ಬೆಂಗಳೂರು: ಇಂಧನ ಸಚಿವ ಕೆ.ಜೆ.ಜಾರ್ಜ್ ಆಪ್ತರು ಎನ್ನಲಾದ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಎಲೆಕ್ಟಿಕ್ ಗುತ್ತಿಗೆದಾರರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಂಬಸ್ಸಿ ಗ್ರೂಪ್‌ನ ಮುಖ್ಯಸ್ಥರು, ನಿರ್ದೇಶಕರು ಹಾಗೂ ಎಲೆಕ್ಟ್ರಿಕ್ ಗುತ್ತಿಗೆದಾರರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಶೋಧ ಮುಂದುವರೆಸಿದ್ದಾರೆ. ಕೆಲವು ವ್ಯವಹಾರಗಳ ಹಿನ್ನೆಲೆಯಲ್ಲಿ ಐಟಿ ಸರ್ವೇ ನಡೆಸಲಾಗಿದೆ ಎನ್ನಲಾಗಿದೆ. ಜು.28ರಂದು ಸಹ ಇಬ್ಬರು ಎಲೆಕ್ಟಿಕ್ ಗುತ್ತಿಗೆದಾರರ ಮನೆ, ಕಚೇರಿಗಳು ಸೇರಿ 12 ಕಡೆ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಇದರ ಮುಂದುವರೆದ ಭಾಗವಾಗಿ ಬುಧವಾರವೂ ನಗರದ ಕೆಲ ಎಲೆಕ್ಟಿಕ್ ಗುತ್ತಿಗೆದಾರರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

10:49 PM (IST) Jul 31
10:45 PM (IST) Jul 31
ಬೆಂಗಳೂರಿನಲ್ಲಿ ಟ್ಯೂಷನ್‌ಗೆ ತೆರಳಿದ್ದ 12 ವರ್ಷದ ಬಾಲಕನನ್ನು 5 ಲಕ್ಷ ರೂಪಾಯಿ ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಲಾಗಿದೆ. ಪೊಲೀಸರಿಗೆ ದೂರು ನೀಡಿದ ವಿಚಾರ ತಿಳಿದ ಕಿಡ್ನಾಪರ್‌ಗಳು ಬಾಲಕನನ್ನು ಕೊಂದು ಪೆಟ್ರೋಲ್ ಸುರಿದು ಸುಟ್ಟು ಹಾಕಿ, ಅತ್ಯಂತ ಅಮಾನುಷ ಘಟನೆಗೆ ಸಾಕ್ಷಿ ಆಗಿದ್ದಾರೆ.
09:57 PM (IST) Jul 31
ನಟ ಪ್ರಥಮ್ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನಾಕಾರರು ನಟನ ಮುಖಕ್ಕೆ ಮಸಿ ಬಳಿದಿದ್ದಾರೆ. ಈ ಘಟನೆಯು ಪೊಲೀಸ್ ಠಾಣೆಯ ಮುಂದೆಯೇ ನಡೆದಿದ್ದು, ವೈರಲ್ ಆಗಿದೆ. ಪ್ರತಿಭಟನಾಕಾರರು ಪ್ರಥಮ್ ಬಂಧನಕ್ಕೆ ಆಗ್ರಹಿಸಿದ್ದಾರೆ.
08:29 PM (IST) Jul 31
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವ ಆರೋಪ ಮಾಡಿರುವ ಅನಾಮಿಕ ದೂರುದಾರನ ಬಗ್ಗೆ ಮಾಜಿ ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಮಾಹಿತಿ ನೀಡಿದ್ದಾರೆ. ದೂರುದಾರನ ನಟೋರಿಯಸ್ ಕೃತ್ಯಗಳಿಂದಾಗಿ ಧರ್ಮಸ್ಥಳದಿಂದ ಹೊರಹಾಕಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
07:51 PM (IST) Jul 31
07:10 PM (IST) Jul 31
04:30 PM (IST) Jul 31
02:57 PM (IST) Jul 31
02:50 PM (IST) Jul 31
01:09 PM (IST) Jul 31
11:55 AM (IST) Jul 31
11:55 AM (IST) Jul 31
11:12 AM (IST) Jul 31
ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿಯೋಜಿಸಲಾಗಿದ್ದ ಸುಮಾರು 65 ಸಾವಿರ ಶಿಕ್ಷಕರಿಗೆ ನಾಲ್ಕು ತಿಂಗಳಾದರೂ ಸಂಭಾವನೆ ಸಿಕ್ಕಿಲ್ಲ. ಒಟ್ಟು ₹75 ಕೋಟಿ ಬಾಕಿ ಉಳಿದಿದ್ದು, ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
10:52 AM (IST) Jul 31
10:25 AM (IST) Jul 31
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿಯಾದ ಯೂರಿಯಾ ಬಳಕೆಯಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೃಷಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕ್ಯಾನ್ಸರ್ ಹಬ್ ಆಗುವ ಭೀತಿ ಎದುರಾಗಿದೆ.
09:29 AM (IST) Jul 31
08:59 AM (IST) Jul 31
ಕೋಲಾರ ಮೂಲದ ಮಹಿಳೆಯೊಬ್ಬರಲ್ಲಿ ಜಾಗತಿಕವಾಗಿ ಹೊಸ ರಕ್ತದ ಗುಂಪು ಪತ್ತೆಯಾಗಿದೆ. ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರ ಹಾಗೂ ಅಂತಾರಾಷ್ಟ್ರೀಯ ರಕ್ತ ಗುಂಪು ಉಲ್ಲೇಖಿತ ಪ್ರಯೋಗಾಲಯದ ಸಂಶೋಧನೆಯಿಂದ ಈ ಅಪರೂಪದ 'ಸಿಆರ್‌ಐಬಿ' ಗುಂಪು ಬೆಳಕಿಗೆ ಬಂದಿದೆ.
08:32 AM (IST) Jul 31
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ನ.13 ರಿಂದ 16 ರವರೆಗೂ ಆಯೋಜಿಸಲಿರುವ ಬಹುನಿರೀಕ್ಷಿತ ‘ಕೃಷಿ ಮೇಳ’ದಲ್ಲಿ ಉತ್ಕೃಷ್ಟ ‘ನೀಲಿ ತಿರುಳ’ನ್ನು ಹೊಂದಿರುವ ಅರಿಶಿಣ ಸೇರಿದಂತೆ ಐದು ನೂತನ ತಳಿಗಳು ಲೋಕಾರ್ಪಣೆಯಾಗಲಿವೆ.
08:14 AM (IST) Jul 31
07:51 AM (IST) Jul 31
07:36 AM (IST) Jul 31
07:20 AM (IST) Jul 31