ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಹ*ತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಲೆವೆಡೆ ಪ್ರತಿಭಟನೆಗಳು ನಡೆಯುತ್ತಿದೆ. ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ನಿನ್ನೆ ದಕ್ಷಿಣ ಕನ್ನಡದ ಬಂದ್ ಯಶಸ್ವಿಯಾಗಿದೆ. ಇತ್ತ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹೆಚ್ಚಿನ ಭದ್ರತೆ ನಿಯೋಜಿಸಿದ್ದಾರೆ. ಇಂದು ಮಂಗಳೂರಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಭೇಟಿ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಪೊಲೀಸ್ ಜೊತೆ ಗೃಹ ಸಚಿವರು ಸಭೆ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆ ಸಭೆ ಆರಂಭವಾಗಲಿದೆ. ಗೃಹಸಚಿವರು ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಿಂದ ಜಂಟಿ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಎಡಿಜಿಪಿ,ಜಿಲ್ಲಾಧಿಕಾರಿ, ಕಮೀಷನರ್, ಎಸ್ಪಿ ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ನೆಡಸಲಿದ್ದಾರೆ.
11:29 PM (IST) May 03
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡು ರನ್‌ಗಳಿಂದ ಗೆಲುವು ಸಾಧಿಸಿದೆ. ಯಶ್ ದಯಾಳ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಚೆನ್ನೈ ತಂಡ ಕೊನೆಯ ಓವರ್‌ನಲ್ಲಿ 15 ರನ್‌ಗಳ ಗುರಿ ತಲುಪಲು ವಿಫಲವಾಯಿತು.
ಪೂರ್ತಿ ಓದಿ11:29 PM (IST) May 03
ನಟಿ ಇಳಾ ವಿಟ್ಲ ಅವರು ಕೊರಗಜ್ಜನ ಪ್ರಸಾದ ಸೇವಿಸಿ ಕಾಲು ನೋವಿನಿಂದ ಪರಿಹಾರ ಪಡೆದ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶಿವರಾಜ್‌ಕುಮಾರ್ ಅವರ ಆರೋಗ್ಯಕ್ಕಾಗಿ ಹರಕೆ ಹೊತ್ತಿದ್ದ ಗೆಳೆಯನ ಮೂಲಕ ಕೊರಗಜ್ಜನ ಪ್ರಸಾದ ಇಳಾ ವಿಟ್ಲ ಅವರಿಗೆ ತಲುಪಿತು. ಪ್ರಸಾದ ಸೇವಿಸಿದ ನಂತರ ಅವರ ಕಾಲು ನೋವು ಮಾಯವಾಯಿತು ಎಂದು ಅವರು ಹೇಳಿದ್ದಾರೆ.
ಪೂರ್ತಿ ಓದಿ11:18 PM (IST) May 03
ಮೂರು ವರ್ಷದ ಬಾಲಕಿಗೆ ಮೆದುಳಿನ ಗೆಡ್ಡೆ ಇರುವುದು ಪತ್ತೆಯಾದ ನಂತರ, ಜೈನ ಮುನಿಗಳ ಸಲಹೆಯ ಮೇರೆಗೆ ಪೋಷಕರು ಸಂತಾರ ನೀಡಿದ್ದಾರೆ. ಧಾರ್ಮಿಕ ವಿಧಿ ಮುಗಿದ ಕೆಲವೇ ನಿಮಿಷಗಳಲ್ಲಿ ಬಾಲಕಿ ಸಾವನ್ನಪ್ಪಿದ್ದು, ಈ ಘಟನೆ ವಿವಾದಕ್ಕೆ ಕಾರಣವಾಗಿದೆ.
ಪೂರ್ತಿ ಓದಿ11:14 PM (IST) May 03
ಶಿವಮೊಗ್ಗದ ಬಿಜೆಪಿ ಶಾಸಕ ಚನ್ನಬಸಪ್ಪ ಹಾಗೂ ಬಿಜೆಪಿ ಮುಖಂಡರು ದುಷ್ಕರ್ಮಿಗಳಿಂದ ಬಲಿಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಕಾರಿಂಜದಲ್ಲಿರುವ ಮನೆಗೆ ಭೇಟಿ ನೀಡಿ ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಜತೆಗೆ ಧೈರ್ಯ ತುಂಬಿದರು.
ಪೂರ್ತಿ ಓದಿ10:45 PM (IST) May 03
ಸ್ವಾತಂತ್ರ್ಯದ ನಂತರ ಭಾರತ ಮತ್ತು ಪಾಕಿಸ್ತಾನ ಬೇರೆ ಬೇರೆ ಆರ್ಥಿಕ ಹಾದಿಗಳನ್ನು ಹಿಡಿದವು. ಇಂದು ಭಾರತದ ವಿದೇಶಿ ವಿನಿಮಯ ಸಂಗ್ರಹ $688 ಶತಕೋಟಿಗಿಂತ ಹೆಚ್ಚಿದ್ದರೆ, ಪಾಕಿಸ್ತಾನದ್ದು ಕೇವಲ $15 ಶತಕೋಟಿ. ಈ ಆರ್ಥಿಕ ಅಂತರಕ್ಕೆ ಕಾರಣವೇನು?
ಪೂರ್ತಿ ಓದಿ10:36 PM (IST) May 03
ಭಾರತದ ಗಡಿಯಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಪಾಕಿಸ್ತಾನಿ ರೇಂಜರ್ಸ್ ಯೋಧನನ್ನು ಭಾರತದ ಗಡಿ ಭದ್ರತಾ ಪಡೆ ವಶಕ್ಕೆ ಪಡೆದಿದೆ. ಇದು ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಯೋಧನ ಬಿಡುಗಡೆ ವಿಳಂಬದ ಹಿನ್ನೆಲೆಯಲ್ಲಿ ನಡೆದಿದೆ.
ಪೂರ್ತಿ ಓದಿ10:26 PM (IST) May 03
ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಓಡಿಸಿಕೊಂಡು ಕದ್ದೊಯ್ದ ಗೂಳಿ! ಕಣ್ಣುಗಳನ್ನೇ ನಂಬಲಾಗದ ವಿಡಿಯೋ ಒಂದು ವೈರಲ್ ಆಗಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗು್ತಿದೆ.
ಪೂರ್ತಿ ಓದಿ10:07 PM (IST) May 03
ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳು ತಮಗೆ ಕಾಂಗ್ರೆಸ್ ಸರ್ಕಾರದಲ್ಲಿ ರಕ್ಷಣೆ ಇದೆ ಎಂಬ ಕಾರಣದಿಂದಲೇ ಕೃತ್ಯ ನಡೆಸಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.
ಪೂರ್ತಿ ಓದಿ10:05 PM (IST) May 03
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಬಾಲಿವುಡ್‌ಗೆ ಮುನ್ನದ ಅಪರೂಪದ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತ್ರಗಳನ್ನು ಅವರ ಸ್ನೇಹಿತ ಅಮರ್ ತಲ್ವಾರ್ ಹಂಚಿಕೊಂಡಿದ್ದು, 1990ರ ದಶಕದಲ್ಲಿ ಮುಂಬೈಗೆ ಹೋಗುವ ಮೊದಲು ತೆಗೆದವುಗಳಾಗಿವೆ.
ಪೂರ್ತಿ ಓದಿ10:05 PM (IST) May 03
ಸ್ಟೂಲ್‌ನಲ್ಲಿ ಕುಳಿತ ಬಾಲಕನ ವೃಷಣ ಬೀಜ ತೂತಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಮನೆಯವರ ಪ್ರಯತ್ನ ವಿಫಲವಾದ ನಂತರ, ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೂರ್ತಿ ಓದಿ09:07 PM (IST) May 03
ಭಾರತದಲ್ಲಿ ಆರಂಭವಾಗಿ ಜಾಗತಿಕ ಮಟ್ಟದಲ್ಲಿ ವಿಸ್ತರಣೆಗೊಂಡ ಪ್ರಸಿದ್ಧ ಹಾಸ್ಪಿಟಾಲಿಟಿ ಕಂಪನಿ ಓಯೋ (OYO Company) ಹೊಸದಾಗಿ ಫುಡ್ ಮತ್ತು ಬೆವರೇಜ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ತಮ್ಮ ಹೋಟೆಲ್‌ಗಳಲ್ಲಿ ಅಡುಗೆ ಮನೆ ಮತ್ತು ಕ್ವಿಕ್ ಸರ್ವಿಸ್ ರೆಸ್ಟೋರೆಂಟ್‌ಗಳನ್ನು ತೆರೆಯಲಿದೆ. 'ಕಿಚನ್ ಸರ್ವೀಸಸ್' ಮೂಲಕ ಓಯೋ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಆಹಾರ ಆರ್ಡರ್ ಮಾಡಬಹುದು.
ಪೂರ್ತಿ ಓದಿ09:06 PM (IST) May 03
ಮಧ್ಯಪ್ರದೇಶದ ಜಬಲ್ಪುರದಲ್ಲಿ ರಸಗುಲ್ಲಾ, ಉಪ್ಪು ಮತ್ತು ಮೇಕೆಗಳನ್ನು ಕದಿಯುವ ವಿಚಿತ್ರ ಕಳ್ಳತನಗಳು ನಡೆಯುತ್ತಿವೆ. 5000 ರೂ.ಗಿಂತ ಕಡಿಮೆ ಮೌಲ್ಯದ ಕಳ್ಳತನಗಳನ್ನು ಈಗ ಸಣ್ಣ ಅಪರಾಧಗಳೆಂದು ಪರಿಗಣಿಸಲಾಗುತ್ತದೆ, ಇದು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪೂರ್ತಿ ಓದಿ08:44 PM (IST) May 03
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ರೂ. 32.72 ಕೋಟಿ ಮೌಲ್ಯದ 10 ಎಕರೆ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಗಿದೆ. ವಿವಿಧ ತಾಲ್ಲೂಕುಗಳಲ್ಲಿ ಗೋಮಾಳ, ಸ್ಮಶಾನ, ಕೆರೆ, ಮತ್ತು ಇತರ ಸರ್ಕಾರಿ ಜಾಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.
ಪೂರ್ತಿ ಓದಿ08:13 PM (IST) May 03
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬಳಕೆಯಾದ ಪದ ವಿವಾದಕ್ಕೆ ಕಾರಣವಾಗಿದ್ದು, ವಿಶ್ವಕರ್ಮ ಸಮಾಜದ ಭಾವನೆಗೆ ಧಕ್ಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಧಾರಾವಾಹಿ ನಿರ್ಮಾಪಕರು ಕ್ಷಮೆ ಯಾಚಿಸಿದ್ದಾರೆ.
ಪೂರ್ತಿ ಓದಿ08:09 PM (IST) May 03
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಸರಿಯಾಗಿ ನಿರ್ವಹಿಸದ ಗುತ್ತಿಗೆದಾರರಿಗೆ 50 ಸಾವಿರದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತಿದೆ. ಕೆಲವು ಗುತ್ತಿಗೆದಾರರು ಕಾಮಗಾರಿ ಮಾಡಿದ ಹಣವನ್ನು ದಂಡದಲ್ಲಿಯೇ ವಜಾ ಮಾಡಿಕೊಳ್ಳುವುದಕ್ಕೆ ಬಿಬಿಎಂಪಿ ಕುತಂತ್ರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈಟ್ ಟಾಪಿಂಗ್ ಕಾಮಗಾರಿ ವಿಳಂಬ ಮಾಡಿದ್ದಕ್ಕಾಗಿ ಎರಡು ಗುತ್ತಿಗೆದಾರರಿಗೆ 10 ಲಕ್ಷ ರೂ. ದಂಡ ವಿಧಿಸಲಾಗಿದೆ.
ಪೂರ್ತಿ ಓದಿ07:56 PM (IST) May 03
ಇತ್ತೀಚಿಗೆ ನಮ್ಮ ಕೊಡಗಿನ ವಿನಯ್ ಸೋಮಯ್ಯ. ಕಾಂಗ್ರೆಸ್ ಶಾಸಕರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡರು. ಈಗ ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾಗಿದೆ.
ಪೂರ್ತಿ ಓದಿ07:54 PM (IST) May 03
ಚೆನ್ನೈನಿಂದ ಬಂದ ಶ್ರೀಲಂಕಾ ಏರ್‌ಲೈನ್ಸ್ ವಿಮಾನದಲ್ಲಿ ಐದು ಶಂಕಿತ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಇದ್ದಾರೆ ಎಂಬ ಮಾಹಿತಿ ಬಂದ ನಂತರ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ನಡೆಸಲಾಯಿತು. ವಚನೆಯ ಈಮೇಲ್ ಎಂದು ನಂತರ ತಿಳಿದುಬಂದಿದೆ.
ಪೂರ್ತಿ ಓದಿ07:43 PM (IST) May 03
ಕಾನೂನಾತ್ಮಕವಾಗಿ ಸರ್ಕಾರದ ವತಿಯಿಂದ ಪಡೆದ ಬಡ ಸಾರ್ವಜನಿಕರ ನಿವೇಶನಗಳಿಗೆ ಹಕ್ಕು ಪತ್ರ ಹಸ್ತಾಂತರಿಸಬೇಕೆಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
ಪೂರ್ತಿ ಓದಿ07:33 PM (IST) May 03
ಪಹಲ್ಗಾಮ್ ದಾಳಿ: ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಯುದ್ಧಕ್ಕೆ ಬೆದರಿಕೆ ಹಾಕುತ್ತಿದೆ. ಭಾರತದ ಬಳಿ ಇಡೀ ಪಾಕಿಸ್ತಾನದ ಯಾವುದೇ ಮೂಲೆಯನ್ನು ತಲುಪುವ ಶಕ್ತಿಯುಳ್ಳ ಕ್ಷಿಪಣಿಗಳ ಬಗ್ಗೆ ತಿಳಿದುಕೊಳ್ಳೋಣ.
ಪೂರ್ತಿ ಓದಿ07:31 PM (IST) May 03
ಪಾಕಿಸ್ತಾನಿ ಮಹಿಳೆಯೊಂದಿಗಿನ ಮದುವೆಯನ್ನು ಮರೆಮಾಚಿದ್ದಕ್ಕಾಗಿ ಮತ್ತು ವೀಸಾ ಮುಗಿದ ನಂತರವೂ ಆಕೆಗೆ ಆಶ್ರಯ ನೀಡಿದ್ದಕ್ಕಾಗಿ ಸಿಆರ್‌ಪಿಎಫ್‌ನ 41 ಬೆಟಾಲಿಯನ್‌ನ ಸಿಟಿ/ಜಿಡಿ ಮುನೀರ್ ಅಹ್ಮದ್ ಅವರನ್ನು ವಜಾಗೊಳಿಸಲಾಗಿದೆ. ಅವರ ಕ್ರಮಗಳು ಸೇವಾ ನಡವಳಿಕೆಯ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವೆಂದು ಪರಿಗಣಿಸಲಾಗಿದೆ.
ಪೂರ್ತಿ ಓದಿ07:17 PM (IST) May 03
ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜಿಲ್ಲೆಯ ಕಳಸದ ಇಬ್ಬರು ಯುವಕರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತೆಯಾಗಿ ಕಟ್ಟೆಚ್ಚರ ವಹಿಸಿದ್ದಾರೆ.
ಪೂರ್ತಿ ಓದಿ06:49 PM (IST) May 03
ಬೆಂಗಳೂರಿನ ಹೆಚ್‌ಎಸ್‌ಆರ್ ಬಡಾವಣೆಯ ಪಿಜಿಗಳಲ್ಲಿ ನಡೆಯುತ್ತಿರುವ ಅನಾಗರಿಕ ವರ್ತನೆಗಳು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿವೆ. ಹಾಡ ಹಗಲೇ ಯುವತಿಯರು ಅರೆನಗ್ನವಾಗಿ ಸಂಚಾರ ಮಾಡುತ್ತಿದ್ದು, ಸ್ಥಳೀಯರು ಅನಧಿಕೃತ ಪಿಜಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪೂರ್ತಿ ಓದಿ06:43 PM (IST) May 03
ಜಂಕ್ ಫುಡ್ ಬದಲಿಗೆ ಆರೋಗ್ಯಕರ ತಿಂಡಿಗಳನ್ನು ತಿನ್ನುವುದು ದೇಹಕ್ಕೆ ಒಳ್ಳೆಯದು. ಈ ಲೇಖನದಲ್ಲಿ ಖಾರ ಮತ್ತು ಸಿಹಿ ಆರೋಗ್ಯಕರ ತಿಂಡಿಗಳ ಪಟ್ಟಿ ಮತ್ತು ಅವುಗಳ ಪ್ರಯೋಜನಗಳನ್ನು ವಿವರಿಸಲಾಗಿದೆ.
ಪೂರ್ತಿ ಓದಿ06:42 PM (IST) May 03
ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಅವರ ವರ್ತನೆಗೆ ಕನ್ನಡಿಗರ ಆಕ್ರೋಶ ವ್ಯಕ್ತವಾಗಿದೆ. ಕನ್ನಡ.. ಕನ್ನಡ ಎಂದು ಕೂಗುವವರನ್ನು ಗೂಂಡಾಗಳು ಎಂದು ಕರೆದಿದ್ದಾರೆ. ಪಹಲ್ಗಾಮ್ ಘಟನೆಯನ್ನು ಉದಾಹರಣೆಯಾಗಿ ನೀಡಿ, ಕ್ಷಮೆ ಕೇಳದೆ ಸ್ಪಷ್ಟನೆ ನೀಡಿದ್ದಾರೆ.
ಪೂರ್ತಿ ಓದಿ06:04 PM (IST) May 03
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪುತ್ರಿ ಅನನ್ಯಾ ಜೋಶಿ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಜೋಶಿ ಅವರು ತಮ್ಮ ಮಗಳ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದ್ದಾರೆ.
ಪೂರ್ತಿ ಓದಿ06:03 PM (IST) May 03
ಶತ್ರುಗಳನ್ನು ಸೋಲಿಸಲು ಮೋದಿ ಸರ್ಕಾರ ಚಾಣಕ್ಯನ ಯುದ್ಧತಂತ್ರಗಳನ್ನು ಬಳಸುತ್ತಿದೆಯೇ ಎಂಬ ಅನುಮಾನ ಮೂಡಿದೆ. ಡಿಲೇ, ಡ್ರೇನ್, ಡಾಮಿನೇಟ್ - ವಿಳಂಬ, ಸಂಪತ್ತು ಬರಿದಾಗಿಸುವಿಕೆ, ಮತ್ತು ಪ್ರಾಬಲ್ಯ ಸಾಧನೆ - ಈ ತಂತ್ರಗಳ ಮೂಲಕ ಪಾಕಿಸ್ತಾನವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ.
ಪೂರ್ತಿ ಓದಿ05:51 PM (IST) May 03
ಆರ್‌ಸಿಬಿ ತಂಡ ಹಾಗೂ ಫ್ಯಾನ್ಸ್ ಬಗ್ಗೆ ಬಾಯಿಗೆ ಬಂದಂತೆ ಅವಹೇಳನಕಾರಿಯಾಗಿ ಮಾತನಾಡಿದ ಧೋನಿ ಅಭಿಮಾನಿ ಜಗದೀಶನಿಗೆ ಆರ್‌ಸಿಬಿ ಅಭಿಮಾನಿಗಳು ಸಿಕ್ಕ ಸಿಕ್ಕಲ್ಲೆಲ್ಲಾ ಹಿಡಿದು ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಪೂರ್ತಿ ಓದಿ05:34 PM (IST) May 03
ಸರಿಗಮಪ ಸೀಸನ್ 19ರ ವಿಜೇತೆ ಪ್ರಗತಿ ಬಡಿಗೇರ್ SSLC ಪರೀಕ್ಷೆಯಲ್ಲಿ ಶೇ.83.20 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಬಾಗಲಕೋಟೆ ಮೂಲದ ಪ್ರಗತಿ, ಸಂಗೀತದ ಜೊತೆಗೆ ಶಿಕ್ಷಣದಲ್ಲೂ ಸಾಧನೆ ಮಾಡಿದ್ದಾರೆ.
ಪೂರ್ತಿ ಓದಿ05:06 PM (IST) May 03
ಸ್ನೇಹಿತರಿಬ್ಬರ ಒಡನಾಟ, ಅವರಿಗೊಂದು ನಾಯಿ ಮರಿ ಸಿಗುವುದು, ಅಲ್ಲಿಂದ ಅವನ ಬದುಕು ಬದಲಾಗುವುದು, ವಲಸೆ ಕಾರ್ಮಿಕರ ಕಷ್ಟಗಳು, ವಿಧಾನಸೌಧ ನೋಡುವ ಆಸೆ ಹೀಗೆ ವಿವಿಧ ವಿಚಾರಗಳು ಅನಾವರಣಗೊಳ್ಳುತ್ತವೆ.
ಪೂರ್ತಿ ಓದಿ04:40 PM (IST) May 03
ಪಹಲ್ಗಾಮ್ ದಾಳಿಯ ನಂತರ, ಭಾರತವು ಪಾಕಿಸ್ತಾನದಿಂದ ಎಲ್ಲಾ ಆಮದುಗಳನ್ನು ನಿಷೇಧಿಸಿದೆ ಮತ್ತು ಪಾಕಿಸ್ತಾನಿ ಹಡಗುಗಳನ್ನು ಭಾರತೀಯ ಬಂದರುಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದೆ. ಈ ಕ್ರಮವು ಪಾಕಿಸ್ತಾನದ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿದೆ, ವಿಶೇಷವಾಗಿ ಔಷಧೀಯ ಪೂರೈಕೆಗಳ ಮೇಲೆ ಭಾರತವನ್ನು ಅವಲಂಬಿಸಿರುವ ಪಾಕಿಸ್ತಾನ.
ಪೂರ್ತಿ ಓದಿ04:37 PM (IST) May 03
ಕಾಂಗ್ರೆಸ್‌ನಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಲಿಲ್ಲ. ಸ್ವತಃ ಬಾಬಾ ಸಾಹೇಬರೇ ತಮ್ಮ ಸೋಲಿನಲ್ಲಿ ಎಸ್.ಎ. ಢಾಗೆ ಮತ್ತು ವೀರ್ ಸಾವರ್ಕರ್ ಕೈವಾಡವಿತ್ತು ಎಂದು ಬರೆದ ಪತ್ರವನ್ನು ಮಲ್ಲಿಕಾರ್ಜುನ ಖರ್ಗೆ ಪ್ರದರ್ಶಿಸಿದ್ದಾರೆ.
ಪೂರ್ತಿ ಓದಿ04:09 PM (IST) May 03
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಹೇಳಲಾದ ವೈದ್ಯಕೀಯ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಯ ಸತ್ಯಾಸತ್ಯತೆಯನ್ನು ಇನ್ನೂ ದೃಢಪಡಿಸಲಾಗಿಲ್ಲ, ಮತ್ತು ಅಧಿಕೃತ ಮೂಲಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪೂರ್ತಿ ಓದಿ04:06 PM (IST) May 03
ನಟಿ ಅವನೀತ್ ಕೌರ್ ಫೋಟೋಗೆ ಇನ್‌ಸ್ಟಾಗ್ರಾಂನಲ್ಲಿ ಕೊಹ್ಲಿ ಲೈಕ್ ಕೊಟ್ಟಿದ್ದೇ ತಡ, ಬಿರುಗಾಳಿ ಎದ್ದಿದೆ. ಅನುಷ್ಕಾ ಶರ್ಮಾ ಟ್ಯಾಗ್ ಮಾಡಿ ಕೊಹ್ಲಿ ವಿರುದ್ಧ ಮೀಮ್ಸ್ ಹರಿದಾಡಿತ್ತು. ಆದರೆ ಭಾರಿ ಚರ್ಚೆಯಾಗುತ್ತಿದ್ದಂತೆ ಖುದ್ದು ವಿರಾಟ್ ಕೊಹ್ಲಿ ಸ್ಪಷ್ಟನೆ ಕೊಟ್ಟರೂ ಇದೀಗ ಮೀಮ್ಸ್ ಮಾತ್ರ ಕೊಹ್ಲಿಯನ್ನು ಬಿಡುತ್ತಿಲ್ಲ.
ಪೂರ್ತಿ ಓದಿ03:47 PM (IST) May 03
ಕೆಲಸದ ಬಿಡುವಿನ ವೇಳೆ ಪರ್ವತಾರೋಹಣ ಮಾಡುತ್ತಿದ್ದ ಇಬ್ಬರಿಗೆ 2.8 ಕೋಟಿ ರೂ. ಮೌಲ್ಯದ ಚಿನ್ನದ ಖಜಾನೆ ಪತ್ತೆಯಾಗಿದೆ. ಈ ಖಜಾನೆಯಲ್ಲಿ 200 ವರ್ಷಗಳಷ್ಟು ಹಳೆಯದಾದ ನಾಣ್ಯಗಳು, ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳು ಸಿಕ್ಕಿವೆ.
ಪೂರ್ತಿ ಓದಿ03:42 PM (IST) May 03
ಸದಾ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ತಿದ್ದ ನಿವೇದಿತಾ ಗೌಡ ಬಾಳಿಗೆ ಹೊಸ ರೂಪ ಕೊಟ್ಟ ಯುವಕ ಇವರು. ನಟಿ ಇವರನ್ನು ಪರಿಚಯಿಸಿದ್ದಾರೆ. ಯಾರಿವರು?
ಪೂರ್ತಿ ಓದಿ02:56 PM (IST) May 03
ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಇದು ಸೂಕ್ತ ಸಮಯ. ಭಾರತದ ನಿರ್ಧಾರದಿಂದ ಭಯೋತ್ಪಾದನೆ ನಾಶವಾಗಬೇಕು ಎಂದು ಕಾಂಗ್ರೆಸ್ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಣಯ ಏನು?
ಪೂರ್ತಿ ಓದಿ02:53 PM (IST) May 03
ಮೇ 18ರ ಮೊದಲು ಕರ್ಮಫಲ ದಾತ ಶನಿ ಮತ್ತು ಪಾಪ ಗ್ರಹ ರಾಹುವಿನ ಸಂಯೋಗ ಮುಂದುವರಿಯುತ್ತದೆ, ಇದು 3 ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನಕಾರಿಯಾಗಿದೆ.
02:43 PM (IST) May 03
ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯಿಂದ ಉಂಟಾಗುವ 'ಟೆಕ್ಸ್ಟ್ ನೆಕ್ ಸಿಂಡ್ರೋಮ್' ಕುತ್ತಿಗೆ ನೋವು, ಬಿಗಿತ ಮತ್ತು ತಲೆನೋವಿಗೆ ಕಾರಣವಾಗಬಹುದು. ಸರಿಯಾದ ಭಂಗಿ, ನಿಯಮಿತ ವಿರಾಮಗಳು ಮತ್ತು ಕುತ್ತಿಗೆ ವ್ಯಾಯಾಮಗಳ ಮೂಲಕ ಇದನ್ನು ತಡೆಯಬಹುದು.
ಪೂರ್ತಿ ಓದಿ02:14 PM (IST) May 03
ಮಾಸಿಕ ಋತುಸ್ರಾವದ ಮೊದಲು ಮೂರು ದಿನ ತಲೆ ಸ್ನಾನ ಮಾಡಿದರೆ ಕೆಲವೊಂದು ಸಮಸ್ಯೆಗಳು ತಲೆದೋರುತ್ತವೆ ಎಂದು ಹೇಳಲಾಗಿದೆ ಏನಿದು ಸಮಸ್ಯೆ? ಇಲ್ಲಿದೆ ವಿವರ...
ಪೂರ್ತಿ ಓದಿ02:03 PM (IST) May 03
ಪಾಕಿಸ್ತಾನದ ವಾಯುಪ್ರದೇಶ ಮುಚ್ಚುವಿಕೆಯಿಂದ ಭಾರತ ಮತ್ತು ಪಾಕಿಸ್ತಾನ ಎರಡೂ ಆರ್ಥಿಕ ನಷ್ಟ ಅನುಭವಿಸುತ್ತಿವೆ. ಭಾರತೀಯ ವಿಮಾನಯಾನ ಸಂಸ್ಥೆಗಳು ಹೆಚ್ಚಿನ ಇಂಧನ ವೆಚ್ಚವನ್ನು ಭರಿಸುತ್ತಿವೆ, ಆದರೆ ಪಾಕಿಸ್ತಾನವು ಓವರ್‌ಫ್ಲೈಟ್ ಶುಲ್ಕದ ಆದಾಯವನ್ನು ಕಳೆದುಕೊಳ್ಳುತ್ತಿದೆ. ಯಾವ ದೇಶಕ್ಕೆ ಹೆಚ್ಚು ನಷ್ಟವಾಗುತ್ತಿದೆ ಎಂಬುದನ್ನು ವಿಶ್ಲೇಷಿಸೋಣ.
ಪೂರ್ತಿ ಓದಿ