ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳೆ ಭುಗಿಲೆದ್ದ ಜನಿವಾರ ಗದ್ದಲ ಪೂರ್ಣವಾಗಿ ತಣ್ಣಗಾಗುವ ಮೊದಲೇ ಕಲಬುರಗಿಯಲ್ಲಿ ಭಾನುವಾರ ನಡೆದ ವೈದ್ಯ ಕೋರ್ಸ್‌ಗಳ ಪ್ರವೇಶಕ್ಕಾಗಿನ ಅರ್ಹತಾ ಪರೀಕ್ಷೆ ‘ನೀಟ್’ ವೇಳೆ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ FIR ದಾಖಲಾಗಿದೆ. ಬೆಳಗಾವಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 1 ಟನ್ ಗೋಮಾಂಸವನ್ನು ಬಜರಂಗದಳದ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.

11:25 PM (IST) May 05
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ರಾಷ್ಟ್ರೀಯ ಹಿತಾಸಕ್ತಿಗಳ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮಾಹಿತಿ ಮತ್ತು ಪ್ರಸಾರ ಹಾಗೂ ಐಟಿ ಸಚಿವಾಲಯಗಳಿಂದ ಕ್ರಿಯಾ ಯೋಜನೆಯನ್ನು ಸಂಸದೀಯ ಸಮಿತಿ ಕೋರಿದೆ.
ಪೂರ್ತಿ ಓದಿ10:57 PM (IST) May 05
ಭಾರತ ವಿಶ್ವದ 4ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಹೆಚ್ಚು ದಿನ ಬೇಕಿಲ್ಲ. ವರದಿ ಪ್ರಕಾರ ಇದೇ ವರ್ಷ ಜಾಗತಿಕ 4ನೇ ಅತೀ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. 2027ರ ವೇಳೆಗೆ ಭಾರತ 3ನೇ ಸ್ಥಾನಕ್ಕೇರಲಿದೆ ಎಂದಿದೆ.
10:29 PM (IST) May 05
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ 41 ಎಕರೆ ಜಮೀನು ಹಸ್ತಾಂತರ. ಕೆಐಎಡಿಬಿ ಮೂಲಕ ಒದಗಿಸಲಾದ ಜಮೀನಿನ ಸ್ವಾಧೀನ ಪತ್ರವನ್ನು ಕೆ.ಎಸ್.ಸಿ.ಎಗೆ ಸಚಿವ ಎಂ ಬಿ ಪಾಟೀಲರು ನೀಡಿದರು. ಹೆಚ್ಚುವರಿಯಾಗಿ 6.5 ಎಕರೆ ಖರಾಬು ಜಮೀನು ನೀಡುವಂತೆ ಕೆಎಸ್ಸಿಎ ಮನವಿ ಸಲ್ಲಿಸಿದೆ.
ಪೂರ್ತಿ ಓದಿ09:59 PM (IST) May 05
ಕನ್ನಡಿಗರನ್ನು ಪೆಹಲ್ಗಾಮ್ ಉಗ್ರರಿಗೆ ಹೋಲಿಸಿದ್ದಕ್ಕೆ ಗಾಯಕ ಸೋನು ನಿಗಮ್ ಕ್ಷಮೆಯಾಚಿಸಿದ್ದಾರೆ. ಕ್ಷಮಿಸಿ ಕನ್ನಡಿಗರೇ, ನಿಮ್ಮ ಮೇಲಿನ ನನ್ನ ಪ್ರೀತಿ, ನನ್ನ ಅಹಂಕಾರಕ್ಕಿಂತ ದೊಡ್ಡದು. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ' ಎಂದು ಹೇಳಿದ್ದಾರೆ.
ಪೂರ್ತಿ ಓದಿ09:30 PM (IST) May 05
ಮದುವೆಗೆ ಎಲ್ಲಾ ತಯಾರಿ ನಡೆದಿತ್ತು. ಮದುವೆ ಮೊದಲಿನ ದಿನ ಹಳದಿ ಸೆರೆಮನಿ. ಸಂಭ್ರಮದಿಂದ ಡ್ಯಾನ್ಸ್ ಮಾಡಿದ ವಧುವಿಗೆ ಹೃದಯಾಘಾತವಾಗಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
ಪೂರ್ತಿ ಓದಿ08:43 PM (IST) May 05
ಬೆಂಗಳೂರಿನಲ್ಲಿ 209 ಪ್ರವಾಹ ಪೀಡಿತ ಪ್ರದೇಶಗಳ ಪೈಕಿ 166ರಲ್ಲಿ ಸಮಸ್ಯೆ ಪರಿಹರಿಸಲಾಗಿದೆ. ಆದರೆ ಉಳಿದ 43 ಪ್ರದೇಶಗಳಲ್ಲಿ ಮಳೆಗಾಲಕ್ಕೂ ಮುನ್ನ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಡಳಿತಾಧಿಕಾರಿಗಳು ಸೂಚಿಸಿದ್ದಾರೆ. ದುರಸ್ತಿಯಾಗಿರುವ ಕಾಲುವೆಗಳ ಪಟ್ಟಿ ಸಿದ್ಧಪಡಿಸಿ ಸಂಬಂಧಪಟ್ಟ ಇಲಾಖೆಗಳಿಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ.
ಪೂರ್ತಿ ಓದಿ08:34 PM (IST) May 05
ಸಜ್ಜಾದ್ ಚೌಧರಿ ದಂಪತಿಯ ಮದುವೆ ರಾತ್ರಿ ವಿಡಿಯೋ ವೈರಲ್ ಆಗಿದೆ. ಹೆಂಡತಿಯ ಖಾಸಗಿ ವಿಷಯಗಳನ್ನು ಜನರಿಗೆ ತೋರಿಸುತ್ತೀಯಾ ಎಂಬ ಪ್ರಶ್ನೆಗೆ ಗಂಡನ ಉತ್ತರ ಮತ್ತು ಹೆಂಡತಿಯ ನಗು ವಿಡಿಯೋದ ಹೈಲೈಟ್.
ಪೂರ್ತಿ ಓದಿ08:15 PM (IST) May 05
ಪ್ರಸಿದ್ಧ ಕಿರುತೆರೆ ನಟಿ ಗೌತಮಿ ಕಪೂರ್ ಬಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾದ ಘಟನೆಯನ್ನು ಬಹಿರಂಗಪಡಿಸಿದ್ದಾರೆ. 'ಒಬ್ಬ ವ್ಯಕ್ತಿ ನನ್ನ ಹಿಂದಿನಿಂದ ಪ್ಯಾಂಟಿನ ಒಳಗೆ ಕೈ ಇಟ್ಟ', ಆರಂಭದಲ್ಲಿ ಏನಾಗುತ್ತಿದೆ ಎಂದು ಅರ್ಥವಾಗಲಿಲ್ಲ....
ಪೂರ್ತಿ ಓದಿ08:13 PM (IST) May 05
ಭಾರತ ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರ ತೀರಿಸಲು ಸಜ್ಜಾಗಿದೆ. ಭಾರತ ಟಾರ್ಗೆಟ್ ಉಗ್ರರು. ಆದರೆ ಪಾಕಿಸ್ತಾನ ಈಗಾಗಲೇ ತನ್ನ ಮೇಲೆ ಭಾರತ ದಾಳಿ ಮಾಡಲಿದೆ ಎಂದು ಯುದ್ಧ ತಾಲೀಮು ನಡೆಸುತ್ತಿದೆ. ಇದರ ನಡುವೆ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗಿದೆ. ಪಾಕಿಸ್ತಾನದಲ್ಲಿ 4.2 ತೀವ್ರತೆಯ ಭೂಕಂಪನವಾಗಿದೆ.
ಪೂರ್ತಿ ಓದಿ08:09 PM (IST) May 05
ಆಂಧ್ರಪ್ರದೇಶದಲ್ಲಿ ಬೈಕ್‌ನ ನಂಬರ್ ಪ್ಲೇಟ್‌ನಲ್ಲಿ 'ಸಾರೀ ಗರ್ಲ್ಸ್, ಮೈ ಸಿಸ್ಟರ್ ಈಸ್ ವೆರಿ ಸ್ಟ್ರಿಕ್ಟ್' ಎಂದು ಬರೆದಿದ್ದ ಯುವಕನನ್ನು ಪೊಲೀಸರು ತಡೆದ ಘಟನೆ ನಡೆದಿದೆ. ಈ ಬರಹದ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ, ಯುವಕ ಉತ್ತರಿಸಲಾಗದೆ ನಾಚಿಕೆಪಟ್ಟಿದ್ದಾನೆ.
ಪೂರ್ತಿ ಓದಿ08:03 PM (IST) May 05
ಗಾಂಧೀಜಿಯವರ ಸ್ವಾತಂತ್ರ್ಯದ ಕಲ್ಪನೆಯನ್ನು ಇಂದಿನ ಸಮಾಜದಲ್ಲಿ ಹೆಣ್ಣುಮಕ್ಕಳ ಸ್ಥಿತಿಯೊಂದಿಗೆ ಹೋಲಿಸಿ, ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಚರ್ಚಿಸಲಾಗಿದೆ. ಕಾನೂನುಗಳನ್ನು ಮೀರಿ ವ್ಯಕ್ತಿಯ ಮನಸ್ಥಿತಿಯೇ ಬದಲಾಗಬೇಕೆಂಬುದು ಲೇಖನದ ಪ್ರಮುಖ ಅಂಶ.
ಪೂರ್ತಿ ಓದಿ07:20 PM (IST) May 05
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುರ್ಷಿದಾಬಾದ್‌ನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಬಿಜೆಪಿ ಮತ್ತು ಬಿಎಸ್ಎಫ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೇಂದ್ರ ಸರ್ಕಾರವು ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿದೆ ಮತ್ತು ಗಲಭೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಅವರು ಹೇಳಿದ್ದಾರೆ.
ಪೂರ್ತಿ ಓದಿ07:15 PM (IST) May 05
ಜೆನ್ ಝಡ್ ಮತ್ತು ಆಲ್ಫಾ ಪೀಳಿಗೆಯ ಮಕ್ಕಳನ್ನು ಬೆಳೆಸಲು ಪರದಾಡುವ ಪೋಷಕರಿಗೆ 7-7-7 ಸೂತ್ರವು ಒಂದು ಪರಿಣಾಮಕಾರಿ ಮಾರ್ಗವಾಗಿದೆ. ಈ ಸೂತ್ರವು ಮಕ್ಕಳೊಂದಿಗೆ ದಿನಕ್ಕೆ ಮೂರು ಬಾರಿ 7 ನಿಮಿಷಗಳನ್ನು ಕಳೆಯುವುದನ್ನು ಒಳಗೊಂಡಿದೆ: ಬೆಳಿಗ್ಗೆ, ಸಂಜೆ ಮತ್ತು ರಾತ್ರಿ.
ಪೂರ್ತಿ ಓದಿ07:02 PM (IST) May 05
ಭಾರತ ಸರ್ಕಾರವು ಮೇ 7 ರಂದು ರಾಷ್ಟ್ರವ್ಯಾಪಿ ಅಣಕು ಕಸರತ್ತುಗಳನ್ನು ನಡೆಸಲು ಹಲವಾರು ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಈ ಕಾರ್ಯಕ್ರಮವು ವಾಯುದಾಳಿ ಎಚ್ಚರಿಕೆಗಳನ್ನು ಪರೀಕ್ಷಿಸುವುದು, ನಾಗರಿಕರಿಗೆ ತರಬೇತಿ ನೀಡುವುದು ಮತ್ತು ಸ್ಥಳಾಂತರಿಸುವ ಯೋಜನೆಗಳನ್ನು ಪೂರ್ವಾಭ್ಯಾಸ ಮಾಡುವುದನ್ನು ಒಳಗೊಂಡಿರುತ್ತದೆ.
ಪೂರ್ತಿ ಓದಿ06:52 PM (IST) May 05
ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಈಜು ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ, ಬೇಸಿಗೆಯಲ್ಲಿ ಶಾಲೆಗಳು ಅಥವಾ ಫಿಟ್‌ನೆಸ್ ಕೇಂದ್ರಗಳಲ್ಲಿ ಮಕ್ಕಳು ಮತ್ತು ವಯಸ್ಕರಿಂದ ಈಜುಕೊಳಗಳು ತುಂಬಿ ಹೋಗಿರುವುದು ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಆದರೆ ಈಜುಗಾರಿಕೆಯೂ ನಮ್ಮ ದೈನಂದಿನ ದಿನಚರಿಯ ಭಾಗವಾಗುವುದಕ್ಕೂ ಮೊದಲೇ ಭಾರತದಲ್ಲಿ ನಿರ್ಮಾಣವಾದ ಬಹಳ ಹಳೆಯ ಈಜುಕೊಳಬಗ್ಗೆ ನಾವಿಲ್ಲಿ ಹೇಳ ಹೊರಟಿದ್ದೇವೆ.
ಪೂರ್ತಿ ಓದಿ06:47 PM (IST) May 05
ವೈರಲ್ ಲಿಂಕ್ಡ್‌ಇನ್ ಪೋಸ್ಟ್: ಒಬ್ಬ ಜೆನ್ ಝಡ್ ಅಭ್ಯರ್ಥಿ ಶನಿವಾರ ಕೆಲಸ ಮಾಡಲು ನಿರಾಕರಿಸಿ ಕೆಲಸ ತಿರಸ್ಕರಿಸಿದ್ದಾರೆ. HR ವೃತ್ತಿಪರರು ಈ ಘಟನೆಯನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ, ಇದರ ನಂತರ ಕೆಲಸ-ಜೀವನ ಸಮತೋಲನದ ಬಗ್ಗೆ ಬಳಕೆದಾರರ ನಡುವೆ ಚರ್ಚೆ ನಡೆಯಿತು. HR ನ ವೈರಲ್ ಪೋಸ್ಟ್ ನೋಡಿ.
ಪೂರ್ತಿ ಓದಿ06:43 PM (IST) May 05
ಬೆಂಗಳೂರಿನ ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ಗಳನ್ನು ಸಂಪರ್ಕಿಸುವ ಪ್ರಸ್ತಾವಿತ ಅವಳಿ-ಟ್ಯೂಬ್ ಸುರಂಗ ರಸ್ತೆಗೆ ಕಾರುಗಳಿಗೆ ₹330ರಷ್ಟು ಟೋಲ್ ಶುಲ್ಕ ವಿಧಿಸಲು ಉದ್ದೇಶಿಸಲಾಗಿದ್ದು, ಇದು ವಾರ್ಷಿಕವಾಗಿ ಶೇ.5ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಯೋಜನೆಯ ಡಿಪಿಆರ್‌ನಲ್ಲಿ ದೋಷಗಳು ಕಂಡುಬಂದಿದ್ದು, ಬಿಬಿಎಂಪಿಯು ಸಲಹಾ ಸಂಸ್ಥೆಗೆ ದಂಡ ವಿಧಿಸಿದೆ.
ಪೂರ್ತಿ ಓದಿ06:39 PM (IST) May 05
ಬೆಳಗಾವಿ, ವಿಜಯಪುರ ಮತ್ತು ಇಂಡಿ ತಾಲ್ಲೂಕಿನ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು ಒದಗಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಯೋಜನೆ ರೂಪಿಸಲು ಹಣಕಾಸು ಇಲಾಖೆಗೆ ಸೂಚಿಸಿದ್ದಾರೆ.
ಪೂರ್ತಿ ಓದಿ06:32 PM (IST) May 05
ವಿಮಾನ ನಿಲ್ದಾಣದ ಭದ್ರತಾ ತಪಾಸಣೆ ವೇಳೆ ಕೊಳಲು ವಾದಕ ನೀಡಿದ ಸರ್ಪ್ರೈಸ್‌ಗೆ ಎಲ್ಲರೂ ಮಂತ್ರಮುಗ್ದರಾಗಿದ್ದಾರೆ. ಈತನ ಅದ್ಭುತ ಪ್ರತಿಭೆಗೆ ಜನ ಮರಳಾಗಿದ್ದಾರೆ. ಏರ್‌ಪೋರ್ಟ್‌ನಲ್ಲಿ ಕೊಳಲಿನಲ್ಲಿ ಮೋಡಿ ಮಾಡಿದ ಇವರ ವೀಡಿಯೋ 44 ಮಿಲಿಯನ್ ಅಧಿಕ ಹಿಟ್ಸ್ ಪಡೆದಿದೆ.
ಪೂರ್ತಿ ಓದಿ06:09 PM (IST) May 05
ಸತತ ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. ಪ್ಲೇ-ಆಫ್ ಹಾದಿಯಲ್ಲಿ ಉಳಿಯಲು ಸನ್‌ರೈಸರ್ಸ್‌ಗೆ ಈ ಪಂದ್ಯದ ಗೆಲುವು ಅನಿವಾರ್ಯ.
ಪೂರ್ತಿ ಓದಿ05:47 PM (IST) May 05
ಬಹದ್ದೂರ್ ಷಾ ಜಾಫರ್ II ರ ಮೊಮ್ಮಗಳೆಂದು ಹೇಳಿಕೊಂಡ ಮಹಿಳೆಯೊಬ್ಬರು ಕೆಂಪು ಕೋಟೆಯ ಮೇಲೆ ಹಕ್ಕುದಾರಿಕೆ ಸಲ್ಲಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೆ ಸುಪ್ರೀಂಕೋರ್ಟ್ ನ್ಯಾಯಾಧೀಶರು ಏನ್ ಹೇಳಿದ್ರು ನೋಡಿ.
ಪೂರ್ತಿ ಓದಿ05:46 PM (IST) May 05
ಐಪಿಎಲ್ 2024ರಲ್ಲಿ 54 ಪಂದ್ಯಗಳು ಮುಕ್ತಾಯಗೊಂಡರೂ ಯಾವ ತಂಡವೂ ಪ್ಲೇ ಆಫ್‌ಗೆ ಅಧಿಕೃತವಾಗಿ ಪ್ರವೇಶ ಪಡೆದಿಲ್ಲ. ಆರ್‌ಸಿಬಿ ಮತ್ತು ಪಂಜಾಬ್ ಪ್ಲೇ ಆಫ್‌ಗೆ ಹತ್ತಿರವಾಗಿದ್ದರೂ, ಉಳಿದ ತಂಡಗಳಿಗೂ ಅವಕಾಶಗಳಿವೆ.
ಪೂರ್ತಿ ಓದಿ05:43 PM (IST) May 05
ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ಮಗಳ ನಾಮಕರಣ ಸಮಾರಂಭದಲ್ಲಿ ನಟಿ ಅಮೂಲ್ಯ ಗೌಡ ತಮ್ಮ ಮಗನಿಗೆ ಹರ್ಷಿಕಾ ಮಗಳನ್ನು ಗರ್ಲ್ ಫ್ರೆಂಡ್ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಈ ಮೂಲಕ ತೊಟ್ಟಿಲಲ್ಲಿರುವ ಮಗು ತೋರಿಸಿ ನೆಂಟಸ್ತನ ಬೆಳಸಲು ಮುಂದಾಗಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಪೂರ್ತಿ ಓದಿ05:38 PM (IST) May 05
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ದ್ವಿಪೌರತ್ವ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿಯಲ್ಲಿ ಸಾಕ್ಷ್ಯಗಳ ಕೊರತೆಯನ್ನು ನ್ಯಾಯಾಲಯ ಗಮನಿಸಿದೆ.
ಪೂರ್ತಿ ಓದಿ05:33 PM (IST) May 05
ಡಜನ್ಗಟ್ಟಲೆ ಹಿಂದೂ ಹುಡುಗಿಯರ ವಿಡಿಯೋ ಪೋ* ವೆಬ್ಸೈಟ್ಗೆ ಅಪ್ಲೋಡ್ ಮಾಡಿದ ಖದೀಮ ಕೊನೆಗೂ ಸಿಕ್ಕಿಬಿದ್ದಿದ್ದಾನೆ! ಪೊಲೀಸರು ಗಪ್ಚುಪ್ ಕೂಡ ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ.
ಪೂರ್ತಿ ಓದಿ05:21 PM (IST) May 05
ಲಾಟರಿಯಲ್ಲಿ ₹6 ಕೋಟಿ ಗೆದ್ದ ಕೇರಳದ ರೈತ ಬಿ. ರತ್ನಾಕರನ್ ಪಿಳ್ಳೈ, ಆ ಹಣದಿಂದ ಜಮೀನು ಖರೀದಿಸಿದ್ದರು. ಜಮೀನು ಉಳುಮೆ ಮಾಡುವಾಗ 2,595 ಪುರಾತನ ನಾಣ್ಯಗಳುಳ್ಳ ಖಜಾನೆ ಪತ್ತೆಯಾಗಿದೆ.
ಪೂರ್ತಿ ಓದಿ05:16 PM (IST) May 05
ಕರ್ನಾಟಕ ಇನ್ನು ಮೂರು ದಿನ ಭಾರಿ ಮಳೆ. ಉತ್ತರದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇನ್ನು ದಕ್ಷಿಣದಲ್ಲಿ ಗಾಳಿ, ಗುಡುಗು ಸಹಿ ಮಳೆ ವರದಿಯಾಗುತ್ತಿದೆ. ಇದರ ನಡುವೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗುಡುಗು, ಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ ನೀಡಿದೆ. ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ಪೂರ್ತಿ ಓದಿ05:02 PM (IST) May 05
ಪಹಲ್ಗಾಮ್ ದಾಳಿಯಲ್ಲಿ ಮಡಿದ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಕ್ಕೆ ಮಹಿಳಾ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪೂರ್ತಿ ಓದಿ04:46 PM (IST) May 05
ಪರೀಕ್ಷೆಯ ಸಮಯದಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡುತ್ತಲೇ ಶೇಕಡಾ 96ರಷ್ಟು ಅಂಕ ಪಡೆದಿದ್ದಾಳೆ ಶಿರಸಿಯ ತುಳಸಿ ಹೆಗಡೆ. ಈಕೆಯ ಸಾಧನೆ ಕೇಳಿ...
ಪೂರ್ತಿ ಓದಿ04:38 PM (IST) May 05
ಮಂಗಳೂರಿನಲ್ಲಿ ಹಿಂದೂ ಕಾರ್ಯಕ್ರತ ಸುಹಾಶ್ ಶೆಟ್ಟಿ ಹ*ತ್ಯೆ ಪ್ರಕರಣದಲ್ಲಿ ಬಜ್ಪೆ ಪೊಲೀಸ್ ಠಾಣ ಮುಖ್ಯ ಪೇದೆ ರಶೀದ್ ಭಾಗಿಯಾಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಷ್ಟೇ ಅಲ್ಲ , ಇದು ಪ್ರತೀಕಾರದ ದಾಳಿಯಲ್ಲ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ನಡೆಸಿದ ವ್ಯವಸ್ಥಿತ ದಾಳಿ ಎಂದು ಹಿಂದೂ ಮುಖಂಡ ಆರೋಪಿಸಿದ್ದಾರೆ.
ಪೂರ್ತಿ ಓದಿ04:24 PM (IST) May 05
ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ಸೋಮವಾರ ಬೆಂಕಿ ಅವಘಡ ಸಂಭವಿಸಿದೆ. ಸಿಸಿಟಿವಿ ಕೊಠಡಿಯ ಮೇಲೆ ಬೆಂಕಿ ಕಾಣಿಸಿಕೊಂಡಿದ್ದು, ಬ್ಯಾಟರಿಗಳು ಹೆಚ್ಚು ಬಿಸಿಯಾಗಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಪೂರ್ತಿ ಓದಿ04:15 PM (IST) May 05
ದೆವ್ವ ಭೂತಗಳು ನಿಜವಾಗಿಯೂ ಇವೆಯಾ? ಚೆನ್ನೈನಲ್ಲಿ ನಡೆದ ವಿಚಿತ್ರ ಘಟನೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಬರೆದುಕೊಂಡಿದ್ದು, ಅದು ಸಾಕಷ್ಟು ವೈರಲ್ ಆಗಿದೆ.
ಪೂರ್ತಿ ಓದಿ03:53 PM (IST) May 05
ರಸ್ತೆ ಸುರಕ್ಷತೆ ಹೆಚ್ಚಿಸಲು ಮತ್ತು ಸಂಚಾರ ಉಲ್ಲಂಘನೆಗಳನ್ನು ತಡೆಯಲು, ಭಾರತ ಸರ್ಕಾರವು ಚಾಲನಾ ಪರವಾನಗಿಗಳಿಗೆ ನೆಗೆಟಿವ್ ಪಾಯಿಂಟ್ಸ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಉಲ್ಲಂಘನೆಗಳಿಗೆ ನೆಗೆಟಿವ್ ಪಾಯಿಂಟ್ಸ್ ಸಿಗಲಿದ್ದು, ಮಿತಿ ಮೀರಿದರೆ ಪರವಾನಗಿ ಅಮಾನತು ಅಥವಾ ರದ್ದತಿಯಾಗಬಹುದು. ಹೊಸ ನಿಯಮಗಳು ಕಠಿಣ ನವೀಕರಣ ನೀತಿಗಳನ್ನು ಸಹ ಒಳಗೊಂಡಿವೆ.
ಪೂರ್ತಿ ಓದಿ03:41 PM (IST) May 05
ಹೈದರಾಬಾದ್‌ನಲ್ಲಿ 17 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 28 ವರ್ಷದ ಮನೆಗೆಲಸದಾಕೆಯನ್ನು ಬಂಧಿಸಲಾಗಿದೆ. ಬಾಲಕನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪೂರ್ತಿ ಓದಿ03:31 PM (IST) May 05
ವಿಜಯನಗರ ಜಿಲ್ಲೆಯ ಅಮರಾವತಿಯಲ್ಲಿ ₹37.10 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಟ್ರಕ್ ಟರ್ಮಿನಲ್ ಅನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು. 400 ಲಾರಿಗಳ ನಿಲುಗಡೆ ಸಾಮರ್ಥ್ಯ, 120 ಬೆಡ್‌ಗಳ ಡಾರ್ಮಿಟರಿ, ಕ್ಯಾಂಟಿನ್, ಗ್ಯಾರೇಜ್, ವಾಣಿಜ್ಯ ನಿವೇಶನ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.
ಪೂರ್ತಿ ಓದಿ03:24 PM (IST) May 05
ಭೀಕರ ರಸ್ತೆ ಅಪಘಾತದಲ್ಲಿ ಸಮುಧುರ ಕಂಠದ ಗಾಯಕ, ಇಂಡಿಯನ್ ಐಡನ್ 12 ಸೀಸನ್ ವಿನ್ನರ್ ಪವನ್‌ದೀಪ್ ರಾಜನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೂರ್ತಿ ಓದಿ03:12 PM (IST) May 05
ಕರ್ನಾಟಕ ಲೋಕಸೇವಾ ಆಯೋಗದ ಕೆಎಎಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮೊದಲೇ ತೆರೆದಿತ್ತು ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಪರೀಕ್ಷಾ ಕೊಠಡಿಗೆ ಪ್ರಶ್ನೆ ಪತ್ರಿಕೆಯನ್ನು ತರುವ ಮುನ್ನವೇ ಸೀಲ್ ತೆಗೆದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಘಟನೆ ಮೈಸೂರು ರಸ್ತೆಯ ಬಿಬಿಎಂಪಿ ಪಿಯು ಕಾಲೇಜಿನಲ್ಲಿ ನಡೆದಿದ್ದು, ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ02:51 PM (IST) May 05
ಹಿರಿಯ ದಂಪತಿಗಳು ರೈಲು ನಿಲ್ದಾಣಕ್ಕೆ ಆಗಮಿಸಿದಾಗ ರೈಲು ಹೊರಟಿದೆ. ರೈಲಿನ ಕೊನೆಯಲ್ಲಿ ನಿಂತಿದ್ದ ಅಧಿಕಾರಿಯ ಮುಖವನ್ನು ಬೇಸರದಿಂದ ನೋಡಿ ಕೈ ಸನ್ನೆ ಮಾಡಿದ್ದಾರೆ. ಇಷ್ಟೇ ನೋಡಿ ಹೊರಟ್ಟಿದ್ದ ರೈಲನ್ನು ಗಾರ್ಡ್ ನಿಲ್ಲಿಸಿದ ಹೃದಯಸ್ವರ್ಶಿ ವಿಡಿಯೋ ಹಲವರ ಮೆಚ್ಚುಗೆಗೆ ಕಾರಣವಾಗಿದೆ.
ಪೂರ್ತಿ ಓದಿ02:23 PM (IST) May 05
ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಮಾಜಿ ಯೋಧ ಉಮರ್ ಅಲಿ ನದಾಫ್ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಅವಕಾಶ ನೀಡಿದರೆ ಪಾಕ್ ಗಡಿಗೆ ಹೋಗಿ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ದಾಳಿಯನ್ನು ಭಾರತದ ಏಕತೆಯ ಮೇಲಿನ ದಾಳಿ ಎಂದು ಕರೆದಿದ್ದಾರೆ.
ಪೂರ್ತಿ ಓದಿ02:12 PM (IST) May 05
ಕನ್ನಡಿಗರನ್ನು ಪೆಹಲ್ಗಾಮ್ ಉಗ್ರರಿಗೆ ಹೋಲಿಸಿದ ಹಿನ್ನೆಲೆಯಲ್ಲಿ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸಲಾಗಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ಈ ನಿರ್ಧಾರವನ್ನು ಕೈಗೊಂಡಿದೆ.
ಪೂರ್ತಿ ಓದಿ