ತೆಕ್ಕಲಕೋಟೆ (ಬಳ್ಳಾರಿ): 6ರಿಂದ 7ನೇ ಶತಮಾನಕ್ಕೆ ಸೇರಿದ ಅಪ್ರಕಟಿತ ಬಂಡೆಗಲ್ಲು ಶಾಸನವೊಂದು ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ನಿಟ್ಟೂರಿನ ಹೊಲದಲ್ಲಿ ಪತ್ತೆಯಾಗಿದೆ.
ನಿಟ್ಟೂರಿನಲ್ಲಿರುವ ಅಶೋಕನ ಶಿಲಾಶಾಸನ ಪತ್ತೆ ಆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿರುವ ಬಂಡೆಗಲ್ಲು ಶಾಸನವನ್ನು ಸಂಶೋಧನಾರ್ಥಿಗಳಾದ ಅಶೋಕ್ ಅಬಕಾರಿ, ಮನೋಹರ ಗುರುತಿಸಿ, ಕ್ಷೇತ್ರ ಅಧ್ಯಯನಕ್ಕೆ ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ, ಹಿರೇಬೆಣಕಲ್ ಮಂಜುನಾಥ ದೊಡ್ಡಮನಿ ಗಮನಕ್ಕೆ ತಂದರು. ಶಾಸನವು ಬೃಹತ್ ಆಕಾರದ ಬಂಡೆಯೊಂದರ ಮೇಲೆ ಪ್ರಾಚೀನ ಲಿಪಿಯಲ್ಲಿ ಬರೆಯಲ್ಪಟ್ಟಿದ್ದು, ಶಾಸನವು ಸುಮಾರು ಏಳುಸಾಲುಗಳನ್ನು ಒಳಗೊಂಡಿದೆ. ಮೌರ್ಯರ ಆಳ್ವಿಕೆಯನ್ನು ಒಳಗೊಂಡಿರುವ ಪ್ರದೇಶವೆಂದು ಗುರುತಿಸಲಾಗಿತ್ತು. ಸದ್ಯ ಪತ್ತೆಯಾಗಿರುವ ಶಾಸನದ ಲಿಪಿಯ ಆಧಾರದಲ್ಲಿ ಸುಮಾರು 6ರಿಂದ 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ್ದೆಂದು ಅಂದಾಜಿಸಲಾಗಿದೆ.
08:55 PM (IST) May 07
ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಮಡಿಕೇರಿಯ ರಾಜಾಸೀಟಿಗೆ ಹೊಂದಿಕೊಂಡಂತೆ ಇರುವ ಗ್ರೇಟರ್ ರಾಜಾಸೀಟಿನಲ್ಲಿ ನಡೆದಿರುವ ಅವ್ಯವಹಾರ ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿದೆ. ಹೌದು ಮಡಿಕೇರಿಯ..
08:39 PM (IST) May 07
2026ರ ಅಮ್ಮಂದಿರ ದಿನಕ್ಕೆ ನಿಮ್ಮ ಅಮ್ಮನ ಜೊತೆ ಎಲ್ಲಿಗೆ ಟ್ರಿಪ್ ಹೋಗೋದು ಅಂತ ಯೋಚನೆ ಮಾಡ್ತಿದ್ದೀರಾ? ಬೆಟ್ಟಗಳ ತಂಪು, ಬೀಚ್‌ನ ನಿರಾಳತೆ ಅಥವಾ ದೇವಸ್ಥಾನಗಳ ದೈವಿಕ ಅನುಭವ... ಅಮ್ಮನ ಇಷ್ಟಕ್ಕೆ ತಕ್ಕಂತೆ ಬೆಸ್ಟ್ ಜಾಗಗಳ ಲಿಸ್ಟ್ ಇಲ್ಲಿದೆ. ಈ ದಿನವನ್ನು ಅವಿಸ್ಮರಣೀಯವಾಗಿಸಿ.
07:09 PM (IST) May 07
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ ಎಂದು ಕಾಂಗ್ರೆಸ್ ಪಕ್ಷದವರೇಯಾಗಿರುವ ಮುಖಂಡ ಹಾಗು ನ್ಯಾಯವಾದಿ ಸೋಮನಾಥ ಪಟ್ಟಣಶೆಟ್ಟಿ ಟೀಕಿಸಿದ್ದಾರೆ.
06:05 PM (IST) May 07
05:15 PM (IST) May 07
03:52 PM (IST) May 07
03:31 PM (IST) May 07
02:29 PM (IST) May 07
ಅಮೃತಧಾರೆ ಧಾರಾವಾಹಿ ಮುಕ್ತಾಯದ ವದಂತಿಗಳ ನಡುವೆ ವೀಕ್ಷಕರು ಕೆಲವೊಂದು ಪಾತ್ರವನ್ನು ಅನುಮಾನಿಸುತ್ತಿದ್ದಾರೆ. ದಿಯಾಳ ದೂರಿನಿಂದ ಜೈದೇವ್ ಜೈಲು ಸೇರಿದ್ದು, ಧಾರಾವಾಹಿಯ ಕಥೆಯು ರೋಚಕ ತಿರುವು ಪಡೆದುಕೊಂಡಿದೆ.
02:06 PM (IST) May 07
ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಜೈಲಿನಲ್ಲಿ ನಟ ದರ್ಶನ್‌ಗೆ ಸಿಗುತ್ತಿರುವ ಟ್ರೀಟ್ಮೆಂಟ್ ಬಗ್ಗೆ ಮಾತನಾಡಿದ್ದಾರೆ. ತಮಗೆ 'ರಾಯಲ್ ಟ್ರೀಟ್ಮೆಂಟ್' ಸಿಕ್ಕಿತ್ತು, ಆದರೆ ದರ್ಶನ್‌ಗೆ ಹಾಗಾಗುತ್ತಿಲ್ಲ ಎಂದಿದ್ದಾರೆ. ರಾಜಮರ್ಯಾದೆಯ ಹಿಂದಿನ ಗುಟ್ಟಿನ ಬಗ್ಗೆ ಹೇಳಿದ್ದೇನು?
01:53 PM (IST) May 07
01:08 PM (IST) May 07
ತಮಿಳುನಾಡಿನಲ್ಲಿ ತಮ್ಮ ಸಿದ್ಧಾಂತ ರಕ್ಷಣೆಗಾಗಿ ಕಾಂಗ್ರೆಸ್, ಡಿಎಂಕೆ ಬದಲು ಟಿವಿಕೆ ಪಕ್ಷವನ್ನು ಬೆಂಬಲಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು. ರಾಜ್ಯಪಾಲರ ಕಚೇರಿಗಳು ಬಿಜೆಪಿ ಕಚೇರಿಗಳಾಗಿವೆ ಹಾಗೂ ಕೇಂದ್ರ ಸರ್ಕಾರ ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳನ್ನು ನಿರ್ಲಕ್ಷ್ಯಕ್ಕೆ ಕಿಡಿ.
12:55 PM (IST) May 07
12:53 PM (IST) May 07
12:05 PM (IST) May 07
Siddapura Nagaraj Hegde bowling Virat Kohli: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜೊತೆ ಸಿದ್ದಾಪುರ ತಾಲೂಕಿನ ನಾಗರಾಜ ಹೆಗಡೆ ಕಾಣಿಸಿಕೊಂಡಿದ್ದಾರೆ. ಪ್ರತಿಷ್ಠಿತ ಓಕ್ತಿ ಸನ್ ಗ್ಲಾಸ್ ಜಾಹೀರಾತಿನಲ್ಲಿ ನಾಗರಾಜ್ ಹೆಗಡೆ ನಟಿಸುವ ಮೂಲಕ ಮೂಲಕ ಗಮನ ಸೆಳೆಸಿದ್ದಾರೆ.
12:01 PM (IST) May 07
ಶಾರದಾ ಮತ್ತು ಮಹೇಶ್ ದಂಪತಿಗಳ ಮದುವೆಯಾಗಿ ಕೇವಲ ಎಂಟು ತಿಂಗಳು ಕಳೆದಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಹಣಕ್ಕಾಗಿ ಪತಿ ಮಹೇಶ್ ಪೀಡಿಸುತ್ತಿದ್ದ ಎಂಬುದು ಕುಟುಂಬದ ಗಂಭೀರ ಆರೋಪವಾಗಿದೆ. ಘಟನಾ ಸ್ಥಳದ ಮಹಜರು ಪ್ರಕ್ರಿಯೆಯಲ್ಲಿ ಪೊಲೀಸರು ಲೋಪ ಎಸಗಿದ್ದಾರೆ ಎಂದು ಶಾರದಾ ಪೋಷಕರು ಆರೋಪಿಸಿದ್ದಾರೆ.
11:53 AM (IST) May 07
ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ಶೀಘ್ರದಲ್ಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಗೊಂದಲ ಮುಂದುವರೆದರೆ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಸಿದರು.
11:11 AM (IST) May 07
2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಪ್ರತಿಯಾಗಿ ಬಿಜೆಪಿ ಕೂಡ ಗ್ಯಾರಂಟಿ ಘೋಷಿಸುವ ಸುಳಿವನ್ನು ವಿಪಕ್ಷ ನಾಯಕ ಆರ್. ಅಶೋಕ್ ನೀಡಿದ್ದಾರೆ. 'ಮುಳ್ಳನ್ನು ಮುಳ್ಳಿಂದಲೇ ತೆಗೆಯುತ್ತೇವೆ' ಎನ್ನುವ ಮೂಲಕ ಕಾಂಗ್ರೆಸ್ ದಾರಿಯಲ್ಲೇ ಸಾಗಿ ಅವರಿಗೆ ತಿರುಗೇಟು ನೀಡುವ ರಣತಂತ್ರ ಬಹಿರಂಗ.
10:49 AM (IST) May 07
10:14 AM (IST) May 07
10:11 AM (IST) May 07
ಬೆಂಗಳೂರಿನಿಂದ ಮುಂಬೈಗೆ ಹೊಸ ಸೂಪರ್‌ಫಾಸ್ಟ್ ರೈಲು ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಈ ರೈಲು ತುಮಕೂರು, ದಾವಣಗೆರೆ, ಹುಬ್ಬಳ್ಳಿ ಮೂಲಕ ಸಂಚರಿಸಲಿದ್ದು, ಭವಿಷ್ಯದಲ್ಲಿ ಇದನ್ನು ವಂದೇ ಭಾರತ್ ಸ್ಲೀಪರ್ ರೈಲಾಗಿ ಮೇಲ್ದರ್ಜೆಗೇರಿಸುವ ಯೋಜನೆಯೂ ಇದೆ.
10:03 AM (IST) May 07
09:58 AM (IST) May 07
ಬೆಂಗಳೂರಿನಲ್ಲಿ ಅಕ್ರಮ ಪಾರ್ಕಿಂಗ್ ತಡೆಯಲು ಜಿಬಿಎ ಮತ್ತು ಸಂಚಾರಿ ಪೊಲೀಸರು ಜಾರಿಗೆ ತಂದಿದ್ದ ಟೋಯಿಂಗ್ ವ್ಯವಸ್ಥೆಯು ಸಮನ್ವಯದ ಕೊರತೆ ಮತ್ತು ಪೂರ್ವಸಿದ್ಧತೆ ಇಲ್ಲದ ಕಾರಣ ಆರಂಭವಾದ ಒಂದು ತಿಂಗಳಲ್ಲೇ ಸ್ಥಗಿತಗೊಂಡಿದೆ. ಏಕಾಏಕಿ ಸ್ಥಗಿತಗೊಳ್ಳಲು ಕಾರಣವೇನು ತಿಳಿಯಿರಿ
09:57 AM (IST) May 07
ಮನೆಯ ಗೋಡೆಗಳಿಗೆ ಯಾವುದೇ ಹಾನಿ ಮಾಡದೆ, ಸುಂದರವಾದ ಶೆಲ್ಫ್‌ಗಳನ್ನು ಅಳವಡಿಸಲು ನೀವು ಬಯಸುವಿರಾ? ಹಾಗಿದ್ದರೆ, ನಾವು ನಿಮಗಾಗಿ ಕೆಲವು ಆಯ್ಕೆಗಳನ್ನು ಇಲ್ಲಿ ನೀಡುತ್ತಿದ್ದೇವೆ. ಇವುಗಳನ್ನು ನೀವು ಲಿವಿಂಗ್ ರೂಮ್‌ನಿಂದ ಹಿಡಿದು ಬಾತ್‌ರೂಮ್‌ವರೆಗೆ ಎಲ್ಲಿ ಬೇಕಾದರೂ ಗೋಡೆಗೆ ತೂತು ಮಾಡದೆಯೇ ಅಳವಡಿಸಬಹುದು.
09:32 AM (IST) May 07
ತಾನು ಎಚ್‌ಐವಿ/ಏಡ್ಸ್‌ನಿಂದ ಬಳಲುತ್ತಿದ್ದೇನೆ ಎಂದು ಪತ್ನಿ ಮತ್ತು ಆಕೆಯ ಕುಟುಂಬದವರು ನಿಂದಿಸಿದ್ದಾರೆ ಎಂಬ ಪತಿಯ ಆರೋಪದ ಮೇಲೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಏನಿದು ಪ್ರಕರಣ?
09:24 AM (IST) May 07
08:44 AM (IST) May 07
08:25 AM (IST) May 07
ನಾಲ್ಕು ಬಾರಿ ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪನವರ ರಾಜಕೀಯ ಜೀವನ, ಅವರ 'ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು' ತತ್ವ ಮತ್ತು ವಿಶಿಷ್ಟ ಆಡಳಿತ ಶೈಲಿಯನ್ನು ಈ ಲೇಖನ ವಿವರಿಸುತ್ತದೆ. ಅವರ ಹೋರಾಟದ ಹಾದಿ, ಭಾಗ್ಯಲಕ್ಷ್ಮಿ ಬಾಂಡ್‌ನಂತಹ ಜನಪರ ಯೋಜನೆಗಳು ಮತ್ತು ಆಡಳಿತ ಅವರ ನಾಯಕತ್ವಕ್ಕೆ ಹಿಡಿದ ಕನ್ನಡಿ
08:03 AM (IST) May 07
ಪರಿಸರ ವಿಜ್ಞಾನಿ ಟಿ.ವಿ. ರಾಮಚಂದ್ರ ಅವರು, ರಾಜ್ಯದಲ್ಲಿನ ತೀವ್ರ ತಾಪಮಾನ ಏರಿಕೆಗೆ ಹವಾಮಾನ ವೈಪರೀತ್ಯ, ಜಲಮೂಲಗಳ ನಾಶ ಹಾಗೂ ಎಲ್‌ನಿನೋ ದುಷ್ಪರಿಣಾಮವೇ ಕಾರಣ ಎಂದು ವಿಶ್ಲೇಷಿಸಿದ್ದಾರೆ. ಕೆರೆಗಳ ಪುನಶ್ಚೇತನ, ಹಸಿರು ಹೊದಿಕೆ ಹೆಚ್ಚಳದಂತಹ ಕ್ರಮಗಳನ್ನು ಕೈಗೊಳ್ಳುಂತೆ ತಿಳಿಸಿದ್ದಾರೆ.
08:02 AM (IST) May 07
ಬೆಂಗಳೂರಿನಿಂದ ವಿಜಯಪುರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ವಿಳಂಬವಾಗಲು ಕಾರಣವನ್ನು ಸಂಸದ ರಮೇಶ್ ಜಿಗಜಿಣಗಿ ವಿವರಿಸಿದ್ದಾರೆ. . ಯಾವುದೇ ರೀತಿಯ ತಪ್ಪು ಗ್ರಹಿಕೆಗೆ ಅಂಟಿಕೊಳ್ಳದೇ ರೈಲಿನ ಕುರಿತ ಅಪಪ್ರಚಾರ ಮಾಡಬಾರದು ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
07:49 AM (IST) May 07
07:39 AM (IST) May 07
ಶಾಸಕರಿಗೆ ಐಪಿಎಲ್ ಉಚಿತ ಟಿಕೆಟ್ ವಿತರಣೆಗೂ, ಐಪಿಎಲ್ ಅಂತಿಮ ಪಂದ್ಯ ಬೆಂಗಳೂರಿನಿಂದ ಸ್ಥಳಾಂತರಕ್ಕೂ ಸಂಬಂಧವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಅಹಮದಾಬಾದ್‌ನಲ್ಲಿ ದೊಡ್ಡ ಕ್ರೀಡಾಂಗಣವಿದ್ದು, ಹೆಚ್ಚು ಜನ ಸೇರುತ್ತಾರೆಂಬ ಕಾರಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸ್ಪಷ್ಟನೆ.
07:24 AM (IST) May 07
ಸವದತ್ತಿ ಪಟ್ಟಣದಲ್ಲಿ ಗ್ರಾಮದೇವಿ ಜಾತ್ರೆಯ ಸಂಭ್ರಮ ಹೆಚ್ಚಾಗಿದ್ದು, ದೇವಿಯರನ್ನು ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿದ ನಂತರ ಸಾಂಪ್ರದಾಯಿಕ ಪೂಜೆಗಳು ಆರಂಭವಾಗಿವೆ. ಮಂಗಳವಾರ, ದೇವಿಯರು ಗೌಡರು, ಕುಲಕರ್ಣಿಗಳು ಸೇರಿದಂತೆ 16 ಮನೆತನಗಳಿಂದ ಉಡಿ ತುಂಬಿಸಿಕೊಂಡಿದ್ದು, ಊರೆಲ್ಲಾ 50 ಟನ್‌ಗೂ ಅಧಿಕ ಭಂಡಾರದಿಂದ ಹಳದಿಮಯವಾಗಿದೆ.
07:23 AM (IST) May 07
Karnataka 2nd PUC exam funds ದ್ವಿತೀಯ ಪಿಯುಸಿ ಪರೀಕ್ಷಾ ವೆಚ್ಚಗಳಿಗಾಗಿ ರಾಜ್ಯ ಸರ್ಕಾರ 81.20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅಲ್ಲದೆ, ಪ್ರೌಢಶಾಲಾ ಶಿಕ್ಷಕರನ್ನು ಪಿಯು ಕಾಲೇಜು ಉಪನ್ಯಾಸಕರನ್ನಾಗಿ ಬಡ್ತಿ ನೀಡುವ ಅರ್ಹತಾ ಪರೀಕ್ಷೆಯನ್ನು ಮೇ 26 ರಿಂದ ನಡೆಸಲು ತೀರ್ಮಾನಿಸಲಾಗಿದೆ.