Published : Jun 24, 2025, 07:00 AM ISTUpdated : Jun 24, 2025, 11:21 PM IST

ಲೀಡ್ಸ್‌ ಟೆಸ್ಟ್‌ನಲ್ಲಿ ಅವಮಾನಕರ ಸೋಲು ಕಂಡ ಟೀಮ್‌ ಇಂಡಿಯಾ!

ಸಾರಾಂಶ

ಇಸ್ರೇಲ್ ಹಾಗೂ ಇರಾನ್ ನಡುವಿನ 12 ದಿನದ ಯುದ್ಧ ಅಂತ್ಯಗೊಂಡಿದೆ. ಉಭಯ ದೇಶಗಳು ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಯುದ್ಧ ವರ್ಷವಿಡಿ ಮುಂದುವರಿಯುವ ಸಾಧ್ಯತೆ ಇತ್ತು. ಆದರೆ ಮುಂದಿನ 24 ಗಂಟೆಯಲ್ಲಿ ಯುದ್ಧ ಸಂಪೂರ್ಣ ಅಂತ್ಯಗೊಳ್ಳುತ್ತಿದೆ. ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಎರಡೂ ದೇಶಗಳಿಗೆ ಧನ್ಯವಾದ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.

Test Cricket

11:21 PM (IST) Jun 24

ಲೀಡ್ಸ್‌ ಟೆಸ್ಟ್‌ನಲ್ಲಿ ಅವಮಾನಕರ ಸೋಲು ಕಂಡ ಟೀಮ್‌ ಇಂಡಿಯಾ!

ಹೆಡಿಂಗ್ಲೆಯಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಭಾರತ ಐದು ಶತಕ ಬಾರಿಸಿದರೂ ಸೋಲು ಕಂಡಿದೆ. ಇಂಗ್ಲೆಂಡ್‌ ಐದು ವಿಕೆಟ್‌ಗಳ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಡಕೆಟ್‌ ಅವರ ಶತಕ ಇಂಗ್ಲೆಂಡ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
Read Full Story

10:30 PM (IST) Jun 24

ಭಾಷಾ ಉತ್ತೇಜನಕ್ಕೆ ಕೇಂದ್ರದ ನಿಧಿ - ಸಂಸ್ಕೃತಕ್ಕೆ ಸಿಂಹಪಾಲು, ಕನ್ನಡಕ್ಕೆ ಚೂರುಪಾರು!

ಕೇಂದ್ರ ಸರ್ಕಾರವು ಇತರ ಐದು ಶಾಸ್ತ್ರೀಯ ಭಾರತೀಯ ಭಾಷೆಗಳಿಗೆ ಒಟ್ಟು ಖರ್ಚಿನ 17 ಪಟ್ಟು ಖರ್ಚು ಮಾಡಿದೆ.

 

Read Full Story

10:15 PM (IST) Jun 24

ಬೆಂಗಳೂರಿನ ರಾಮ್​, ಪುಣೆಯ ಶ್ಯಾಮ್​ - ಮೊದಲ ನೋಟದಲ್ಲೇ ಲವ್! ಮನೆಯವರಿಂದ ಅದ್ದೂರಿ ಮದುವೆ

ಪ್ರತಿಬಾರಿಯೂ ಒಂದು ಗಂಡಿಗೆ, ಒಂದು ಹೆಣ್ಣು ಎನ್ನುವ ನಿಯಮ ಆಗಲೇಬೇಕೆಂದೇನಿಲ್ಲ. ಗಂಡಿಗೆ ಗಂಡು, ಹೆಣ್ಣಿಗೆ ಹೆಣ್ಣು ಎನ್ನುವ ನಿಯಮವೂ ಅನ್ವಯ ಆಗಿಬಿಡುತ್ತದೆ. ಅಂಥದ್ದೇ ಒಂದು ಕುತೂಹಲದ ಲವ್​ಸ್ಟೋರಿ ಇಲ್ಲಿದೆ...

 

Read Full Story

10:04 PM (IST) Jun 24

IPO ಇಳಿಯುವ ಮುನ್ನ ಸ್ಟಾರ್ಟ್‌ಅಪ್‌ ಕಂಪನಿಯಲ್ಲಿ 250 ಕೋಟಿ ಹೂಡಿಕೆ ಮಾಡಿದ ಕಾಮತ್‌ ಬ್ರದರ್ಸ್‌!

ಜೆರೋಧಾ ಸಂಸ್ಥಾಪಕರಾದ ನಿಖಿಲ್ ಮತ್ತು ನಿತಿನ್ ಕಾಮತ್ ಇನ್‌ಕ್ರೆಡ್ ಹೋಲ್ಡಿಂಗ್ಸ್‌ನಲ್ಲಿ ₹250 ಕೋಟಿ ಹೂಡಿಕೆ ಮಾಡಿದ್ದಾರೆ, ಇದು ಭಾರತದ ವೇಗವಾಗಿ ವಿಕಸನಗೊಳ್ಳುತ್ತಿರುವ ಡಿಜಿಟಲ್ ಸಾಲ ಕ್ಷೇತ್ರದಲ್ಲಿ ಅವರ ನಂಬಿಕೆಯನ್ನು ಸೂಚಿಸುತ್ತದೆ.

Read Full Story

10:00 PM (IST) Jun 24

ಕಾಡುಗೋಡಿಯಲ್ಲಿ ₹4,000 ಕೋಟಿ ಮೌಲ್ಯದ ಭೂಮಿ ವಶ, ಇದು ಅತೀ ದೊಡ್ಡ ಒತ್ತುವರಿ ತೆರವು

ಬೆಂಗಳೂರಿನ ಕಾಡುಗೋಡಿಯಲ್ಲಿ ಅತಿಕ್ರಮಣಗೊಂಡಿದ್ದ ₹4,000 ಕೋಟಿ ಮೌಲ್ಯದ 120 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಒಟ್ಟಾರೆಯಾಗಿ 248 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ₹8,000 ಕೋಟಿ ಎಂದು ಅಂದಾಜಿಸಲಾಗಿದೆ. ಅತಿಕ್ರಮಣ ತಡೆಗಟ್ಟಲು ಬೇಲಿ ಹಾಕಿ ಗಿಡ ನೆಡಲಾಗುವುದು.
Read Full Story

09:16 PM (IST) Jun 24

ಸೋರುತಿಹುದು ವಂದೇ ಭಾರತ್‌ ಮಾಳಿಗಿ..ಐಷಾರಾಮಿ ರೈಲಿನ ವಾಟರ್‌ಫಾಲ್‌ ಕಂಡು ಬೆಚ್ಚಿಬಿದ್ದ ಜನ!

ದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ರೈಲ್ವೆಯನ್ನು ಟೀಕಿಸಲಾಗಿದೆ.

 

 

Read Full Story

08:31 PM (IST) Jun 24

ಕಿರಿಕ್‌ ಪಾರ್ಟಿ 'ಸಾನ್ವಿ' ಸ್ಟೈಲ್‌ ಡೆತ್‌, ಕುಡಿದು ಕಟ್ಟಡದಿಂದ ಕೆಳಗೆ ಬಿದ್ದು ಸಾವು!

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಯುವತಿ ಸಾವನ್ನಪ್ಪಿದ್ದಾರೆ. ಲವ್ ಫೇಲ್ಯೂರ್ ಆಗಿದ್ದ ನಂದಿನಿ, ಸ್ನೇಹಿತರೊಂದಿಗೆ ಕಟ್ಟಡದ ಮೇಲೆ ಮದ್ಯಪಾನ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
Read Full Story

08:07 PM (IST) Jun 24

ಜೀರಿಗೆ ಖರೀದಿಸಿದಾತನಿಗೆ ಆನ್‌ಲೈನ್ ವಂಚನೆ - ₹24,000 ಕಳೆದುಕೊಂಡ ಉಡುಪಿ ವ್ಯಕ್ತಿ!

ಇಂಡಿಯಾಮಾರ್ಟ್ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಯತ್ನದಲ್ಲಿ ಕಾಪು ತಾಲ್ಲೂಕಿನ ಬೆಳಪು ಗ್ರಾಮದ ನಿವಾಸಿ ₹24,000 ಕಳೆದುಕೊಂಡಿದ್ದಾರೆ. ಮುಂಗಡ ಪಾವತಿ ಮಾಡಿದ ನಂತರ, ಆರೋಪಿಯು ಸರಕುಗಳನ್ನು ಕಳುಹಿಸದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ.
Read Full Story

08:00 PM (IST) Jun 24

ಸಾವು ಹೀಗೂ ಬರುತ್ತೆ - 11 ವರ್ಷದ ಬಾಲಕನಿಗೆ ನೇಣು ಕುಣಿಕೆಯಾದ ಶರ್ಟ್ ಕಾಲರ್‌

ಕೇರಳದ ಮಲ್ಲಪುರಂನಲ್ಲಿ ಮನೆಯ ಗೋಡೆಯ ಮೊಳೆಗೆ ಶರ್ಟ್ ಕಾಲರ್ ಸಿಲುಕಿ 11 ವರ್ಷದ ಬಾಲಕ ಉಸಿರುಗಟ್ಟಿ ಸಾವಿಗೀಡಾಗಿದ ಆಘಾತಕಾರಿ ಘಟನೆ ನಡೆದಿದೆ. 

Read Full Story

07:49 PM (IST) Jun 24

18 ಕೋಟಿ ಮೌಲ್ಯದ 92 ಲಕ್ಷ ಸಿಗರೇಟ್‌ ಸೀಜ್‌ ಮಾಡಿದ ವಿಮಾನ ನಿಲ್ದಾಣ ಸಿಬ್ಬಂದಿ!

ಚೆನ್ನೈನಲ್ಲಿ ರೂ. 18.2 ಕೋಟಿ ಮೌಲ್ಯದ 92 ಲಕ್ಷಕ್ಕೂ ಹೆಚ್ಚು ಅಕ್ರಮವಾಗಿ ಕಳ್ಳಸಾಗಣೆ ಮಾಡಲಾದ ವಿದೇಶಿ ಮೂಲದ ಸಿಗರೇಟ್‌ಗಳನ್ನು ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

 

Read Full Story

07:49 PM (IST) Jun 24

ಅಡುಗೆ ಸಿಬ್ಬಂದಿ ದಲಿತೆ ಎಂಬ ಕಾರಣಕ್ಕೆ ಶಾಲೆಗೆ ಬಾರದ ಮಕ್ಕಳು, ಒಬ್ಬ ವಿದ್ಯಾರ್ಥಿಗೆ ಇಬ್ಬರು ಶಿಕ್ಷಕರು!

ಚಾಮರಾಜನಗರದ ಹೊಮ್ಮ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿ ದಲಿತ ಮಹಿಳೆ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ಕಳುಹಿಸುತ್ತಿಲ್ಲ. ಟಿಸಿ ಪಡೆದು ಬೇರೆಡೆ ಸೇರಿಸುತ್ತಿದ್ದು, ಒಬ್ಬನೇ ವಿದ್ಯಾರ್ಥಿ ಉಳಿದಿದ್ದಾನೆ. ಶಾಲೆ ಮುಚ್ಚುವ ಹಂತದಲ್ಲಿದೆ.
Read Full Story

07:29 PM (IST) Jun 24

ಮಾನ್ಸೂನ್‌ ಸೇಲ್‌ ಘೋಷಿಸಿದ ಇಂಡಿಗೋ, 6 ದಿನದ ಆಫರ್‌ನಲ್ಲಿ ಕೇವಲ 1499 ರೂಪಾಯಿಗೆ ಸಿಗಲಿದೆ ವಿಮಾನ ಟಿಕೆಟ್‌!

ಜೂನ್ 24 ರಿಂದ ಜೂನ್ 29 ರ ನಡುವೆ ಮಾಡಿದ ಬುಕಿಂಗ್‌ಗಳಿಗೆ ಈ ಆಫರ್‌ ಮಾನ್ಯವಾಗಿರುತ್ತದೆ. ಜುಲೈ 1 ರಿಂದ ಸೆಪ್ಟೆಂಬರ್ 21ರ ನಡುವೆ ಪ್ರಯಾಣ ಮಾಡಬಹುದು ಎಂದು ಇಂಡಿಗೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

 

Read Full Story

07:16 PM (IST) Jun 24

ಒನ್‌ಸೈಡ್ ಲವ್‌, ಯುವಕನ ವಿರುದ್ಧ ಸೇಡಿಗೆ ಹುಸಿ ಬಾಂಬ್ ಸಂದೇಶ - ಸಣ್ಣ ತಪ್ಪು ಮಾಡಿ ಸಿಕ್ಕಿಬಿದ್ದ ಮಹಿಳಾ ಟೆಕ್ಕಿ

ಪ್ರೀತಿ ನಿರಾಕರಿಸಿದ ಸಹೋದ್ಯೋಗಿಯ ಮೇಲೆ ಸೇಡು ತೀರಿಸಿಕೊಳ್ಳಲು ಯುವತಿಯೊಬ್ಬಳು 11 ರಾಜ್ಯಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದಾಳೆ.

Read Full Story

07:06 PM (IST) Jun 24

ಶಾಲೆಯಲ್ಲಿ ಆಟವಾಡುತ್ತಿದ್ದ 9ನೇ ತರಗತಿ ಬಾಲಕಿಗೆ ಹಾರ್ಟ್ ಅಟ್ಯಾಕ್; ಆಸ್ಪತ್ರೆ ತಲುಪುವ ಮುನ್ನ ಸಾವು!

ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಆಟವಾಡುವಾಗ ಹೃದಯಾಘಾತದಿಂದಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದ ಬಾಲಕಿ ರೇಣುಕಾಳ ಸಾವು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

Read Full Story

07:04 PM (IST) Jun 24

ಸಂದರ್ಶನಕ್ಕೂ ಎಂಟ್ರಿ ಕೊಟ್ಟ ಎಐ, ಟೆಕ್ ಸಂದರ್ಶನಗಳಲ್ಲಿ AI ಕೋಡಿಂಗ್ ಬಳಕೆ!

ಕಂಪೆನಿಗಳು ಈಗ ಎಐ ಸಹಾಯದಿಂದ ಕೋಡಿಂಗ್ ಸಂದರ್ಶನಗಳನ್ನು ನಡೆಸುತ್ತಿವೆ. Canva ಮತ್ತು Mastercard ನಂತಹ ಕಂಪನಿಗಳು ಈಗಾಗಲೇ ಈ ಹೊಸ ವಿಧಾನವನ್ನು ಅಳವಡಿಸಿಕೊಂಡಿವೆ. ಈ ಬದಲಾವಣೆಯು ಅಭ್ಯರ್ಥಿಗಳ ಕೋಡಿಂಗ್ ಜ್ಞಾನ ಮತ್ತು ಎಐ ಬಳಕೆಯ ಕೌಶಲ್ಯ ಎರಡನ್ನೂ ಪರೀಕ್ಷಿಸುತ್ತದೆ.
Read Full Story

06:45 PM (IST) Jun 24

ಆಂಧ್ರ ಇಲ್ದಿದ್ರೇನು.. ಕೇಂದ್ರದಿಂದ ಮಾವು ಬೆಳೆಗಾರರಿಗೆ ಹಣ ಕೊಡಿಸಿದ ಕುಮಾರಸ್ವಾಮಿ!

ಮಾವಿನ ಹಣ್ಣಿನ ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ನೆರವಿಗೆ ಬಂದಿದ್ದಾರೆ.. ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದ ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಬೆಂಬಲ ಬೆಲೆ ಘೋಷಿಸಿದೆ.

Read Full Story

06:44 PM (IST) Jun 24

ಕೋರ್ಟ್ ಕಟಕಟೆಯಲ್ಲಿ ಬೈಕ್ ಟ್ಯಾಕ್ಸಿ ಸಂಚಾರ ಹೊಯ್ದಾಟ; ನಾಳೆಗೆ ವಿಚಾರಣೆ ಮುಂದೂಡಿದ ಹೈಕೋರ್ಟ್!

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ಕೋರಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ. ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಮತ್ತು ಸರ್ಕಾರದ ನಡುವಿನ ವಾದ-ಪ್ರತಿವಾದಗಳು ಮುಂದುವರೆದಿವೆ.
Read Full Story

06:21 PM (IST) Jun 24

ಸೌಂದರ್ಯ ರಿಜೆಕ್ಟ್ ಮಾಡಿದ ಸಿನಿಮಾದಿಂದಲೇ ಲೈಫ್ ಸೆಟಲ್ ಮಾಡಿಕೊಂಡ ಮತ್ತೊಬ್ಬ ಸ್ಟಾರ್ ನಟಿ!

ಒಂದು ಕಾಲದ ಸ್ಟಾರ್ ನಟಿ ಸೌಂದರ್ಯ ರಿಜೆಕ್ಟ್ ಮಾಡಿದ ಸಿನಿಮಾದಿಂದ ಇನ್ನೊಬ್ಬ ಸ್ಟಾರ್ ನಟಿಗೆ ಲೈಫೇ ಸೆಟ್ ಆಗಿದೆ. ಯಾರದು ಅಂತ ಗೊತ್ತಾ?

Read Full Story

06:12 PM (IST) Jun 24

ಇನ್ನು 72 ಗಂಟೆಯಲ್ಲೇ ನಿಮ್ಮ ಪಿಎಫ್‌ ಖಾತೆಯಿಂದ ಬರಲಿದೆ 5 ಲಕ್ಷ ಹಣ, ಬದಲಾವಣೆ ತಂದ ಕೇಂದ್ರ ಸರ್ಕಾರ!

ತುರ್ತು ಪರಿಸ್ಥಿತಿಯಲ್ಲಿ 72 ಗಂಟೆಗಳ ಒಳಗೆ ನಿಮ್ಮ ಪಿಎಫ್ ಖಾತೆಯಿಂದ ₹5 ಲಕ್ಷದವರೆಗೆ ಹಣವನ್ನು ಹಿಂಪಡೆಯಬಹುದು. ಆಟೋ ಸೆಟ್ಲ್‌ಮೆಂಟ್ ಮೂಲಕ 3-4 ದಿನಗಳಲ್ಲಿ ಹಣ ಪಡೆಯಿರಿ. UPI-ATM ಮೂಲಕವೂ ಶೀಘ್ರದಲ್ಲೇ ಹಣ ಹಿಂಪಡೆಯುವ ಸೌಲಭ್ಯ ಲಭ್ಯ.
Read Full Story

06:11 PM (IST) Jun 24

ಈ ರಾಜ್ಯದ ಹೆಣ್ಮಕ್ಕಳು ಬಹಳ ಬೇಗ ಸಾಯ್ತಾರೆ!

ಭಾರತದ ಈ ರಾಜ್ಯದಲ್ಲಿ ಮಹಿಳೆಯರ ಸರಾಸರಿ ಜೀವಿತಾವಧಿ ತುಂಬಾನೆ ಕಡಿಮೆ ಇದೆಯಂತೆ. ಆ ರಾಜ್ಯ ಯಾವುದು? ಅಲ್ಲಿ ಮಹಿಳೆಯರ ಜೀವಿತಾವಧಿ ಎಷ್ಟಿದೆ ಅನ್ನೋದನ್ನು ನೋಡೋಣ.

 

Read Full Story

05:53 PM (IST) Jun 24

ಬೀಚ್‌ ಬದಿ ಇರೋ ಐತಿಹಾಸಿಕ ಮುರುಡೇಶ್ವರ ದೇಗುಲದಲ್ಲಿ ವಸ್ತ್ರ ಸಂಹಿತೆ ಕಡ್ಡಾಯ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಾಲಯದಲ್ಲಿ ಇನ್ನು ಮುಂದೆ ಕಡ್ಡಾಯ ವಸ್ತ್ರ ಸಂಹಿತೆ ಜಾರಿಯಾಗಲಿದೆ. ಪುರುಷರಿಗೆ ಪಂಚೆ/ಧೋತಿ, ಮಹಿಳೆಯರಿಗೆ ಸೀರೆ/ಚೂಡಿದಾರ್ ಕಡ್ಡಾಯ. ದೇವಾಲಯದ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
Read Full Story

05:53 PM (IST) Jun 24

ಆರೆಂಜ್‌ ಅಲರ್ಟ್‌ ಘೋಷಿಸಿದ ಐಎಂಡಿ, ರಾಜ್ಯದ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ!

ಭಾರೀ ಮಳೆಯಿಂದಾಗಿ ಜೂನ್ 25 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಈ ರಜೆಯು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಮತ್ತು ಅಂಗನವಾಡಿಗಳಿಗೆ ಅನ್ವಯಿಸುತ್ತದೆ.

Read Full Story

05:53 PM (IST) Jun 24

ಕಣ್ಣಿಗೆ ಕಾಣದ ರೋಗಿಗೆ ಸಹಾಯ ಮಾಡಿದ ಆಸ್ಪತ್ರೆ ಅಟೆಂಡರ್‌ - ನಡುರಾತ್ರಿಯ ಸಿಸಿಟಿವಿ ದೃಶ್ಯ ಈಗ ವೈರಲ್

ಅರ್ಜೆಂಟೀನಾದ ಆಸ್ಪತ್ರೆಯೊಂದರಲ್ಲಿ ಮಧ್ಯರಾತ್ರಿ ಸಿಸಿಟಿವಿಯಲ್ಲಿ ಸೆರೆಯಾದ ವಿಚಿತ್ರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Read Full Story

05:31 PM (IST) Jun 24

ಹನಿಮೂನ್ ವೇಳೆ ನವಜೋಡಿಗೆ ಶಾಕ್ ಕೊಟ್ಟ ವರುಣ; ಬೀಚ್‌ನಲ್ಲಿ ಸಿಡಿಲು ಬಡಿದು ವರ ದುರ್ಮರಣ!

ಮದುವೆಯಾಗಿ ಹನಿಮೂನ್‌ಗೆ ತೆರಳಿದ್ದ 29 ವರ್ಷದ ಯುವಕ ಬೀಚ್‌ನಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ನಡೆದಿದೆ. ಈತನ ಹತ್ತಿರದಲ್ಲಿದ್ದ ಇಬ್ಬರಿಗೂ ಸಿಡಿಲು ಬಡಿದಿದ್ದು, ಅವರಿಗೆ ಗಾಯಗಳಾಗಿವೆ. ಸಿಡಿಲಿನ ಅಪಾಯದಿಂದ ತಪ್ಪಿಸಿಕೊಳ್ಳಲು ಸಲಹೆಗಳನ್ನು ನೀಡಲಾಗಿದೆ.

Read Full Story

05:19 PM (IST) Jun 24

ಜುಲೈ 1 ರಿಂದ ರೈಲ್ವೆ ಪ್ರಯಾಣ ದರದಲ್ಲಿ ಏರಿಕೆ, ಎಸಿ ಕೋಚ್‌ನ 1 ಸಾವಿರ ಕಿ.ಮೀ ಪ್ರಯಾಣಕ್ಕೆ 20 ರೂಪಾಯಿ ಹೆಚ್ಚಳ!

ಜುಲೈ 1 ರಿಂದ ರೈಲು ಪ್ರಯಾಣ ದುಬಾರಿಯಾಗಲಿದೆ. ಎಸಿ ಅಲ್ಲದ ಮತ್ತು ಎಸಿ ದರ್ಜೆಯ ರೈಲುಗಳ ದರಗಳು ಕ್ರಮವಾಗಿ ಪ್ರತಿ ಕಿ.ಮೀ.ಗೆ 1 ಮತ್ತು 2 ಪೈಸೆ ಹೆಚ್ಚಾಗಲಿವೆ. ಈ ಬದಲಾವಣೆಗಳು ಜುಲೈ 1 ರಿಂದ ಜಾರಿಗೆ ಬರುತ್ತವೆ.
Read Full Story

04:51 PM (IST) Jun 24

ಸಿಂಧೂ ಜಲ ಒಪ್ಪಂದ - ಭಾರತದಿಂದ ನಿರ್ಣಾಯಕ ಹೆಜ್ಜೆ

ಪಾಕಿಸ್ತಾನದ ಎಚ್ಚರಿಕೆಗಳ ನಡುವೆಯೂ ಭಾರತ ಸಿಂಧೂ ಜಲ ಒಪ್ಪಂದದಿಂದ ಹಿಂದೆ ಸರಿಯಲು ನಿರಾಕರಿಸಿದೆ. ಭಯೋತ್ಪಾದನೆ ನಿಲ್ಲುವವರೆಗೂ ಒಪ್ಪಂದ ಪುನರಾರಂಭವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಚೆನಾಬ್ ನದಿಯಲ್ಲಿ ಫ್ಲಶಿಂಗ್ ಕಾರ್ಯಾಚರಣೆ ನಡೆಸಿ ಜಲವಿದ್ಯುತ್ ಯೋಜನೆಗಳನ್ನು ವೇಗಗೊಳಿಸಿದೆ.
Read Full Story

04:45 PM (IST) Jun 24

ಮೊದಲ ಟೆಸ್ಟ್‌ನ ಕೊನೆಯ ದಿನದಲ್ಲಿಂದು Ind vs Eng ಆಟಗಾರರು ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದ್ದೇಕೆ?

ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಕುತೂಹಲದ ಘಟ್ಟ ತಲುಪಿದೆ. ದಿಲೀಪ್ ದೋಶಿ ಅವರ ನಿಧನಕ್ಕೆ ಸಂತಾಪ ಸೂಚಿಸಲು ಆಟಗಾರರು ಕಪ್ಪುಪಟ್ಟಿ ಧರಿಸಿದ್ದರು. ಐದನೇ ದಿನದಾಟದಲ್ಲಿ ಗೆಲುವಿಗಾಗಿ ಭಾರತಕ್ಕೆ 10 ವಿಕೆಟ್, ಇಂಗ್ಲೆಂಡಿಗೆ 350 ರನ್‌ಗಳ ಅವಶ್ಯಕತೆಯಿದೆ.
Read Full Story

04:40 PM (IST) Jun 24

ಹುಡುಗಿಯರ ಸಹವಾಸ ಸಾಕೆಂದು ಗೊಂಬೆ ಜೊತೆ ಮದ್ವೆಯಾಗಿ 3 ಮಕ್ಕಳ ತಂದೆಯಾದ ಯುವಕ!

ಯುವತಿಯೊಬ್ಬಳು ಕೈಕೊಟ್ಟ ಬಳಿಕ ಹೆಣ್ಣುಮಕ್ಕಳ ಮೇಲೆ ವಿಶ್ವಾಸವೇ ಕಳೆದುಕೊಂಡ ಯುವಕನೊಬ್ಬ ಗೊಂಬೆಯ ಜೊತೆ ಮದುವೆಯಾಗಿ ಮೂವರು ಮಕ್ಕಳ ಅಪ್ಪ ಆಗಿದ್ದಾನೆ. ಏನಿದು ಸುದ್ದಿ ನೋಡಿ!

 

Read Full Story

04:38 PM (IST) Jun 24

ರೂಪಾ ಗಂಗೂಲಿ ಸೇರಿದಂತೆ ಅನುಪಮಾ ಸೀರಿಯಲ್ ನಟನಟಿಯರ ನೆಟ್‌ವರ್ತ್ ಇಷ್ಟೊಂದಾ!

ಹಿಂದಿ ಕಿರುತೆರೆಯ ಜನಪ್ರಿಯ ಧಾರವಾಹಿಗಳಲ್ಲಿ ಅನುಪಮಾ ಧಾರವಾಹಿಯೂ ಒಂದು. ಇದರಲ್ಲಿ ನಟಿಸುತ್ತಿರುವ ನಟ ನಟಿಯರ ಆಸ್ತಿ ಎಷ್ಟಿದೆ ಗೊತ್ತಾ? ರೂಪಾಲಿ ಗಂಗೂಲಿಯಿಂದ ಹಿಡಿದು ಸುಧಾಂಶು ಪಾಂಡೆವರೆಗೂ ಎಲ್ಲರ ಆಸ್ತಿಯ ವಿವರ ಇಲ್ಲಿದೆ. 

Read Full Story

04:36 PM (IST) Jun 24

ಬೆಟ್ಟ ಕೊರೆದು ಬಡಾವಣೆ ನಿರ್ಮಾಣಕ್ಕೆ ಮುಂದಾದ ಪ್ರಭಾವಿಗಳು; ಅವಕಾಶ ನೀಡಿದ ಮುಡಾ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿ

ಕೊಡಗಿನಲ್ಲಿ ಬೆಟ್ಟ ಕೊರೆದು ಬಡಾವಣೆ ನಿರ್ಮಾಣದಿಂದ ಭೂಕುಸಿತದ ಭೀತಿ. ಮಡಿಕೇರಿಯಲ್ಲಿ ಅಪಾಯಕಾರಿ ಬೆಟ್ಟದ ಮೇಲೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ.
Read Full Story

04:29 PM (IST) Jun 24

ಲೈಂಗಿಕ ಅಲ್ಪಸಂಖ್ಯಾತರ ಹಕ್ಕಿಗಾಗಿ ಬೆಂಗಳೂರಿನಲ್ಲಿ ಕಲರ್‌ಫುಲ್‌ ಪ್ರೈಡ್‌ ಮಾರ್ಚ್‌, ಬಿಗ್‌ ಬಾಸ್‌ ಸ್ಪರ್ಧಿಯೂ ಭಾಗಿ!

ಕಂಠೀರವ ಕ್ರೀಡಾಂಗಣದಿಂದ ಟೌನ್‌ಹಾಲ್‌ವರೆಗೆ ಲೈಂಗಿಕ ಅಲ್ಪಸಂಖ್ಯಾತರ ಹೆಮ್ಮೆಯ ಮೆರವಣಿಗೆ ನಡೆಯಿತು. LGBTQIA+ ಸಮುದಾಯದ 350ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದ ಈ ಮೆರವಣಿಗೆಯಲ್ಲಿ ಲಿಂಗ, ಲೈಂಗಿಕ ಅಲ್ಪಸಂಖ್ಯಾತರ ನಿಗಮ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಯಿತು.

 

Read Full Story

04:25 PM (IST) Jun 24

ಕಬ್ಬನ್ ಪಾರ್ಕ್ ಬಳಿಯ ಪಬ್‌ನಲ್ಲಿ ಟೆಕ್ಕಿ ಯುವತಿ ಮೇಲೆ ದೌರ್ಜನ್ಯ ಯತ್ನ; ಅನುರಾಗ್ ಅರೆಸ್ಟ್!

ಬೆಂಗಳೂರಿನ ಕಬ್ಬನ್ ಪಾರ್ಕ್ ಪ್ರದೇಶದ ಖಾಸಗಿ ಪಬ್‌ನಲ್ಲಿ ಟೆಕ್ಕಿ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಯತ್ನ ನಡೆದಿದೆ. ಯುವತಿಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ.
Read Full Story

04:10 PM (IST) Jun 24

ಸೆಖೆ ಗುಳ್ಳೆಗಳ ತುರಿಕೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಮನೆ ಮದ್ದು

ಬೇಸಿಗೆಯ ಸೆಖೆಯಿಂದ ಉಂಟಾಗುವ ಸೆಖೆಗುಳೆಗಳ ತುರಿಕೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಮನೆ ಮದ್ದು.

Read Full Story

03:55 PM (IST) Jun 24

ತಾರಕಕ್ಕೇರಿ ಬಿಜೆಪಿ ಬಣ ಜಗಳ; 'ವಿಜಯೇಂದ್ರ ಬದಲಾಗಲೇಬೇಕು' ಪಟ್ಟು ಹಿಡಿದ ಕುಮಾರ ಬಂಗಾರಪ್ಪ!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಾಯಿಸಬೇಕೆಂಬ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ. 

Read Full Story

03:53 PM (IST) Jun 24

ಬೈಕ್ ಟ್ಯಾಕ್ಸಿ ಬ್ಯಾನ್‌ ಬೆನ್ನಲ್ಲೇ, ಕೊರಿಯರ್ ಸೇವೆ ನೆಪದಲ್ಲಿ ಪಿಕ್‌ಅಪ್‌ ಡ್ರಾಪ್!

ಬೈಕ್ ಟ್ಯಾಕ್ಸಿ ನಿಷೇಧದ ನಂತರ 'ಪಾರ್ಸೆಲ್' ಹೆಸರಿನಲ್ಲಿ ಪ್ರಯಾಣಿಕರ ಸಾಗಣೆ ನಡೆಸುತ್ತಿದ್ದ ride aggregator ಗಳ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ. ವಶಪಡಿಸಿಕೊಂಡ ಬೈಕ್‌ಗಳಿಗೆ ದಂಡ ವಿಧಿಸಲಾಗಿದ್ದು, ಈ ಚಾಣಾಕ್ಷ ತಂತ್ರಕ್ಕೆ ಕಡಿವಾಣ ಬಿದ್ದಿದೆ.
Read Full Story

03:46 PM (IST) Jun 24

ತುಮಕೂರು - ರೀಲ್ಸ್ ಮಾಡಬೇಡ ಎಂದಿದ್ದಕ್ಕೆ ಪ್ರಾಣವನ್ನೇ ಬಿಟ್ಟ ಪ್ರೇಯಸಿ!

ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಆರಂಭವಾದ ಪ್ರೇಮಿಗಳ ಜಗಳ ಯುವತಿಯ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ತುಮಕೂರಿನಲ್ಲಿ ನಡೆದ ಈ ಘಟನೆಯಲ್ಲಿ ಚೈತನ್ಯ ಎಂಬ ಯುವತಿ ನೇಣಿಗೆ ಶರಣಾಗಿದ್ದಾಳೆ.
Read Full Story

03:42 PM (IST) Jun 24

ಪ್ರಧಾನಿ ಮೋದಿ ಹೊಗಳಿ ರಾಹುಲ್ ಗಾಂಧಿ ನಾಯಕತ್ವ ಎಕ್ಸ್‌ಪೋಸ್ ಮಾಡಿದ ಶಶಿ ತರೂರ್

ಪ್ರಧಾನಿ ಮೋದಿ ಹೊಗಳಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಇದೀಗ ರಾಹುಲ್ ಹಾಗೂ ಕಾಂಗ್ರೆಸ್ ನಾಯಕತ್ವವನ್ನೇ ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಶಶಿ ತರೂರ್ ಹೇಳಿದ್ದೇನು?

Read Full Story

03:39 PM (IST) Jun 24

ಏರ್‌ ಇಂಡಿಯಾ ವಿಮಾನ ದುರಂತಕ್ಕೂ 15 ದಿನ ಮುನ್ನ ಭರ್ಜರಿ ಸ್ಯಾಲರಿ ಹೈಕ್‌ ಪಡೆದಿದ್ದ ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌!

ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌ ಅವರಿಗೆ ₹27.75 ಕೋಟಿ ವಾರ್ಷಿಕ ವೇತನ ಹೆಚ್ಚಳವಾಗಿದೆ. ಹೊಸ ಸಂಭಾವನೆ ಪ್ಯಾಕೇಜ್ 2025ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 46 ರಷ್ಟು ಹೆಚ್ಚಳವಾಗಿದೆ.
Read Full Story

03:38 PM (IST) Jun 24

ಮುಂಬೈ ತಂಡ ತೊರೆಯಲು ನಿರ್ಧರಿಸಿದ ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗ!

ಮುಂಬೈ: ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗ, ಮುಂಬೈ ಮೂಲದ ಅಗ್ರಕ್ರಮಾಂಕದ ಬ್ಯಾಟರ್ ಪೃಥ್ವಿ ಶಾ, ಮುಂಬೈ ತಂಡವನ್ನು ತೊರೆದಿದ್ದಾರೆ. ಈ ಕುರಿತಾದ ಮಹತ್ವದ ಅಪ್‌ಡೇಟ್ ಇಲ್ಲಿದೆ ನೋಡಿ

 

Read Full Story

03:32 PM (IST) Jun 24

ಹಣ ಕೊಟ್ಟರೆ ಮನೆ ಆರೋಪ; ದೂರು ಕೊಟ್ರೆ ಕ್ರಮ, ಇಡೀ ವಸತಿ ಇಲಾಖೆಯನ್ನೇ ದೂಷಣೆ ಮಾಡೋದು ಸರಿ ಅಲ್ಲ; ಪರಮೇಶ್ವರ್

ಶಾಸಕರ ಖರೀದಿ ಆರೋಪವನ್ನು ಗೃಹ ಸಚಿವ ಪರಮೇಶ್ವರ ತಳ್ಳಿಹಾಕಿದ್ದಾರೆ. ಯಾವುದೇ ಖರೀದಿ ನಡೆದಿಲ್ಲ, ಹಾಗೇನಾದರೂ ಆದರೆ ಹೈಕಮಾಂಡ್‌ ಗಮನಿಸುತ್ತದೆ ಎಂದಿದ್ದಾರೆ. ಬಿ.ಆರ್‌. ಪಾಟೀಲ್‌ ಆಡಿಯೋದಿಂದ ಸರ್ಕಾರಕ್ಕೆ ಮುಜುಗರ ಆಗಿಲ್ಲ, ನಿರ್ದಿಷ್ಟ ಆರೋಪಗಳಿದ್ದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Read Full Story

More Trending News