಡ ಮಕ್ಕಳ ಬಗ್ಗೆ ಕನಿಕರ ತೋರಿಸಿದ್ದಾರಾ? ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರ ಪುತ್ರನ ಪಾಸ್‌ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಡವರ ಮಕ್ಕಳನ್ನು ಗಲಾಟೆಗೆ ಪ್ರಚೋದಿಸಿ, ತಮ್ಮ ಮಕ್ಕಳನ್ನು ವಿದೇಶ ವ್ಯಾಸಂಗಕ್ಕೆ ಕಳುಹಿಸುವ ಬಿಜೆಪಿಯ ಇಬ್ಬಗೆ ನೀತಿಯನ್ನು ಅವರು ಪ್ರಶ್ನಿಸಿದ್ದಾರೆ.
Read Full Story

05:57 PM (IST) Apr 13

ಸೀಲಿಂಗ್ Vs ಟೇಬಲ್ ಫ್ಯಾನ್ - ವಿದ್ಯುತ್ ಬಿಲ್ ಉಳಿಸಲು ನಿಮ್ಮ ಮನೆಗೆ ಯಾವುದು ಬೆಸ್ಟ್?

ಸೀಲಿಂಗ್ ಫ್ಯಾನ್ ಮತ್ತು ಟೇಬಲ್ ಫ್ಯಾನ್‌ಗಳ ನಡುವಿನ ವ್ಯತ್ಯಾಸವೇನು? ಸೀಲಿಂಗ್ ಫ್ಯಾನ್ ಇಡೀ ಕೋಣೆಗೆ ಗಾಳಿ ನೀಡಿದರೆ, ಟೇಬಲ್ ಫ್ಯಾನ್ ಕಡಿಮೆ ವಿದ್ಯುತ್ ಬಳಸುತ್ತದೆ ಮತ್ತು ಇದನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. 

Read Full Story

05:51 PM (IST) Apr 13

ಬೆಂಗಳೂರು - ಸಿಗರೇಟ್ ಸೇದುತ್ತಿದ್ದ ಯುವತಿ ಮತ್ತು ಗೆಳೆಯರನ್ನು ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದ ಪುಂಡರ ಗುಂಪು!

ಬೆಂಗಳೂರಿನ ಕನಕನಗರದಲ್ಲಿ ಯುವತಿ ಸೇರಿದಂತೆ ಮೂವರ ಮೇಲೆ ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಕ್ರೂರವಾಗಿ ಹಲ್ಲೆ ನಡೆಸಿದೆ. ನಶೆಯಲ್ಲಿದ್ದರೆನ್ನಲಾದ ಆರೋಪಿಗಳು ನಡೆಸಿದ ಈ ದೌರ್ಜನ್ಯದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಸ್ವಯಂಪ್ರೇರಿತ ತನಿಖೆ ಕೈಗೊಂಡಿದ್ದಾರೆ.
Read Full Story

05:50 PM (IST) Apr 13

ಭಾರತದ ನರ್ಸಿಂಗ್‌ಗೆ ಪ್ರಪಂಚದಾದ್ಯಂತ ಬೇಡಿಕೆ - ಸಚಿವ ದಿನೇಶ್‌ ಗುಂಡೂರಾವ್‌

ಭಾರತದ ನರ್ಸ್‌ಗಳಿಗೆ ಜಪಾನ್‌, ಯುರೋಪ್‌, ಮಧ್ಯಪ್ರಾಚ್ಯ ಸೇರಿ ಪ್ರಪಂಚದಾದ್ಯಂತ ಬೇಡಿಕೆಯಿದೆ. ವೃತ್ತಿಗೆ ಗೌರವವಿದೆ, ಗಾಜುಗಣ್ಣಿನ ಶಾಸಕ ಗಣೇಶ್‌ ಪ್ರಸಾದ್‌ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Read Full Story

05:12 PM (IST) Apr 13

ನಾನು ಅಬ್ದುಲ್‌ ಜಬ್ಬಾರ್‌ ಹೆಸರೆತ್ತಿ ಆರೋಪ, ಟೀಕೆ ಮಾಡಿಲ್ಲ - ಸಲೀಂ ಅಹಮದ್ ತಿರುಗೇಟು

ದತ್‌ ಅವರು ಪ್ರತಿ ನಿತ್ಯವೂ ಹೈಕಮಾಂಡ್‌ಗೆ ವರದಿ ನೀಡಿದ್ದಾರೆ. ನನ್ನ ವಿರುದ್ಧ ಮಾಡುತ್ತಿರುವ ಅವರ ಸುಳ್ಳು ಆರೋಪ ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ ಎಂದು ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್ ತಿರುಗೇಟು ನೀಡಿದ್ದಾರೆ.

Read Full Story

05:07 PM (IST) Apr 13

ತೆರೆಯ ಮೇಲಿನ ಆ ಸ್ಟಾರ್‌ ನಟರಿಗೆ ತೆರೆಯ ಹಿಂದೆ ಧ್ವನಿ ನೀಡಿದ್ದು ಇವರು? ಈ ಸೀಕ್ರೆಟ್ ಬಹುತೇಕರಿಗೆ ಗೊತ್ತಿಲ್ಲ!

ಹಲವಾರು ಚಿತ್ರಗಳಲ್ಲಿ ನಟಿಸಿದ ಕಲಾವಿದರು ಬೇರೆ ಹಾಗೂ ಮಾತಿನ ಧ್ವನಿ ಬೇರೆಯೇ ಆಗಿರುತ್ತದೆ. ಇದು ಕನ್ನಡ ಸಿನಿಮಾಗಳಿಗೆ ಮಾತ್ರವಲ್ಲ, ಬಹುತೇಕ ಎಲ್ಲಾ ಭಾಷೆಗಳ ಚಿತ್ರರಂಗಗಳಲ್ಲಿ ಚಾಲ್ತಿಯಲ್ಲಿರುವ ವಿಷಯ. ಆದರೆ, ಯಾವ ನಟನಟಿಯರಿಗೆ ಧ್ವನಿ ಕೊಟ್ಟಿದ್ದು ಯಾರು ಎಂಬ ಸಂಗತಿ ಹಲವು ಪ್ರೇಕ್ಷಕರಿಗೆ ತಿಳಿದಿರುವುದಿಲ್ಲ. ಈ ಸ್ಟೋರಿ ನೋಡಿ..

Read Full Story

05:01 PM (IST) Apr 13

NWKRTC - ಹುಬ್ಬಳ್ಳಿ-ಗದಗ ನಡುವೆ ತಡೆ ರಹಿತ ರಾಜಹಂಸ ಬಸ್ ಸಂಚಾರ; ವೇಳಾ ಪಟ್ಟಿ ಹೀಗಿದೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ ಮತ್ತು ಗದಗ ನಡುವೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ತಡೆ ರಹಿತ ರಾಜಹಂಸ ಬಸ್ ಸಂಚಾರವನ್ನು ಆರಂಭಿಸಿದೆ. ಈ ಹೊಸ ಸೇವೆಯು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸಲಿದೆ.

Read Full Story

05:01 PM (IST) Apr 13

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಶಿಕ್ಷಣ ಇಲಾಖೆ ಮಹತ್ವದ ಬದಲಾವಣೆ, ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ

ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಶಿಕ್ಷಣ ಇಲಾಖೆ ಮಹತ್ವದ ಬದಲಾವಣೆಗಳನ್ನು ಪ್ರಕಟಿಸಿದೆ. ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್ ವ್ಯವಸ್ಥೆ ಜಾರಿಯಾಗಲಿದ್ದು, ಒಟ್ಟು ಅಂಕಗಳನ್ನು 625 ರಿಂದ 525ಕ್ಕೆ ಇಳಿಸಲಾಗಿದೆ. ಈ ಹೊಸ ನಿಯಮಗಳು 2026ನೇ ಸಾಲಿನ ಪರೀಕ್ಷೆಯಿಂದ ಜಾರಿಗೆ ಬರಲಿವೆ.
Read Full Story

04:55 PM (IST) Apr 13

ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಏರಿಕೆ ಇಲ್ಲ - ಸಚಿವ ಡಾ.ಎಂ.ಸಿ.ಸುಧಾಕರ್ ಅಧ್ಯಕ್ಷತೆ ಸಭೆಯಲ್ಲಿ ತೀರ್ಮಾನ

ರಾಜ್ಯದ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಕೋಟಾ ಎರಡೂ ಮಾದರಿ ಸೀಟುಗಳ ಶುಲ್ಕವನ್ನು ಶೇ.7.5ರಷ್ಟು ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ 2026-26ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಪ್ರವೇಶ ಮತ್ತಷ್ಟು ದುಬಾರಿಯಾಗಲಿದೆ.

Read Full Story

04:45 PM (IST) Apr 13

ಸಂಪುಟ ಪುನಾರಚನೆ ಮಾಡೋದು ಹೈಕಮಾಂಡ್‌ಗೆ ಬಿಟ್ಟಿದ್ದು - ಸಿಎಂ ಸಿದ್ದರಾಮಯ್ಯ

ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನಾರಚನೆ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Read Full Story

04:41 PM (IST) Apr 13

ಗಾಯಾಳುವನ್ನು ಕಸದ ಗಾಡಿಯಲ್ಲಿ ಆಸ್ಪತ್ರೆ ಸಾಗಿಸಿ ಮಾನವೀಯತೆ ಮೆರೆದ ಪೌರ ಕಾರ್ಮಿಕರು

ಗಾಯಾಳುವನ್ನು ಕಸದ ಗಾಡಿಯಲ್ಲಿ ಆಸ್ಪತ್ರೆ ಸಾಗಿಸಿ ಮಾನವೀಯತೆ ಮೆರೆದ ಪೌರ ಕಾರ್ಮಿಕರು, ನರಳಾಡುತ್ತಿದ್ದ ಗಾಯಾಳುವನ್ನು ತಕ್ಷಣವೇ ಆಸ್ಪತ್ರೆ ಸಾಗಿಸಲು ವಾಹನ ಇರಲಿಲ್ಲ. ಇತ್ತ ಆ್ಯಂಬುಲೆನ್ಸ್ ವಿಳಂಬವಾಗಿತ್ತು. ಹೀಗಾಗಿ ಪೌರಕಾರ್ಮಿಕರು ನೆರವು ನೀಡಿದ್ದಾರೆ.

 

Read Full Story

04:39 PM (IST) Apr 13

ದೂದಿಹಳ್ಳಿ ಗ್ರಾಮದ ಕೆರೆಯ ಹೂಳು ತೆಗೆಯುವಾಗ ಸಿಕ್ತು 3 ಅಡಿ ಎತ್ತರದ ನಂದಿ ಮೂರ್ತಿ

ದೂದಿಹಳ್ಳಿ ಗ್ರಾಮದ ಕೆರೆಯಲ್ಲಿ ಹೂಳು ತೆಗೆಯುವಾಗ ಪುರಾತನ ನಂದಿ ಮೂರ್ತಿಯೊಂದು ಪತ್ತೆಯಾಗಿದೆ. ಮೂರು ಅಡಿ ಎತ್ತರದ ಈ ವಿಗ್ರಹಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿದ್ದು, ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಸಂತಸ ಮತ್ತು ಕುತೂಹಲವನ್ನು ಮೂಡಿಸಿದೆ.

Read Full Story

04:35 PM (IST) Apr 13

VIjay TVK - ಬೆಚ್ಚಿಬಿದ್ದ ವಿಜಯ್‌ ದಳಪತಿ; ಹೂ ಕಂಡು ಎದ್ನೋ ಬಿದ್ನೋ ಎಂದು ಓಡಿದ್ಯಾಕೆ ತಮಿಳು ಹೀರೋ?

VIjay TVK: ಕನ್ಯಾಕುಮಾರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಸೈಕಲ್ ಸವಾರಿ ಮಾಡುತ್ತಿದ್ದ ನಟ ವಿಜಯ್, ಯಾರೋ ಎಸೆದ 'ಹೂವಿನ ಚೆಂಡಿಗೆ' ಬೆದರಿ ತಕ್ಷಣ ಕಾರು ಹತ್ತಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

Read Full Story

04:08 PM (IST) Apr 13

ಪ್ರತಿದಿನ 100 ಕೋಟಿ ಖರ್ಚು ಮಾಡುತ್ತಿದೆ ಬೆಂಗಳೂರು - ಇಷ್ಟೆಲ್ಲಾ ಹಣ ಹೋಗ್ತಿರೋದು ಎಲ್ಲಿಗೆ?

ಬೆಂಗಳೂರು ಅಭಿವೃದ್ಧಿಗಾಗಿ ಪ್ರತಿದಿನ ಸುಮಾರು 100 ಕೋಟಿ ರೂ ಖರ್ಚು ಮಾಡಲಾಗುತ್ತದೆ. ರಾಜ್ಯ ಸರ್ಕಾರ ಮತ್ತು ಹಲವು ಸಾರ್ವಜನಿಕ ಸಂಸ್ಥೆಗಳು ಈ ಹಣವನ್ನು ಖರ್ಚು ಮಾಡುತ್ತಿದ್ದರೂ, ವ್ಯವಸ್ಥಿತ ಯೋಜನೆ ಮತ್ತು ಪಾರದರ್ಶಕತೆಯ ಕೊರತೆಯಿಂದಾಗಿ ರಸ್ತೆಗುಂಡಿ, ಟ್ರಾಫಿಕ್‌ನಂತಹ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ.

Read Full Story

04:04 PM (IST) Apr 13

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ - ಆಹಾರದ ಹೊಸ ಅಧ್ಯಾಯ, ಸ್ವಿಗ್ಗಿ ಜತೆ ಕೈಜೋಡಿಸಿದ ಇಕ್ಸಿಗೋ, ಕನ್ಫರ್ಮ್ ಟಿಕೆಟ್!

ಇಕ್ಸಿಗೋ, ಕನ್ಫರ್ಮ್ ಟಿಕೆಟ್ ಮತ್ತು ಸ್ವಿಗ್ಗಿ ಸಂಸ್ಥೆಗಳು ಕೈಜೋಡಿಸಿ 'ಫುಡ್ ಆನ್ ಟ್ರೈನ್' ಸೇವೆಯನ್ನು ಆರಂಭಿಸಿವೆ. ಈ ಮೂಲಕ ಪ್ರಯಾಣಿಕರು 160ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ತಮ್ಮ ರೈಲಿನ ಸೀಟಿಗೆ ನೇರವಾಗಿ ಇಷ್ಟದ ಹೋಟೆಲ್‌ಗಳಿಂದ ಆಹಾರವನ್ನು ಆರ್ಡರ್ ಮಾಡಬಹುದು. ಪಿಎನ್‌ಆರ್ ಸಂಖ್ಯೆ ಬಳಸಿ ಆಪ್ ಮೂಲಕ ಸುಲಭವಾಗಿ ಬುಕ್ ಮಾಡುವ ಅವಕಾಶ ಕಲ್ಪಿಸಲಾಗಿದೆ.
Read Full Story

04:04 PM (IST) Apr 13

Nandagokula Serial - ಒಂದ್ಕಡೆ ಸಿಕ್ಕ ಕಡೆಯೆಲ್ಲ ಬತ್ತಿ ಇಡ್ತಿರೋ ಪ್ರಿಯಾ; ವೀಕ್ಷಕರ ನಿದ್ದೆಗೆಡಿಸಿದ OTP!

Nandagokula Serial: ‘ನಂದಗೋಕುಲ’ ಇದೀಗ ಅತ್ಯಂತ ರೋಚಕ ಹಾಗೂ ಹಾಸ್ಯಭರಿತ ತಿರುವುಗಳೊಂದಿಗೆ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಧಾರಾವಾಹಿಯು ದಿನದಿಂದ ದಿನಕ್ಕೆ ಹೊಸ ಹೊಸ ಪ್ರಯೋಗಗಳ ಮೂಲಕ ಮನೆಮಾತಾಗುತ್ತಿದೆ. ಪ್ರಸ್ತುತ ಈ ಧಾರಾವಾಹಿಯಲ್ಲಿ ಚರ್ಚೆಯಾಗುತ್ತಿರುವ ಪ್ರಮುಖ ವಿಷಯವೆಂದರೆ ಅದು ‘ಒಟಿಪಿ’. 

 

 

Read Full Story

03:46 PM (IST) Apr 13

ಹರಿಹರ ಪೀಠದಿಂದ ಇದ್ದಕ್ಕಿದ್ದಂತೆಯೇ ವಚನಾನಂದ ಸ್ವಾಮೀಜಿ ಪದಚ್ಯುತಿ! ಮಠದ ಎದುರು ಹೈಡ್ರಾಮ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಯೋಗಗುರು ವಚನಾನಂದ ಸ್ವಾಮೀಜಿಯನ್ನು ಉಚ್ಚಾಟಿಸಲಾಗಿದೆ. ಧರ್ಮದರ್ಶಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶ್ವಾಸಪೀಠ ಅಥವಾ ಹರಿಹರ ಪೀಠ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಸ್ವಾಮೀಜಿ ವಿಫಲರಾದದ್ದು ಈ ಕ್ರಮಕ್ಕೆ ಕಾರಣವೆಂದು ಹೇಳಲಾಗಿದೆ. ಈ ಬೆಳವಣಿಗೆಯು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಮಠದ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
Read Full Story

03:33 PM (IST) Apr 13

ಜೀ ಕನ್ನಡಕ್ಕೆ ರಕ್ಷಿತಾ ಪ್ರೇಮ್ ಬೈ ಬೈ ಹೇಳಿದ್ದೇಕೆ? ಕಡ್ಡಿ ಮುರಿದಂತೆ 'ಒಳಗಿನ ಗುಟ್ಟು' ಬಿಚ್ಚಿಟ್ಟ ಸ್ಟಾರ್ ನಟಿ!

ಕಳೆದ ವರ್ಷ ಅವರು ಇದ್ದಕ್ಕಿದ್ದಂತೆ ವಾಹಿನಿಯಿಂದ ಹೊರಬಂದಾಗ ಅಭಿಮಾನಿಗಳಿಗೆ ಅಕ್ಷರಶಃ ಶಾಕ್ ಆಗಿತ್ತು. "ನಮ್ಮ ನೆಚ್ಚಿನ ಜಡ್ಜ್ ರಕ್ಷಿತಾ ಮ್ಯಾಮ್ ಎಲ್ಲಿ ಹೋದ್ರು?" ಅನ್ನೋ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇತ್ತು. ಈಗ ಆ ಎಲ್ಲಾ ಕುತೂಹಲಗಳಿಗೆ ಸ್ವತಃ ರಕ್ಷಿತಾ ಅವರೇ ನೇರ ಹಾಗೂ ದಿಟ್ಟ ಉತ್ತರ ನೀಡಿದ್ದಾರೆ!

Read Full Story

03:22 PM (IST) Apr 13

ಯಾವ ನಟಿ ನಿರ್ಮಾಪಕ, ನಿರ್ದೇಶಕರ ಜೊತೆ ಬೆಡ್‌ ಶೇರ್‌ ಮಾಡಿಲ್ಲ ಹೇಳಿ? ಇನ್ನೋರ್ವ ನಟಿ ಸವಾಲು ಹಾಕಿದ್ರು!

ನಿರ್ದೇಶಕ ಡೆನ್ನಿಸ್ ಜೋಸೆಫ್ 'ಕುಟ್ ಕಟ್' ಸಿನಿಮಾದ ಪ್ರಕಟಣೆಗಾಗಿ ಕೆಲಸ ಮಾಡುತ್ತಿದ್ದಾಗ, ಅವರು ನಟಿಯೊಬ್ಬರೊಂದಿಗೆ ನಡೆಸಿದ ಸಂದರ್ಶನವು ದೊಡ್ಡ ವಿವಾದಕ್ಕೆ ಕಾರಣವಾಯಿತು ಎಂದು ಆಲಪ್ಪಿ ಅಶ್ರಫ್ ಹೇಳಿದ್ದಾರೆ.

 

Read Full Story

03:18 PM (IST) Apr 13

ಪ್ರೀತಿಸಿ ಮದುವೆಯಾದ್ರೂ ವರದಕ್ಷಿಣೆಗೆ ಕಿರುಕುಳ; ಗಂಡನ ಧನದಾಹಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡ ಮಹಿಳೆ

ಪ್ರೀತಿಸಿ ಮದುವೆಯಾಗಿದ್ದ ಶಿಲ್ಪಾ ಎಂಬ ಮಹಿಳೆ ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಹಣ ಮತ್ತು ಬಂಗಾರ ನೀಡಿದರೂ ಕಿರುಕುಳ ಮುಂದುವರಿದ ಹಿನ್ನೆಲೆಯಲ್ಲಿ, ಮೃತಳ ತಂದೆ ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read Full Story

02:44 PM (IST) Apr 13

Mangaluru - ಪೊಲೀಸರ ಸೋಗಿನಲ್ಲಿ ಶುರುವಾದ ಹೊಸ ವಂಚನೆ! ಬೈಕ್ ರೈಡರ್‌ಗಳೇ ಇವರ ಟಾರ್ಗೆಟ್

ಉಪ್ಪಿನಂಗಡಿ ಬಳಿಯ ಹೆದ್ದಾರಿಯಲ್ಲಿ, ಪೊಲೀಸ್ ಅಧಿಕಾರಿಗಳಂತೆ ನಟಿಸುವ ತಂಡವೊಂದು ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದೆ. ಎಂಜಿನ್ ತಂಪಾಗಿಸಿ ಹೆಚ್ಚು ಮೈಲೇಜ್ ನೀಡುವ ಸಾಧನ ಅಳವಡಿಸುವ ನೆಪದಲ್ಲಿ ಸವಾರರಿಂದ 800 ರಿಂದ 1000 ರೂ. ವಸೂಲಿ ಮಾಡಿ ವಂಚಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ.
Read Full Story

02:33 PM (IST) Apr 13

ತುಮಕೂರಿನ ಟೆಕ್ಕಿಯಿಂದ ಬೆಂಗಳೂರಲ್ಲಿ ಮದುವೆ ದಂಧೆ, ಮೂರನೇ ವಿವಾಹಕ್ಕೆ ರೆಡಿಯಾದವ ಗರ್ಭಿಣಿ ಪತ್ನಿಗೆ ಸಿಕ್ಕಿಬಿದ್ದ!

ಜಿಗಣಿಯ ಖಾಸಗಿ ಕಂಪನಿ ಇಂಜಿನಿಯರ್ ರವಿ, ಮದುವೆ ಹೆಸರಿನಲ್ಲಿ ಹಲವು ಯುವತಿಯರಿಗೆ ವಂಚಿಸಿದ್ದಾನೆ. ಈಗಾಗಲೇ ಇಬ್ಬರನ್ನು ಮದುವೆಯಾಗಿ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈತನ ಕೃತ್ಯ ಬಯಲಾಗಿದ್ದು, ಮೊದಲ ಪತ್ನಿಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Full Story

02:27 PM (IST) Apr 13

ವಿಜಯಪುರ - 10 ದಿನಗಳ ಪೆರೋಲ್ ರಜೆ ಪಡೆದು ಪರಾರಿಯಾಗಿದ್ದ ಆರೋಪಿ, 21 ವರ್ಷಗಳ ಬಳಿಕ ಸೆರೆ

2005ರಲ್ಲಿ ಪೆರೋಲ್ ಮೇಲೆ ತೆರಳಿ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಯ ಕೈದಿಯನ್ನು, 21 ವರ್ಷಗಳ ನಂತರ ವಿಜಯಪುರ ವಿಶೇಷ ಪೊಲೀಸ್ ತಂಡವು ಮಹಾರಾಷ್ಟ್ರದಲ್ಲಿ ಬಂಧಿಸಿದೆ. ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಆರೋಪಿಯನ್ನು ಮರಳಿ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.
Read Full Story

12:57 PM (IST) Apr 13

ಮೈದಾ ಬೇಡವೇ ಬೇಡ; ಇದೊಂದು ಹಾಕಿದ್ರೆ ಪದರು ಪದರಾಗುತ್ತೆ, ಮೃದುವಾದ, ಮಂಗಳೂರು ಬನ್ಸ್ ರೆಡಿ ಆಗುತ್ತೆ!

Mangalore buns recipe with wheat flour: ಬನ್ಸ್‌ ಮಾಡಿದರೂ ಕೂಡ ಕೊರಟಾಗತ್ತೆ, ಮೈದಾ ಹಾಕಬೇಕು ಎಂದೆಲ್ಲ ದೂರು ಇರುವುದು. ಆದರೆ ಮೈದಾ ಹಾಕದೆ ಕೂಡ ಬನ್ಸ್‌ ಮಾಡಬಹುದು. ಹೌದು, ಮೃದುವಾಗಿ ಪದರು ಪದರಾಗಿ ಬನ್ಸ್‌ ಮಾಡುವುದು ಹೇಗೆ? ಇಲ್ಲಿ ಸಿಂಪಲ್‌ ವಿಧಾನವಿದೆ.

Read Full Story

More Trending News